Date: 25-05-2021
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಇಂಗ್ಲಂಡ್ ಮೂಲದ ಕಂಟೆಂಪೊರರಿ ಆರ್ಟ್ ಕಲಾವಿದ ಇಂಕಾ ಶೋನಿಬೇರ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದ: ಇಂಕಾ ಶೋನಿಬೇರ್ (Yinka Shonibare)
ಜನನ: 10 ಫೆಬ್ರವರಿ, 1962
ಶಿಕ್ಷಣ: ಗೋಲ್ಡ್‌ಸ್ಮಿತ್ಸ್ ಕಾಲೇಜ್, ಲಂಡನ್
ವಾಸ: ಲಂಡನ್, ಇಂಗ್ಲಂಡ್
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ಪೇಂಟಿಂಗ್, ಫೊಟೋಗ್ರಫಿ, ಇನ್ಸ್ಟಾಲೇಷನ್, ಸ್ಕಲ್ಪ್ಚರ್
ಇಂಕಾ ಶೋನಿಬೇರ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಇಂಕಾ ಶೋನಿಬೇರ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಜಗತ್ತೆಂಬ ಹಳ್ಳಿಯ ಮಜಾ ಇದು - ಇಂಡೊನೇಷ್ಯಾದ ಬಾಟಿಕ್ ತಂತ್ರಜ್ಞಾನವನ್ನು ಬಳಸಿ, ಅಲ್ಲಿನ ಜನರಿಗೆಂದು ನೆದರ್ಲಂಡ್‌ನಲ್ಲಿ ತಯಾರಾಗುವ ಕಡು ಬಣ್ಣಬಣ್ಣದ ಬಟ್ಟೆಗಳ ಅಂಗಿ ಕ್ರಮೇಣ ಪಶ್ಚಿಮ ಆಫ್ರಿಕಾದಲ್ಲಿ ಅವರದೇ ವಿಶಿಷ್ಟ ಉಡುಪು ಎಂದು ಪ್ರಸಿದ್ಧವಾದದ್ದು! ಹೀಗೆ, ಒಂದು ಪ್ರದೇಶದ್ದಲ್ಲದ ಒಂದು ವಸ್ತು, ಕ್ರಮೇಣ ಆ ಪ್ರದೇಶದ್ದೇ ಎಂದು ಅಧಿಕೃತ ಮುದ್ರೆ ಪಡೆಯುವ ಜಾಗತೀಕರಣದ ಆಟಗಳ ಹಿಂದಿರುವ ವಾಣಿಜ್ಯ, ರಾಜಕೀಯ ಹಿತಾಸಕ್ತಿಗಳನ್ನು, ವರ್ಣ-ವರ್ಗ- ಜನಾಂಗೀಯ ವೈಶಿಷ್ಟ್ಯಗಳನ್ನು, ಹೈಬ್ರಿಡ್ ಸಾಂಸ್ಕೃತಿಕ ಐಡೆಂಟಿಟಿಗಳ ಫ್ಯೂಷನ್‌ಅನ್ನು ನೈಜೀರಿಯಾ ಮೂಲದ ಬ್ರಿಟಿಷ್ ಕಲಾವಿದ ಇಂಕಾ ಶೋನಿಬೇರ್ ತಿಳಿ ವ್ಯಂಗ್ಯದ ಮೂಲಕವೇ ವೀಕ್ಷಕರ ಮುಂದಿಡುತ್ತಾರೆ.
ಆಫ್ರಿಕ-ಯುರೋಪುಗಳ ನಡುವಿನ ಆರ್ಥಿಕ-ರಾಜಕೀಯ ಚರಿತ್ರೆಗಳ ಹಿನ್ನೆಲೆಯಲ್ಲಿ ಆ ಭೂಖಂಡಗಳ ಕೊಲೋನಿಯಲ್ ಮತ್ತು ಪೋಸ್ಟ್-ಕೊಲೋನಿಯಲ್ ಯುಗದ ಅಂತಃಸಂಬಂಧಗಳನ್ನು, ಐಡೆಂಟಿಟಿಗಳನ್ನು ಇಂಕಾ ಅವರ ಕಲಾಕೃತಿಗಳು ಈಗ ಸಮಕಾಲೀನ ಜಗತ್ತಿನಲ್ಲಿ ನಿಂತು ವಿಶ್ಲೇಷಿಸುತ್ತವೆ. “People always want to categorize things: I’m much more interested in this idea of a hybrid.” ಎನ್ನುತ್ತಾರೆ, ಇಂಕಾ.
ಇಂಗ್ಲಂಡಿನಲ್ಲೇ ಜನಿಸಿದ ಇಂಕಾ, ಹೆತ್ತವರ ಜೊತೆ ನೈಜೀರಿಯಾದ ಲೆಗೋಸ್‌ಗೆ ತೆರಳಿದಾಗ ಅವರಿಗೆ ಮೂರು ವರ್ಷ ಪ್ರಾಯ. ಬಳಿಕ 17ತುಂಬಿದಾಗ, ಇಂಗ್ಲಂಡಿಗೆ ಮರಳಿ ಶಿಕ್ಷಣ ಮುಂದುವರಿಸಿದ ಇಂಕಾಗೆ ದುರದೃಷ್ಟವಶಾತ್, ಬೆನ್ನುಹುರಿಯ ಉರಿಯೂತದಿಂದಾಗಿ ದೇಹ ಪಾರ್ಶ್ವವಾತಕ್ಕೀಡಾಗುವ (ಟ್ರಾನ್ಸ್‌ವರ್ಸ್ ಮಯಲೈಟಿಸ್) ಒಂದು ಅಪರೂಪದ ನರಸಂಬಂಧಿ ಕಾಯಿಲೆ ಬಂದು, ಅವರು ಶಾಶ್ವತವಾಗಿ ದೈಹಿಕ ವೈಕಲ್ಯಕ್ಕೆ ತುತ್ತಾಗುತ್ತಾರೆ. ಆ ಸ್ಥಿತಿಯಲ್ಲೇ ತನ್ನ ಕಲಾ ಸ್ನಾತಕೋತ್ತರ ಪದವಿ ಪೂರೈಸಿದ ಇಂಕಾ, ಈಗಲೂ ವಿದ್ಯುತ್ ಚಾಲಿತ ವೀಲ್ ಚೇರ್ ಮೂಲಕವೇ ಚಲಿಸುವುದು.
ಒಂದು ಶ್ರಮಿಕ ತಂಡದ ಸಹಾಯ ಪಡೆದು, ತನ್ನ ಕಲಾಕೃತಿಗಳನ್ನು ನಿರ್ಮಿಸುವ ಇಂಕಾ ವೀಲ್ ಚೇರಿನಲ್ಲಿ ತನ್ನ ತಂಡಕ್ಕೆ ನಿರ್ದೇಶನ ಕೊಡುತ್ತಾರೆ. ಅವರ ಕಲಾಕೃತಿಗಳಲ್ಲಿ ಹೆಚ್ಚಾಗಿ ಮನುಷ್ಯ ರೂಪಗಳಿಗೆ ತಲೆಯ ಭಾಗ ಇರುವುದಿಲ್ಲ ಮತ್ತು ಆ ದೇಹಗಳು ಮೇಲೆ ವಿವರಿಸಿದ ಕಡು ಬಣ್ಣಬಣ್ಣದ ಉಡುಗೆ-ತೊಡುಗೆಗಳನ್ನು ತೊಟ್ಟಿರುತ್ತವೆ. ಅವರು ಈ ಬಟ್ಟೆಯ ಬಳಕೆ ಆರಂಭಿಸಿದ್ದು 1990ರ ಹೊತ್ತಿಗೆ. ಫೊಟೋಗ್ರಫಿ ಕಲಾಕೃತಿಗಳನ್ನೂ ರಚಿಸುವ ಇಂಕಾ, ಅದರಲ್ಲಿ ಪ್ರಸಿದ್ಧ ಪೇಂಟಿಂಗ್‌ಗಳು ಅಥವಾ ಕಥೆಗಳನ್ನು ಚಿತ್ರೀಕರಿಸುತ್ತಾರೆ. ಅವರ ಮೊದಲ ಸೋಲೋ ಪ್ರದರ್ಶನ ನಡೆದದ್ದು 1989ರಲ್ಲಿ, ಅವರು ಕಲಿತ ಬ್ಯಾಮ್‌ಶಾ ಕಾಲೇಜಿನ ಗ್ಯಾಲರಿಯಲ್ಲಿ.
2004ರಲ್ಲಿ ಪ್ರತಿಷ್ಠಿತ ಟರ್ನರ್ ಬಹುಮಾನ ಪಡೆದ ಇಂಕಾ, ಲಂಡನ್‌ನಲ್ಲೇ ವಾಸವಾಗಿದ್ದು, ಸ್ಟುಡಿಯೊ ಹೊಂದಿದ್ದಾರೆ, ಅವರ ಕಲಾಕೃತಿಗಳು ಇಂದು ಜಗತ್ತಿನ ಬಹುತೇಕ ಎಲ್ಲ ಮಹತ್ವದ ಕಲಾ ಮ್ಯೂಸಿಯಂಗಳ ಸಂಗ್ರಹದಲ್ಲಿವೆ. 2002ರಲ್ಲಿ ಡಾಕ್ಯುಮೆಂಟಾ11ರಲ್ಲಿ ಅವರು ಪ್ರದರ್ಶಿಸಿದ ‘Gallantry and Criminal Conversation’ ಕಲಾಕೃತಿ ಅವರಿಗೆ ಜಾಗತಿಕವಾಗಿ ಪ್ರಸಿದ್ಧಿ ತಂದುಕೊಟ್ಟಿತು. ಅವರ ಉಳಿದ ಕೆಲವು ಪ್ರಸಿದ್ಧ ಕಲಾಕೃತಿಗಳೆಂದರೆ, ‘Nelson’s Ship in a Bottle’(2010), ‘Refugee Astronaut’ (2019), Mr and Mrs Andrews Without Their Heads (1998), Reverend on Ice (2005), The Swing(2001), Dorian Gray (2001).
ಇದೇ ಜೂನ್ ತಿಂಗಳಲ್ಲಿ, (2021) ಲಂಡನ್ನಿನಲ್ಲಿ ಪಿಕಾಸೊ ಅವರ ಆಫ್ರಿಕನ್ ಆರ್ಟ್ ಆಧರಿಸಿದ ತನ್ನ ಕಲಾಕೃತಿಗಳ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿರುವ ಇಂಕಾ ಅವರನ್ನು ಗಾರ್ಡಿಯನ್ ಪತ್ರಿಕೆ ಸಂದರ್ಶನದ ವೇಳೆ, ಈ ಕೊರೊನಾ ಜಗನ್ಮಾರಿ ನಿಮಗೆ ಕಲಾಕೃತಿಗಲ ರಚನೆಗೆ ಸಾಕಷ್ಟು ಅವಕಾಶ ಮಾಡಿಕೊಟ್ಟಿತು ಅನ್ನಿಸುತ್ತದೆ ಎಂದಾಗ, ಅದಕ್ಕೆ ಇಂಕಾ ಉತ್ತರಿಸಿದ್ದು ಹೀಗೆ: “I’m very fortunate that my job is also my lifestyle. So I don’t think about my art as work. In a way, it is therapy. And for people who are fortunate enough to be creative, I think the pandemic hasn’t been as devastating mentally. Because you can escape into that space, work there and thrive there. I feel fortunate that anyone wants the results of my creativity. I’d probably be one of those eccentrics who just produce these things anyway. But fortunately there is such a profession as artist, so people can take it off my hands.” (ಮಾರ್ಚ್ 2021. ದಿ ಗಾರ್ಡಿಯನ್ ನ ಟಿಮ್ ಲಿವಿಸ್ ಅವರಿಗೆ ನೀಡೀದ ಸಂದರ್ಶನದಲ್ಲಿ)
ಯಾರ್ಕ್‌ಷೈರ್ ಸ್ಕಲ್ಪ್ಚರ್ ಪಾರ್ಕ್‌ನಲ್ಲಿ ಇಂಕಾ ಶೋನಿಬೇರ್ ಅವರ ಜೊತೆ ಬೆತ್ ಹ್ಯೂಸ್ ಮಾತುಕತೆ:
ಇಂಕಾ ಶೋನಿಬೇರ್ ಅವರ ಬಗ್ಗೆ ಬ್ಲೂಮ್‌ಬರ್ಗ್ ಟಿವಿ ಚಾನೆಲ್ ಬ್ರಿಲಿಯಂಟ್ ಐಡಿಯಾಸ್ ಸರಣಿಯಡಿ ರಚಿಸಿದ ಕಾರ್ಯಕ್ರಮ:
ಚಿತ್ರ ಶೀರ್ಷಿಕೆಗಳು
ಇಂಕಾ ಶೋನಿಬೇರ್ ಅವರ BOY SITTING BESIDE HIBISCUS FLOWER, (2015)
ಇಂಕಾ ಶೋನಿಬೇರ್ ಅವರ Bronze, (2019)
ಇಂಕಾ ಶೋನಿಬೇರ್ ಅವರ CHA-CHA-CHA,(1997)
ಇಂಕಾ ಶೋನಿಬೇರ್ ಅವರ Cheeky Little Astronomer, (2013)
ಇಂಕಾ ಶೋನಿಬೇರ್ ಅವರ Discobolus (after Naukydes), (2017)
ಇಂಕಾ ಶೋನಿಬೇರ್ ಅವರ Gallantry and Criminal Conversation (2002)
ಇಂಕಾ ಶೋನಿಬೇರ್ ಅವರ MAGIC LADDER KID VI, (2018)
ಇಂಕಾ ಶೋನಿಬೇರ್ ಅವರ MR. AND MRS. ANDREWS WITHOUT THEIR HEADS, (1998)
ಇಂಕಾ ಶೋನಿಬೇರ್ ಅವರ Nelson’s Ship in a Bottle (2010)
ಇಂಕಾ ಶೋನಿಬೇರ್ ಅವರ WANDERER, (2006)
ಈ ಅಂಕಣದ ಹಿಂದಿನ ಬರೆಹಗಳು:
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಈ ಕ್ಷಿತಿಜ ಕಥೆಯು ಮಂದಾಕಿನಿ ಎಂಬ ಕಲ್ಕತ್ತೆಯ ಹೆಣ್ಣು ಮಗಳು ಕೆಲಸ ಮಾಡುತ್ತಿದ್ದ ಮಿಶನರಿ ಸ್ಕೂಲ್ ನವರು ಸ್ಕಾಲರ್...
"ಬಾಶೆ ಮಾತ್ರವಲ್ಲದೆ ಆಯಾ ಬಾಶೆಗಳ ಸಾಮಾಜಿಕ, ಸಾಂಸ್ಕೃತಿಕ ಅದ್ಯಯನ ಮಾಡಬೇಕಾಗುತ್ತದೆ. ಈ ಎಲ್ಲ ಅದ್ಯಯನಗಳು ಅವಕಾಶಗ...
"ಈ ಕಥೆಯ ಒಳತಿರುಳುಗಳನ್ನು ಅರ್ಥೈಸುತ್ತಾ ಸಾಗಿದಂತೆ ಒಂದಿಷ್ಟು ವೈರುಧ್ಯ ವ್ಯಂಗ್ಯ ವಿಡಂಬನೆ ನಮಗೆ ಕಾಣುತ್ತದೆ. ಜಿ...
©2025 Book Brahma Private Limited.