ಎಸ್ಸಿ/ ಎಸ್ಟಿ ಸಂಪಾದಕರ ಸಂಘದ ಪ್ರತಿಷ್ಠಿತ ದತ್ತಿ ಪ್ರಶಸ್ತಿ ಪ್ರಕಟ

Date: 19-11-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ(ರಿ) ಬೆಂಗಳೂರು ಇದರ 2024 ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ದತ್ತಿ ಪ್ರಶಸ್ತಿಗಳನ್ನು ಘೋಷಿಸಿಸಲಾಗಿದೆ.

ಇದರ ಭಾಗವಾಗಿ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಶೋಷಿತರ ಪರವಾಗಿ ಅಹರ್ನಿಶಿ ದುಡಿದ ದಲಿತರು ಮತ್ತು ದಲಿತ ಸಂವೇದನೆಯುಳ್ಳ ದಲಿತೇತರ ವೃತ್ತಿಪರ ಪತ್ರಕರ್ತರನ್ನು ಗುರುತಿಸಿ ಸಾಮಾಜಿಕ ನ್ಯಾಯಕ್ಕಾಗಿ, ದಲಿತರ ಸ್ವಾಭಿಮಾನ, ಹಕ್ಕುಗಳಿಗಾಗಿ ದುಡಿದ, ಹೋರಾಡಿದ ಮಹನೀಯರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಮಾಜಿ ಸಚಿವ ಬಿ.ರಾಚಯ್ಯ, ಬಿ.ಬಸವಲಿಂಗಪ್ಪ, ಪ್ರೋ.ಕೃಷ್ಣಪ್ಪ ಅವರುಗಳ ಹೆಸರಿನಲ್ಲಿ ಸ್ಥಾಪಿಸಲಾಗಿರುವ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದೆ.

ದಲಿತ ಚಳವಳಿಯ ಸ್ಥಾಪಕರಾದ ಪ್ರೋ ಬಿ. ಕೃಷ್ಣಪ್ಪ ದತ್ತಿ ಪ್ರಶಸ್ತಿಯನ್ನು ದಲಿತರು, ಶೋಷಿತರ ಪರ ಚಳವಳಿಯಲ್ಲಿ ಅವಿರತವಾಗಿ ದುಡಿಯುತ್ತಿರುವ ಚಳವಳಿಯ ಸಂಗಾತಿಗಳನ್ನು ಗುರುತಿಸಿ ಪ್ರದಾನ ಮಾಡಲಾಗುತ್ತಿದೆ.

2024 ನೇ ಸಾಲಿನ ರಾಜ್ಯಮಟ್ಟದ ದತ್ತಿ ಪ್ರಶಸ್ತಿಗಳು:

1 ಡಾ. ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ: ಜಿ.ಎನ್ ಮೋಹನ್ ಹಿರಿಯ ಪತ್ರಕರ್ತರು ಬೆಂಗಳೂರು
2 ಬಿ. ರಾಚಯ್ಯ ದತ್ತಿ ಪ್ರಶಸ್ತಿ : ಬಿ.ಎಂ ಹನೀಫ್ ಹಿರಿಯ ಪತ್ರಕರ್ತರು ಬೆಂಗಳೂರು
3 ಪ್ರೋ.ಬಿ. ಕೃಷ್ಣಪ್ಪ ದತ್ತಿ ಪ್ರಶಸ್ತಿ: ಮಾವಳ್ಳಿ ಶಂಕರ್ ರಾಜ್ಯ ಸಂಚಾಲಕರು: ದಲಿತ ಸಂಘರ್ಷ ಸಮಿತಿ(ಪ್ರೋ; ಕೃಷ್ಣಪ್ಪ)
4 ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿ: ಮಂಜುಳಾಹುಲಿಕುಂಟೆ, ಪತ್ರಕರ್ತೆ, ಬೆಂಗಳೂರು

ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಇದರೊಂದಿಗೆ ದಲಿತ ಸಂಪಾದಕರುಗಳಿಗೆ ಸಂಘದ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ.

1 ಮಂಜುಳಾ ಕಿರುಗಾವಲು ಸಂಪಾದಕರು: ಜನೋದಯ ಕನ್ನಡ ದಿನಪತ್ರಿಕೆ , ಮಂಡ್ಯ
2. ಏಕಾಂತಪ್ಪ ಸಂಪಾದಕರು: ಶಿವಮೊಗ್ಗ ಮಲ್ನಾಡ್‌ವಾಣಿ ಕನ್ನಡ ದಿನಪತ್ರಿಕೆ, ದಾವಣಗೆರೆ
3. ಸೊಗಡು ವೆಂಕಟೇಶ್ ಸಂಪಾದಕರು: ವಿಶಾಲವಾರ್ತೆ ಕನ್ನಡ ದಿನಪತ್ರಿಕೆ , ತುಮಕೂರು
4. ಸುರೇಶ್ ಸಿಂಧ್ಯೆ :ಹೈದ್ರಾಬಾದ್ ಕರ್ನಾಟಕ ಮುಂಜಾವು ಕನ್ನಡ ದಿನಪತ್ರಿಕೆ , ಗುಲ್ಬರ್ಗಾ.

ಪ್ರಶಸ್ತಿಯು ತಲಾ ಐದು ಸಾವಿರ ರೂ.ನಗದು, ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ 29 ರಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀಸಿದ್ದರಾಮಯ್ಯ ನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

 

MORE NEWS

ಅಂಬಾಬಾಯಿ ಕನ್ನಡದ ಅನರ್ಘ್ಯ ಮುತ್ತು; ಸತ್ಯವತಿ

19-11-2024 ಬೆಂಗಳೂರು

ಬೆಂಗಳೂರು: ಯಾಜಿ ಪ್ರಕಾಶನದಿಂದ ಹರಿದಾಸ ಮಹಿಳೆ ಅಂಬಾಬಾಯಿ ವಿರಚಿತ ‘ಏಕಾಂಗಿ ಕವಯತ್ರಿಯ ಪ್ರವಾಸದ ಡೈರಿ’ (...

ಸಿಂಗಪುರದಲ್ಲಿ ವಿಶ್ವ ಸಮ್ಮೇಳನ ಮಾಡಿದ್ದು ದೊಡ್ಡ ‘ಯಜ್ಞ’ ಎಂದೇ ಹೇಳಬಹುದು; ಸೋಮಶೇಖರ್

19-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಪ್ರೆಸ್‌ ಕ್ಲಬ್ ಕೌನ್ಸಿಲ್ ಅಂತಾರಾಷ್ಟ್ರೀಯ 2ನೇ ವಿಶ್ವ ಕನ್ನಡ ಹಬ್ಬದ ಸಲಹಾ ಸಮಿತಿ ವತಿಯಿಂದ...

ನ. 24ರಂದು ಕಾವ್ಯಹಬ್ಬ ಆಯೋಜನೆ

19-11-2024 ಬೆಂಗಳೂರು

ಬೆಂಗಳೂರು: ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಕ್ರಿಯಾಶೀಲ ಕೆಲಸಗಳಲ್ಲಿ ತೊಡಗಿ ಕೊಂಡಿರುವ ಕಾವ್ಯಸಂಜೆಯು ಇದೇ ನ.2...