Date: 07-10-2024
Location: ಬೆಂಗಳೂರು
ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನದಿಂದ ಕೊಡಮಾಡಲಾಗುವ 2024ನೇ ಸಾಲಿನ 'ರಮಣಶ್ರೀ ಶರಣ ಪ್ರಶಸ್ತಿ’ಗೆ ಧಾರವಾಡದ ಸಾಹಿತಿ ವೀರಣ್ಣ ರಾಜೂರ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು 50 ಸಾವಿರ ರೂ ನಗದು ಮತ್ತು ಫಲಕವನ್ನು ಒಳಗೊಂಡಿದೆ.
ರಮಣಶ್ರೀ ಶರಣ ಹಿರಿಯ ಶ್ರೇಣಿ: ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆಗೆ ಬೆಂಗಳೂರಿನ ಎಚ್.ಎಸ್. ಸಿದ್ದಗಂಗಪ್ಪ, ಅಕ್ಕಲ ಕೋಟೆಯ ಗುರುಲಿಂಗಪ್ಪ ಧಬಾಲೆ, ಆಧುನಿಕ ವಚನ ರಚನೆಗೆ ಮೈಸೂರಿನ ಸಿ.ಪಿ.ಸಿದ್ಧಾಶ್ರಮ, ಹಾಸನದ ಸುಶೀಲಾ ಸೋಮಶೇಖರ್, ವಚನ ಸಂಗೀತಕ್ಕೆ ಬೆಂಗಳೂರಿನ ಎಂ.ಎಸ್. ಶೀಲಾ ಹಾಗೂ ಎಂ.ವಿ. ತ್ಯಾಗರಾಜ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 40 ಸಾವಿರ ರೂ ನಗದು ಒಳಗೊಂಡಿದೆ.
ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ: ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆಗೆ ಗದಗ ಜಿಲ್ಲೆಯ ಅಂದಯ್ಯ ಅರವಟಗಿಮಠ, ಆಧುನಿಕ ವಚನ ರಚನೆಗೆ ಉಡುಪಿ ಜಿಲ್ಲೆಯ ಕಾತ್ಯಾಯಿನಿ ಕುಂಜಿಬೆಟ್ಟು, ವಚನ ಸಂಗೀತಕ್ಕೆ ಬೆಂಗಳೂರಿನ ರಂಜನಿ ವಾಸುಕಿ ಹಾಗೂ ರಾಯಚೂರಿನ ವಡವಾಟಿ ಶಾರದಾ ಭರತ್ ಆಯ್ಕೆಯಾಗಿದ್ದಾರೆ. ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆಗೆ ಓಂಶಿವಪ್ರಕಾಶ್ ಎಚ್.ಎಲ್., 'ರಮಣಶ್ರೀ ಪ್ರೋತ್ಸಾಹ ಪುರಸ್ಕಾರ'ಕ್ಕೆ ಬೆಂಗಳೂರಿನ ಸಂಗಮೇಶ್ ಉಪಾಸೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 20 ಸಾವಿರ ರೂ ನಗದು ಒಳಗೊಂಡಿದೆ.
ನವೆಂಬರ್ 18 ರಂದು ಬೆಂಗಳೂರಿನ ರಮಣಶ್ರೀ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್.ಷಡಕ್ಷರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜಮುಖಿ ಪ್ರಕಾಶನದ ತೇಜಸ್ವಿ ಸಾಹಿತ್ಯ ಕುರಿತ ವಿಮರ್ಶಾ ಸಂಕ...
ಮಂಡ್ಯ: ಭಾರತ ಬಹು ಭಾಷಾ, ಬಹು ಸಂಸ್ಕ್ರತಿ, ಬಹು ಪದ್ಧತಿಗಳ ದೇಶ. ಇದನ್ನು ಉಳಿಸಿಕೊಂಡು ಹೋಗಬೇಕು. ಒಂದೊಂದು ಜನಾಂಗ...
ಮಂಡ್ಯ: ಹುಟ್ಟಿದ ಮನುಷ್ಯರೆಲ್ಲಾ ಇತಿಹಾಸವನ್ನು ಸೃಷ್ಟಿಸುವುದಿಲ್ಲಾ ಆದರೆ ಇತಿಹಾಸದಲ್ಲಿ ಲೀನವಾಗಿ ಹೋಗುತ್ತಾರೆ ಆದರೆ ಕೆ...
©2024 Book Brahma Private Limited.