“ಅಸಂಖ್ಯಾತ ಮಂದಿಗೆ ಬದುಕು ಅದು ನಿತ್ಯದ ಹೋರಾಟ, ಶ್ರಮ, ಅವಮಾನ, ಅಪವಾದ, ನಿರಾಸೆ, ವಿಷಾದ ಇತ್ಯಾದಿ. ಕಾದಂಬರಿಯಲ್ಲಿ ಬರುವ ಕುಂತೆಮ್ಮ, ಈರಮ್ಮ ಮತ್ತು ಬಾಬುರಾವ್ ಈ ಎಲ್ಲ ಲಕ್ಷಣಗಳ ಪ್ರತಿನಿಧಿಗಳು,” ಎನ್ನುತ್ತಾರೆ ಮೋಹನ್ ಕುಮಾರ್ ಡಿ ಎನ್. ಅವರು ಫಕೀರ ಅವರ “ಬೇರು” ಕೃತಿ ಕುರಿತು ಬರೆದ ವಿಮರ್ಶೆ.
ಮನುಷ್ಯ ಎಲ್ಲಿಯೋ ಹುಟ್ಟಿ ಬೆಳೆದು, ಬದುಕು ಮಗ್ಗಲು ಬದಲಿಸಿದಾಗ ಇನ್ನೆಲ್ಲಿಗೋ ಹೊರಳಿಕೊಳ್ಳುವುದು ಬೇರೂರುವ ಬಯಕೆಯಿಂದಲೇ. ಇಲ್ಲದಿದ್ದಲ್ಲಿ ಗಾಳಿಯಂತೆ ಸರಿದು, ನೀರಿನಂತೆ ಹರಿದು, ಹಕ್ಕಿಯಂತೆ ಹಾರಾಡಬಹುದಿತ್ತು. ಆದರೆ ಬದುಕು ಅಂದುಕೊಂಡಷ್ಟು ಸಲೀಸಲ್ಲ. ವರದಾನವೂ ಅಲ್ಲ. ಕೆಲವರ ಹೊರತಾಗಿ, ಅಸಂಖ್ಯಾತ ಮಂದಿಗೆ ಅದು ನಿತ್ಯದ ಹೋರಾಟ, ಶ್ರಮ, ಅವಮಾನ, ಅಪವಾದ, ನಿರಾಸೆ, ವಿಷಾದ ಇತ್ಯಾದಿ.. ಕಾದಂಬರಿಯಲ್ಲಿ ಬರುವ ಕುಂತೆಮ್ಮ, ಈರಮ್ಮ ಮತ್ತು ಬಾಬುರಾವ್ ಈ ಎಲ್ಲ ಲಕ್ಷಣಗಳ ಪ್ರತಿನಿಧಿಗಳು. ಈ ಮೂವರೂ ಅವರವರ ರೀತಿಯಲ್ಲಿ, ಬದುಕು ಅವಕಾಶ ಕಲ್ಪಿಸಿದಂತೆ, ಹೋರಾಟಗಾರರೇ. ಎಂತಹ ಸಂಕಷ್ಟಗಳು ಎದುರಾದರೂ ಜಗ್ಗುವುದಿಲ್ಲ. ನಡೆಯುವ ಹಾದಿಯನ್ನು ಬದಲಿಸಿಕೊಳ್ಳಬಲ್ಲರೇ ಸ್ವಾರ್ಥರಹಿತವಾದುದು. ಅವರ ಹೋರಾಟ ವೈಯಕ್ತಿಕ ನೆಲೆಗಟ್ಟಿನಲ್ಲಿ ನಾಲ್ಕು ಗೋಡೆಗಳ ನಡುವೆ ನಡೆಯುವಂತಹದ್ದಾದರೂ ಅದಕ್ಕೊಂದು ಸಾರ್ವತ್ರಿಕ ಗುಣವಿದೆ. ಹೀಗಾಗಿ ಅವರವರ ಕಥೆಯಲ್ಲಿ ಅವರು ಅನಾವರಣಗೊಳ್ಳುತ್ತಲೇ, ಅದರಿಂದ ಹೊರ ಬರುವ ಹಾದಿಯನ್ನು ಹುಡುಕುತ್ತಲೇ ಬದುಕಿಗೆ ಭರವಸೆಯನ್ನು ನೀಡಬಲ್ಲರು. ಫ್ಲಾರೆನ್ಸ್ ದಂಪತಿಗಳು, ಸ್ವಾಮಿ ರಮಾನಂದ, ವೈದ್ಯರಾದ ಚಂದ್ರಶೇಖರ, ಕಾಮತ್ ಬೆಳಕಿನ ಕಿರಣಗಳು. ಎಂಡೋಸಲ್ಫಾನ್ ಪೀಡಿತೆ ಸಂಧ್ಯಾ, ಬೀಟಿ ಬೆಳೆ ಹಾನಿಗೊಳಗಾದ ರೈತ ಭರಮಪ್ಪ, ಲ್ಯೂಕೇಮಿಯಾ ಕ್ಯಾನ್ಸರ್ ಪೀಡಿತನಾದ ನಚಿಕೇತ ಕಿರಣಗಳ ಹೊಳಪಿಗೆ ವರ್ಧಿಸುವ ಆಶ್ರಿತರು. ಬದುಕನ್ನು ಬೇರಿಳಿಸಲು ಇವರ ನಿರಂತರ ಪ್ರಯತ್ನ ಅಗಾಧವಾದುದು. ನಿರಂತರವಾದುದು. ಹಾಗೆ ನೋಡಿದರೆ ಪ್ರತಿಯೊಬ್ಬರ ಬಾಳು ಕೂಡ ಇದಕ್ಕೆ ಅಪವಾದವಲ್ಲ. ಹೊರತು ನಡಿಗೆಯನ್ನು ನಿಲ್ಲಿಸುವುದಿಲ್ಲ. ಆ ಬದಲಾವಣೆ ಕೂಡ ತಾತ್ಕಾಲಿಕವಾದುದು.
"ಬದುಕಿನಲ್ಲಿ ಲೇಖಕರಿಗೆ ಸೂಕ್ಷ್ಮತೆ ಬೇಕು ಅಂತಿದ್ರು ಲೇಖಕರೊಬ್ರು. ಇದನ್ನು ನೋಡಿದಾಗಲೂ ಹಾಗೇ ಅನಿಸಿತು ನನಗೆ. ಒಂ...
"ಸಶಕ್ತ ಬರವಣಿಗೆ, ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು. 'ಕೆಂಪು ದಾಸವಾಳ' ಕಥಾಸಂಕಲನದ ಕಥೆಗ...
"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್...
©2025 Book Brahma Private Limited.