Date: 16-03-2025
Location: ಬೆಂಗಳೂರು
ಬೆಂಗಳೂರು: ಲೇಖಕ ಪುರುಷೋತ್ತಮ ದಾಸ್ ಅವರ ‘ಯಯಾತಿ’ ಕಾದಂಬರಿಯ ಲೋಕಾರ್ಪಣಾ ಕಾರ್ಯಕ್ರಮವು 2025 ಮಾ 16 ಭಾನುವಾದರದಂದು ನಗರದಲ್ಲಿ ನಡೆಯಿತು.
ಕೃತಿಯನ್ನು ಲೋಕಾರ್ಪಣೆಗೊಳಿಸಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲೇಖಕ ಹಿರಿಯ ಲೇಖಕ ಬಂಜಗೆರೆ ಜಯಪ್ರಕಾಶ್ ಅವರು ಮಾತನಾಡಿ, "ಯಯಾತಿ ಕಾದಂಬರಿಯನ್ನು ಪ್ರಸ್ತುತ ಕಾಲಘಟ್ಟದ ಕೌಟುಂಬಿಕ ಸನ್ನಿವೇಶ ಮತ್ತು ಸಾಮಾಜಿಕ ಸನ್ನಿವೇಶಗಳ ಅರ್ಥ ಹೊಮ್ಮುವ ಹಾಗೆ ಪುರಾಣ ಪ್ರತೀಕಗಳನ್ನು ಬಳಸಿ ಕಟ್ಟಿಕೊಡಲಾಗಿದೆ. ಮನುಷ್ಯ ಅಭೀಕ್ಷೆಗಳಾದ ಚಿರಂಜೀವಿ ಅಭೀಕ್ಷೆ, ವಾಯುಕಾಯ ಅಭೀಕ್ಷೆಯ ಹಪಾಹಪಿಯಲ್ಲಿ ಬದುಕುತ್ತಾನೆ," ಎಂದರು.
ಕೃತಿಯ ಕುರಿತು ಖ್ಯಾತ ವಿಮರ್ಶಕ ಹೆಚ್. ದಂಡಪ್ಪ ಮಾತನಾಡಿ, "ಆದಿಪುರಾಣ ಮತ್ತು ಉತ್ತರಪರ್ವ ವಿಭಾಗದಲ್ಲಿ ಬರುವ ಸಣ್ಣ ಸಣ್ಣ ವಿಚಾರಗಳನ್ನು ಕೂಡಿಸಿ ಹುಟ್ಟಿದ ಕಾದಂಬರಿ ಇದಾಗಿದ್ದು, ಚಿರಂತನ ಪ್ರತೀಕಗಳನ್ನು ಕಟ್ಟಿಕೊಂಡು 'ಯಯಾತಿ' ಕಾದಂಬರಿಯನ್ನು ಹೆಣೆಯಲಾಗಿದೆ. ಪುರಾಣಗಳನ್ನು ಹಾಗೂ ನಮ್ಮ ವಿಚಾರಗಳನ್ನು ಜನರಿಗೆ ದಾಟಿಸುವುದು ಬಹಳಷ್ಟು ಸುಲಭ ಎನ್ನುವುದಕ್ಕೆ ನಿದರ್ಶನ ಈ ಕಾದಂಬರಿ. ಹೆಗಡೆಯವರು ಪುರಾಣ ಆಧಾರಿತ ಯಯಾತಿ ಕಾದಂಬರಿಯಲ್ಲಿ ಬಹಳಷ್ಟು ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಈ ಬದಲಾವಣೆಯನ್ನು ತಿಳಿಯಬೇಕಾದರೆ ಎಲ್ಲರೂ ಈ ಕೃತಿಯನ್ನು ಓದಲೇಬೇಕು," ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿಮ್ಹಾನ್ಸ್ ಮಾನಸಿಕ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಎಂ. ಮಂಜುಳ ಅವರು ಮಾತನಾಡಿ, "ಕಥೆಯನ್ನು ಓದುತ್ತಾ ಹೋದಂತೆ ಲೇಖಕರ ವ್ಯಕ್ತಿತ್ವ ತೆರೆದುಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಲೇಖಕನ ಮನಶಾಸ್ತ್ರದ ಓದು ಹಾಗೂ ತೊಡಗಿಸಿಕೊಳ್ಳುವಿಕೆ. ಕಥೆಗಳು ವ್ಯಕ್ತಿಯ ಮನಪಟಲವನ್ನು ಆಕ್ರಮಿಸಿ ಸಾರಾಗವಾಗಿ ಓದಿಸಿಕೊಂಡು ಹೋಗಬಲ್ಲ ಗುಣ ಲಕ್ಷಣವನ್ನು ಒಳಗೊಂಡಿದೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಬಳಸಿ
ಧಾರವಾಡ: ಸಾಹಿತ್ಯ ಗಂಗಾ ಧಾರವಾಡದ ವತಿಯಿಂದ ಕೊಡಮಾಡುವ 2024ನೇ ಸಾಲಿನ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಪ್ರಕಟವಾ...
ಮಂಗಳೂರು: ಕನ್ನಡ-ತುಳು ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ವಾಮನ ನಂದಾವರ (82) ಶನಿವಾರ ನಿಧ...
ಧಾರವಾಡ: ಬಹು ಭಾಷಾ ಪಂಡಿತರು, ಹಿರಿಯ ಸಾಹಿತಿಗಳು, ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಪಂಚಾಕ್ಷ...
©2025 Book Brahma Private Limited.