Date: 26-06-2025
Location: ಬೆಂಗಳೂರು
"ಒಂದು ಬಾಶೆಯ ದ್ವನಿಗಳಲ್ಲಿ ಸಾಕಶ್ಟು ವಯಿವಿದ್ಯತೆ ಇರುತ್ತದೆಯಾದರೂ ಅದರ ಬರಹದ ರೂಪವನ್ನು ಕಲಿಯುವಾಗ ಉಚ್ಚರಿಸುವ ದ್ವನಿಗಳು ಸಹಾಯಕವಾಗಿರುತ್ತವೆ. ಇಲ್ಲಿ ತಾಯ್ಮಾತಿನ ಶಿಕ್ಶಣವಾದರೆ ಮಗುವೊಂದು ಶಾಲೆಯಲ್ಲಿ ಕಲಿಯುವ ಲಿಪಿರೂಪಗಳು ತನ್ನ ಮಾತಿನಲ್ಲಿ ಬಳಸುವ ದ್ವನಿಗಳ ಬರಹದ ರೂಪ ಎಂಬುದನ್ನು ಬಾವಿಸಿಕೊಂಡಾಗ ಕಲಿಕೆ ಸರಳವಾಗುತ್ತದೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಬಾಶೆ-ಬಾಶೆಯ ಕವುಶಲಗಳು ಮತ್ತು ಕಲಿಕೆ’ ಕುರಿತು ಬರೆದಿದ್ದಾರೆ.
ಶಾಲೆಯಲ್ಲಿ ಬಾಶೆಯ ಬರೆಯುವ ಮತ್ತು ಓದುವ ಕವುಶಲಗಳನ್ನು ಕಲಿಸುವಾಗ ಅಕ್ಶರಗಳನ್ನು, ಮುಂದುವರೆದು ಅಕ್ಶರಗಳ ಜೋಡಣೆಯನ್ನು ಅಂದರೆ ಪದಗಳನ್ನು ಕಲಿಸಲಾಗುವುದು. ಅಕ್ಶರಗಳನ್ನು ಕಲಿಸುವಾಗ ಮಕ್ಕಳು ಅವುಗಳನ್ನು ತಾವು ಉಚ್ಚರಿಸುವ ದ್ವನಿಗಳ ಜೊತೆಗೆ ಅವುಗಳನ್ನು ಹೋಲಿಸಿಕೊಂಡು ಕಲಿಯಲು ಸುಲಬವಾಗುತ್ತದೆ. ಒಂದು ಬಾಶೆಯ ದ್ವನಿಗಳಲ್ಲಿ ಸಾಕಶ್ಟು ವಯಿವಿದ್ಯತೆ ಇರುತ್ತದೆಯಾದರೂ ಅದರ ಬರಹದ ರೂಪವನ್ನು ಕಲಿಯುವಾಗ ಉಚ್ಚರಿಸುವ ದ್ವನಿಗಳು ಸಹಾಯಕವಾಗಿರುತ್ತವೆ. ಇಲ್ಲಿ ತಾಯ್ಮಾತಿನ ಶಿಕ್ಶಣವಾದರೆ ಮಗುವೊಂದು ಶಾಲೆಯಲ್ಲಿ ಕಲಿಯುವ ಲಿಪಿರೂಪಗಳು ತನ್ನ ಮಾತಿನಲ್ಲಿ ಬಳಸುವ ದ್ವನಿಗಳ ಬರಹದ ರೂಪ ಎಂಬುದನ್ನು ಬಾವಿಸಿಕೊಂಡಾಗ ಕಲಿಕೆ ಸರಳವಾಗುತ್ತದೆ. ಇಲ್ಲದಿದ್ದರೆ ಮಗು ತನಗೆ ಶಾಲೆಯಲ್ಲಿ ಕೊಡುವ ಲಿಪಿ ರೂಪಗಳನ್ನು ಮಾತ್ರ ಕಲಿಯುತ್ತದೆ. ಬಾರತದ ಸಂದರ‍್ಬದಲ್ಲಿ ಇಂಗ್ಲೀಶಿನ ಮೂಲಕ ಶಿಕ್ಶಣವನ್ನು ಕೊಡುವಾಗ ಇದನ್ನು ಗಮನಿಸಬಹುದು. ಕನ್ನಡ ಮಾತನ್ನಾಡುವ ಮಗುವೊಂದಕ್ಕೆ ಕನ್ನಡದ ದ್ವನಿಗಳ ಲಿಪಿರೂಪವನ್ನು ಕಲಿಸುವಾಗ ಆ ಲಿಪಿರೂಪ ಯಾವ ದ್ವನಿಯನ್ನು ಪ್ರತಿನಿದಿಸುತ್ತದೆ ಎಂದು ಹೇಳುವ ಅವಶ್ಯಕತೆ ಇರುವುದಿಲ್ಲ. ಮಗು ಅದನ್ನು ನಿರೀಕ್ಶಿಸುವುದೂ ಇಲ್ಲ. ಬದಲಿಗೆ ಕನ್ನಡ ತಾಯ್ಮಾತಿನ ಮಗುವೊಂದು ಇಂಗ್ಲೀಶನ್ನು ಕಲಿಯುತ್ತಿದೆ ಎಂದಾದರೆ ಇಂಗ್ಲೀಶಿನ ದ್ವನಿಗಳ ಲಿಪಿರೂಪವನ್ನು ಕಲಿಯಬೇಕು. ಮಗು ಅವುಗಳನ್ನು ಚಿತ್ರದ ಹಾಗೆ ನೆನಪಿಟ್ಟುಕೊಂಡು ಕಲಿಯಬೇಕಶ್ಟೆ. ವಾಸ್ತವವಾಗಿ ಅವುಗಳನ್ನು ತನ್ನ ಜೀವನದ ಯಾವುದಕ್ಕೂ, ಮುಕ್ಯವಾಗಿ ಉಚ್ಚರಿಸುವ ದ್ವನಿಗಳಿಗೆ ಹೋಲಿಸಿಕೊಳ್ಳಲು ಸಾದ್ಯವಿಲ್ಲ.
ಹಾಗಾದರೆ ಮಗು ಈಗ ಅವುಗಳನ್ನು ಲಿಪಿಯಾಗಿ ಮಾತ್ರ ಕಲಿಯುತ್ತದೆ. ಇಲ್ಲಿಂದಲೆ ಸಮಸ್ಯೆ ಶುರುವಾಗುತ್ತದೆ. ಈಗ ಚಿತ್ರದ ರೀತಿಯಲ್ಲಿ ಕಲಿತ ಇಂಗ್ಲೀಶಿನ ಲಿಪಿಗಳನ್ನು ಕೆಲವು ದ್ವನಿಗಳ ಪ್ರತಿನಿದಿ ಎಂದು ಕಲ್ಪಿಸಿಕೊಳ್ಳಬೇಕು. ಇದು ಸಾದ್ಯವಾಗುವುದಕ್ಕೆ ಸಾಕಶ್ಟು ಸಮಯ ಕಳೆಯುತ್ತದೆ. ಅದಕ್ಕಾಗಿ ನಮ್ಮ ಬಾರತೀಯ ಶಾಲೆಗಳಲ್ಲಿ ಇಂಗ್ಲೀಶಿನ ಲಿಪಿಗಳು ಯಾವ ಯಾವ ದ್ವನಿಗಳನ್ನು ಪ್ರತಿನಿದಿಸುತ್ತವೆ ಎಂಬುದನ್ನೂ ಹೇಳಿಕೊಡಲಾಗುತ್ತದೆ. ಇದರ ನಂತರವೂ ಮಕ್ಕಳಿಗೆ ಇಂಗ್ಲೀಶಿನ ಲಿಪಿ ಒಂದು ಸಮಸ್ಯೆಯಾಗಿ ಮುಂದುವರೆಯುತ್ತದೆ. ಸ್ಪೆಲ್ಲಿಂಗ್ ಎಂಬ ಬೂತವಾಗಿ ಮಕ್ಕಳ ಬದುಕಿನೊಂದಿಗೆ ಅಂಟಿಕೊಂಡುಬಿಡುತ್ತದೆ. ಆದರೆ ಕನ್ನಡದ ಸಂರ‍್ಬದಲ್ಲಿ ಈ ಯಾವುದರ ಅವಶ್ಯಕತೆಯೂ ಇರುವುದಿಲ್ಲ. ಕನ್ನಡದ ಲಿಪಿಗಳನ್ನು ದ್ವನಿಗಳಾಗಿ ಅಂದರೆ ದ್ವನಿಗಳ ಬರಹರೂಪವಾಗಿ ಕಲಿಯುತ್ತದೆ. ವಾಸ್ತವದಲ್ಲಿ ಕನ್ನಡದ ಲಿಪಿಗಳೂ ಕೂಡ ಬಳಕೆಕನ್ನಡದ ವಿವಿದ ದ್ವನಿಗಳನ್ನು ಪ್ರತಿನಿದಿಸುತ್ತವೆ. ಇದನ್ನು ಇಲ್ಲಿ ಚರ‍್ಚೆಗೆ ತೆಗೆದುಕೊಳ್ಳುವುದು ಅಶ್ಟು ಅವಶ್ಯಕವಿಲ್ಲ, ಬೇರೆಡೆ ಚರ‍್ಚಿಸಬಹುದು. ಇಂಗ್ಲೀಶಿನ ಲಿಪಿಗಳ ಕಲಿಕೆ ಸಮಸ್ಯೆ ಇಲ್ಲಿಗೆ ನಿಲ್ಲುವುದಿಲ್ಲ. ಇಂಗ್ಲೀಶಿನ ಲಿಪಿ ವ್ಯವಸ್ತೆಗೂ ಕನ್ನಡದ ಕಾಗುಣಿತ ವ್ಯವಸ್ತೆಗೂ ಯಾವುದೆ ರೀತಿಯ ಸಂಬಂದ ಇಲ್ಲ. ಕನ್ನಡದ ಲಿಪಿ ವ್ಯವಸ್ತೆ ಅಕ್ಶರಾತ್ಮಕ ಮತ್ತು ಇಂಗ್ಲೀಶಿನ ಲಿಪಿವ್ಯವಸ್ತೆ ದ್ವನ್ಯಾತ್ಮಕ. ಅದಕ್ಕಾಗಿ ಕನ್ನಡದಾಗ ಕಾಗುಣಿತಗಳನ್ನು ಬರೆಯಲು ಸಾದ್ಯ ಮತ್ತು ಅವನ್ನು ಹೇಳಿಕೊಡುವುದು ಅವಶ್ಯ. ಕರ‍್ನಾಟಕದ ಹಲವು ಕಡೆ ಪ್ರಾತಮಿಕ ಶಾಲೆಗಳು ಇಂಗ್ಲೀಶಿಗೆ ಹೀಗೆ ಕನ್ನಡ ಮಾದರಿಯ ಕಾಗುಣಿತಗಳನ್ನು ಅಂದರೆ ಕ, ಕಾ, ಕಿ, ಕೀ ಮೊದಲಾದವುಗಳನ್ನು ಞಚಿ, ಞಚಿಚಿ, ಞi, ಞii ಎಂದು ಕಲಿಸುವ ಪದ್ದತಿಯನ್ನು ಬೆಳೆಸಿಕೊಂಡಿರುವುದನ್ನು ಬಹುಶಾ ಎಲ್ಲರೂ ಬಲ್ಲರು. ಈ ರೀತಿಯಲ್ಲಿ ಕಲಿಸುವುದರಿಂದ ಯಾವುದೆ ಲಾಬಗಳು ಇಲ್ಲ ಎಂಬುದು ವಾಸ್ತವ.
ಇದರ ಮುಂದುವರಿಕೆಯನ್ನು ಪದಗಳನ್ನು ಕಟ್ಟುವುದನ್ನು ಕಲಿಯುವಾಗ ಗಮನಿಸಬಹುದು. ಪದಗಳನ್ನು ಹೇಳುವಾಗ ಸಹಜವಾಗಿ ಮಕ್ಕಳು ತಮ್ಮ ಸಾಮಾಜಿಕ ಹಿನ್ನೆಲೆಯನ್ನು ಬಳಸಿಕೊಳ್ಳುತ್ತವೆ. ಸಮಾಜದಲ್ಲಿ ಇರುವವುಗಳನ್ನು ಪರಿಬಾವಿಸಿಕೊಳ್ಳುತ್ತವೆ. ಅ-ಅರಸ, ಆ-ಆನೆ ಎಂದು ಹೇಳಿಕೊಡುವಾಗ ಅರಸ ಎಂಬುದು, ಆನೆ ಎಂಬುದು ಮಕ್ಕಳಿಗೆ ಅವರ ಅದುವರೆಗಿನ ಬದುಕಿನ ಬಾಗದಲ್ಲಿ ಮಕ್ಕಳ ಅರಿವಿನ ಹರಹಿನೊಳಗೆ ಸೇರಿಕೊಂಡಿರುತ್ತವೆ. ಅಂದರೆ ಮಕ್ಕಳು ಅರಸ ಎಂಬ ಪರಿಕಲ್ಪನೆಯನ್ನು ತಿಳಿದುಕೊಂಡಿರುತ್ತವೆ. ಹಾಗಾಗಿ ಅರಸ ಎಂದರೇನು ಎಂದು ಕಲಿಯಬೇಕಾದ ಅವಶ್ಯಕತೆ ಇರುವುದಿಲ್ಲ ಮತ್ತು ತಮ್ಮ ಈ ಕಲಿಕೆಯನ್ನು ಪುಸ್ತಕದಲ್ಲಿ ಒದಗಿಸುವ ಚಿತ್ರದೊಂದಿಗೆ ಹೋಲಿಸಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಚಿತ್ರವೊಂದನ್ನು ಒದಗಿಸುತ್ತಿದ್ದಂತೆಯೆ ಆ ಪದವನ್ನು ಮಕ್ಕಳು ಕೊಡುವ ಸ್ತಿತಿಯಲ್ಲಿ ಇರುತ್ತಾರೆ. ಹಾಗಾಗಿ ಶಿಕ್ಶಕರಿಗೆ ಇದು ಕಲಿಸುವ ಪ್ರಕ್ರಿಯೆಯಲ್ಲಿ ಒಂದು ನೆಗೆತ. ಮಕ್ಕಳು ದ್ವನಿಗಳ ಹೊಂದಿಕೆಯ ಕಡೆಗೆ ಗಮನ ಹರಿಸಬಹುದು. ಅಲ್ಲದೆ ಈ ಪದದಲ್ಲಿ ಬಳಕೆಯಾಗುವ ದ್ವನಿ ಮತ್ತು ಆ ದ್ವನಿಗಳ ಲಿಪಿರೂಪಗಳ ನಡುವಿನ ನಂಟನ್ನು ಮಕ್ಕಳು ಹಿಡಿದುಕೊಂಡಿರುತ್ತಾರೆ. ಈ ಹಿಡಿತ ಒಂದುವೇಳೆ ಮಕ್ಕಳಲ್ಲಿ ಇನ್ನೂ ಸಾದ್ಯವಾಗಿಲ್ಲದ ಸ್ತಿತಿ ಇದ್ದಾಗಲೂ ಈ ಪದಗಳನ್ನು ಕಲಿಸುವುದಕ್ಕೆ ಬಹುದೊಡ್ಡ ಸಮಸ್ಯೆ ಏನೂ ಆಗಲಿಕ್ಕಿಲ್ಲ. ಆದರೆ ಇಂಗ್ಲೀಶಿನ ಸಂದರ‍್ಬದಲ್ಲಿ ಇದು ಇಶ್ಟು ಸರಳವಿಲ್ಲ. ಇನ್ನೂ ಮುಂದುವರೆದು ಕನ್ನಡ ದ್ವನಿಗಳ ಕನ್ನಡ ಲಿಪಿಗಳನ್ನು ಕಲಿಸಿದ ನಂತರ ಈ ಲಿಪಿರೂಪಗಳ ಹೊಂದಿಕೆ ನಿಯಮಗಳನ್ನು ಕನ್ನಡ ಮ್ಕಕಳಿಗೆ ಕಲಿಸಬೇಕಾದ ಅನಿವರ‍್ಯತೆಯೂ ಇರುವುದಿಲ್ಲ. ಸಹಜವಾಗಿ ಅದಾಗಲೆ ಮಕ್ಕಳು ತಮ್ಮ ದಿನಜೀವನದಲ್ಲಿ ಆ ದ್ವನಿಗಳನ್ನು ಹೊಂದಿಸುವ ಕ್ರಮವನ್ನು ತಿಳಿದುಕೊಂಡಿರುತ್ತಾರೆ.
ಹಾಗಾಗಿ ದ್ವನಿ ಮತ್ತು ಲಿಪಿಗಳ ನಡುವಿನ ನಂಟು ತಿಳಿದುಕೊಂಡರೆ ಪದಗಳನ್ನು ಕಲಿಸುವುದು ಹೆಚ್ಚು ಸಹಜವಾಗುತ್ತದೆ. ಹಾಗೆ ನೋಡಿದರೆ ಕಾಗುಣಿತಗಳನ್ನು ಕಲಿಸುವುದು ಅಂದರೆ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡುವುದು ಅಸಾದ್ಯ. ಕೇವಲ ಇಪ್ಪತ್ತಾರು ಲಿಪಿಗಳನ್ನು ಇಂಗ್ಲೀಶಿನಲ್ಲಿ ಕಲಿಸುವುದು ಕಶ್ಟವಾದರೆ ಕನ್ನಡದ ಸಾವಿರಾರು ಕಾಗುಣಿತಗಳನ್ನು ಕಲಿಸುವುದು ಇನ್ನೆಶ್ಟು ಸಮಸ್ಯೆಯಾಗಬಹುದು? ಆದರೆ ಹಾಗೆ ವಾಸ್ತವದಲ್ಲಿ ಆಗುವುದಿಲ್ಲ ನೋಡಿ. ಕನ್ನಡದ ಅಶ್ಟು ಲಿಪಿಗಳನ್ನೂ ಕಲಿಸುವುದಕ್ಕೆ ಆಗುವ ಶ್ರಮಕ್ಕಿಂತ ಹೆಚ್ಚು ಇಂಗ್ಲೀಶಿನ ಇಪ್ಪತ್ತಾರು ಲಿಪಿಗಳನ್ನು ಕಲಿಸುವಾಗ ಆಗುತ್ತದೆ. ಈ ಶ್ರಮ ಮಕ್ಕಳಿಗೆ ಅದರಂತೆ ಕಲಿಸುವ ಶಿಕ್ಶಕರಿಗೂ ಕೂಡ. ಇಂಗ್ಲೀಶಿನ ದ್ವನಿ ಮತ್ತು ಲಿಪಿಗಳ ನಡುವಿನ ನಂಟು ಮಕ್ಕಳಲ್ಲಿ ಅಶ್ಟು ಸಹಜವಾಗಿ ಊರಿಕೊಂಡಿರುವುದಿಲ್ಲ/ಊರಿಕೊಳ್ಳುವುದಿಲ್ಲ. ಇಂಗ್ಲೀಶಿನ ಪದದ ಪರಿಚಯ ಇರುವುದಿಲ್ಲ. ನೋಡಿ, ಎಲ್ಲವೂ ಅಪರಿಚಿತ. ದ್ವನಿ, ಲಿಪಿ, ದ್ವನಿ-ಲಿಪಿಗಳ ನಡುವಿನ ನಂಟು, ಈಗ ಎರಡನೆಯ ಹಂತದಲ್ಲಿ ಪದ, ದ್ವನಿಗಳ ಹೊಂದಿಕೆ ನಿಯಮಗಳು, ದ್ವನಿ-ಲಿಪಿ-ಪದ ಹೊಂದಿಕೆ ನಡುವಿನ ನಂಟು ಇವೆಲ್ಲವೂ ಗೊತ್ತಿಲ್ಲದವು.
ಗಮನಿಸಿ, ಮಕ್ಕಳು ಎಶ್ಟೆಲ್ಲವನ್ನೂ ಇಲ್ಲಿ ಕಲಿಯಬೇಕಾಗುತ್ತದೆ. ಇದರ ನಂತರ ಬರುವ ಸಮಸ್ಯೆ ಹೀಗೆ ದ್ವನಿ-ಲಿಪಿಗಳ ಹೊಂದಾಣಿಕೆಯಿಂದ ಕಲಿಯುವ ಪದ ತಾಯ್ಮಾತಿನದಾಗಿದ್ದರೆ ಅದನ್ನು ಮಕ್ಕಳು ಬೇಗ ಹಿಡಿದುಕೊಳ್ಳುತ್ತಾರೆ. ಒಂದು ಪದ ಕಲಿಯುವುದು ಎಂದರೆ ಅದರ ಬರವಣಿಗೆ ರೂಪವನ್ನು ಕಲಿಯುವುದು ಅಲ್ಲ. ಪ್ರತಿಯೊಂದು ಪದವೂ ಒಂದು ಪರಿಕಲ್ಪನೆ. ಆ ಪರಿಕಲ್ಪನೆಯನ್ನು ಮಕ್ಕಳು ಪಡೆದುಕೊಳ್ಳಬೇಕಾಗುತ್ತದೆ. ತಾಯ್ಮಾತಿನ ಪದಗಳ ಪರಿಕಲ್ಪನೆ ಮಕ್ಕಳಿಗೆ ಇರುತ್ತದೆ. ಹೊಸ ಪದಗಳನ್ನು ಕೊಟ್ಟಾಗಲೂ ಆ ಪದದ ಪರಿಕಲ್ಪನೆಯನ್ನು ಹಿಡಿಯುವುದಕ್ಕೆ ಮಕ್ಕಳಿಗೆ ಹೆಚ್ಚು ಕಶ್ಟವಾಗುವುದಿಲ್ಲ. ಮಕ್ಕಳ ಸಾಮಾಜಿಕತೆಯ ಪರಿಚಯದ ಬಲದಿಂದ ಈ ಪದಗಳ ಪರಿಕಲ್ಪನೆಯನ್ನು ಅವು ಬೇಗ ಹಿಡಿದುಕೊಳ್ಳುತ್ತವೆ. ಆದರೆ ಇಂಗ್ಲೀಶಿನ ಸಂದರ‍್ಬದಲ್ಲಿ ಹಾಗೆ ಆಗುವುದಿಲ್ಲ. ಅರಸ ಎಂಬ ಪದಕ್ಕೆ ಇಂಗ್ಲೀಶ್ ಮಾದ್ಯಮ ಶಿಕ್ಶಣದಲ್ಲಿ ಕಿಂಗ್ ಎಂಬ ಪದವನ್ನು ಕೊಟ್ಟಾಗ ಈ ಮೇಲೆ ಮಾತನಾಡಿದ ಒಂದು ಪದ ಕಲಿಯುವುದಕ್ಕೆ ಬೇಕಾದ ಎಲ್ಲವನ್ನೂ ಮಗು ಪಡೆದುಕೊಂಡಿರುವ ಸ್ತಿತಿಯಲ್ಲಿ ಇರಬೇಕು. ಆದರೆ ಅದು ಆಗುವುದಿಲ್ಲ. ಕನ್ನಡದಲ್ಲಿಯೂ ಅರಸ ಎಂಬುದಕ್ಕೆ ಬಿನ್ನ ಪದಗಳಿವೆ. ಯಾವುದೆ ಬಾಶೆಯಲ್ಲಿ ಹೀಗೆ ಬಿನ್ನ ಪದಗಳಿರುವುದು ಸಾದ್ಯ. ಇಲ್ಲಿ ಮ್ಕಕಳು ಅರಸ ಎನ್ನುವ ಪದದ ಬದಲು ರಾಜ ಎನ್ನುವ ಇನ್ನೊಂದು ಪದ ಕೊಡಬಹುದು. ಆದರೆ ಮಕ್ಕಳಲ್ಲಿ ಆ ಪದದ ಪರಿಕಲ್ಪನೆ ನೆಲೆಗೊಂಡಿರುವ ಕಾರಣ, ದ್ವನಿ-ಲಿಪಿ ಅವುಗಳ ನಂಟು, ದ್ವನಿಹೊಂದಿಕೆ ನಿಯಮಗಳು ಈ ಮೊದಲಾದವು ಮಕ್ಕಳಲ್ಲಿ ಸಹಜವಾಗಿ ಬೆಳೆಯುವುದರಿಂದಾಗಿ ಇದೊಂದು ಸಮಸ್ಯೆ ಅಲ್ಲ. ಹೀಗಾಗಿ ಅರಸ ಪದ ಕಲಿಕೆ ಆಗುತ್ತದೆ. ಆದರೆ ಕಿಂಗ್ ಪದ ನೆನಪಿನಲ್ಲಿ ಇಟ್ಟುಕೊಂಡಿರಬೇಕಾಗುತ್ತದೆ. ಅದು ಮಗುವಿನ ಪ್ರಾಗ್ನಿಕ ಆಳಕ್ಕೆ ಇಳಿಯುವುದು ಸುಲಬವಲ್ಲ. ಇಲ್ಲಿ ಅರಸ, ರಾಜ, ಕಿಂಗ್ ಎಂಬ ಪದಗಳನ್ನು ಸರಳವಾಗಿ ಪರ‍್ಯಾಯ ರೂಪಗಳಂತೆ ಕಲಿಸಬಹುದಲ್ಲ ಎಂಬ ವಾದ ತರಬಹುದು.
ಒಂದು ಬಾಶೆಯ ಪ್ರತಿಯೊಂದು ಪದವೂ ಆ ಬಾಶೆಯ ಸಾಂಸ್ಕೃತಿಕ ಹಿನ್ನೆಲೆಯನ್ನು ಒಳಗೊಂಡಿರುವುದರಿಂದ ಅದು ಅಶ್ಟು ಸರಳ ಆಗುವುದಿಲ್ಲ. ಒಂದು ಪದವನ್ನು ಕಲಿಯುವುದು ಎಂದರೆ ಸಂಸ್ಕೃತಿಯನ್ನು ಕಲಿಯುವುದು ಎಂದೆ ಅರ‍್ತ. ಅರಿತ ಸಂಸ್ಕೃತಿಯ ಪದಗಳನ್ನು ಮಕ್ಕಳಿಗೆ ಕಲಿಸುವಾಗ ಇಡಿಯಾಗಿ ಮಗುವಿನ ಹಿನ್ನೆಲೆ ಪೂರಕವಾಗಿ ಇರುತ್ತದೆ. ಇನ್ನೊಂದು ಬಾಶೆಯ ಪದಗಳನ್ನು ಕಲಿಯುವಾಗ ಇನ್ನೊಂದು ಸಂಸ್ಕೃತಿಯನ್ನು ಕಲಿಯುವ ಸ್ತಿತಿಯೊಂದು ನರ‍್ಮಾಣವಾಗುತ್ತದೆ. ಹಾಗಾಗಿ ಇದು ಸುಲಬದ ಸಮಸ್ಯೆ ಅಲ್ಲ.
ಈ ಅಂಕಣದ ಹಿಂದಿನ ಬರಹಗಳು:
ಕಲಿಕೆ ಮತ್ತು ಕಲಿಸುವ ಮಾದ್ಯಮ
ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು-ಮುಂದುವರೆದುದು
ಶಿಕ್ಶಣ: ಕೆಲವು ಜನರಲ್ಲಾದ ಮಾತುಗಳು
ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು
ತಾಯ್ಮಾತಿನ ಶಿಕ್ಶಣ: ಕೆಲವು ಸವಾಲುಗಳು-ಮುಂದುವರೆದುದು
ತಾಯ್ಮಾತಿನ ಶಿಕ್ಶಣ: ಕೆಲವು ಸವಾಲುಗಳು
ತಾಯ್ಮಾತಿನ ಶಿಕ್ಶಣ-ಕೆಲವು ಮಾದರಿಗಳು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಬದುಕಿನಲ್ಲಿ ಸೋಲು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಶಿಕ್ಶಣದಲ್ಲಿ ಸೋಲು
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ವಿಶಯದಲ್ಲಿ ಸೋಲು
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ (ಮುಂದುವರೆದುದು)
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ
ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ
ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ
ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ
ತಾಯ್ಮಾತಿನ ಶಿಕ್ಶಣ ಯಾಕೆ?
ತಾಯ್ಮಾತಿನ ಶಿಕ್ಶಣ: ಎಲ್ಲಿತನಕ
ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ
ಮಗು ಮತ್ತು ಬಾಶಾಗಳಿಕೆ
ತಾಯ್ಮಾತು-ತಾಯಿ ಮಾತು-ಗುರ‍್ತಿಕೆ
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವ
"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...
"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...
"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...
©2025 Book Brahma Private Limited.