ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

Date: 12-01-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕಾದ ಕಂಟೆಂಪೊರರಿ ಆರ್ಟ್ ಕಲಾವಿದೆ ಕಾರಾ ಎಲಿಜಬೆತ್ ವಾಕರ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಕಾರಾ ಎಲಿಜಬೆತ್ ವಾಕರ್ (Kara Elizabeth Walker)
ಜನನ: 12 ನವೆಂಬರ್, 1969
ಶಿಕ್ಷಣ: ಅಟ್ಲಾಂಟಾ ಕಾಲೇಜ್ ಆಫ್ ಆರ್ಟ್, ರೋಡ್ಸ್ ಐಲಂಡ್ ಸ್ಕೂಲ್ ಆಫ್ ಡಿಸೈನ್
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ಕಂಟೆಂಪೊರರಿ ಆರ್ಟ್,
ವ್ಯವಸಾಯ: ಕಾನ್ಸೆಪ್ಚುವಲ್ ಆರ್ಟ್, ಪೇಂಟಿಂಗ್, ಪ್ರಿಂಟ್ ಮೇಕಿಂಗ್, ಇನ್ಸ್ಟಾಲೇಷನ್

ಕಾರಾ ವಾಕರ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಾರಾ ವಾಕರ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಯುರೋಪಿಗೆ ಚಾರಿತ್ರಿಕ ಹಿನ್ನೆಲೆಯ ಕಲಾಕೃತಿಗಳ ಶ್ರೀಮಂತ ಹಿನ್ನೆಲೆ ಇದೆ. ಕ್ರಮೇಣ ಹಿನ್ನೆಲೆಗೆ ಸರಿದಿದ್ದ ಈ ಕಲಾಪ್ರಕಾರವನ್ನು ಏಕಾಂಗಿಯಾಗಿ ಮತ್ತೆ ಮುನ್ನೆಲೆಗೆ ತಂದ ಸಾಹಸ ಕಾರಾ ವಾಕರ್ ಅವರದು. ಚರಿತ್ರೆ, ಸಾಹಿತ್ಯ ಮತ್ತು ಬೈಬಲ್ ಆಧರಿಸಿದ ಅವರ ಚಿತ್ರಗಳು ಮೂಡಿಬರುವುದು ಕಾಗದ ಕತ್ತರಿಸಿ ರಚಿಸಿದ ನೆರಳುಗಳ (silhouettes) ರೂಪದಲ್ಲಿ. ಗೋಡೆಗಾತ್ರದ ಈ ನೆರಳುಗಳು ಮಾತನಾಡುವುದು ಅಮೆರಿಕದ ಅಂತರ್ಯುದ್ಧ ಕಾಲದ ಕರಿಯರ ಬವಣೆಗಳ ಕುರಿತು. ಕಾರಾ ವಾಕರ್ ಅವರು ಜನಾಂಗೀಯ ತಾರತಮ್ಯದ ಕುರಿತು ನೀಡುವ ಈ ಕಲಾತ್ಮಕ ಪ್ರತಿಕ್ರಿಯೆಗಳ ಕುರಿತು ಕಲಾಜಗತ್ತಿನಲ್ಲಿ ಯಾವತ್ತೂ ಅಚ್ಚರಿಯ ಮತ್ತು ಪ್ರತಿರೋಧದ ಪ್ರತಿಕ್ರಿಯೆ ಕಾಣಿಸಿಕೊಳ್ಳುತ್ತದೆ. ಕೆಲವಂತೂ ಇದು ಕಲೆಯೇ? ಎಂದು ಪ್ರಶ್ನಿಸುವಷ್ಟು ತೀವ್ರವಾಗಿರುತ್ತವೆ. ಆದರೆ ಕಳೆದ 30 ವರ್ಷಗಳಿಂದ ಕಾರಾ ಸತತವಾಗಿ ಈ ಜನಾಂಗೀಯ ತಾರತಮ್ಯದ ಪ್ರಶ್ನೆಗಳನ್ನು ಜನ ನಿರ್ಲಕ್ಷಿಸಲಾಗದಂತೆ ಎತ್ತುತ್ತಲೇ ಬಂದಿದ್ದಾರೆ. ಕಥನದ ಶೈಲಿಯ ಕಾರಾ ಚಿತ್ರಗಳು ವಾಸ್ತವ-ಕಥೆಗಳ ಹದವಾದ ಮಿಶ್ರಣವಾಗಿರುತ್ತವೆ.

ಕೆಲಿಫೋರ್ನಿಯಾದ ಸ್ಟಾಕ್ಟನ್ ಎಂಬಲ್ಲಿ ಕಲಾವಿದ ತಂದೆಗೆ ಜನಿಸಿದ ಕಾರಾ, ತನ್ನ 13ನೇ ವಯಸ್ಸಿನಲ್ಲಿ ತಂದೆಯ ಉದ್ಯೋಗ ಬದಲಾವಣೆಯ ಕಾರಣಕ್ಕಾಗಿ ಜಾರ್ಜಿಯಾಕ್ಕೆ ತೆರಳಬೇಕಾಗುತ್ತದೆ. ಅಲ್ಲಿ ಅಮೆರಿಕದ ವರ್ಣಭೇದ ನೀತಿಯ ಬಿಸಿ ಆಕೆಯ ಮೇಲೆ ಬಹಳ ಪರಿಣಾಮ ಬೀರುತ್ತದೆ. ಶಾಲೆಯಲ್ಲಿ “ನಿಗ್ಗರ್”, “ಯಾಂಕೀ ಅಲ್ಲ ಮಂಕೀ” ಎಂದೆಲ್ಲ ಅನ್ನಿಸಿಕೊಂಡ ಕಾರಾ ತನ್ನ ಏಕಾಕಿತನವನ್ನು ನಿವಾರಿಸಿಕೊಳ್ಳಲು ಶಾಲೆಯ ಗ್ರಂಥಾಲಯಗಳ ಮೊರೆಹೋಗುತ್ತಾರೆ. ಇದು ಆಕೆಗೆ ಒಟ್ಟಾರೆ ಸನ್ನಿವೇಶವನ್ನು ಅಂದಾಜಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮುಂದೆ ಆಕೆಯ ಕಲಾಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಅಟ್ಲಾಂಟಾ ಕಾಲೇಜ್ ಆಫ್ ಆರ್ಟ್ ಮತ್ತು ರೋಡ್ಸ್ ಐಲಂಡ್ ಕಾಲೇಜ್ ಆಫ್ ಡಿಸೈನ್ ನಲ್ಲಿ ಕಲಾ ವ್ಯಾಸಂಗ ಮುಗಿಸಿದ ಬಳಿಕ ಆಫ್ರಿಕನ್ ಅಮೆರಿಕನ್ನದ ಬದುಕು-ಬವಣೆಗಳನ್ನು ಕಾಗದದಲ್ಲಿ ಕತ್ತರಿಸಿದ ಗೊಡೆಗಾತ್ರದ ನೆರಳುಗಳ ಮೂಲಕ ಚಿತ್ರಿಸುತ್ತಾರೆ. ಅವರ ಕಲಾಕೃತಿಗಳ ಶೀರ್ಷಿಕೆಗಳೂ ಸುದೀರ್ಘವಾಗಿರುವುದು ಸಾಮಾನ್ಯ. ಅವರ ಮೊದಲ ಪ್ರಮುಖ ಕಲಾಕೃತಿ An Historical Romance of a Civil War as It Occurred Between the Dusky Thighs of One Young Negress and Her Heart (1994) ಸಾರ್ವಜನಿಕರ ಗಮನ ಸೆಳೆದ ಬಳಿಕ ಆಕೆಗೆ ಹಲವು ಅವಕಾಶಗಳು ಸಿಗುತ್ತವೆ, ಜೊತೆಗೇ ಅದು ಕಲೆಯೇ ಅಲ್ಲ ಎಂಬಲ್ಲಿಯ ಮಟ್ಟದ ಪ್ರತಿರೋಧ ಕೂಡ.

ಡೆಟ್ರಾಯಿಟ್ ಇನ್ಸ್ಟಿಟ್ಯೂಟ್ ಆಫ್ ಆರ್ಟ್ 1999ರಲ್ಲಿ ಅವರ The Means to an End: A Shadow Drama in Five Acts (1995) ಕಲಾಕೃತಿಯನ್ನು ಪ್ರದರ್ಶನದಿಂದ ಹೊರತೆಗೆದುಕೊಂಡಿತ್ತು; 2012ರಲ್ಲಿ ನೆವಾರ್ಕ್ ಪಬ್ಲಿಕ್ ಲೈಬ್ರರಿಯಲ್ಲಿ ಪ್ರದರ್ಶಿತವಾಗುತ್ತಿದ್ದ ಅವರ ಕಲಾಕೃತಿ The moral arc of history ideally bends towards justice but just as soon as not curves back around toward barbarism, sadism, and unrestrained chaosಯನ್ನು ಸ್ವಲ್ಪ ಅವಧಿಗೆ ವಿವಾದದ ಕಾರಣದಿಂದಾಗಿ ಮುಚ್ಚಿ ಇರಿಸಲಾಗಿತ್ತು.

ಸದ್ಯ ತನ್ನ ವೃತ್ತಿಯ ನಡುಹಾದಿಯಲ್ಲಿರುವ ಕಾರಾ ಕೊಲಂಬಿಯಾ ವಿವಿ ಮತ್ತೀಗ ರಟ್ಗರ್ಸ್ ವಿವಿಗಳಲ್ಲಿ ಅಧ್ಯಾಪನ ಮಾಡುತ್ತಿದ್ದಾರೆ. 2014ರಲ್ಲಿ ಬ್ರೂಕ್ಲಿನ್ ನಗರದ ಹಳೆಯ ಸಕ್ಕರೆ ಕಾರ್ಖಾನೆ ಕಟ್ಟಡದಲ್ಲಿ ಆಕೆ ನಿರ್ಮಿಸಿದ A Subtlety, or the Marvelous Sugar Baby, an Homage to the unpaid and overworked Artisans who have refined our Sweet tastes from the cane fields to the kitchens of the New World on the occasion of the demolition of the Domino Sugar Refining Plant ಕೃತಿ ಜಗತ್ತಿನಾದ್ಯಂತ ಸುದ್ದಿ ಮಾಡಿತು. ಕರಿಯ ನಾನಿಯ (ಸಿರಿವಂತರ ಮನೆಯ ಮಕ್ಕಳ ಪಾಲನೆ ಮಾಡುವ ಸೇವಕಿ) ಮುಖವನ್ನು ಹೊಂದಿರುವ ಶಿಲ್ಪ ಇದು.

ತಾನು ತನ್ನ ಕಲಾಕೃತಿಗಳ ಮೂಲಕ ನೋಡುಗರನ್ನು ಅವರ ಆರಾಮ ವಲಯದಿಂದ ಹೊರತಳ್ಳಿ, ಅವರಲ್ಲಿ ಸಿಟ್ಟು, ಅಸಹಾಯಕತೆ, ಅಸಹನೆ ಬರುವಂತೆ ಮಾಡುತ್ತೇನೆ ಎನ್ನುವ ಕಾರಾ, "I make art for anyone who's forgot what it feels like to put up a fight." ಎನ್ನುತ್ತಾರೆ. 2007ರಲ್ಲಿ TIME ಮ್ಯಾಗಝೀನ್, ಅವರನ್ನು ಅಮೆರಿಕದ 100ಅತ್ಯಂತ ಪ್ರಭಾವಿಗಳಲ್ಲಿ ಒಬ್ಬರೆಂದು ಆರಿಸಿತ್ತು.

ಕಾರಾ ವಾಕರ್ ಅವರು ತಮ್ಮ ಕಲೆಯ ಬಗ್ಗೆ ನೀಡಿದ ಉಪನ್ಯಾಸ:

ಕಲಾವಿದೆ ಕಾರಾ ವಾಕರ್ ಮತ್ತು ಚಿತ್ರಕರ್ಮಿ ಅವಾ ದುವರ್ನಿ ಅವರ ನಡುವಿನ ಮಾತುಕತೆ :

ಚಿತ್ರ ಶೀರ್ಷಿಕೆಗಳು:

ಕಾರಾ ವಾಕರ್ ಅವರ A Subtlety, or the Marvellous Sugar Baby, a temporary installation at the former Domino Sugar Refinery in Brooklyn, New York. (2014)

ಕಾರಾ ವಾಕರ್ ಅವರ Darkytown Rebellion, (2001)

ಕಾರಾ ವಾಕರ್ ಅವರ Grub for Sharks - A Concession to the Negro Populace (2004)

ಕಾರಾ ವಾಕರ್ ಅವರ My Complement, My Enemy, My Oppressor, My Love, Hammer Museum, Los Angeles (2008)

ಕಾರಾ ವಾಕರ್ ಅವರ Resurrection Story Without Patrons, (2017)

ಕಾರಾ ವಾಕರ್ ಅವರ The Katastwóf Karavan, (2017)

ಕಾರಾ ವಾಕರ್ ಅವರ The keys to the coop (1997)

ಕಾರಾ ವಾಕರ್ ಅವರ The moral arc of history ideally bends towards justice but just as soon as not curves back around toward barbarism, sadism, and unrestrained chaos, (2010)

ಕಾರಾ ವಾಕರ್ ಅವರ The Root, The Demise of the Flesh, The Immortal Negress, (2018)

ಈ ಅಂಕಣದ ಹಿಂದಿನ ಬರೆಹಗಳು:

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...