ರಂಜನಿಯವರು ಪುಸ್ತಕ ಬರೆದಿದ್ದಾರೆಯೇ, ಹೇಗೆ ಬರೆದಿರುವರೋ ಎಂಬ ಸಂದೇಹಭರಿತ ಕುತೂಹಲದಿಂದಲೇ ಅವರ 'ಕತೆ ಡಬ್ಬಿ' ಕೈಗೆತ್ತಿಕೊಂಡೆ. 'ಕ್ಯಾಬ್ ವಿ ಮೆಟ್' ನ ಪ್ರಯಾಣದಲ್ಲಿ ನಟಿಯಾಗಿ ಭೇಟಿಯಾಗುವ ರಂಜನಿಯವರು ಕ್ಯಾಬ್ ಇಳಿಯುವ ಹೊತ್ತಿಗೆ ವೃತ್ತಿಪರ ಲೇಖಕಿಯಾಗಿ ನಮ್ಮನ್ನು ಬೀಳ್ಕೊಡುತ್ತಾರೆ. 'ಕತೆ ಡಬ್ಬಿ' ಅವರ ಮೊದಲ ಪುಸ್ತಕವೆಂಬ ಸಣ್ಣ ಸಂದೇಹದ ಎಳೆಯೂ ನಮಗೆ ಸಿಗಲಾರದು, ಆ ಮಟ್ಟಿಗಿನ ಪಕ್ವತೆ ಅವರ ಬರವಣಿಗೆಯಲ್ಲಿದೆ ಎನ್ನುತ್ತಾರೆ ಲೇಖಕ ಕಾರ್ತಿಕ್. ಅವರು ಲೇಖಕಿ ರಂಜನಿ ರಾಘವನ್ ಅವರ ‘ಕತೆ ಡಬ್ಬಿ’ ಕೃತಿಯ ಬಗ್ಗೆ ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ...
ಕೃತಿ: ಕತೆ ಡಬ್ಬಿ
ಲೇಖಕರು: ರಂಜನಿ ರಾಘವನ್
ಪುಟ: 171
ಬೆಲೆ: 200
ಮುದ್ರಣ: 2021
ಪ್ರಕಾಶಕರು: ಬಹುರೂಪಿ
"ಮನುಷ್ಯ ಸಮರ್ಥನೆಗಳನ್ನು ಕೊಟ್ಟುಕೊಳ್ಳದೇ ಬದುಕಲಾರ. ಕಳ್ಳನೂ, ಕೊಲೆಗಾರನೂ ತನ್ನ ತಪ್ಪಿಗೆ ಬಲವಾದ ಕಾರಣವಿದೆ ಅಂದುಕೊಂಡಾಗಲೇ ನಿದ್ರೆ ಮಾಡಲು ಸಾಧ್ಯ" ಈ ಸಾಲುಗಳನ್ನು ಯಾರೋ ತತ್ವಜ್ಞಾನಿಯೋ ಇಲ್ಲವೇ ಅಗಾಧ ಜೀವನಾನುಭವ ಹೊಂದಿರುವ ಲೇಖಕನೋ ಬರೆದಿರಬೇಕು ಎಂದುಕೊಂಡಿರಾ..? ಹಾಗೆಂದು ಕೊಂಡರೆ ನಿಮ್ಮ ಊಹೆ ಖಂಡಿತ ಸುಳ್ಳು. ಈ ಸಾಲುಗಳನ್ನು ಬರೆದಿರುವವರು 'ರಂಜನಿ ರಾಘವನ್'. 'ಕತೆ ಡಬ್ಬಿ' ಓದಿದರೆ, ಈ ತೆರನಾದ ಸಾಕಷ್ಟು ಸಾಲುಗಳು ನಿಮಗೆ ಸಿಗುತ್ತವೆ.
ರಂಜನಿ ರಾಘವನ್ ಯಾವ ಕನ್ನಡಿಗರಿಗೆ ಗೊತ್ತಿಲ್ಲ ಹೇಳಿ..? ಅದೇ ರೀ, ಕನ್ನಡತಿ ಧಾರಾವಾಹಿ ಭುವಿ ಟೀಚರ್. ಪುಟ್ಟಗೌರಿ ಮದುವೆಯಿಂದ ಎಲ್ಲರ ಮನೆ ಗೌರಿಯಾಗಿದ್ದ ರಂಜನಿ ಈಗ ಶಾರದೆಯಾಗಿದ್ದಾರೆ ಅರ್ಥಾತ್ ಲೇಖಕಿಯಾಗಿದ್ದಾರೆ. ರಂಜನಿಯವರು ಪುಸ್ತಕ ಬರೆದಿದ್ದಾರಂತೆ, ತುಂಬಾನೇ ಚೆನ್ನಾಗಿದ್ಯಂತೆ ಎಂಬ ಮಾತುಗಳನ್ನು ಕೇಳಿದ್ದ ನನಗೆ, ಅರೇ..! ರಂಜನಿಯವರು ಪುಸ್ತಕ ಬರೆದಿದ್ದಾರೆಯೇ, ಹೇಗೆ ಬರೆದಿರುವರೋ ಎಂಬ ಸಂದೇಹಭರಿತ ಕುತೂಹಲದಿಂದಲೇ ಅವರ 'ಕತೆ ಡಬ್ಬಿ' ಕೈಗೆತ್ತಿಕೊಂಡೆ. 'ಕ್ಯಾಬ್ ವಿ ಮೆಟ್' ನ ಪ್ರಯಾಣದಲ್ಲಿ ನಟಿಯಾಗಿ ಭೇಟಿಯಾಗುವ ರಂಜನಿಯವರು ಕ್ಯಾಬ್ ಇಳಿಯುವ ಹೊತ್ತಿಗೆ ವೃತ್ತಿಪರ ಲೇಖಕಿಯಾಗಿ ನಮ್ಮನ್ನು ಬೀಳ್ಕೊಡುತ್ತಾರೆ. 'ಕತೆ ಡಬ್ಬಿ' ಅವರ ಮೊದಲ ಪುಸ್ತಕವೆಂಬ ಸಣ್ಣ ಸಂದೇಹದ ಎಳೆಯೂ ನಮಗೆ ಸಿಗಲಾರದು, ಆ ಮಟ್ಟಿಗಿನ ಪಕ್ವತೆ ಅವರ ಬರವಣಿಗೆಯಲ್ಲಿದೆ. ಸರಳ ಬರವಣಿಗೆ, ಸುಂದರ ನಿರೂಪಣೆ ಮೂಲಕ ಮೊದಲ ಕತೆಯಲ್ಲಿಯೇ ಜೀವನದ ಮಾರ್ಗದರ್ಶಕರಾಗಿ ಓದುಗರಿಗೆ ಮತ್ತಷ್ಟು ಆಪ್ತವಾಗುತ್ತಾ ಹೋಗುತ್ತಾರೆ. 'ವೀಕೆಂಡ್ ಸ್ವಯಂವರ'ದಲ್ಲಿ ಪ್ರೀತಿಸುವ ಯುವಸಮೂಹಕ್ಕೆ ನಿಷ್ಕಲ್ಮಶ, ನಿಸ್ವಾರ್ಥತೆ ಭಾವವೇ ಪರಿಶುದ್ಧ ಪ್ರೀತಿಯೆಂಬ ಅರಿವು ಮೂಡಿಸಿದ್ದಾರೆ. ಕೆಲ ಕತೆಗಳ ಅಂತ್ಯ ಮತ್ತೊಬ್ಬರ ಮನಃಪರಿವರ್ತನೆಗೆ ಆದಿಯಾಗಬಲ್ಲದು. ಉದುರಿದ ಮರವನ್ನು ಸಹ ಚಿಗುರಿಸುವ ರೀತಿ ಕಮಲಮ್ಮಳನ್ನು ನಂಜನಗೂಡಿನಿಂದ ನ್ಯೂಜೆರ್ಸಿಗೆ ಕಳಿಸಿ ಜೀವನದ ಸೆಲೆಯನ್ನು ಹುಡುಕಿಕೊಟ್ಟಿದ್ದಾರೆ. ನಿಂತಲ್ಲಿಯೇ ಚಂದ್ರನನ್ನು ತೋರಿಸುವವರ 'ಹಿಪಾಕ್ರಸಿ' ಕುರಿತು 'ಕನ್ನಡತಿ ಭುವಿ'ಯಾಗಿ ಥೇಟ್ ಟೀಚರ್ ನಂತೆಯೇ ಪಾಠ ಹೇಳಿದ್ದಾರೆ. ಅವರ ಬರವಣಿಗೆಯಲ್ಲಿ ವಯಸ್ಸಿಗೂ ಮೀರಿದ ಜೀವನಾನುಭವವನ್ನು ತಿಳಿಸಿರುವ ರೀತಿ ನಿಜಕ್ಕೂ ಸೋಜಿಗ. ಏಕತಾನತೆಯ ಓದಿನಿಂದ ಬದಲಾವಣೆ ಬಯಸುವವರಿಗೆ 'ಕತೆ ಡಬ್ಬಿ' ಒಂದೊಳ್ಳೆ ರಿಫ್ರೆಶ್ ಮೆಂಟ್. ಪುಸ್ತಕ ಬಿಡುಗಡೆಯಾಗಿ ಕೇವಲ ನಾಲ್ಕು ತಿಂಗಳಿಗೆ ಏಳನೇ ಮುದ್ರಣ ಕಂಡಿರುವುದು 'ಕತೆ ಡಬ್ಬಿ' ಜನಪ್ರಿಯತೆಗೆ ಸಾಕ್ಷಿ...
ಕನ್ನಡ ಸಾರಸ್ವತ ಲೋಕಕ್ಕೆ ಒಂದೊಳ್ಳೆ ಪುಸ್ತಕದ ಮೂಲಕ ಪಾದಾರ್ಪಣೆ ಮಾಡಿರುವ ರಂಜನಿ ರಾಘವನ್ ಅವರಿಗೆ 'ಆಲ್ ದಿ ಬೆಸ್ಟ್'...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.