ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಯ ಅಭಾವ ಇದೆ: ಎಲ್‌.ಎನ್. ಮುಕುಂದರಾಜ್‌

Date: 21-12-2024

Location: ಮಂಡ್ಯ


ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜಮುಖಿ ಪ್ರಕಾಶನದ ತೇಜಸ್ವಿ ಸಾಹಿತ್ಯ ಕುರಿತ ವಿಮರ್ಶಾ ಸಂಕಲನ ವಿಸ್ಮಯ ವಿಮರ್ಶೆ ಕೃತಿ ಹಾಗೂ ಲೋಹಿಯಾ ಪ್ರಕಾಶನದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ: ಏಕೆ ಬೇಕು? ಹೇಗೆ ಸಾಧ್ಯ? ಪುಸ್ತಕಗಳನ್ನು ಜನಾರ್ಪಣೆ ಮಾಡಲಾಯಿತು. 

ಪುಸ್ತಕಗಳನ್ನು ಬಿಡುಗಡೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ವಿಮರ್ಶೆಯ ಅಭಾವವನ್ನು ಎದುರಿಸಿತ್ತಿರುವ ಕನ್ನಡ ಸಾಹಿತ್ಯ ಸಂದರ್ಭದಲ್ಲಿ, ಅದರಲ್ಲೂ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಕುರಿತು ಹೊರ ಬಂದಿರುವ 'ವಿಸ್ಮಯ ವಿಮರ್ಶೆ' ಕೃತಿಗೆ ವಿಶೇಷ ಮಹತ್ವ ಇದೆ ಎಂದು ತಿಳಿಸಿದರು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಅವರು ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಅನುಷ್ಠಾನ ಎದುರಿಸುತ್ತಿರುವ ಸವಾಲುಗಳನ್ನು ಪ್ರಸ್ತಾಪಿಸಿದರು. ನಾಟಕಕಾರ  ನಾಡುನುಡಿ ಚಿಂತಕ ಜಯರಾಮ್ ರಾಯಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎರಡು ಕೃತಿಗಳ ಪ್ರಸ್ತುತತೆ ಬಗ್ಗೆ ವಿವರಿಸಿದರು. ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಉಪಸ್ಥಿತರಿದ್ದರು

MORE NEWS

ಬಹುತ್ವದ ಸಂಸ್ಕೃತಿ ಮುಂದುವರೆಯಲಿ - ಗೊ.ರು.ಚ

21-12-2024 ಮಂಡ್ಯ

ಮಂಡ್ಯ: ಭಾರತ ಬಹು ಭಾಷಾ, ಬಹು ಸಂಸ್ಕ್ರತಿ, ಬಹು ಪದ್ಧತಿಗಳ ದೇಶ. ಇದನ್ನು ಉಳಿಸಿಕೊಂಡು ಹೋಗಬೇಕು. ಒಂದೊಂದು ಜನಾಂಗ...

ಹುಟ್ಟಿದ ಮನುಷ್ಯರೆಲ್ಲಾ ಇತಿಹಾಸವನ್ನು ಸೃಷ್ಟಿಸುವುದಿಲ್ಲಾ ಆದರೆ ಇತಿಹಾಸದಲ್ಲಿ ಲೀನವಾಗುತ್ತಾರೆ

21-12-2024 ಬೆಂಗಳೂರು

ಮಂಡ್ಯ: ಹುಟ್ಟಿದ ಮನುಷ್ಯರೆಲ್ಲಾ ಇತಿಹಾಸವನ್ನು ಸೃಷ್ಟಿಸುವುದಿಲ್ಲಾ ಆದರೆ ಇತಿಹಾಸದಲ್ಲಿ ಲೀನವಾಗಿ ಹೋಗುತ್ತಾರೆ ಆದರೆ ಕೆ...

ಕಲೆ, ಸಂಸ್ಕೃತಿಯಿಂದ ನಾಡು ಭಾಷೆ ಬೆಳೆಯುತ್ತದೆ ಉಳಿಯುತ್ತದೆ : ಪ್ರೊ.  ಕೃಷ್ಣೇಗೌಡ 

21-12-2024 ಬೆಂಗಳೂರು

ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವು...