Date: 04-12-2025
Location: ಬೆಂಗಳೂರು
"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾಗುತ್ತವೆ. ಅಂದರೆ ಮಗು ತಾಯ್ಮಾತಿನಲ್ಲಿ ಪರಿಣತಿಯನ್ನು ಶಾಲೆಗೆ ಬರುವ ವೇಳೆಗೆ ಪಡೆದುಕೊಂಡಿರುವುದರಿಂದ ಕಲಿಕೆಯ ಸಂರ‍್ಬದಲ್ಲಿ ಬಾಶೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕಿಲ್ಲ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ʻತೊಡೆಯಬಾರದ ಲಿಪಿಯ ಬರೆಯಬಾರದುʼ ಅಂಕಣದಲ್ಲಿ ʻಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆʼ ಕುರಿತು ಬರೆದ ಲೇಖನ.
ಇವೆಲ್ಲವುಗಳ ಮೇಲೆ ಮಗು ಒಂದು ಪ್ರಾಗ್ನಿಕ ರಚನೆ ಎಂಬುದನ್ನು ರ‍್ತ ಮಾಡಿಕೊಳ್ಳಬೇಕು. ಮಗುವಿನ ಮಾನಸಿಕ ರಚನೆಯನ್ನು ಮಾತ್ರವಲ್ಲದೆ ಇನ್ನೂ ಆಳದಲ್ಲಿ ಮಗುವಿನ ಆಲೋಚನಾ ಕ್ರಮವನ್ನು, ಮಗುವಿನ ಊಹನಾ ಸಾದ್ಯತೆ, ಸಾರ‍್ತö್ಯವನ್ನು ಮಗುವಿನ ತಾಯ್ಮಾತು ನಿರಂತರ ಪ್ರಬಾವಿಸುತ್ತಲೆ ಇರುತ್ತದೆ ಮತ್ತು ನಿಯಂತ್ರಿಸುತ್ತಲೆ ಇರುತ್ತದೆ. ಇದರಿಂದಾಗಿ ಮಗುವಿನ ಪ್ರಾಗ್ನಿಕ ವಲಯವು ಸಹಜವಾಗಿ ಬೆಳೆಯುವಲ್ಲಿ ಪೆರಮಾತಿನ ಶಿಕ್ಶಣ ಅಶ್ಟು ಪೂರಕ ಆಗಲಾರದು. ಆದರೆ ತಾಯ್ಮಾತಿನ ಶಿಕ್ಶಣ ಇದಕ್ಕೆ ಪೂರಕವಾಗಿ ನಿಲ್ಲುತ್ತದೆ.
ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾಗುತ್ತವೆ. ಅಂದರೆ ಮಗು ತಾಯ್ಮಾತಿನಲ್ಲಿ ಪರಿಣತಿಯನ್ನು ಶಾಲೆಗೆ ಬರುವ ವೇಳೆಗೆ ಪಡೆದುಕೊಂಡಿರುವುದರಿAದ ಕಲಿಕೆಯ ಸಂರ‍್ಬದಲ್ಲಿ ಬಾಶೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕಿಲ್ಲ. ಬದಲಿಗೆ ಪೆರಮಾತಿನ ಶಿಕ್ಶಣದ ಸಂರ‍್ಬದಲ್ಲಿ ಅನಿವರ‍್ಯವಾಗಿ ಮಗು ಬಾಶೆಯ ಕಡೆಗೆ ಹೆಚ್ಚು ಗಮನ ಹರಿಸಬೇಕಾಗುತ್ತರದೆ. ಪದ, ರ‍್ತ, ಪದರಚನೆ, ವಾಕ್ಯರಚನೆ, ವಾಕ್ಯ ನಿಯಮಗಳು ಬಾಶೆಯ ಒಟ್ಟು ವ್ಯಾಕರಣ, ಬಾಶೆಯ ಸಾಮಾಜಿಕತೆ (ಬಾಶೆಯದೆ ಆದ ಒಂದು ಸಾಮಾಜಿಕತೆಯನ್ನು ಅಂದರೆ ನಮಸ್ಕರಿಸುವ, ಸ್ವಾಗತಿಸುವ, ಕೋರುವ ಮೊದಲಾದ ವ್ಯವಸ್ತೆ), ಶಯ್ಲಿ, ಒತ್ತು ಮೊದಲಾದವೆಲ್ಲವೂ ಮಗುವಿಗೆ ಹೊಸದಾಗಿರುತ್ತದೆ. ತಾಯ್ಮಾತಿನಲ್ಲಿ ಕಲಿಕೆ ಇದ್ದಾಗ ಈ ಯಾವುಗಳ ಕಡೆಗೂ ಮಗು ಹೆಚ್ಚು ಗಮನ ಕೊಡಬೇಕಾದ ಅವಶ್ಯಕತೆ ಇರುವುದಿಲ್ಲ. ನೇರವಾಗಿ ಕಲಿಯಬೇಕಾದ ವಿಶಯದ ಕಡೆಗೆ ಗಮನ ಹರಿಸಬಹುದು. ಆದರೆ ಪೆರಮಾತಿನಲ್ಲಿ ಇದು ಸಾದ್ಯವಿಲ್ಲ. ಬಾಶೆಯ ಪ್ರತಿಯೊಂದು ಹಂತದಲ್ಲಿಯೂ ಮಗು ಸಮಸ್ಯೆಯನ್ನು ಎದುರಿಸುತ್ತದೆ.
ಬಾಶೆಯ ಕಲಿಕೆ ಒಂದು ತರ‍್ಕಿಕತೆಯನ್ನು ಕೊಡಬಲ್ಲದು. ಬಾಶಾರಚನೆಯೆ ತರ‍್ಕಿಕ. ಹಾಗಾಗಿ ಈ ರಚನೆಯನ್ನು ಕಲಿಸುವುದರಿಂದ ಮಕ್ಕಳು ತರ‍್ಕಿಕತೆಯನ್ನು ಸಹಜವಾಗಿ ಬೆಳೆಸಿಕೊಳ್ಳಬಲ್ಲವು. ತಾಯ್ಮಾತಿನ ಶಿಕ್ಶಣದ ಸಂರ‍್ಬದಲ್ಲಿ ಮಗು ತನ್ನ ಬಾಶೆಯ ತರ‍್ಕಿಕ ರಚನೆಯ ಮೇಲೆ ಹಿಡಿತವನ್ನು ಅದಾಗಲೆ ಸಾದಿಸಿರುತ್ತದೆ. ವ್ಯಾಕರಣದ ಎಲ್ಲ ನಿಯಮಗಳನ್ನು ಮಗು ತಿಳಿದುಕೊಂಡಿರುವುದಿಲ್ಲ ಎಂಬುದು ನಿಜ. ಆದರೆ, ಆ ನಿಯಮಗಳನ್ನು ಬಳಸುವ ಸೂಕ್ಶö್ಮತೆ ಇಲ್ಲವೆ ಕುಸುರಿತನ ಮಗುವಿಗೆ ಸಾದಿಸಲು ಸರಳವಾಗುತ್ತದೆ. ಆದರೆ ಪೆರಮಾತಿನ ಸಂರ‍್ಬದಲ್ಲಿ ಇದು ಸಾದ್ಯವಿಲ್ಲ. ಹಾಗಾಗಿ ಇದು ಮಕ್ಕಳ ಮನೋವಿಕಾಸದ ಮೇಲೆ ಹೆಚ್ಚು ಪ್ರಬಾವವನ್ನು ಬೀರುತ್ತದೆ. ಇದರಿಂದಾಗಿ ತಾಯ್ಮಾತಿನ ಮಾದ್ಯಮದ ಮಕ್ಕಳು ಬದುಕನ್ನು ಎದುರಿಸುವಲ್ಲಿ, ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸುವಲ್ಲಿ ಹೆಚ್ಚು ಸಶಕ್ತರು ಎಂಬ ವಿಚಾರವನ್ನು ಹಲವು ಸಂಶೋದನೆಗಳು ಕಂಡುಕೊಂಡಿವೆ.
ಇದು ಕೇವಲ ಮನೋವಿಕಾಸಕ್ಕೆ ಮಾತ್ರವಲ್ಲದೆ ಕಲಿಕೆಯ ತೀವ್ರತೆಯನ್ನೂ, ಕಲಿಕೆಯ ವೇಗವನ್ನೂ ಹೆಚ್ಚಿಸುತ್ತದೆ. ಪಟ್ಯದೊಳಗಿನ ವಿಶಯಗಳನ್ನು ಒಪ್ಪಿಸುವುದು ಶಿಕ್ಶಣ ಅಲ್ಲ. ಬದಲಿಗೆ ಶಿಕ್ಶಣದ ಮೂಲಬೂತ ಆಶಯಗಳಂತೆ ಮಗು ಬದುಕುವುದನ್ನು, ಬದುಕಿನ ಸಮಸ್ಯೆಗಳನ್ನು ಎದುರಿಸುವುದನ್ನು, ಅದಕ್ಕೆ ಬೇಕಾದ ಆತ್ಮಬಲವನ್ನು ಪಡೆದುಕೊಳ್ಳುವುದನ್ನು, ಸ್ವಂತ ಆಲೋಚನೆಯನ್ನು ಬೆಳೆಸಿಕೊಳ್ಳುವುದನ್ನು ಕಲಿಸುವುದು ಇಲ್ಲವೆ ಪಡೆದುಕೊಳ್ಳುವಂತೆ ಮಾಡುವುದು ಶಿಕ್ಶಣ. ತಾಯ್ಮಾತಿನ ಮಕ್ಕಳಲ್ಲಿ ಕಲಿಕೆ ತೀವ್ರವಾಗಿರುತ್ತದೆ ಮತ್ತು ವೇಗವಾಗಿರುತ್ತದೆ. ಕಲಿಕೆಯ ಆಶಯಗಳಂತೆ ಮಕ್ಕಳು ಚುರುಕಿನಿಂದ ಕೂಡಿರುತ್ತಾರೆ. ಇಲ್ಲಿ ಒಂದೆರಡು ನರ‍್ದಿಶ್ಟ ವಿಚಾರಗಳನ್ನು ಎತ್ತಿಕೊಂಡು ಮಾತನ್ನು ಇನ್ನಶ್ಟು ವಿಸ್ತರಿಸಬಹುದು.
ಇಲ್ಲಿ ನಿರ‍್ದಿಶ್ಟವಾಗಿ ಬಾಶೆ, ಸಾಹಿತ್ಯ, ಗಣಿತ ಇವುಗಳ ಕಲಿಕೆಯನ್ನು ಗಮನದಲ್ಲಿರಿಸಿಕೊಂಡು ರ‍್ಚೆಯನ್ನು ಮಾಡೋಣ. ಇವು ಮಗುವಿನ ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಅತ್ಯವಶ್ಯವಾದವುಗಳು. ಬಾಶೆಯ ಕಲಿಕೆ ಬಗೆಗೆ ಕೆಲವು ವಿಚಾರಗಳನ್ನು ಈಗಾಗಲೆ ಮೇಲೆ ಮಾತನಾಡಿದೆ. ಇನ್ನೂ ಒಂದೆರಡು ವಿಚಾರಗಳನ್ನು ಇಲ್ಲಿ ಗಮನಿಸಬಹುದು. ಸಾಮಾನ್ಯವಾಗಿ ಮಕ್ಕಳು ಹುಟ್ಟಿನಿಂದ ಗಳಿಸಿಕೊಳ್ಳುವ ಬಾಶೆಯಲ್ಲಿ ಪರಿಣತಿಯನ್ನು ಪಡೆಯಲು ಸುಮಾರು ನಾಲ್ಕಯ್ದು ವರುಶಗಳೆ ಆಗುತ್ತವೆ. ಅದರಂತೆ, ವಿವಿದ ವಲಯಗಳಲ್ಲಿನ ಬಾಶಾಬಳಕೆ ಕುಶಲತೆಗಳನ್ನೆಲ್ಲ ಮಗು ಪಡೆದುಕೊಳ್ಳುವುದಕ್ಕೆ ಸುಮಾರು ಹತ್ತು-ಹನ್ನೆರಡು ವರುಶಗಳಾಗುತ್ತವೆ.
ಅದರಂತೆಯೆ ಮಗುವಿನ ಎಳವೆಯಲ್ಲಿ ಇಲ್ಲದ ಇನ್ನೊಂದು ಬಾಶೆಯನ್ನು ಕಲಿಯುವುದಕ್ಕೂ ಹೀಗೆ ಸುಮಾರು ನಾಲ್ಕಾರು ವರುಶಗಳು ಆಗಬಹುದು, ಅಂದರೆ ಒಂದು ಬಾಶೆಯ ಸಹಜ ಮತ್ತು ಸರಳ ಬಳಕೆಗೆ. ಮಗುವಿಗೆ ಅದುವರೆಗೆ ಅಪರಿಚಿತವಾದ ಒಂದು ಬಾಶೆಯಲ್ಲಿ ಶಿಕ್ಶಣವನ್ನು ಒಮ್ಮಿಂದೊಮ್ಮೆಗೆ ಶುರು ಮಾಡಿದರೆ ಮಗು ಮಾನಸಿಕವಾಗಿ ಕಳೆದುಹೋಗುತ್ತದೆ. ಆ ಬಾಶೆಯನ್ನು ಕಲಿಯುವುದಕ್ಕೆ ಅವಶ್ಯವಾದ ಕೆಲವು ವರುಶಗಳನ್ನಾದರೂ ಗಮನಿಸಬೇಕು. ಆದ್ದರಿಂದ ಮಕ್ಕಳು ಬಾಶೆಯ ಕಡೆಗೆ ಹೆಚ್ಚು ಒತ್ತು ಕೊಡುತ್ತವೆ. ಶಿಕ್ಶಣದಲ್ಲಿ ಕೊಡುವ ಯಾವುದನ್ನೂ ಅವು ರ‍್ತ ಮಾಡಿಕೊಳ್ಳಲಾರವು. ಬಾಶೆಯನ್ನೂ ಸಹಜವಾಗಿ ಕಲಿಯಲು ಕಶ್ಟವಾಗುತ್ತದೆ. ಇಂಗ್ಲೀಶ್ ಮಾದ್ಯಮದಲ್ಲಿಯೆ ಓದಿರುವ ಆದರೆ ಇಂಗ್ಲೀಶ್ ಬಾರದ ಬೇಕಾದಶ್ಟು ವ್ಯಕ್ತಿಗಳು ನಮ್ಮೊಂದಿಗೆ ಇದ್ದಾರೆ. ಅಂದರೆ ಮಕ್ಕಳು ಬಾಶೆಯನ್ನೂ, ವಿಶಯವನ್ನೂ ಕಲಿಯುವುದರಲ್ಲಿ ಸೋಲುತ್ತವೆ. ಬಾಶೆಯ ಕಲಿಕೆ ಕೇವಲ ಒಂದಶ್ಟು ಪದಗಳನ್ನು ಕಂಟಪಾಟ ಮಾಡುವುದು, ಕೆಲವು ವಾಕ್ಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಅಲ್ಲ. ಬದಲಿಗೆ ಬಾಶೆಯ ಕಲಿಕೆ ಮಕ್ಕಳಲ್ಲಿ ಇರಬಹುದಾದ ಕಲ್ಪನೆಗಳ, ವಿಚಾರಗಳ ಅಬಿವ್ಯಕ್ತಿಗಾಗಿ. ಬಾಶೆಯಲ್ಲಿ ಪರಿಣತಿಯನ್ನು ಸಾದಿಸದ ಹೊರತು ಸೂಕ್ತವಾದ ಅಬಿವ್ಯಕ್ತಿ ಸಾದ್ಯವಾಗದು. ಅಬಿವ್ಯಕ್ತಿಯನ್ನು ಪಡೆದುಕೊಳ್ಳದ ಮಕ್ಕಳು ಸಹಜವಾಗಿಯೆ ಸೋಲುತ್ತಾರೆ.
ಸಾಹಿತ್ಯವನ್ನು ಗಮನಿಸುವುದಾದರೆ ಮಾನಸಿಕ, ಸಾಮಾಜಿಕ, ಸಾಂಸ್ಕುçತಿಕ ಹಿನ್ನೆಲೆಯನ್ನು ಕಟ್ಟಿಕೊಡುವ ಬರವಣಿಗೆಗಳು ಇವಾಗಿರುತ್ತವೆ. ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು ಹೆಚ್ಚಿಸುವುದಕ್ಕೆ, ಸ್ರುಜನಾತ್ಮಕ ಗುಣಗಳನ್ನು ಬೆಳೆಸುವುದಕ್ಕೆ ಕಾರಣವಾಗುತ್ತವೆ. ಈ ರೀತಿಯ ಬೆಳವಣಿಗೆಗೆ ಮಗುವಿನಲ್ಲಿ ಸಾಮಾಜಿಕ ಮತ್ತು ಸಾಂಸ್ಕುçತಿಕ ಅರಿವಿನ ಅವಶ್ಯಕತೆ ಇರುತ್ತದೆ. ಇದು ಮಗುವಿಗೆ ಈಗಾಗಲೆ ತಾಯ್ಮಾತಿನಲ್ಲಿ ದಕ್ಕಿರುತ್ತದೆ. ಸಾಹಿತ್ಯವನ್ನು ಅನುಬವಿಸುವುದಕ್ಕೆ ಸುತ್ತಲಿನ ಪರಿಸರ ಬಹು ಮುಕ್ಯವಾಗುತ್ತದೆ. ಮಗು ತನ್ನ ಸುತ್ತಲಿನ ಪರಿಸರವನ್ನು ತನ್ನ ಮಾತಿನಲ್ಲಿಯೆ ಗ್ರಹಿಸಿಕೊಂಡಿರುತ್ತದೆ. ತನ್ನ ಪರಿಸರದಲ್ಲಿ ಇಲ್ಲದ್ದನ್ನು ವಾಸ್ತವವೆಂದು ಪರಿಗಣಿಸಲು ಅವಶ್ಯವಾದ ಸಿದ್ದತೆ ಮಗುವಿನಲ್ಲಿ ಇರುವುದಿಲ್ಲ. ಹೀಗಾಗಿ ಸಾಹಿತ್ಯದ ಗ್ರಹಿಕೆಗೂ ಇದು ಅವಶ್ಯವಾಗುತ್ತದೆ. ಪೆರಮಾತಿನ ಶಿಕ್ಶಣದ ಸಂರ‍್ಬದಲ್ಲಿ ಮಕ್ಕಳು ಸಾಹಿತ್ಯದ, ಕತೆ ಇಲ್ಲವೆ ಕವನಗಳಲ್ಲಿ ಇರಬಹುದಾದ ಕತೆ, ಮೇಲ್ಮಟ್ಟದ ಓದಿಗೆ ದೊರಕಬಹುದಾದವುಗಳಿಗೆ ಮಾತ್ರ ಅಂಟುಬೀಳುತ್ತಾರೆ. ಬಾಶೆಯ ವಿಬಿನ್ನ ಪ್ರಯೋಗ, ಶಯ್ಲಿ, ವಿಶೇಶರ‍್ತ, ವಿವಿದ ಹಿನ್ನೆಲೆಯ ಗ್ರಹಿಕೆ ಇವೆಲ್ಲವೂ ಮಗುವಿಗೆ ಸಾದ್ಯವಿಲ್ಲವಾಗುತ್ತದೆ. ಹೀಗಾಗಿ ಶಿಕ್ಶಣ ತನ್ನ ಆಶಯವಾದ ಮಕ್ಕಳ ರ‍್ವಾಂಗಿಣ ಬೆಳವಣಿಗೆಯನ್ನು ಮಾಡುವಲ್ಲಿ ಸೋಲುತ್ತದೆ.
ಮಗುವೊಂದು ಗಣಿತವನ್ನು ಕಲಿಯುವುದಕ್ಕೂ ತಾಯ್ಮಾತಿನ ಶಿಕ್ಶಣ ನೆರವಾಗುತ್ತದೆ. ಬದುಕಿನ ಲೆಕ್ಕಾಚಾರಗಳು ತಾಯ್ಮಾತಿನಲ್ಲಿಯೆ ಮಗುವಿನ ಪ್ರಾಗ್ನಿಕ ನೆಲೆಯೊಂದಿಗೆ ಬೆಳೆದಿರುತ್ತವೆ. ಇವು ಶಾಲೆಯಲ್ಲಿ ಕೊಡುವ ಗಣಿತದೊಂದಿಗೆ ತಾಳೆ ಹೊಂದಿದಾಗ ಮತ್ತೆ ಬೆಳೆಯುತ್ತವೆ. ಕೂಡುವ, ಕಳೆಯುವ ಮೊದಲಾದ ಮೂಲಬೂತ ಗಣಿತವನ್ನು ತುಸು ಮಟ್ಟಿಗೆ ಮಕ್ಕಳು ತಮ್ಮ ಬದುಕಿನಲ್ಲಿ ಲಬ್ಯವಾಗುವ ವಸ್ತು, ವಿಚಾರಗಳ ಆದಾರದ ಮೇಲೆ ಬೆಳೆಸಿಕೊಂಡಿರುತ್ತಾರೆ. ಇದನ್ನು ಶಾಲೆಯಲ್ಲಿ ಬಳಸಿಕೊಳ್ಳಬೇಕಿದೆ. ಇದರಿಂದ ಮುಂದುವರೆಯಲು ಅನುವಾಗುತ್ತದೆ. ಆದರೆ ಪೆರಮಾತಿನ ಶಿಕ್ಶಣದಲ್ಲಿ ಹೀಗೆ ಮಗುವಿನ ಹಿನ್ನೆಲೆ ಎಲ್ಲವನ್ನೂ ಬಳಸಿಕೊಳ್ಳುವುದಕ್ಕೆ ಸಾದ್ಯವಿಲ್ಲದಿರುವುದರಿಂದ ಶಾಲೆಯ ಗಣಿತ ಸಂಪರ‍್ಣವಾಗಿ ಹೊಸತಾಗಿಬಿಡುತ್ತದೆ. ಯಾವುದೆ ಒಂದು ವಿಚಾರವನ್ನು ಮಕ್ಕಳಿಗೆ ಅವರ ಅನುಬವದ ಹಿನ್ನೆಲೆಯನ್ನು ಬಳಸಿಕೊಂಡು ಕೊಟ್ಟಾಗ ಅದು ಅವರಿಗೆ ಬೇಗ ತಲುಪುವ ಸಾದ್ಯತೆಯನ್ನು ಹೊಂದಿರುತ್ತದೆ. ಹೀಗೆ ಮಕ್ಕಳ ಅನುಬವ ಜಗತ್ತನ್ನು ಬಳಸಿಕೊಳ್ಳುವುದಕ್ಕೆ ತಾಯ್ಮಾತಿನ ಶಿಕ್ಶಣ ಅವಕಾಶ ಒದಗಿಸುತ್ತದೆ ಬದಲಿಗೆ ಪೆರಮಾತಿನ ಶಿಕ್ಶಣ ಅಲ್ಲ.
ಒಟ್ಟಾರೆ ಶಿಕ್ಶಣ ಮಗುವಿನ ಈಗಿನ ನೆಲೆಯಿಂದಲೆ ಶುರುವಾಗಬೇಕು. ಮಗುವಿನ ಈಗಿನ ನೆಲೆಯ ರಚನೆಯನ್ನೆ ಆ ಮಗುವಿನ ತಾಯ್ಮಾತು ಒದಗಿಸಿರುತ್ತದೆ. ಅದರ ನೆಲೆಯಿಂದಲೆ ಮುಂದೆ ನೆಗೆತ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಮಕ್ಕಳು ತುಂಬಾ ಕಶ್ಟವನ್ನು ಅನುಬವಿಸುತ್ತವೆ.
"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...
"ದಾವಣಗೆರೆಯಲ್ಲಿ ಇಳಿದಾಗ ರಾತ್ರಿ ಎರಡೂವರೆ. ಆಟೋಕ್ಕೆ ಹೋಗಲೂ ಕಾಸಿಲ್ಲ. ಅದ್ಯಾರೋ ಪುಣ್ಯಾತ್ಮನಿಗೆ ಇರುವ ಸ್ಥಿತಿ ...
"ನಗುವು ಮಸಕಾಕದ ಮುಖದಲ್ಲಿ ಪದ್ಯದ ನಾದ ಹಿಡಿದು ಲಯಕ್ಕೆ ತಕ್ಕ ಚಿಟಿಕೆ ಹಾಕುತ್ತ ಅವನು ಓದುವ ಭಂಗಿ ಚೆಂದ. ಮಕ್ಕಳ ಪ...
©2025 Book Brahma Private Limited.