Date: 19-10-2022
Location: bangalore
67ನೇ ಕರ್ನಾಟಕ ರಾಜ್ಯೋತ್ಸವವನ್ನು ನಾಡಿನಾದ್ಯಂತ ವಿಶಿಷ್ಟವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉದ್ದೇಶಿಸಿದ್ದು, ಕೋಟಿ ಕಂಠ ಗಾಯನವನ್ನು ಆಯೋಜಿಸಿದೆ.
ಆಯ್ದ ಆರು ಕನ್ನಡ ಗೀತೆಗಳನ್ನು ಬೃಹತ್ ವೃಂದಗಳಲ್ಲಿ ಒಂದು ಕೋಟಿಗೂ ಹೆಚ್ಚು ಜನ ಏಕಕಂಠದಲ್ಲಿ ಹಾಡುವುದರ ಮೂಲಕ ಐತಿಹಾಸಿಕ ದಾಖಲೆ ಬರೆಯುವುದು ಈ ಕಾರ್ಯಕ್ರಮದ ಸಂಕಲ್ಪವಾಗಿದೆ.
ಕುವೆಂಪು ರಚಿಸಿರುವ ನಾಡಗೀತೆ ’ಜಯ ಭಾರತ ಜನನಿಯ ತನುಜಾತೆ’, ಹುಯಿಲಗೋಳ ನಾರಾಯಣರಾಯರ ’ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ವಿರಚಿತ ’ಬಾರಿಸು ಕನ್ನಡ ಡಿಂಡಿಮವ’, ಡಾ.ಡಿ.ಎಸ್. ಕರ್ಕಿಯವರ ’ಹಚ್ಚೇವು ಕನ್ನಡದ ದೀಪ’, ಚನ್ನವೀರ ಕಣವಿಯವರ ’ವಿಶ್ವವಿನೂತನ ವಿದ್ಯಾಚೇತನ’ ಹಾಗೂ ಹಂಸಲೇಖ ಬರೆದ ’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ -ಇವು ಕೋಟಿ ಕಂಠ ಗಾಯನಕ್ಕೆ ಆಯ್ದುಕೊಳ್ಳಲಾಗಿರುವ ಹಾಡುಗಳು.
ನಾಡಿನಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಒಂದು ಕೋಟಿಗೂ ಹೆಚ್ಚು ಕಂಠಗಳಲ್ಲಿ ಕನ್ನಡ ಗಾಯನ ಮೊಳಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ತಿಳಿಸಿದೆ. ಎಲ್ಲ ಸಂಘ-ಸಂಸ್ಥೆಗಳು, ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು, ವಿಧಾನಸೌಧದ ಮೆಟ್ಟಿಲುಗಳ ಮೇಲೆ, ಹೈಕೋರ್ಟ್ ಆವರಣ, ಮೆಟ್ರೋಗಳಲ್ಲಿ, ಹಾರುವ ವಿಮಾನದಲ್ಲಿ, ವಿಮಾನ ನಿಲ್ದಾಣಗಳಲ್ಲಿ, ಮಾಲ್‌ಗಳಲ್ಲಿ, ಬಸ್ಸು, ರೈಲು ನಿಲ್ದಾಣಗಳಲ್ಲಿ, ಐಟಿ ಬಿಟಿ ಸಂಸ್ಥೆಗಳಲ್ಲಿ, ರಿಕ್ಷಾ ನಿಲ್ದಾಣಗಳಲ್ಲಿ, ಕಾರ್ಖಾನೆಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ ಗೀತಗಾಯನ ಕಾರ್ಯಕ್ರಮವಿರುತ್ತದೆ. ಕಂಠೀರವ ಕ್ರೀಡಾಂಗಣದಲ್ಲಿ ಐವತ್ತು ಸಾವಿರ ಜನರ ಸಮೂಹಗಾನವಿರುತ್ತದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಹಲಸೂರು ಕೆರೆ, ಲಾಲ್‌ಬಾಗ್‌ನಲ್ಲಿಯೂ ಸಮೂಹಗಾನ ನಡೆಯಲಿದೆ.
ಇತರ ಸ್ಥಳಗಳು: ಮೈಸೂರು ಅರಮನೆ, ಚಿತ್ರದುರ್ಗ ಕೋಟೆ, ಉಡುಪಿ ಮತ್ತು ಮಂಗಳೂರಿನ ಕರಾವಳಿ ತೀರ, ಮೂಡಬಿದಿರೆಯ ಆಳ್ವಾಸ್ ಸಂಸ್ಥೆ, ಶೃಂಗೇರಿಯ ಬೇಲೂರು ಚನ್ನಕೇಶವ ದೇವಾಲಯ, ಹಂಪಿ ಕಲ್ಲಿನ ರಥ, ಸಿದ್ಧಗಂಗಾ ಮಠ, ಪಾವಗಡ ಸೌರಶಕ್ತಿ ಘಟಕ, ವಿಜಯಪುರದ ಗೋಲ್‌ಗುಂಬಜ್, ಬೆಳಗಾವಿಯ ಸುವರ್ಣಸೌಧ, ಕೆಎಲ್‌ಇ ಶಿಕ್ಷಣ ಸಂಸ್ಥೆ, ಐಹೊಳೆ ಪಟ್ಟದಕಲ್ಲು, ಬೀದರ್‌ನ ಗುರುದ್ವಾರ, ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಘಟಕ, ಮಂಡ್ಯದ ಶಿವಪುರ ಧ್ವಜಸತ್ಯಾಗ್ರಹ ಭವನ, ಜೋಗ ಜಲಪಾತ, ಮಣಿಪಾಲದ ಕೆಎಂಸಿ ಹಾಗೂ ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಶಿಕ್ಷಣ ಸಂಸ್ಥೆ ಒಳಗೊಂಡಂತೆ ನಾಡಿನ ಎಲ್ಲಾ ಐತಿಹಾಸಿಕ ಹಾಗೂ ಪಾರಂಪರಿಕ ತಾಣಗಳು.
ಗಡಿನಾಡುಗಳಲ್ಲಿ, ಹೊರರಾಜ್ಯಗಳಲ್ಲಿ, ಹೊರದೇಶಗಳಲ್ಲಿ ಕನ್ನಡಿಗರು ಈ ಕನ್ನಡಾಭಿಮಾನಕ್ಕೆ ದನಿಗೂಡಿಸಲಿದ್ದಾರೆ.
ಕೋಟಿ ಕಂಠ ಗಾಯನದ ನೋಂದಣಿ ವಿವರ ಹಾಗೂ ಇತರ ತಾಂತ್ರಿಕ ವಿವರಗಳಿಗಾಗಿ ಸಂಪರ್ಕಿಸಬೇಕಾದ ಸಹಾಯವಾಣಿ: 9900534569, 9916832044, 9986837037, 9880442804 ಇಮೇಲ್: kanbhavblr@gmail.com, kanajacoordinator@gmail.com
ಬೆಂಗಳೂರು: ಸಾಹಿತ್ಯ ಅಕಾದೆಮಿ ವತಿಯಿಂದ ಜಿ.ಎಸ್ ಅಮೂರ ಅವರ ಬದುಕು-ಬರಹ ಹಾಗೂ ಜನ್ಮ ಶತಮಾನೋತ್ಸವ ವಿಚಾರ ಸಂಕಿರಣ ಕಾರ್ಯಕ...
ಬಳ್ಳಾರಿ: ಕಳೆದ ಕೆಲವು ವರ್ಷಗಳಂತೆ ಈ ವರ್ಷವೂ “ಸಂಗಂ ಸಂಸ್ಥೆ ಬಳ್ಳಾರಿ”ಯು 'ಸಂಗಂ ಸಾಹಿತ್ಯ ಪುರಸ್ಕಾ...
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ‘ಡಾ.ಕೂ.ಗಿ.ಗಿರಿಯಪ್ಪ ಮತ್ತು ಶ್ರೀಮತಿ ಲಕ್ಷ್ಮೀದೇವಮ್ಮ ದತ್ತಿ ...
©2025 Book Brahma Private Limited.