‘ಈ ಹೊತ್ತಿಗೆ’ ೧೨ನೇ ವಾರ್ಷಿಕೋತ್ಸವ ‘ಹೊನಲು’ ಮಾರ್ಚ್ ೯ರಂದು ಬೆಂಗಳೂರಿನಲ್ಲಿ

Date: 07-03-2025

Location: ಬೆಂಗಳೂರು


ಬೆಂಗಳೂರು: ‘ಈ ಹೊತ್ತಿಗೆ’ ಮಾಸಪತ್ರಿಕೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮ ಜೆ ಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ ಮಾರ್ಚ್ ೯, ಭಾನುವಾರ ಬೆಳಗ್ಗೆ ೧೦ ಗಂಟೆಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ೨೦೨೫ನೇ ಸಾಲಿನ ‘ಈ ಹೊತ್ತಿಗೆ’ ಕಥಾಪ್ರಶಸ್ತಿ ಹಾಗೂ ‘ಈ ಹೊತ್ತಿಗೆ’ ಕಾವ್ಯಪ್ರಶಸ್ತಿ ಪ್ರದಾನ ನಡೆಯಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ವರ್ಷದ ಕಾವ್ಯ ಪ್ರಶಸ್ತಿಗೆ ಡಾ. ಲಕ್ಷ್ಮಣ ವಿ.ಎ., ಮತ್ತು ಕಥಾಪ್ರಶಸ್ತಿಗೆ ಪೂರ್ಣಿಮಾ ಭಟ್ಟ ಸಣ್ಣಕೇರಿ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಶಸ್ತಿ ವಿಜೇತ ಕೃತಿಗಳ ಲೋಕಾರ್ಪಣೆ ನಡೆಯಲಿದ್ದು, ಕೃತಿ ಪರಿಚಯವನ್ನು ಆನಂದ ಕುಂಚನೂರ್ ಮತ್ತು ಸಂಗೀತಾ ಚಚಡಿ ಮಾಡಲಿದ್ದಾರೆ.

ಕಾರ್ಯಕ್ರಮದ ಮತ್ತೊಂದು ಮುಖ್ಯ ಆಕರ್ಷಣೆಯಾಗಿ ‘ಅಕ್ಷರ ಜಾನಪದ’ ಗೋಷ್ಠಿ ನಡೆಯಲಿದ್ದು, ಖ್ಯಾತ ಗಾಯಕರಾದ ಜನಪದಶ್ರೀ ಅಪ್ಪಗೆರೆ ತಿಮ್ಮರಾಜು ಮತ್ತು ಜಾನಪದ ತಜ್ಞೆ, ಕವಿ ರೇಣುಕಾ ಕೋಡಗುಂಟಿ ಅವರು ಜಾನಪದ ಸಾಹಿತ್ಯದ ಬಗ್ಗೆ ಮಾತನಾಡಲಿದ್ದಾರೆ. ಈ ಗೋಷ್ಠಿಗೆ ಖ್ಯಾತ ಕತೆಗಾರ್ತಿ, ಕಾದಂಬರಿಗಾರ್ತಿ ಜಯಶ್ರೀ ದೇಶಪಾಂಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಹಾಗೂ, ‘AI ಮತ್ತು ಸಾಹಿತ್ಯ’ ವಿಷಯದ ಮೇಲೆ ಸಂವಾದವೂ ನಡೆಯಲಿದ್ದು, ತಂತ್ರಜ್ಞಾನ ಪರಿಣಿತರು ಹಾಗೂ ಲೇಖಕರಾದ ಮಧುಸೂದನ ವೈ.ಎನ್. ಮತ್ತು ಪತ್ರಕರ್ತೆ ಶ್ರೀದೇವಿ ಡಿ.ಎನ್. (ಶ್ರೀ ಡಿ.ಎನ್.) ಈ ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಈ ವರ್ಷದ ಪ್ರಶಸ್ತಿಗಳ ತೀರ್ಪುಗಾರರಾಗಿ ಖ್ಯಾತ ಕತೆಗಾರ, ಪತ್ರಕರ್ತ ರಘುನಾಥ ಚ.ಹ., ಖ್ಯಾತ ಕವಿ, ದೂರದರ್ಶನ ಚಂದನದ ಮುಖ್ಯಸ್ಥೆ ಆರತಿ ಎಚ್.ಎನ್., ಹಾಗೂ ಕತೆಗಾರ, ಚಲನಚಿತ್ರ ನಿರ್ದೇಶಕ ಪ್ರವೀಣ್ ಕುಮಾರ್ ಜಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಈ ಹೊತ್ತಿಗೆಯ ಅಧ್ಯಕ್ಷೆ ಜಯಲಕ್ಷ್ಮಿ ಪಾಟೀಲ್ ಅವರು ನೀಡಲಿದ್ದು, ಇಂದಿರಾ ಶರಣ್ ಕಾರ್ಯಕ್ರಮ ನಿರೂಪಣೆ ನಡೆಸಲಿದ್ದಾರೆ. ಅತಿಥಿಗಳ ಪರಿಚಯವನ್ನು ಸರ್ವಮಂಗಳಾ ಮೋಹನ್ ಮಾಡಲಿದ್ದಾರೆ.

ಕಾರ್ಯಕ್ರಮದ ವಿವರ:
ದಿನಾಂಕ: ಮಾರ್ಚ್ ೯, ೨೦೨೫, ಭಾನುವಾರ
ಸಮಯ: ಬೆಳಗ್ಗೆ ೧೦.೦೦ ರಿಂದ ಮದ್ಯಾಹ್ನ ೦೧.೩೦ರವರೆಗೆ
ಸ್ಥಳ: ಕಪ್ಪಣ್ಣ ಅಂಗಳ, ೧೪೮/೧, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೧ನೇ ಹಂತ, ಬೆಂಗಳೂರು.

ಸಾಹಿತ್ಯಾಸಕ್ತರಿಗಾಗಿ ವಿಶೇಷವಾಗಿ ರೂಪುಗೊಂಡ ಈ ಕಾರ್ಯಕ್ರಮ ಎಲ್ಲರಿಗೂ ಮುಕ್ತವಾಗಿದೆ.

 



MORE NEWS

MBIFL-2025; ಅಫ್ಘಾನಿಸ್ತಾನ ಚೀನಾ ದೃಢ ಹೆಜ್ಜೆ; ಭಾರತದ ಪಾಲಿಗೆ ನುಂಗಲಾರದ ತುತ್ತು

08-02-2025 ತಿರುವನಂತಪುರ

`ಬುಕ್ ಬ್ರಹ್ಮ’ ವಿಶೇಷ ವರದಿ ತಿರುವನಂತಪುರ: ೨೦೨೧ರ ಆಗಸ್ಟ್ ೮ ರಿಂದ ೧೭ರ ಅವಧಿಯಲ್ಲಿ ಅಫ್ಘಾನಿಸ್ತಾನ ಸರ್ಕಾ...

ನೆನಪಿನ ಪುಟಗಳನ್ನು ಸದ್ದಿಲ್ಲದೆ ತಿರುವಿ ಹಾಕಿತು

25-01-2025 ಬೆಂಗಳೂರು

“ಈ ಕತೆಯನ್ನು ಹೇಳಲು ಲೇಖಕರು ಬಳಸಿದ ಬಾಷೆ ಅತ್ಯಂತ ಆಪ್ತವಾಗಿದೆ. ಬಹುತೇಕ ಪಾತ್ರಗಳ ನಡುವಿನ ಸಂವಾದಗಳಲ್ಲೇ ಸಾಗುವ...

ಇದರಲ್ಲಿ ನಾಡಜನರ ಪಾಲುಕೂಡ ಇದೆ

23-12-2024 ಬೆಂಗಳೂರು

“ಮಾತೃಭಾಷೆ, ಮಾತೃಭಾಷೆಯಲ್ಲಿನ ಕಲಿಕೆ ಅದರ ಅನಿವಾರ್ಯ ಅವಶ್ಯಕತೆ, ಮಹತ್ವ ಕುರಿತು ಇಲ್ಲಿನ ಎಲ್ಲ ಲೇಖನಗಳು ಹಲವು ನ...