ಉತ್ತರ ಕರ್ನಾಟಕದ ಅಮಾಯಕ ಹೆಣ್ಮಕ್ಕಳನ್ನು ಪ್ರತಿನಿಧಿಸುತ್ತಾ ನಿಲ್ಲುತ್ತವೆ


"ಬದುಕಿನಲ್ಲಿ ಲೇಖಕರಿಗೆ ಸೂಕ್ಷ್ಮತೆ ಬೇಕು ಅಂತಿದ್ರು ಲೇಖಕರೊಬ್ರು. ಇದನ್ನು ನೋಡಿದಾಗಲೂ ಹಾಗೇ ಅನಿಸಿತು ನನಗೆ. ಒಂದನ್ನು ಮೀರಿಸಿದ ಮತ್ತೊಂದು ಲೇಖನ ಲೇಖಕರೆಷ್ಟು ಸಂವೇದನಾಶೀಲರು ಎಂಬುದನ್ನು ತೋರಿಸುತ್ತವೆ... ಎಲ್ಲವೂ ಬದುಕಿಗೆ ಸಂಬಂಧಪಟ್ಟವು," ಎನ್ನುತ್ತಾರೆ ರಾಜೇಶ್ ಕುಮಾರ್ ಕಲ್ಯ. ಅವರು ನಳಿನಿ ಟಿ. ಭೀಮಪ್ಪ ಅವರ ‘ಚಿತ್ತ ಬಕ್ಕ’ ಕೃತಿ ಕುರಿತು ಬರೆದ ಅನಿಸಿಕೆ.

ಎರಡು ತಿಂಗಳ ಹಿಂದೆ ನಮ್ಮ ಧಾರವಾಡದ ಲೇಖಕಿ ನಳಿನಿ ಟಿ. ಭೀಮಪ್ಪ( ರೈಟಿಂಗ್ ಮಷೀನ್ ಎನ್ನಲು ಅಡ್ಡಿಯೇನಿಲ್ಲ ಅವರನ್ನು) ಈ ಹೊತ್ತಗೆಯನ್ನು ಕಳಿಸಿದ್ದರು.. ನಾನು ನೋಡಿದಂತೆ ಅವರು ಲಲಿತ ಪ್ರಬಂಧಗಳಿಗೇ ಪ್ರಸಿದ್ದರು.. ಅವರು ಬರೆಯುವ ಲಲಿತ ಪ್ರಬಂಧಗಳ ದೊಡ್ಡ ಫ್ಯಾನ್ ಕೂಡಾ ನಾನು. ಸೀರಿಯಸ್ಸಾಗಿ ಹೇಳಬೇಕಾದುದನ್ನೆಲ್ಲಾ ಅದರಲ್ಲೇ ಹೇಳುವ ಕಲೆ ಅವರಿಗೆ ಸಿದ್ದಿಸಿದೆ. ನನಗವರು ಸೀರಿಯಸ್ ಲೇಖನಗಳನ್ನು ಬರೆಯೋದು ಕಡಿಮೆ ಅನಿಸಿತ್ತು. ಆದ್ರೆ ಅವರು ಕಥೆ ಕವನ ಲೇಖನ ಎಲ್ಲವನ್ನೂ ಬರೆಯುವ ಶಾನ್ಯಾ ಲೇಖಕರಾದಾರ. ಈ ಸಲ ಬರೋಬ್ಬರಿ ಐವತ್ತೊಂದು ಲೇಖನಗಳ ಸಂಕಲನದೊಂದಿಗೆ ಬಂದಿದ್ದಾರೆ...

ಬದುಕಿನಲ್ಲಿ ಲೇಖಕರಿಗೆ ಸೂಕ್ಷ್ಮತೆ ಬೇಕು ಅಂತಿದ್ರು ಲೇಖಕರೊಬ್ರು. ಇದನ್ನು ನೋಡಿದಾಗಲೂ ಹಾಗೇ ಅನಿಸಿತು ನನಗೆ. ಒಂದನ್ನು ಮೀರಿಸಿದ ಮತ್ತೊಂದು ಲೇಖನ ಲೇಖಕರೆಷ್ಟು ಸಂವೇದನಾಶೀಲರು ಎಂಬುದನ್ನು ತೋರಿಸುತ್ತವೆ... ಎಲ್ಲವೂ ಬದುಕಿಗೆ ಸಂಬಂಧಪಟ್ಟವು... ಒಂದಷ್ಟು ಲೇಖನಗಳಲ್ಲಿ ಸಾಮಾಜಿಕ ಸಮಸ್ಯೆಗಳು ಗೊಚರಿಸಿದರೆ ಒಂದಷ್ಟು ಲೇಖನಗಳು ಹೆಣ್ಮಕ್ಳಳ, ಪ್ರಮುಖವಾಗಿ ಉತ್ತರ ಕರ್ನಾಟಕದ ಅಮಾಯಕ ಹೆಣ್ಮಕ್ಕಳನ್ನು ಪ್ರತಿನಿಧಿಸುತ್ತಾ ನಿಲ್ಲುತ್ತವೆ.

ಮಕ್ಕಳಿಗೆ ತಮ್ಮ ನೈತಿಕ ಜವಾಬ್ದಾರಿಯನ್ನು ತಿಳಿಹೇಳುತ್ತಾ ಪ್ರಸ್ತುತ ಮನುಷ್ಯನು ಭೂಮಿಯನ್ನು ನಡೆಸಿಕೊಳ್ಳುವ ಪರಿಯನ್ನೂ ಸೂಕ್ಷ್ಮವಾಗಿ ತಿಳಿಸುತ್ತವೆ... ಇಲ್ಲಿ ಎಲ್ಲವೂ ಇದೆ. ಇದರಲ್ಲಿರುವ ಲೇಖನಗಳೆಲ್ಲಾ ಒಂದೆರಡು ಪುಟಗಳಷ್ಟೇ ಇದ್ದು ತೀಕ್ಷ್ಣವಾದ ಸಂದೇಶಗಳನ್ನು ಹೊಂದಿದ್ದು ಇವತ್ತಿಗೆ ಅಗತ್ಯವಾಗಿ ಬೇಕಾದಂತವು...

 

MORE FEATURES

ಅರ್ಥಪೂರ್ಣ ಬದುಕಿಗೆ ಈ ಸಿದ್ಧಾಂತಗಳು ಎಷ್ಟೊಂದು ಮೌಲ್ಯಯುತ

17-03-2025 ಬೆಂಗಳೂರು

“ನೈತಿಕ ಬದುಕು ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಕುರಿತು ಯೋಗಮಾರ್ಗದಲ್ಲಿ ನಡೆಯಲು ಈ ಪುಸ್ತಕ ಮಾರ್ಗದರ್ಶನ ಮಾ...

ಕಂಬಾಲಪಲ್ಲಿ ಪರಿಶಿಷ್ಟರ ಸಜೀವ ದಹನಕ್ಕೆ 25 ವರ್ಷ

17-03-2025 ಬೆಂಗಳೂರು

"ಆ ರಾತ್ರಿ ನಡೆದದ್ದು ಏನು?: ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿ ಕ...

ಓದಿದ ನಂತರ ಈ ಕತೆಯ ಹೆಣ್ಣು ಕಾಡುತ್ತಾಳೆ

17-03-2025 ಬೆಂಗಳೂರು

"'ರೆಕ್ಕೆಯಿಲ್ಲದ ಹಕ್ಕಿ ' ಶೆಲತ್ ಅವರ ಆಯ್ದ ಕತೆಗಳ ಸಂಗ್ರಹ. ಕನ್ನಡಕ್ಕೆ ಅನುವಾದ ಮಾಡಿದ್ದು ಅಗ್ರಹಾರ ಕ...