ವಿಶ್ವ ಪುಸ್ತಕ ದಿನದಂದು ಚಾಲನೆ ಪಡೆಯಲಿರುವ 'ಕರ್ನಾಟಕ ಪುಸ್ತಕ ಮಾರಾಟಗಾರರು, ಪ್ರಕಾಶಕರು ಹಾಗೂ ಲೇಖಕರ ಸಂಘ'

Date: 22-04-2025

Location: ಬೆಂಗಳೂರು


ಕನ್ನಡ ಪುಸ್ತಕೋದ್ಯಮ ಓದುಗರ ಕೊರತೆ, ಹೊಸ ಆಲೋಚನೆಗಳ ಅಲಭ್ಯತೆ ಮತ್ತು ಸರ್ಕಾರ-ಸಂಸ್ಥೆಗಳ ಸಮರ್ಪಕ ಬೆಂಬಲವಿಲ್ಲದೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ,ಬರಹಗಾರರಿಗೆ, ಪುಸ್ತಕ ಮಾರಾಟಗಾರರಿಗೆ ಹಾಗು ಪ್ರಕಾಶಕರುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆರಂಭವಾಗುತ್ತಿರುವ ಕರ್ನಾಟಕ ಪುಸ್ತಕ ಮಾರಾಟಗಾರರು, ಪ್ರಕಾಶಕರು ಹಾಗೂ ಲೇಖಕರ ಸಂಘದ ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಇದೇ ಬುಧವಾರ ದಿನಾಂಕ 22-04-2025ರಂದು ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದೆ.

ಕಾರ್ಯಕ್ರಮದ ಉದ್ದೇಶ:
ಕನ್ನಡ ಪುಸ್ತಕೋದ್ಯಮ ಓದುಗರ ಕೊರತೆ, ಹೊಸ ಆಲೋಚನೆಗಳ ಅಲಭ್ಯತೆ ಮತ್ತು ಸರ್ಕಾರ-ಸಂಸ್ಥೆಗಳ ಸಮರ್ಪಕ ಬೆಂಬಲವಿಲ್ಲದೆ ಸಂಕಷ್ಟದಲ್ಲಿದೆ.
ಇಂಥ ಸನ್ನಿವೇಶದಲ್ಲಿ ತಮ್ಮ ಪುಸ್ತಕ ಪ್ರಕಟಿಸಬೇಕೆಂಬ ಆಶಯ ಇರುವ ಲೇಖಕರು, ಪುಸ್ತಕ ಮಾರಾಟವನ್ನೇ ಬದುಕಾಗಿಸಿಕೊಂಡ ದೂರದೂರುಗಳ ಪುಸ್ತಕ ಮಾರಾಟಗಾರರು ಹಾಗೂ ಸಣ್ಣ ಪ್ರಕಾಶಕರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕೆಂಬ ಆಶ್ರಯ.

ಸಂಘದ ಗುರಿ:
ಸಂಘವು ಪುಸ್ತಕ ಪ್ರಕಾಶಕರು, ವಿತರಕರು ಮತ್ತು ಲೇಖಕರ ಮಧ್ಯೆ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸುವ ಉದ್ದೇಶ ಹೊಂದಿದೆ. ವಿಚಾರಸಂಕಿರಣ, ಕಾರ್ಯಾಗಾರ, ತರಬೇತಿ ಮತ್ತು ಪ್ರಸಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು; ಇದಕ್ಕಾಗಿ ಪುಸ್ತಕ ಮೇಳ, ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ. ಸದಸ್ಯರ ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಾಂಸ್ಥಿಕ ಯೋಜನೆಗಳನ್ನು ರೂಪಿಸಲಾಗುತ್ತದೆ. ಅಂತಾರಾಷ್ಟ್ರೀಯ-ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಪುಸ್ತಕ ಪ್ರದರ್ಶನ/ಮೇಳಗಳನ್ನು ಸರ್ಕಾರದ ನಾನಾ ಇಲಾಖೆಗಳು, ಸಾರ್ವಜನಿಕ ಸಂಸ್ಥೆಗಳು, ನಿಗಮ-ಮಂಡಳಿಗಳು, ಪ್ರಾಧಿಕಾರಗಳು ಹಾಗೂ ಸ್ವಯಂಸೇವಾ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳುವುದು ಹಾಗೂ ಅಂತಾರಾಷ್ಟ್ರೀಯ-ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ನಡೆಯುವ ಪುಸ್ತಕ ಪ್ರದರ್ಶನ/ಮೇಳಗಳಲ್ಲಿ ಪಾಲ್ಗೊಳ್ಳಲು ಸದಸ್ಯರಿಗೆ ನೆರವಾಗುವುದು ಸಂಘದ ಉದ್ದೇಶಗಳಲ್ಲಿ ಒಂದು.

MORE NEWS

ವಿಸ್ಮಯ ಮತ್ತು ಕೌತುಕಗಳು ತೇಜಸ್ವಿ ಸಾಹಿತ್ಯ ಸತ್ವ: ಶಶಿಕಾಂತ ಶೆಂಬೆಳ್ಳಿ

10-05-2025 ಬೆಂಗಳೂರು

ಬಸವಕಲ್ಯಾಣ: ವಿಸ್ಮಯ ಮತ್ತು ಕೌತುಕಗಳು ತೇಜಸ್ವಿ ಅವರ ಸಾಹಿತ್ಯದ ಸತ್ವವಾಗಿವೆ. ನಿಸರ್ಗ ಸಹಜ ಬದುಕನ್ನು ಕಟ್ಟಿಕೊಂಡ ಹಲವು...

ಅಪರಿಚಿತ ಓದುಗರ 26ನೇ ಭೇಟಿ: ಪುಸ್ತಕ ಪ್ರೇಮಿಗಳ ಹಬ್ಬ

10-05-2025 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಮತ್ತು ಓದುಗರಿಗೆ ಆಯ್ಕೆಯಾದ ವೇದಿಕೆ “ಅಪರಿಚಿತ ಓದುಗರು” ವತಿಯಿಂದ 26ನೇ ಓದು...

ಹಿ.ಶಿ. ರಾಮಚಂದ್ರೇಗೌಡ ಹಾಗೂ ಬಿ.ಎನ್. ಸುಮಿತ್ರಾಬಾಯಿಗೆ ಮನು ಬಳಿಗಾರ್ ಸ್ಥಾಪಿಸಿರುವ ಕಸಾಪ ಗೌರವ ದತ್ತಿ

07-05-2025 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಾಡೋಜ ಡಾ. ಮನು ಬಳಿಗಾರ್ ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗ...