“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

Date: 08-12-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕಾದ ಕಾನ್ಸೆಪ್ಚುವಲ್ ಆರ್ಟ್ ಕಲಾವಿದ ಹೆನ್ರಿ ರಾಬರ್ಟ್ ಮಾರ್ಸೆಲ್ ದುಷಾಮ್ ಅವರ ಕಲಾ ಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಹೆನ್ರಿ ರಾಬರ್ಟ್ ಮಾರ್ಸೆಲ್ ದುಷಾಮ್ (Marcel Duchamp)
ಜನನ: 28 ಜುಲೈ, 1887
ಮರಣ: 2 ಅಕ್ಟೋಬರ್, 1968
ಶಿಕ್ಷಣ: ಜೂಲಿಯಾನ್ ಅಕಾಡೆಮಿ, ಪ್ಯಾರಿಸ್, ಫ್ರಾನ್ಸ್
ವಾಸ: ನ್ಯೂಯಾರ್ಕ್, ಅಮೆರಿಕ; ಪ್ಯಾರಿಸ್, ಫ್ರಾನ್ಸ್
ಕವಲು: ಕಾನ್ಸೆಪ್ಚುವಲ್ ಆರ್ಟ್, ದಾದಾಯಿಸಂ
ವ್ಯವಸಾಯ: ಶಿಲ್ಪಗಳು, ಪೇಂಟಿಂಗ್

ಮಾರ್ಸೆಲ್ ದುಷಾಮ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಲೆಯ ಹರಿವಿನ ಪಾತ್ರವನ್ನೇ ಬದಲಾಯಿಸಿದ ಮಹತ್ವದ ಕಲಾವಿದ ಮಾರ್ಸೆಲ್ ದುಷಾಮ್ ಅವರನ್ನು ಕಾನ್ಸೆಪ್ಚುವಲ್ ಆರ್ಟ್ ನ ಪಿತಾಮಹ ಎಂದೇ ಗುರುತಿಸಲಾಗುತ್ತದೆ. “ಕಣ್ಣಿಗೆ ಚೆಂದ ಕಂಡದ್ದೋ ಅಥವಾ ಕೈ ಕುಸುರಿಯಿಂದ ಒಪ್ಪ ಮಾಡಿದ್ದೋ ಕಲೆ ಅಲ್ಲ; ಕಲೆ ಇರುವುದು ಮನಸ್ಸಿನ ಅಭಿವ್ಯಕ್ತಿಯಲ್ಲಿ. ಎಲ್ಲ ಕಲೆಯೂ ಕಾನ್ಸೆಪ್ಚುವಲ್ ಕಲೆಯೇ. ಏಕೆಂದರೆ, ಅದು ಕಲೆ ಆಗಿರುವುದು ಬೌದ್ಧಿಕವಾದ ಕಾನ್ಸೆಪ್ಟ್ ನ ಕಾರಣದಿಂದಾಗಿಯೇ.” ಎಂಬ ನಿಲುವು ತಳೆದಿದ್ದ ದುಷಾಮ್ ದೈನಂದಿನ ಬಳಕೆಯ ಮೂತ್ರದ ಕಮೋಡ್, ಸೈಕಲ್ ಚಕ್ರ, ಹಿಮ ಎತ್ತುವ ಹಾರೆಗಳನ್ನೂ ಕೂಡ ಕಲಾಕೃತಿಗಳೆಂದು ಪ್ರದರ್ಶಿಸಿದವರು. ಹೀಗೆ ಕಲೆ ಎಂದರೇನು? ಎಂಬ ಮೂಲಭೂತ ಪ್ರಶ್ನೆಯನ್ನೇ ಬುಡಸಹಿತ ಅಲ್ಲಾಡಿಸಿದವರು.

ಕಲಾವಿದನಾಗಿ ಸಣ್ಣ ವೃತ್ತಿ ಅವಧಿಯಲ್ಲಿ ಕೆಲವೇ ಕೆಲವು ಕಲಾಕೃತಿಗಳನ್ನು ರಚಿಸಿದ್ದ ದುಷಾಮ್ ಸಾರ್ವಜನಿಕ ಬದುಕಿನಿಂದ ದೂರವೇ ಇದ್ದವರು. ಬದುಕಿನ ಕೊನೆಯ ಭಾಗದಲ್ಲಂತೂ ಕಲೆಯಿಂದಲೂ ದೂರಾಗಿ ಚೆಸ್ ಆಡಿಕೊಂಡು ಬದುಕಿದವರು. 1950ರ ಬಳಿಕ ಕಲಾವಿಮರ್ಶಕರು ದುಷಾಮ್ ಅವರ ಕೊಡುಗೆಯನ್ನು ಗುರುತಿಸಿದ ಬಳಿಕವೇ ಜಗತ್ತಿನ ಗಮನ ಅವರೆಡೆಗೆ ತಿರುಗಿದ್ದು. ಅವರ ಕೊನೆಯ ಕಲಾಕೃತಿ Étant donnés (The Illuminating Gas) ಬೆಳಕಿಗೆ ಬಂದದ್ದು ಅವರ ನಿಧನದ ಬಳಿಕ.

ಫ್ರಾನ್ಸಿನ ನೂರ್ಮಾಂಡಿ ಬಳಿ ಬ್ಲೈನ್‌ವಿಲ್ ಎಂಬ ಊರಿನ ಮೇಯರ್ ಮಗ ದುಷಾಮ್. ಅವರದು ಕಲಾವಿದರ ಕುಟುಂಬ. ಏಳು ಮಂದಿ ಮಕ್ಕಳು. ಅಣ್ಣಂದಿರು ಪ್ಯಾರಿಸ್ ಗೆ ಹೋದಾಗ ಅವರೊಂದಿಗೆ ಕಲಿಕೆಗಾಗಿ ಪ್ಯಾರಿಸ್ ಗೆ ಹೋದ ದುಷಾಮ್ ಮೇಲೆ, ಕಲಾವಿದ ಫ್ರಾನ್ಸಿಸ್ ಪಿಕಾಬಿಯಾ ಪ್ರಭಾವ ಬೀರುತ್ತಾರೆ. 1915ರ ಹೊತ್ತಿಗೆ ನ್ಯೂಯಾರ್ಕ್ ಗೆ ತೆರಳುವ ದುಷಾಮ್, ಅಲ್ಲಿ ಕಲೆಯನ್ನು ಪವಿತ್ರೀಕರಿಸುವ ಸಾಂಪ್ರದಾಯಿಕ ಸಿದ್ಧಸೂತ್ರಗಳ ಅಸಂಗತತನವನ್ನು ಬಿಚ್ಚಿಡಲು, ಸಿದ್ಧವಸ್ತುಗಳನ್ನೇ ಕಲೆಯೆಂದು ಪ್ರದರ್ಶನಕ್ಕಿರಿಸಿ ಅಚ್ಚರಿ ಸೃಷ್ಟಿಸುತ್ತಾರೆ.

ಕಣ್ಣಿಗೆ ಸುಖಕೊಡುವ ಕಲೆಯನ್ನು ತಿರಸ್ಕರಿಸುತ್ತಾ, ಬಯಕೆ, ಲೈಂಗಿಕತೆಗಳನ್ನು ವಿಶ್ಲೇಷಿಸುವ ಅವರ Nude Descending a Staircase, No.2, 1912 ಕಲಾಕೃತಿ ಆರಂಭದಲಿ ಬಹುಚರ್ಚಿತ ಕಲಾಕೃತಿಯಾಗಿತ್ತು. ಆ ಬಳಿಕ ಅವರು ಪೇಂಟಿಂಗ್ ಗಳನ್ನು ರಚಿಸಿದ್ದು ಕಡಿಮೆ. ಅಲ್ಲಿಂದಾಚೆಗೆ ಕಾನ್ಸೆಪ್ಚುವಲ್ ಶಿಲ್ಪಗಳೇ ಅವರ ಪ್ರಮುಖ ಕಲಾಕೃತಿಗಳು. ಅವರ The Bride Stripped Bare by Her Bachelors, Even, or The Large Glass ಕಲಾಕೃತಿ ರಚಿಸಲು ಅವರು ಏಳು ವರ್ಷಗಳನ್ನು ತೆಗೆದುಕೊಂಡಿದ್ದರು. (1915-23). ಸಕ್ರಿಯರಿದ್ದಾಗ ಎಲ್ಲಾ ಕಲಾಚಳುವಳಿಗಳಿಂದ, ಕಲಾವಿದರ ಗುಂಪುಗಳಿಂದ ದೂರವೇ ಉಳಿದಿದ್ದ ದುಷಾಮ್, ಅವರನ್ನು ದಾದಾ ಮತ್ತು ಸರಿಯಲಿಸ್ಟಿಕ್ ಕಲಾಚಳುವಳಿಗಳೆರಡೂ ತಮ್ಮ ಭಾಗ ಅಂದು ಹೇಳಿಕೊಳ್ಳುತ್ತಿದ್ದವು. ಆದರೆ, ತನ್ನ ಕೊನೆಯ ದಿನಗಳಲ್ಲಿ ತಾನು ದಾದಾಯಿಸಂ ಚಳುವಳಿಯ ಭಾಗ ಎಂದು ದುಷಾಮ್ ಒಪ್ಪಿಕೊಂಡಿದ್ದರಂತೆ. Nude descending a staircase (1913), Fountain (1917), LHOOQ (1919), Please touch - Prière de toucher (1968) ಅವರ ಇತರ ಪ್ರಮುಖ ಕಲಾಕೃತಿಗಳು. ಅವರ ಮೂತ್ರದ ಕಮೋಡ್ ಕಲಾಕೃತಿ “ಫೌಂಟೇನ್”ಅನ್ನು 20ನೇ ಶತಮಾನದ ಅತ್ಯಂತ ಪ್ರಭಾವೀ ಕಲಾಕೃತಿ ಎಂದು 2004ರಲ್ಲಿ ಕಲಾಜಗತ್ತು ಆಯ್ಕೆ ಮಾಡಿತ್ತು. ಆಂಡಿ ವಾರ್‌ಹೋಲ್ ಮತ್ತಿತರ ಹಲವು ಮಂದಿ ಕಾನ್ಸೆಪ್ಚುವಲ್ ಕಲಾವಿದರು ಬಳಿಕ ದುಷಾಮ್ ಅವರಿಂದ ಪ್ರಭಾವಿತರಾಗಿದ್ದರು.

ಮಾರ್ಸೆಲ್ ದುಷಾಮ್ ಅವರನ್ನು 1956ರಲ್ಲಿ ಅಂದಿನ ಗುಗಿನ್ಹಾಂ ಮ್ಯೂಸಿಯಂ ನಿರ್ದೇಶಕ ಜೇಮ್ಸ್ ಜಾನ್ಸನ್ ಸ್ವೀನಿ ಸಂದರ್ಶಿಸಿದ್ದು:

ಮಾರ್ಸೆಲ್ ದುಷಾಮ್ ಅವರ ಕಲಾವಿಧಾನಗಳ ಬಗ್ಗೆ ಚರ್ಚೆ:

ಚಿತ್ರ ಶೀರ್ಷಿಕೆಗಳು

ಮಾರ್ಸೆಲ್ ದುಷಾಮ್ ಅವರ Box in a Valise (From or by Marcel Duchamp or Rrose Sélavy)

ಮಾರ್ಸೆಲ್ ದುಷಾಮ್ ಅವರ Fountain 1917, replica 1964

ಮಾರ್ಸೆಲ್ ದುಷಾಮ್ ಅವರ L.H.O.O.Q (1919)

ಮಾರ್ಸೆಲ್ ದುಷಾಮ್ ಅವರ (1887-1968) Prière de toucher

ಮಾರ್ಸೆಲ್ ದುಷಾಮ್ ಅವರ Etant donnes (1946-1966). Mixed media assemblage

ಮಾರ್ಸೆಲ್ ದುಷಾಮ್ ಅವರ Nude Descending A Staircase 1913

ಮಾರ್ಸೆಲ್ ದುಷಾಮ್ ಅವರ The Bride Stripped Bare by Her Bachelors, Even (The Large Glass), 1915-1923.

ಈ ಅಂಕಣದ ಹಿಂದಿನ ಬರಹಗಳು:

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...