"ಅದೊಂದು ಕೂಡುಕುಟುಂಬ. ಅಣ್ಣ ಹಾಗೂ ತಮ್ಮನ ಸಂಸಾರಗಳು ಒಂದೇ ಮನೆಯಲ್ಲಿವೆ. ತಮ್ಮನಿಗೆ ಪಾರ್ಶುವಾಗಿ ಹಾಸಿಗೆ ಹಿಡಿದಿದ್ದಾನೆ. ಅವನ ಹೆಂಡತಿ ಮನೆಯ ಚಾಕರಿ ಮಾಡುತ್ತ, 'ಇನ್ನೆಷ್ಟು ದಿನ ಇವರನ್ನು ಸಾಕಬೇಕೋ' ಎಂಬ ಮಾತನ್ನು ಬಾಯಿ ಬರುವ ಎಲ್ಲರಿಂದಲೂ ಕೇಳಿಸಿಕೊಳ್ಳುತ್ತ ಗಂಡನ ಸೇವೆ ಮಾಡಿಕೊಂಡಿದ್ದಾಳೆ," ಎನ್ನುತ್ತಾರೆ ವಿನಾಯಕ ಅರಳಸುರಳಿ. ಅವರು ಛಾಯಾ ಭಟ್ ಅವರ ‘ಬಯಲರಸಿ ಹೊರಟವಳು’ ಕೃತಿಗೆ ಬರೆದ ಅನಿಸಿಕೆ..
"ಕಿಬ್ಬಳ್ಳಿಯ ಸೊಸೈಟಿಗೆ ಬರುವ ಜನರ ಕಣ್ಣಿಗೆ ಮದುವೆಗಿದ್ದೇನೆಂದು ತೋರಿಸಿಕೊಳ್ಳಲು ಸಿಂಗರಿಸಿಕೊಂಡು ಕೆಲಸಕ್ಕೆ ಹೋಗಿ ಹೆಣ್ಣು ನೋಡುವ ಶಾಸ್ತ್ರವನ್ನು ದಿನನಿತ್ಯ ಎದುರಿಸಲಾರೆ"
ಅದೊಂದು ಕೂಡುಕುಟುಂಬ. ಅಣ್ಣ ಹಾಗೂ ತಮ್ಮನ ಸಂಸಾರಗಳು ಒಂದೇ ಮನೆಯಲ್ಲಿವೆ. ತಮ್ಮನಿಗೆ ಪಾರ್ಶುವಾಗಿ ಹಾಸಿಗೆ ಹಿಡಿದಿದ್ದಾನೆ. ಅವನ ಹೆಂಡತಿ ಮನೆಯ ಚಾಕರಿ ಮಾಡುತ್ತ, 'ಇನ್ನೆಷ್ಟು ದಿನ ಇವರನ್ನು ಸಾಕಬೇಕೋ' ಎಂಬ ಮಾತನ್ನು ಬಾಯಿ ಬರುವ ಎಲ್ಲರಿಂದಲೂ ಕೇಳಿಸಿಕೊಳ್ಳುತ್ತ ಗಂಡನ ಸೇವೆ ಮಾಡಿಕೊಂಡಿದ್ದಾಳೆ. ಅವಳ ಮಗನಿಗೆ ಚೆನೈನಲ್ಲಿ ನೌಕರಿ. ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಿ ಮನೆಯಲ್ಲೇ ಉಳಿಯುವ ಮಗುವನ್ನ ನೋಡಿಕೊಳ್ಳಲು ಬೇಕೆಂದು ಅಮ್ಮನನ್ನು ಚೆನೈಗೆ ಕರೆಯುತ್ತಿದ್ದಾನೆ. 'ನನ್ನ ಮಗನಿಗೆ ಅಜ್ಜಿಯ ಪ್ರೀತಿಯ ಬೇಡವೇ?' ಎಂಬ ಬಾಣ ಬಿಡುತ್ತಿದ್ದಾನೆ. ಅವನ ದೊಡ್ಡ ಮನೆಯಲ್ಲಿ ಹಾಸಿಗೆ ಹಿಡಿದ ಅಪ್ಪನಿಗೆ ಜಾಗವಿಲ್ಲ. "ಅಪ್ಪ ನಮಗಾಗಿ ಏನು ಮಾಡಿದ್ದಾನೆ?" ಎಂಬುದವನ ವಾದ. ಅಮ್ಮ ಚೆನೈಗೆ ಹೋಗಲು ತಯಾರಾಗಿದ್ದಾಳೆ.. ಅಪ್ಪನನ್ನು ನೋಡಿಕೊಳ್ಳಲು ಹುಬ್ಬಳ್ಳಿಯ ಕೆಲಸಕ್ಕಿರುವ ಇನ್ನೂ ಮದುವೆ ನಿಕ್ಕಿಯಾಗದೆ ಉಳಿದ ಮಗಳನ್ನು ಕರೆಸಿದ್ದಾಳೆ. 'ಇಲ್ಲೇ ಸೊಸೈಟಿಗೆ ಕೆಲಸಕ್ಕೆ ಹೋದರೆ ನಾಲ್ಕು ಜನರ ಕಣ್ಣಿಗೆ ಬಿದ್ದು ಯಾವುದಾದರೂ ಗಂಡು ಸಿಗುತ್ತದೆ' ಎಂಬುದು ಆಯಿಯ ವಾದ.
ಇಲ್ಲಿ ಯಾರು ಸರಿಯೋ, ಯಾರು ತಪ್ಪೋ, ಎಲ್ಲ ಅವರವರ ಫಾಯಿದೆ. ಅವರವರ ದೃಷ್ಟಿ. ಅವರವರ ಅಸಹಾಯಕತೆ. ಹೊರಗೆ ಒಂದೆಂದು ಕಾಣುವ ಕೂಡುಕುಟುಂಬವೊಂದರೊಳಗೆ ಎಷ್ಟೆಲ್ಲ ಹೊಯ್ದಾಟಗಳು! ಎಲ್ಲದರ ನಡುವೆ 'ಕರಡಿ ಕಚ್ಚಿದ ಹೆಂಡತಿಯನ್ನು ಆರು ಮೈಲಿ ಹೊತ್ತೊಯ್ದು, ಆಸ್ಪತ್ರೆ ಸೇರಿಸಿ ಉಳಿಸಿಕೊಂಡ ಕೋಟಿಯಂಥದೇ ಗಂಡ ನನಗೂ ಸಿಗಲಿ' ಎಂಮ ಅಂತರಂಗದ ಆಸೆಯನ್ನು ಯಾರಿಗೂ ಹೇಳದೇ ಉಳಿಯುವ ಮಗಳು..
ಛಾಯಾ ಭಟ್ ಅವರ ಬಯಲರಸಿ ಹೊರಟವಳು ಕೂಡು ಕುಟುಂಬಗಳ, ಒಡೆದ ಸಂಸಾರಗಳ, ಜೊತೆಗೇ ಇದ್ದರೂ ಕಾಣದ ಗೋಡೆಗಳ ನಡುವೆ ಸಿಕ್ಕಿಕೊಂಡವರ ಕಥೆಗಳನ್ನು ಹೇಳುತ್ತದೆ. ಹಾಗಂತ ಅಷ್ಟೇ ಅಲ್ಲ. ವೈವಿಧ್ಯಮಯವಾದ ವಿಷಯಗಳನ್ನು ಆಯ್ಕೆಮಾಡಿಕೊಳ್ಳುವಲ್ಲಿ, ಅವನ್ನು ನಿರೂಪಿಸುವಲ್ಲಿ ಸಹಾ ಲೇಖಕಿ ಹಿಂದೆ ಬಿದ್ದಿಲ್ಲ. ಚಂದದ ಶೈಲಿ, ಮನಸ್ಸಿಗೆ ನಾಟುವ ಸಾಲುಗಳು, ಕಾಡುವ ಪಾತ್ರಗಳು. ಹೆಣೆದ ಕಥಾ ಹಂದರವಾಗಲೀ, ವ್ಯಕ್ತಪಡಿಸಿದ ತೊಳಲಾಟಗಳಾಗಲೀ ಅತ್ಯಂತ ಖಾಸಾ. ಮುಕ್ತವಾಗಿ ಓದಿದರೆ ಎಲ್ಲವೂ ಆಪ್ತ ಆಪ್ತ.
- ವಿನಾಯಕ ಅರಳಸುರಳಿ
"ಆಸ್ಟ್ರೇಲಿಯಾದ ಮೊದಲ ಮ್ಯೂಸಿಯಂ ನಲ್ಲಿ ಮೂಲನಿವಾಸಿಗಳು ಹೆಣೆಯುತ್ತಿದ್ದ ಬೆತ್ತದ ಬುಟ್ಟಿಗಳು, ಚಿಪ್ಪುಗಳ ಸರ ಇತ್ಯ...
“ತಪ್ಪು ತಪ್ಪೇ, ಅಪರಾಧ ಅಪರಾಧವೆ ಮತ ಬ್ಯಾಂಕ್ ಗಳ ದುರಾಸೆಯಿಂದ ಸಮರ್ಥನೆಯಾಗಲಿ ದಂಡನೆಗಳಾಗಲಿ, ಸಾಮಾಜಿಕ ನೆಮ್ಮದಿ...
"ಕರ್ಣಾಟಕದ ರಾಜಕೀಯ ಪರ್ವದ ಹೃದಯವಾಗಿರುವ ಬೆಂಗಳೂರಿನ ವನಪರ್ವ ಸಭಾಪರ್ವಗಳು ಇಲ್ಲಿ ಸುಂದರವಾಗಿ ಮೂಡಿದೆ. ನಗರವು ಮಹ...
©2025 Book Brahma Private Limited.