Date: 28-08-2022
Location: ಬೆಂಗಳೂರು
ಅಲ್ಲಮ ಪ್ರಕಾಶನದಿಂದ ಆಯೋಜಿಸಲಾದ ' ಅಲ್ಲಮ ಕಾವ್ಯ ಪುರಸ್ಕಾರ' ವನ್ನು ಸೂರ್ಯಕೀರ್ತಿ ಅವರ ' ಮೀನು ಕುಡಿದ ಕಡಲು ' ಕೃತಿ ಪಡೆದುಕೊಂಡಿತ್ತು. ಇಂದು ಕೃತಿಯ ಬಿಡುಗಡೆಯ ಜೊತೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ನಾಡಿನ ಕವಿಗಳಾದ ಡಾ. ಎಲ್ ಎನ್ ಮುಕುಂದ ರಾಜ್, ಡಾ. ಎಲ್ ಜಿ ಮೀರಾ , ಪ್ರೊ. ನಾರಾಯಣ ಸ್ವಾಮಿ ಘಟ್ಟ ಮುಂತಾದವರು ಇದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ. ನಾರಾಯಣ ಸ್ವಾಮಿ ಘಟ್ಟ ಅವರು ಮಾಡುತ್ತಾ 'ಇಂದಿನ ಕವಿಗಳು ಜಾತಿ, ಮತ, ಗುಂಪುಗಳ ಬಿಟ್ಟು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಗಮನಹರಿಸಬೇಕಿದೆ. ಮಾನವೀಯ ಮೌಲ್ಯಗಳನ್ನು ತಮ್ಮ ತಮ್ಮ ಕೃತಿಗಳಲ್ಲಿ ಬರೆದು, ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ' ಎಂದರು.
ಮೀನು ಕುಡಿದ ಕಡಲು ಕೃತಿಯ ಬಗ್ಗೆ ಮಾತನಾಡುತ್ತಾ ಡಾ. ಎಲ್ ಜಿ ಮೀರಾ ಅವರು ' ಸೂರ್ಯ ಕೀರ್ತಿ ಅವರ ಕವಿತೆಗಳಲ್ಲಿ ಪ್ರಭುತ್ವವನ್ನು ಧಿಕ್ಕರಿಸುವ, ರಾಜಕೀಯವಾಗಿ ಟೀಕಿಸುವ ಕವಿಯಾಗಿದ್ದಾರೆ. ಇಂದು ಅಡಿಗರಂತೆ ರಾಜಕೀಯವನ್ನು ಟೀಕಿಸುವಲ್ಲಿ ಯುವಕವಿಗಳು ಗಮನ ಹರಿಸುವುದು ಮುಖ್ಯ. ಸೂರ್ಯ ಕೀರ್ತಿ ಅವರ ಕವಿತೆಗಳಲ್ಲಿ ತಾತ್ವಿಕತೆ, ಸ್ತ್ರೀ ಸಂವೇದನೆ, ಸಾಮಾಜಿಕ, ರಾಜಕೀಯ, ಪ್ರೇಮದ ಬಗ್ಗೆ ಬಹಳ ಅರ್ಥ ಪೂರ್ಣವಾಗಿ ಬರೆದಂತಹ ಪದ್ಯಗಳನ್ನು ಈ ಸಂಕಲನದಲ್ಲಿ ನೋಡಬಹುದು. ಆಧುನಿಕತೆಯ ದುರಂತ ಜೀವನಗಳನ್ನು ಕಾವ್ಯದ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯ ಕೀರ್ತಿ ಅವರು ಪ್ರಬುದ್ಧ ಕವಿಯಾಗಿ ಬರೆದಿರುವ ಕವಿತೆಗಳು ಈ ಮೀನು ಕುಡಿದ ಕಡಲು ಪುಸ್ತಕದಲ್ಲಿವೆ ಎಂದು ಹೇಳಿದರು.
ಡಾ. ಎಲ್ ಎನ್ ಮುಕುಂದ ರಾಜ್ ಅವರು ಕೂಡಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಕಾರ್ಯಕ್ರಮವು ಕುವೆಂಪು ಸಭಾಂಗಣ , ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರಿನಲ್ಲಿ ನಡೆಯಿತು.
ಬಳ್ಳಾರಿ: ಕಳೆದ ಕೆಲವು ವರ್ಷಗಳಂತೆ ಈ ವರ್ಷವೂ “ಸಂಗಂ ಸಂಸ್ಥೆ ಬಳ್ಳಾರಿ”ಯು 'ಸಂಗಂ ಸಾಹಿತ್ಯ ಪುರಸ್ಕಾ...
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ‘ಡಾ.ಕೂ.ಗಿ.ಗಿರಿಯಪ್ಪ ಮತ್ತು ಶ್ರೀಮತಿ ಲಕ್ಷ್ಮೀದೇವಮ್ಮ ದತ್ತಿ ...
ಬೆಂಗಳೂರು: ಕರ್ನಾಟಕ ಪ್ರಕಾಶಕರ ಸಂಘ ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ವ...
©2025 Book Brahma Private Limited.