ಕರ್ನಾಟಕ ನಾಟಕ ಅಕಾಡೆಮಿಯಿಂದ ಸಾಹಿತಿ ಬಸವರಾಜ ಸಬರದ ಸೇರಿದಂತೆ ಮೂವರಿಗೆ ಪುಸ್ತಕ ಬಹುಮಾನ

Date: 13-11-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ಮೂರು ವರ್ಷಗಳ ವಾರ್ಷಿಕ ಪುಸ್ತಕ ಬಹುಮಾನಗಳನ್ನು ಈಗಾಗಲೇ ಪ್ರಕಟಿಸಿದ್ದು, 2021ನೇ ಸಾಲಿಗೆ ಸಾಹಿತಿ ಬಸವರಾಜ ಸಬರದ ಅವರ 'ರಂಗ ಮಾಧ್ಯಮ' ಕೃತಿ ಆಯ್ಕೆಯಾಗಿದೆ, 2022ನೇ ಸಾಲಿಗೆ ಬೆಂಗಳೂರಿನ ಟಿ.ವಿ. ವೆಂಕಟೇಶಮೂರ್ತಿ ಅವರ 'ಕನ್ನಡ ನಾಟಕಗಳು ರಾತ್ರಿ ರೂಪಕಗಳು' ಹಾಗೂ 2023ನೇ ಸಾಲಿಗೆ ಮೈಸೂರಿನ ರಾಮೇಶ್ವರಿ ವರ್ಮ ಅವರ 'ಬಿಟ್ಟನೆಂದರು ಬಿಡದು ಈ ಮಾಯೆ' ಕೃತಿ ಆಯ್ಕೆ ಆಗಿದೆ.

ಅತ್ಯುತ್ತಮ ರಂಗ ಕೃತಿಗಳಿಗೆ ಈ ಪ್ರಶಸ್ತಿ ನೀಡುತ್ತಾ ಬಂದಿದ್ದು, ಈ ಬಹುಮಾನಗಳು ತಲಾ 25 ಸಾವಿರ ನಗದು ಬಹುಮಾನ ಒಳಗೊಂಡಿವೆ.

ಜಿ.ವಿ. ಆನಂದಮೂರ್ತಿ, ಬಿ. ಸುರೇಶ್ ಮತ್ತು ಹೇಮಾ ಪಟ್ಟಣಶೆಟ್ಟಿ ಅವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ ಎಂದು ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MORE NEWS

ಬ್ರಿಟಿಷ್ ಲೇಖಕಿ ಸಮಂತಾ ಹಾರ್ವೆಗೆ ಪ್ರತಿಷ್ಠಿತ ‘ಬೂಕರ್ ಸಾಹಿತ್ಯ ಪ್ರಶಸ್ತಿ’

14-11-2024 ಬೆಂಗಳೂರು

ಬೆಂಗಳೂರು: ಬ್ರಿಟಿಷ್ ಲೇಖಕಿ ಸಮಂತಾ ಹಾರ್ವೆ ಅವರು 2024ನೇ ಸಾಲಿನ ಪ್ರತಿಷ್ಠಿತ `ಬೂಕರ್ ಸಾಹಿತ್ಯ ಪ್ರಶಸ್ತಿ'ಗೆ ಆಯ...

ಸಮಾಜೋನ್ನತಿಯಲ್ಲಿ ದಾಸವರೇಣ್ಯರ ಕೊಡುಗೆ ಅಪಾರ; ಸುಗುಣೇಂದ್ರ ತೀರ್ಥಶ್ರೀಪಾದರು

13-11-2024 ಬೆಂಗಳೂರು

ಉಡುಪಿ: ಉಡುಪಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನ, ಬೆಂಗಳೂರಿನ ಶ್ರೀ ಶ್ರೀನಿವಾಸ...

ಕನ್ನಡ ಭಾಷೆಯನ್ನು ಉಳಿಸುವ ನೈತಿಕ ಹೊಣೆ ನಮ್ಮದಾಗಬೇಕು; ನಾಗತಿಹಳ್ಳಿ

13-11-2024 ಬೆಂಗಳೂರು

ಬೆಂಗಳೂರು: ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ -2024 ಸಂಭ್ರಮಾಚರಣೆ,...