ದ್ವಾರನಕುಂಟೆ ಪಾತಣ್ಣ 75ರ ಸಂಭ್ರಮ ಹಾಗೂ ‘ದ್ವಾರನಕುಂಟೆ ಪಾತಣ್ಣ ಕಾದಂಬರಿ ಪ್ರಶಸ್ತಿ’ ಪ್ರದಾನ

Date: 14-03-2025

Location: ಬೆಂಗಳೂರು


ಬೆಂಗಳೂರು: ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನದಿಂದ ಹಾಗೂ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು, ಗೋಧೂಳಿ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ‘ದ್ವಾರನಕುಂಟೆ ಪಾತಣ್ಣ 75ರ ಸಂಭ್ರಮ ಹಾಗೂ ‘ದ್ವಾರನಕುಂಟೆ ಪಾತಣ್ಣ ಕಾದಂಬರಿ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ನಗರದ ಶೇಷಾದ್ರಿಪುರಂ ಕಾಲೇಜಿನ ಶಿಕ್ಷಣ ದತ್ತಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಲೇಖಕರಾದ ತುಂಬಾಡಿ ರಾಮಯ್ಯ ಹಾಗೂ ಗುರುಪ್ರಸಾದ್ ಕಂಟಲಗೆರೆ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಹನೀಫ್ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೇ ಪಿ. ಕೃಷ್ಣ, ಹಿರಿಯ ಕಾದಂಬರಿಕಾರ ದ್ವಾರನಕುಂಟೆ ಪಾತಣ್ಣ ಅವರು ಉಪಸ್ಥಿತರಿದ್ದರು.

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ತೀರ್ಪುಗಾರರಾಗಿ ಎಸ್.ಆರ್. ವಿಜಯಶಂಕರ್, ಅನುಪಮಾ ಪ್ರಸಾದ್ ಅವರಿದ್ದರು.

ಶ್ರೀ ಕೃಷ್ಣಕಲಾ ಸಂಗಮ ಅವರಿಂದ ಗಾಯನ ಕಾರ್ಯಕ್ರಮವು ನಡೆಯಿತು.

MORE NEWS

ಕಥೆಯನ್ನು ಓದುತ್ತಾ ಓದಂತೆ ಲೇಖಕರ ವ್ಯಕ್ತಿತ್ವ ಇಲ್ಲಿ ತೆರೆದುಕೊಳ್ಳುತ್ತದೆ; ಮಂಜುಳಾ

16-03-2025 ಬೆಂಗಳೂರು

ಬೆಂಗಳೂರು: ಲೇಖಕ ಪುರುಷೋತ್ತಮ ದಾಸ್ ಅವರ ‘ಯಯಾತಿ’ ಕಾದಂಬರಿಯ ಲೋಕಾರ್ಪಣಾ ಕಾರ್ಯಕ್ರಮವು 2025 ಮಾ 16 ಭಾನ...

ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿಗೆ ಎಂ.ಆರ್. ದತ್ತಾತ್ರಿಯವರ 'ಸರ್ಪಭ್ರಮೆ' ಭಾಜನ

16-03-2025 ಬೆಂಗಳೂರು

ಧಾರವಾಡ: ಸಾಹಿತ್ಯ ಗಂಗಾ ಧಾರವಾಡದ ವತಿಯಿಂದ ಕೊಡಮಾಡುವ 2024ನೇ ಸಾಲಿನ ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ ಪ್ರಕಟವಾ...

ಕನ್ನಡ-ತುಳು ವಿದ್ವಾಂಸ ವಾಮನ ನಂದಾವರ ಇನ್ನಿಲ್ಲ

15-03-2025 ಬೆಂಗಳೂರು

ಮಂಗಳೂರು: ಕನ್ನಡ-ತುಳು ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ವಾಮನ ನಂದಾವರ (82) ಶನಿವಾರ ನಿಧ...