Date: 20-04-2021
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕಾದ ವೀಡಿಯೊ ಇನ್ಸ್ಟಾಲೇಷನ್ಸ್ ಕಲಾವಿದ ನಾಮ್ ಜುನ್ ಪಾಯಿಕ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದ: ನಾಮ್ ಜುನ್ ಪಾಯಿಕ್ (Nam June Paik)
ಜನನ: 20 ಜುಲೈ, 1932
ಮರಣ: 29 ಜನವರಿ, 2006
ಶಿಕ್ಷಣ: ಯೂನಿವರ್ಸಿಟಿ ಆಫ್ ಟೋಕಿಯೊ, ಜಪಾನ್; ಲುಡ್ವಿಗ್ ಮಾಕ್ಸಿಮಿಲಿಯನ್ ಯೂನಿವರ್ಸಿಟಿ, ಮ್ಯೂನಿಕ್, ಜರ್ಮನಿ
ವಾಸ: ಮಯಾಮಿ, ಅಮೆರಿಕಾ
ಕವಲು: ಫ್ಲಕ್ಸಸ್ ಚಳುವಳಿ
ವ್ಯವಸಾಯ: ವೀಡಿಯೊ ಆರ್ಟ್, ವೀಡಿಯೊ ಇನ್ಸ್ಟಾಲೇಷನ್ಸ್
ನಾಮ್ ಜುನ್ ಪಾಯಿಕ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ನಾಮ್ ಜುನ್ ಪಾಯಿಕ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
“20ನೇ ಶತಮಾನದ ಆದಿಭಾಗವನ್ನು ಪಿಕಾಸೊ ಆವರಿಸಿಕೊಂಡಿದ್ದರೆ, ಅದರ ಅಂತ್ಯಭಾಗವನ್ನು ಆವರಿಸಿದ್ದವರು ನಾಮ್ ಜುನ್ ಪಾಯಿಕ್” ಎಂಬ ಸ್ಮಿತ್ ಸೋನಿಯನ್ ಮ್ಯೂಸಿಯಂ ನಿರ್ದೇಶಕಿ ಎಲಿಜಾಬೆತ್ ಬ್ರೌನ್ ಅವರ ಹೇಳಿಕೆ ನಾಮ್ ಜುನ್ ಪಾಯಿಕ್ ಅವರ ಸಾಧನೆಯನ್ನು ಸಮರ್ಪಕವಾಗಿ ವಿವರಿಸುತ್ತದೆ. “ವೀಡಿಯೊ ಆರ್ಟ್” ನ ಪಿತಾಮಹ ಎಂದೇ ಗುರುತಿಸಲಾಗುವ ನಾಮ್ ಜುನ್ ಪಾಯಿಕ್ ಅವರ ಯೋಚನೆಗಳು- ಚಿಂತನೆಗಳು ಎಷ್ಟು ದೂರಗಾಮಿಯಾಗಿದ್ದವು ಎಂದರೆ, ಇಂದು ಯುಟ್ಯೂಬ್, ಫೇಸ್‌ಬುಕ್‌ನಂತಹ ಸಾಮಾಜಿಕ ಮಧ್ಯಮಗಳ ಬೆಳವಣಿಗೆಯನ್ನು 70ರ ದಶಕದಲ್ಲೇ ಕನಸಿದ್ದವರು ನಾಮ್ ಜುನ್ ಪಾಯಿಕ್. ಅವರ ಇಲೆಕ್ಟ್ರಾನಿಕ್ ಸೂಪರ್ ಹೈವೇ ಎಂಬ ದೇಶ-ಕಾಲಗಳನ್ನು ಮೀರಿ ನಿಲ್ಲುವ ತಂತ್ರಜ್ಞಾನದ ಪರಿಕಲ್ಪನೆ ಇಂದು ಇಂಟರ್ನೆಟ್ ಉಗಮ ಹಾಗೂ ಮಾಹಿತಿ ಕ್ರಾಂತಿಯೊಂದಿಗೆ ಸತ್ಯವಾಗಿದೆ. ಇಂದು ವ್ಯಾಪಕವಾಗಿ ಬಳಕೆಯಲ್ಲಿರುವ ಇಲೆಕ್ಟ್ರಾನಿಕ್ ಸೂಪರ್ ಹೈವೇ ಎಂಬ ಪದವನ್ನು ಮೊದಲ ಬಾರಿಗೆ ಬಳಕೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.
ಸ್ವತಃ ವಿಡಿಯೋಗಳೇ ಶೈಶವದಲ್ಲಿದ್ದ ಕಾಲದಲ್ಲಿ ಅವಕ್ಕೆ ಕಲಾತ್ಮಕ ತಿರುವು-ತೆರವುಗಳನ್ನು ಒದಗಿಸಿದ ಸಾಧನೆ ನಾಮ್ ಜುನ್ ಪಾಯಿಕ್ ಅವರದು. ಆರಂಭದಲ್ಲಿ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿ ಆಗಿದ್ದ ನಾಮ್ ಜುನ್ ಪಾಯಿಕ್ ಅಲ್ಲಿಂದ ಜಗತ್ತಿನ ಪ್ರಮುಖ ದೃಶ್ಯಕಲಾವಿದರಲ್ಲಿ ಒಬ್ಬರಾಗಿ ಬೆಳೆದುನಿಂತದ್ದೇ ಒಂದು ಸೋಜಿಗ. ಜಪಾನಿನ ಅಡಿಯಾಳಾಗಿದ್ದ ಕೊರಿಯಾದಲ್ಲಿ ಸಿರಿವಂತ ಕುಟುಂಬದಲ್ಲಿ ಜನಿಸಿದ ನಾಮ್ ಜುನ್ ಪಾಯಿಕ್ ತಂದೆಯ ಮೇಲೆ ಅವರು ಜಪಾನಿನ ಪರ ಇರುವ ಆಪಾದನೆ ಇತ್ತು. ಹಾಗಾಗಿ, 1950ರಲ್ಲಿ ಕೊರಿಯಾ ಯುದ್ಧ ಆರಂಭಗೊಂಡಾಗ ಅವರ ಕುಟುಂಬ ಹಾಂಕಾಂಗಿಗೆ ಪಲಾಯನ ಮಾಡಬೇಕಾಯಿತು. ಅಲ್ಲಿಂದ ಅವರ ಕುಟುಂಬ ಜಪಾನಿನ ಕಮಕುರಾ ಎಂಬಲ್ಲಿ ನೆಲೆನಿಂತಿತು.
ಮನೆಯಲ್ಲಿ ತಂತ್ರಜ್ಞಾನದ ಗ್ಯಾಜೆಟ್‌ಗಳ ಸೆಳೆತ ಆರಂಭದಲ್ಲೇ ಇದ್ದ ಪಾಯಿಕ್, ಮನೆಯಲ್ಲಿ 1954ಹೊತ್ತಿಗೇ ಟೆಲಿವಿಷನ್ ಇತ್ತು, 1956ಹೊತ್ತಿಗೆ ಅವರು 8mm ಮೂವಿ ಕ್ಯಾಮರಾ ಹೊಂದಿದ್ದರು. ಟೋಕಿಯೊ ವಿವಿಯಲ್ಲಿ ಸಂಗೀತದ ಈಸ್ತೆಟಿಕ್ಸ್ ಪದವಿ ಪಡೆದ ಪಾಯಿಕ್, ಹೆಚ್ಚಿನ ಅಧ್ಯಯನಕ್ಕಾಗಿ ಜರ್ಮನಿಯ ಮೂನಿಕ್‌ಗೆ ಹೋದಾಗ ಅಲ್ಲಿ ಜೋಸೆಪ್ ಬಾಯ್ಸ್, ಜಾನ್ ಕೇಜ್ ಅವರಂತಹ ಸಮಕಾಲೀನ ಕಲಾವಿದರ ಭೇಟಿ ಆದದ್ದು, ಪಾಯಿಕ್ ಅವರಿಗೆ ಕಲಾಜಗತ್ತಿನ ಹೊಸ ಬಾಗಿಲನ್ನು ತೆರೆಯಿತು; ಅವರು ಫ್ಲಕ್ಸಸ್ ಕಲಾಚಳುವಳಿಯ ಭಾಗ ಆದರು.
Hommage à John Cage (1959), Simple, Zen for Head and Étude Platonique No. 3 (1961) ಅವರ ಆರಂಭಿಕ ಕೃತಿಗಳು. 1962ರಲ್ಲಿ ಫ್ಲಕ್ಸಸ್ ಚಳುವಳಿಯ ಮೊದಲ ಕಲಾಪ್ರದರ್ಶನದಲ್ಲಿ ಪಾಲ್ಗೊಂಡ ಬಳಿಕ ಅವರ ವೀಡಿಯೊ ಆರ್ಟ್ ಪರಿಕಲ್ಪನೆ ಖಚಿತ ರೂಪ ಪಡೆಯತೊಡಗಿತು. ಈ ಪ್ರದರ್ಶನದಲ್ಲಿ 13 ಟೆಲಿವಿಷನ್‌ಗಳನ್ನು ಬಳಸಿ ಅವರು ತನ್ನ ಕಲಾಕೃತಿಯನ್ನು ಪ್ರದರ್ಶಿಸಿದ್ದರು. 1963ರಲ್ಲಿ ಟೋಕಿಯೊಗೆ ಹಿಂದಿರುಗುವಾಗ Sony Port-a-Pak ಪೋರ್ಟಬಲ್ ವೀಡಿಯೊ ರೆಕಾರ್ಡಿಂಗ್ ಕ್ಯಾಮರಾ ತಂದದ್ದು ಅವರ ವೀಡಿಯೊ ಆರ್ಟಿಗೆ ಬುನಾದಿ ಹಾಕಿತು. ಟೋಕಿಯೊದಲ್ಲಿ ಟೆಲಿವಿಷನ್ ಇಂಜಿನಿಯರ್ ಷುಯಾ ಅಬೆ ಅವರ ಸಹಕಾರದಿಂದ ರಚಿಸಿದ Robot K-456 (1964) ಅವರ ಮೊದಲ ಆಟೊಮೇಟೆಡ್ ರೊಬೊ ಕಲಾಕೃತಿ. 1964ರಲ್ಲಿ ಅವರು ಶಾಶ್ವತವಾಗಿ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿ ನೆಲೆನಿಂತರು.
ಅವರ ಮೊದಲ ವೀಡಿಯೊ ಆರ್ಟ್.1965ರಲ್ಲಿ ಪೋಪ್ ಭೇಟಿ ನೀಡಿದಾಗ, ಅವರು ಅದರ ಚಿತ್ರಣವನ್ನಾಧರಿಸಿ ರಚಿಸಿದ ಕಲಾಕೃತಿ. Magnet TV (1965), Global Groove (1973), TV Buddha (1974), Guadalcanal Requiem (1977), ಮತ್ತು Good Morning Mr. Orwell (1984) ಅವರ ವೀಡಿಯೊ ಆರ್ಟ್ ಪ್ರಯೋಗದ ಹಾದಿಯಲ್ಲಿ ಹುಟ್ಟಿದ ಕಲಾಕೃತಿಗಳು. 1977ರಲ್ಲಿ ಜಪಾನಿನ ಷಿಗೇಕೊ ಕುಬೊತಾ ಅವರನ್ನು ಮದುವೆ ಆದ ನಾಮ್ ಜುನ್ ಪಾಯಿಕ್, ಆಕೆಯ ಸಹಯೋಗದೊಂದಿಗೂ ಹಲವು ಕಲಾಕೃತಿಗಳನ್ನು ರಚಿಸಿದರು.
1980ರ ಹೊತ್ತಿಗೆ ಸೈಬರ್ನಾಟಿಕ್ಸ್ ಮತ್ತು ರೊಬೊಟಿಕ್ಸ್‌ಗಳಲ್ಲಿ ಆಸಕ್ತಿ ತಳೆದು, ಆ ತಂತ್ರಗಳನ್ನು ಬಳಸಿ ಹಲವು ವೀಡಿಯೊ ಶಿಲ್ಪಗಳನ್ನು ರಚಿಸಿದರು. ವೇಗವಾಗಿ ಬೆಳೆಯತೊಡಗಿದ ತಂತ್ರಜ್ಞಾನ ಸಮಾಜದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಊಹಿಸಿ, ತಂತ್ರಜ್ಞಾನಕ್ಕೆ ಮಾನವೀಯ- ಭಾವನಾತ್ಮಕ ಮಗ್ಗುಲೊಂದನ್ನು ಬೆಳೆಸುವ ಅವರ ಪ್ರಯತ್ನಗಳು ಇಂದು ಮಹತ್ವದ ಚಿಂತನೆಗಳೆಂದು ಕಲಾಜಗತ್ತಿನಲ್ಲಿ ಪರಿಗಣಿತವಾಗಿವೆ. ಮುಂದೊಂದು ದಿನ ಶಿಕ್ಷಣ, ಸಹಯೋಗ, ಸಂವಹನಗಳು ದೇಶಗಳ ಗಡಿ ಇಲ್ಲದೆ ಸಾಧ್ಯವಾಗಲಿವೆ ಎಂಬ ಅವರ ಚಿಂತನೆ ಇಂದು ಸಾಕಾರಗೊಂಡು ನಿಂತಿದೆ.
1996ರಲ್ಲಿ ಲಕ್ವಾಗೆ ತುತ್ತಾದ ಬಳಿಕ ಅವರ ಚಟುವಟಿಕೆಗಳು ಸ್ವಲ್ಪ ನಿಧಾನಗೊಂಡವು. Chinese Memory (2005), ಅವರ ಕೊನೆಯ ಕಲಾಕೃತಿ. 2006ರಲ್ಲಿ ಅವರು ತೀರಿಕೊಂಡ ಬಳಿಕ, ಅವರ ಕಲಾಕೃತಿಗಳೆಲ್ಲ ಇಂದು ಜಗದ್ವಿಖ್ಯಾತ ಸ್ಮಿತ್ ಸೋನಿಯನ್ ಅಮೆರಿಕನ್ ಆರ್ಟ್ ಮ್ಯೂಸಿಯಂ ವಶದಲ್ಲಿವೆ. 2012-2013ರಲ್ಲಿ ಈ ಎಲ್ಲ ಕಲಾಕೃತಿಗಳು ಅಲ್ಲಿ Nam June Paik: Global Visionary ಎಂಬ ಹೆಸರಿನ ರೆಟ್ರೊಸ್ಪೆಕ್ಟಿವ್ ಪ್ರದರ್ಶನದಲ್ಲಿ ಪ್ರದರ್ಶಿತವಾಗಿದ್ದವು.
ನಾಮ್ ಜುನ್ ಪಾಯಿಕ್ ಡಾಕ್ಯುಮೆಂಟರಿ ಚಿತ್ರ: Nam June Paik's Art and Revolution 1
ನಾಮ್ ಜುನ್ ಪಾಯಿಕ್ ಬಗ್ಗೆ ಲೇಖಕ-ಟಿವಿ ಆಂಕರ್ ರಸೆಲ್ ಕಾನರ್ ಅವರ ಮಾತುಕತೆ:
ಚಿತ್ರ ಶೀರ್ಷಿಕೆಗಳು:
ನಾಮ್ ಜುನ್ ಪಾಯಿಕ್ ಅವರ bakelite robot (2002)
ನಾಮ್ ಜುನ್ ಪಾಯಿಕ್ ಅವರ electronic superhighway (1995)
ನಾಮ್ ಜುನ್ ಪಾಯಿಕ್ ಅವರ Magnet TV (1965)
ನಾಮ್ ಜುನ್ ಪಾಯಿಕ್ ಅವರ Megatron-Matrix, (1995)
ನಾಮ್ ಜುನ್ ಪಾಯಿಕ್ ಅವರ Merce-Digital, (1988)
ನಾಮ್ ಜುನ್ ಪಾಯಿಕ್ ಅವರ Zen for TV (1963-74)
ನಾಮ್ ಜುನ್ ಪಾಯಿಕ್ ಅವರ random access (1963)
ನಾಮ್ ಜುನ್ ಪಾಯಿಕ್ ಅವರ TV Buddha (1989)
ನಾಮ್ ಜುನ್ ಪಾಯಿಕ್ ಅವರ TV Garden (1974-77)
ನಾಮ್ ಜುನ್ ಪಾಯಿಕ್ ಅವರ TVClock 1963-89
ಈ ಅಂಕಣದ ಹಿಂದಿನ ಬರೆಹಗಳು:
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.