ಬೆರಗು ಪುಸ್ತಕ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

Date: 23-07-2024

Location: ಬೆಂಗಳೂರು


ವಿಜಯಪುರ ಜಿಲ್ಲೆಯ ಕಡಣಿ ಗ್ರಾಮದ ಬೆರಗು ಪ್ರಕಾಶನವು ರಾಜ್ಯಮಟ್ಟದ ಪ್ರೊ. ಎಚ್.ಟಿ.ಪೋತೆ ಕಾವ್ಯ, ಕಥಾ ಪ್ರಶಸ್ತಿ ನೀಡಲು ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಕತೆ, ಕಾವ್ಯ ಪ್ರಶಸ್ತಿಯು ರೂ 10 ಸಾವಿರ ನಗದು, ಪ್ರಶಸ್ತಿ ಫಲಕ ಸ್ಮರಣಿಕೆ ಒಳಗೊಂಡಿದೆ. ಆಯ್ಕೆಯಾದ ಹಸ್ತಪ್ರತಿಯನ್ನು ಪ್ರಕಾಶನದಿಂದ ಪ್ರಕಟಿಸಿ ಪ್ರಕಾಶನದ 7ನೇ ವಾರ್ಷಿಕೋತ್ಸವದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಚಾಲಕಿ ವಿಜಯಲಕ್ಷ್ಮಿ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನಿಷ್ಠ 10 ಕತೆಗಳನ್ನೊಳಗೊಂಡ ಅಥವಾ 40 ಕವಿತೆಯನ್ನೊಳಗೊಂಡ ಹಸ್ತಪ್ರತಿಯು ನುಡಿ ಅಥವಾ ಬರಹದಲ್ಲಿ ಟೈಪ್ ಮಾಡಿದ ತಮ್ಮ ಅಪ್ರಕಟಿತ ಕೃತಿಯ ಎರಡು ಪ್ರತಿಗಳನ್ನು ಆಗಸ್ಟ್ 30 ರೊಳಗೆ ತಲುಪಿಸಲಾಗಿದೆ ಎಂದು ಕೋರಲಾಗಿದೆ.

ಪ್ರಕಟಿತ ಕೃತಿಗಳ ಆಹ್ವಾನ:

ಕಡಣಿ ಬೆರಗು ಪ್ರಕಾಶನವು ದಿ. ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ಅವರ ಹೆಸರಿನಲ್ಲಿ ಪ್ರತಿವರ್ಷ ನೀಡುವ ಬೆರಗು ಪ್ರಶಸ್ತಿ-2021 ನೀಡಲು 2023ನೇ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯದ ಎಲ್ಲಾ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು 5ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದ್ದು, ಆಸಕ್ತ ಲೇಖಕರು ತಮ್ಮ ಕೃತಿಯ ಎರಡು ಪ್ರತಿಗಳನ್ನು ಆಗಸ್ಟ್ 30 ರೊಳಗೆ ಸಲ್ಲಿಸಬೇಕು. ಪಿಎಚ್.ಡಿ ಪ್ರಬಂಧ ಹೊರತುಪಡಿಸಿ ಕನ್ನಡದ ಎಲ್ಲಾ ಪ್ರಕಾರದ ಪುಸ್ತಕಗಳನ್ನು ಪ್ರಶಸ್ತಿಗೆ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹಸ್ತಪ್ರತಿ ಮತ್ತು ಪುಸ್ತಕ ಕಳಿಸುವ ವಿಳಾಸ: ವಿಜಯಲಕ್ಷ್ಮಿ ಆರ್. ಕತ್ತಿ, ಬೆರಗು ಪ್ರಕಾಶನ, ವಿನಾಯಕ ನಗರ, ಆಲಮೇಲ -586 202, ತಾ: ಆಲಮೇಲ, ಜಿಲ್ಲೆ: ವಿಜಯಪುರ, ಮೊಬೈಲ್ ಸಂಖ್ಯೆ: 7795341335

MORE NEWS

`ಮ್ಯೂಸಿಕಲ್ ವಿಡಿಯೊ ಸಾಂಗ್ ಒಂದು ವಿಶಿಷ್ಟ ಪುಸ್ತಕ' ಲೋಕಾರ್ಪಣಾ ಸಮಾರಂಭ

06-09-2024 ಬೆಂಗಳೂರು

ಬೆಂಗಳೂರು: ಶ್ರೀ ಸಾಯಿಗನ ಪ್ರೊಡಕ್ಷನ್ಸ್ ಹಾಗೂ ವಾಯ್ಸಿಂಗ್ ಸೈಲೆನ್ಸ್, ಕಾವ್ಯಸ್ಪಂದನ ಪಬ್ಲಿಕೇಷನ್ಸ್ ವತಿಯಿಂದ ಮ್ಯೂಸಿಕ...

ಶ್ರೀಧರ ತುಮರಿ ಅವರ ‘ಪಕ್ಷಿಗಳ ವಿಸ್ಮಯ ವಿಶ್ವ’ ಕೃತಿಯ ವಿನ್ಯಾಸ ಮತ್ತು ಮುದ್ರಣಕ್ಕಾಗಿ ರಾಷ್ಟ್ರ ಪ್ರಶಸ್ತಿ

06-09-2024 ಬೆಂಗಳೂರು

ಬೆಂಗಳೂರು: The Federation of Indian Publishers ಭಾರತೀಯ ಪ್ರಕಾಶಕರ ಒಕ್ಕೂಟ, ನವ ದೆಹಲಿ ಇವರ ವತಿಯಿಂದ 2023-24ನ...

ಕರ್ನಾಟಕ ನಾಟಕ ಅಕಾಡೆಮಿಯಿಂದ ‘ರಾಜ್ಯಮಟ್ಟದ ನಾಟಕ ರಚನಾ ಶಿಬಿರ’ಕ್ಕೆ ಅರ್ಜಿ ಆಹ್ವಾನ

04-09-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು “ರಾಜ್ಯಮಟ್ಟದ ನಾಟಕ ರಚನಾ ಶಿಬಿರ"ವನ್ನು 2024 ಅ.03 ರಿಂದ ಅ. 07ರವ...