Date: 07-11-2024
Location: ಬೆಂಗಳೂರು
ಬೆಂಗಳೂರು: ಸುಪ್ರಸಿದ್ಧ ವಿಜ್ಞಾನ ಲೇಖಕ ಡಾ.ಟಿ.ಆರ್. ಅನಂತರಾಮು ಅವರ ಜೆ.ಆರ್. ಲಕ್ಷ್ಮಣರಾವ್ ಅವರ ‘ವಿಜ್ಞಾನ ರಸಯಾತ್ರಿ’ ಸ್ಮರಣ ಸಂಚಿಕೆಯ ಬಿಡುಗಡೆ ಸಮಾರಂಭವು 2024 ನಂ. 07 ಗುರುವಾರದಂದು ನಗರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಂಗಳೂರಿನ ಜವಹರ್ ಲಾಲ್ ನೆಹರು ತಾರಾಲಯದ ನಿದೇಶಕ ಡಾ. ಬಿ.ಆರ್ ಗುರುಪ್ರಸಾದ್ ಮಾತನಾಡಿ, "ಲೇಖಕರನ್ನು ರೂಪಿಸುವಂತಹ ಬಹಳ ಮಹತ್ವದ ಕೆಲಸವನ್ನು ಜೆ.ಆರ್ ಅವರು ಮಾಡಿದ್ದಾರೆ. ವಿಜ್ಞಾನ ಸಂಗತಿಗಳಲ್ಲಿ ನನಗೆ ಜೆ.ಆರ್ ಅವರ ಗುರುಗಳು. ಇಂದಿನ ದಿನ ಗುರುಗಳ ಕೃತಿಯನ್ನು ಲೋಕಾರ್ಪಣೆ ಮಾಡುವುದು ನಿಜಕ್ಕೂ ಸಂತಸದ ಸಂಗತಿ. ಇನ್ನು ಜೆ.ಆರ್ ವ್ಯಕ್ತಿತ್ವ ಬಹುಮುಖವಾದದ್ದು. ಅವರಂತಹ ಗುಣಗಳ ವ್ಯಕ್ತಿ ಸಿಗುವುದು ವಿರಳ. ಅವರ ಗುಣಗಳನ್ನು, ಅವರ ವಿಚಾರಗಳನ್ನು ಬೇರೊಬ್ಬರು ಕಲಿತರೆ ಅವರ ಜೀವನ ನಿಜಕ್ಕೂ ಸಾರ್ಥಕ. ಒಬ್ಬ ಪ್ರಾಧ್ಯಾಪಕರಾಗಿ, ವಿಜ್ಞಾನ ಸಂವಾಹಕರಾಗಿ, ಚಿಂತಕರಾಗಿ, ಸೂಕ್ಷ್ಮ ಸಂವೇದನೆ ವುಳ್ಳವರಾಗಿ, ಲೇಖಕರಾಗಿ ಕಿರಿಯ ಲೇಖಕರನ್ನು ಬೆಳೆಸುವ ವಿಶಾಲ ಮನೋಭಾವದವರಾಗಿ, ತಾವು ನಂಬಿದ್ದಂತಹ ಸಿದ್ಧಾಂತಗಳಿಗೆ ಕೊನೆಯವರೆಗೂ ನಿಷ್ಠರಾಗಿ, ನಿಷ್ಠುರವಾಗಿದ್ದಂತಹ ವ್ಯಕ್ತಿತ್ವ ಅವರದ್ದು. ನಿಜಕ್ಕೂ ಅಂತಹ ವ್ಯಕ್ತಿಗಳು ಬಹಳ ಅಪರೂಪ," ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಪ್ರಸಿದ್ಧ ಲೇಖಕ, ಚಿಂತಕ ಡಾ.ಜಿ. ರಾಮಕೃಷ್ಣ ಮಾತನಾಡಿ, "ಈ ಕೃತಿಯನ್ನು ಓದಿದ ಮೇಲೆ ಇನ್ನೇನೂ ಕೂಡ ಓದಬೇಕು ಇಲ್ಲ ಎನ್ನುವಷ್ಟು ಸಮಗ್ರ. ಆತ್ಮಕತೆಯ ಸಾಕಷ್ಟು ಭಾಗಗಳು ಇಲ್ಲಿ ಚಿತ್ರಿತವಾಗಿದೆ. ಅವರಿಗಿದ್ದಂತಹ ಸಾಹಿತ್ಯ ಕುರಿತ ಆಸಕ್ತಿ ವಿಶೇಷ. ಪ್ರತೀ ವಾರ ಅವರು ಮಾಡುತ್ತಿದ್ದ ಚರ್ಚೆ, ಸಾಹಿತ್ಯದ ಕುರಿತ ಕಾರ್ಯಕ್ರಮಗಳು ನಿಜಕ್ಕೂ ಕಿರಿಯ ಲೇಖಕರಿಗೆ ದಾರಿದೀಪದಂತೆ ಇತ್ತು," ಎಂದರು.
ಸಮಾರಂಭದಲ್ಲಿ ಕೃತಿಯ ಲೇಖಕ ಟಾ.ಟಿ.ಆರ್. ಅನಂತರಾಮು, ಬೃಂದಾ ರಾವ್, ಡಾ ಕೈಲಾಶ್ ಕೌಶಿಕ್, ವಿದ್ಯಾ, ಅನಿಲ್, ಅನೂರಾಧ ಸೆರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರು: ಅಂಕಿತ ಪ್ರಕಾಶನದ ವತಿಯಿಂದ ಚಿತ್ರಸಮೂಹ ಸಹಯೋಗದಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಹಾಗೂ ವಾರ್ತಾ ಮತ್ತು ಸಾರ್ವಜನ...
ಬೆಂಗಳೂರು: 'ವಿನಯ ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ಅಧಿಕಾರ ಬಂದರೆ ಅಹಂಕಾರ ಒಟ್ಟೊಟ್ಟಿಗೆ ಬರುತ್ತದೆ. ಕೇಂದ...
ಬೆಂಗಳೂರು: ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ನೀಡುವ ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022ಕ್ಕೆ ಕವಿ, ನಾಟಕಕಾರ ಬೇಲೂರು ...
©2024 Book Brahma Private Limited.