ಅವಕಾಶವಂಚಿತ ರಾದಾಗಲೇ ಬದುಕು ಹೊಸ ಹುಟ್ಟು ಪಡೆಯುತ್ತದೆ; ವಸುಧೇಂದ್ರ

Date: 06-04-2025

Location: ಬೆಂಗಳೂರು


ಬೆಂಗಳೂರು: ಛಂದ ಪುಸ್ತಕ ಪ್ರಕಾಶನದ ವತಿಯಿಂದ ಪುಸ್ತಕ ಬಹುಮಾನ ಕಾರ್ಯಕ್ರಮವನ್ನು 2025 ಎ. 06 ಭಾನುವಾರದಂದು ನಗರದಲ್ಲಿ ಹಮ್ಮಿಕೊಳ್ಳಲಾಯಿತು.

ಪುಸ್ತಕ ಬಹುಮಾನವನ್ನು ಪ್ರದಾನಿಸಿ ಮಾತನಾಡಿದ ಬಸವರಾಜ ಕಾಲ್ಗುಡಿ ಅವರು, "ನನ್ನ ಕಥೆಯ ಓದಿನಲ್ಲಿ ಯಾವ ಕಥೆ ಸರಳವಾದ ಅರ್ಥವನ್ನು ಬಿಟ್ಟು ಕೊಡುತ್ತದೋ, ಯಾವ ಕಥೆ ಬರೀ ವಿವರಗಳಲ್ಲಿ ಮಾತ್ರ ತನ್ನ ಅಂತಿಮ ಆಶಯವನ್ನು ಕಂಡುಕೊಳ್ಳುತ್ತದೆಯೋ ಅಂತಹ ಕಥೆ ನಿಮಗೆ ಒಳ್ಳೆಯ ಕಥೆ ಆಗುವುದಿಲ್ಲ. ಒಂದು ಸಲ ಓದಿದ ಮೇಲೆ ಅದು ಬೇಡವೆನ್ನುವ ಅನುಭವವನ್ನು ತರುತ್ತದೆ. ಆದರೆ ಬಹಳ ಒಳ್ಳೆಯ ಕಥೆ ಏನೋ ಹೇಳುವ ಹಾಗೆ ಓದಿಸಿಕೊಂಡು ಹೋಗುತ್ತದೆ," ಎಂದರು.

ಛಂದ ಪುಸ್ತಕದ ಪ್ರಕಾಶಕ ವಸುಧೇಂದ್ರ ಮಾತನಾಡಿ, "ಕೆಲವೊಮ್ಮೆ ಅವಕಾಶವಂಚಿತ ರಾದಾಗಲೇ ಬದುಕು ಹೊಸ ಹುಟ್ಟು ಪಡೆಯುತ್ತದೆ. ಈ ಮಾತು ಛಂದ ಪುಸ್ತಕಕ್ಕೆ ಪ್ರೇರಣೆಯಾಗಿದೆ. ಮುಖ್ಯವಾಗಿ ಪ್ರಕಾಶಕರಲ್ಲಿ ನಿಷ್ಠೆಯಿಂದ ಹೊಸಬರ ಹಸ್ತಪ್ರತಿಗಳನ್ನು ಓದುವಂತಹ, ಅದರಲ್ಲಿರುವ ಗುಣಾವಾಗುಣಗಳನ್ನು ಗುರುತಿಸುವಂತಹ ಶಕ್ತಿ ಇಲ್ಲ. ಎಲ್ಲರೂ ಪ್ರಸಿದ್ಧವರಾದವರ ಕೃತಿಗಳನ್ನು ಪ್ರಕಟಿಸುವುದರಲ್ಲೇ ನಿರತರಾಗಿದ್ದಾರೆ," ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ‘ನಮ್ಮ ಭಾಷೆ, ನಮ್ಮ ಕತೆ’ ಕುರಿತು ವಿಶೇಷ ಉಪನ್ಯಾಸವನ್ನು ಹಮ್ಮಿಕೊಂಡಿದ್ದು, ತೆಲುಗಿನಲ್ಲಿ ಡಾ.ಸಿ. ಮೃಣಾಲಿನಿ, ಕನ್ನಡದಲ್ಲಿ ಡಾ.ಚಿದಾನಂದ ಸಾಲಿ, ಇಂಗ್ಲಿಷ್ ನಲ್ಲಿ ಮನು ಭಟ್ಟ ತಿರಿ ಅವರು ನಡೆಸಿಕೊಟ್ಟರು.

MORE NEWS

ರಾಧಾಕೃಷ್ಣ ರಾವ್ ಪಾಂಗಾಳ ಅವರ ಬದುಕು ಮತ್ತು ಬರಹ ಕುರಿತ ಕೃತಿ ‘ಪಾಂಗಾಳ ಡಾಕ್ಟ್ರು’ ಲೋಕಾರ್ಪಣೆ ಸಮಾರಂಭ

14-04-2025 ಬೆಂಗಳೂರು

ಬೆಂಗಳೂರು: ಸಾಹಿತಿ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಧಾಕೃಷ್ಣ ರಾವ್ ಪಾಂಗಾಳ ಅವರ ಬದುಕು ಮತ್ತು ಬರಹ ಕುರಿತ ಷ...

ಅನುವಾದದಿಂದ ಕನ್ನಡದ ಜ್ಞಾನ ಪರಂಪರೆಗೆ ಜಾಗತಿಕ ಮಹತ್ವ: ಪ್ರೊ. ವಿಕ್ರಮ ವಿಸಾಜಿ 

13-04-2025 ಬೆಂಗಳೂರು

ಬಸವಕಲ್ಯಾಣ: "ಯೂರೋಪ್ ನಮಗೆ ಅರ್ಥವಾದಷ್ಟು ಯೂರೋಪಿಗೆ ನಾವು ಅರ್ಥವಾಗಿಲ್ಲ. ಕನ್ನಡ ಸಾಹಿತ್ಯ ಅನುವಾದಿಸುವ ಮೂಲಕ ಕನ...

ಕನ್ನಡ ಪುಸ್ತಕ ಪ್ರಾಧಿಕಾರದ 2022, 2023 ಹಾಗೂ 2024ನೇ ಸಾಲಿನ ಪ್ರಶಸ್ತಿ ಪ್ರಕಟ

09-04-2025 ಬೆಂಗಳೂರು

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸ...