“ಪ್ರೀತಿ, ಪ್ರೇಮಗಳು ,ಜಾತಿ, ಮತ ಧರ್ಮ,ವಿಚಾರಗಳು, ಯುವಕರ ಬಗ್ಗೆ ಆಚರಣೆಗಳು ಹೀಗೆ ಹಲವಾರು ಪ್ರಸ್ತುತ ಬದಲಾದ ಹಳ್ಳಿಗಳ ಬಗ್ಗೆ ಹೇಳಿದ್ದಾರೆ,” ಎನ್ನುತ್ತಾರೆ ಸೋಮನಾಥ್ ಗುರುಪ್ಪನವರ. ಅವರು ಪಿ. ಕುಸುಮ ಆಯರಹಳ್ಳಿ ಅವರ “ದಾರಿ” ಕೃತಿ ಕುರಿತು ಬರೆದ ವಿಮರ್ಶೆ.
ದಾರಿ ಇದು ಕುಸುಮಾ ಆಯರಹಳ್ಳಿ ಅವರು ಬರೆದಿರುವ ಮೊದಲ ಕಾದಂಬರಿ. ಇವರು ಪಾತ್ರಗಳ ಸುತ್ತವೇ ಕಾದಂಬರಿಯನ್ನು ಬರೆದಿದ್ದಾರೆ. ಕಳೆದ ಕೆಲಸದೊಂದಿಗೆ ಊರಿಗೆ ಮರಳುವ ಪ್ರಕಾಶ ತನ್ನ ಹಳ್ಳಿಯಲ್ಲಿ ಬದಲಾವಣೆ ಪ್ರಾರಂಭಿಸಿದ ಮೇಲೆ ಅವನು ಎದುರಿಸುವ ಸವಾಲುಗಳು ಕಷ್ಟ ನಷ್ಟಗಳು ಸುಖ ದುಃಖಗಳು ಅವನ ಹುಡುಕಾಟದ ದಾರಿಗಳು. ಹಳ್ಳಿಯಲ್ಲಿ ಎದುರಾಗುತ್ತಿರುವ ಹೊಸ ಸಮಸ್ಯೆಗಳು ಬದಲಾದ ಮನಸ್ಥಿತಿಗಳು ಪರಿಸ್ಥಿತಿಗಳು ರಾಜಕೀಯ ನುಸುಳುವಿಕೆ ಅದರ ಪ್ರಭಾವ ಪ್ರಸ್ತುತ ಹಳ್ಳಿಗರ ಆಸಕ್ತ ವಿಚಾರಗಳು ಹೆಂಗಸರ ಗಂಡಸರ ಕಟ್ಟೆ ಪುರಾಣ, ಆಸಕ್ತಿ, ಸಂಭ್ರಮ ಪ್ರೀತಿ, ಪ್ರೇಮಗಳು ,ಜಾತಿ, ಮತ ಧರ್ಮ,ವಿಚಾರಗಳು, ಯುವಕರ ಬಗ್ಗೆ ಆಚರಣೆಗಳು ಹೀಗೆ ಹಲವಾರು ಪ್ರಸ್ತುತ ಬದಲಾದ ಹಳ್ಳಿಗಳ ಬಗ್ಗೆ ಹೇಳಿದ್ದಾರೆ.
ಅಷ್ಟಲ್ಲದೆ ಇಲ್ಲಿ ಪದ್ಮಿನಿಯ ಪಾತ್ರದ ಮೂಲಕ ಹೆಣ್ಣಿನ ಪ್ರೀತಿ ಪ್ರೇಮ ಅವಳ ವೈರುಧ್ಯಗಳು ಸಮಸ್ಯೆಗಳು ಪ್ರೇಮವನ್ನು ಅತ್ಯಂತ ಆಳವಾಗಿ ಅದ್ಭುತವಾಗಿ ನಿಜವಾದ ಅರ್ಥವನ್ನು ಕಲ್ಪಿಸಿ ಕೊಟ್ಟಿದ್ದಾರೆ.ವಿಶೇಷವಾಗಿ ಕಿರುತೆರೆಯಲ್ಲಿ ಭಾಗವಹಿಸುವ ಹೆಣ್ಣು ಎದುರಿಸಬೇಕಾದ ವಿಚಾರಗಳನ್ನು ಸನ್ನಿವೇಶಗಳ ಮೂಲಕ ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಒಟ್ಟಾರೆಯಾಗಿ ಇದು ಹಳ್ಳಿ ಮತ್ತು ಪಟ್ಟಣದ ಸಮಾಜವನ್ನು ಕಟ್ಟಿಕೊಡುತ್ತದೆ. ಇಲ್ಲಿ ಲೇಖಕರು ಹಳ್ಳಿಗಳಲ್ಲಿ ಬದಲಾದ ದಾರಿ ಯಾವುದು ಯಾವ ದಾರಿಯೆಡೆಗೆ ಹಳ್ಳಿಗಳು ಚಲಿಸುತ್ತಿವೆ ಸುಂದರ ಹಳ್ಳಿ ಆಗಲೂ ಯಾವ ದಾರಿಯ ಅವಶ್ಯಕತೆ ಇದೆ. ಲೇಖಕರು ಇಲ್ಲಿ ಹಲವಾರು ದಾರಿಗಳನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಪ್ರಕಾಶ ಮಂಗಳ ಪದ್ಮಿನಿ ಜವರೇಗೌಡರು ಅತ್ಯಂತ ಕಾಡಿದ ಪಾತ್ರಗಳು
ಒಂದು ಸಲ ಓದಬೇಕಾದ ಕಾದಂಬರಿ ಇಂತಹ ಒಳ್ಳೆ ಕಾದಂಬರಿ ನೀಡಿದ ಲೇಖಕರಿಗೆ ಧನ್ಯವಾದಗಳು
"ಸ್ತ್ರೀ ಅಸ್ಮಿತೆಯ ಸಂಕಥನವನ್ನು ಆಧುನಿಕ ಕನ್ನಡ ಮಹಿಳಾ ಕಥಾ ಸಾಹಿತ್ಯವನ್ನು ಅನುಲಕ್ಷಿಸಿ ಇಲ್ಲಿ ಕಟ್ಟಲಾಗಿದೆ. ಕಥ...
“ಒಬ್ಬ ಲೇಖಕನ ಸಮಗ್ರ ಸಾಹಿತ್ಯ ಒಂದೆಡೆ ಲಭ್ಯವಿರುವುದು ಮತ್ತು ಬೇಕಿದ್ದನ್ನು ಬೇಕಾದಾಗ ಓದಬಹುದಾದುದು ಸಮಗ್ರದಲ್ಲ...
“ತೇರು-ಶೀರ್ಷಿಕೆಯನ್ನು ನೋಡಿ ಕೈಗೆತ್ತುಕೊಂಡಾಗ ಇದಕ್ಕಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಎಂದು...
©2025 Book Brahma Private Limited.