Date: 21-12-2024
Location: ಬೆಂಗಳೂರು
ಮಂಡ್ಯ: ಹುಟ್ಟಿದ ಮನುಷ್ಯರೆಲ್ಲಾ ಇತಿಹಾಸವನ್ನು ಸೃಷ್ಟಿಸುವುದಿಲ್ಲಾ ಆದರೆ ಇತಿಹಾಸದಲ್ಲಿ ಲೀನವಾಗಿ ಹೋಗುತ್ತಾರೆ ಆದರೆ ಕೆಲವರು ಮಾತ್ರ ಇತಿಹಾಸವನ್ನು ಸೃಷ್ಟಿಸುತ್ತಾರೆ ಅಂತವರಲ್ಲಿ ಕು. ಶಿ. ಹರಿದಾಸಭಟ್ಟರು ಒಬ್ಬರು. ಇವರ ಪೂರ್ಣ ಹೆಸರು ಕುಂಜಿಬೆಟ್ಟು ಶಿವ ಹರಿದಾಸಭಟ್ಟ. ಇವರು ಮಾತಿಗಿಂತ ಜಾಸ್ತಿ ಕೆಲಸ ಮಾಡಿ ತೋರಿಸುತ್ತಿದ್ದರು. ಕು. ಶಿ ಎಂದರೆ ತನ್ನೊಂದಿಗೆ ಇದ್ದವರಿಗು ಹುಚ್ಚು ಹಿಡಿಸಿ ದುಡಿಸಿ ಕೊಳ್ಳುವ ಕೆಚ್ಚಿನವರು. ಇಂತಹ ಬಹುಮುಖ ಸಾಧಕರು ವಿರಳ. ವಿವಿಧ ಪ್ರಕಾರಗಳಲ್ಲಿ 35 ಕೃತಿ ರಚನೆ ಮಾಡಿದ್ದಾರೆ ಎಂದು ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಅವರು ೮೭ನೇ ಸಾಹಿತ್ಯ ಸಮ್ಮೇಳನದಲ್ಲಿ ಕು. ಶಿ ಹರಿದಾಸಭಟ್ಟರ ವ್ಯಕ್ತಿ ಪರಿಚಯ ಮಾಡಿಕೊಟ್ಟರು.
ಬಡಕುಟುಂಬದಲ್ಲಿ ಹುಟ್ಟಿ ಮೆಟ್ರಿಕ್ಯುಲೇಟ್ ಓದಿದವರು ನಿರಂಜನ. ಅವರು ಕನ್ನಡದ ಅಂಕಣ ಬರಹದ ಮೊದಲ ಲೇಖಕರಾಗಿದ್ದರು. ಇವರು ಒಟ್ಟು 25 ಕಾದಂಬರಿಗಳನ್ನು ಬರೆದಿದ್ದಾರೆ, ಗಾಂಧಿಯ ನಂತರ ಸಮ್ಮೇಳನ ಪಾದಯಾತ್ರೆ ಬಂಡಾಯ ಇವುಗಳ ಬಗ್ಗೆ ಸ್ಪಷ್ಟವಾಗಿ ಹೇಳಿದವರು ಮತ್ತು ಜನಪರವಾಗಿ ಹೇಳಿದವರು ನಿರಂಜನರು. ನಿರಂಜನರ ಬರಹ ಬ್ರಿಟಿಷರಿಗು ಜಡವಾಗಿತ್ತು ಸ್ವಾತಂತ್ಯ್ರ ಸಿಕ್ಕಮೇಲೆ ಇಲ್ಲಿಯ ಅಧಿಕಾರಿ ಶಾಹಿಗಳಿಗು ಜಡವಾಗಿತ್ತು. ಬರೆದ ಹಾಗೇ ಬದುಕುವುದು ನಿರಂಜನರ ಶೈಲಿ. ಜೀವನದುದ್ದಕ್ಕೂ ಹೋರಾಟದ ಕಥೆಗಳನ್ನು ಬರೆದವರು ನಿರಂಜನರು ಎಂದು ಮಲ್ಲಿಕಾರ್ಜುನ ಹೆಗ್ಗಳಿಗೆ ಅವರು ನಿರಂಜನ ಅವರ ಕುರಿತು ನುಡಿದರು.
೧೯೨೪ ಏಪ್ರಲ್ ೦೨ ರಂದು ಶಾಂತರಸರು ಹೆಂಬರಾಳದಲ್ಲಿ ಜನಿಸಿದರು. ಮಾನಸಗಳ್ಳಿ, ಬಯಲು ಸೀಮೆಯ ಬಿಸಿಲು, ಸುಪ್ರಭಾತ, ಗಜಲುಗಳು ಸೇರಿ 6 ಕವನಸಂಕಲನ, 4 ಕಥಾಸಂಕಲನ ಹೀಗೆ ಹಲವು ಕಾದಂಬರಿಗಳನ್ನು ರಚಿಸಿದ್ದಾರೆ. ಇವರ ಕಾದಂಬರಿಗಳು ಉರ್ದು ಮತ್ತು ಹಿಂದಿ ಭಾಷೆಗೆ ಅನುವಾದವಾಗಿದೆ. ೨೦೦೮ ರಲ್ಲಿ ಇಹಲೋಕ ತ್ಯಜಿಸಿದ ಕಲ್ಯಾಣ ಕರ್ನಾಟಕ ಮಹಾನ್ ವ್ಯಕ್ತಿ ಶಾಂತರಸರು ಎಂದು ಡಾ. ಅಕ್ಬರ್ ಕಾಲಿಮಿರ್ಚಿ ಅವರು ಶಾಂತರಸರ ಕುರಿತು ಹೇಳಿದರು.
ಜಿ. ಎಸ್ ಅಮೂರ್ ಅವರು ೧೯೨೫ ಮೇ ೮ ರಂದು ಜನಿಸಿದರು. ಇವರ ಪೂರ್ಣ ಹೆಸರು ಗುರುರಾಜ್ ಶಾಮಾಚಾರ್ ಆಮೂರ್ ಯಾರು ಸಾಹಿತ್ಯವನ್ನು ಸರಿಯಾಗಿ ಓದುತ್ತಾರೋ, ತಿಳಿದುಕೊಳ್ಳುತ್ತಾರೋ, ಅಂತವರೇ ಸಾಹಿತ್ಯದ ನಿಜವಾದ ಓದುಗರು ಅವರಿಂದಲೇ ಸಾಹಿತ್ಯ ಉಳಿಯುತ್ತದೆ ಎನ್ನುತ್ತಾ ಶ್ಯಾಮಸುಂದರ ಬಿದರಕುಂದಿ ಅವರು ಮಾತುಗಳನ್ನಾಡಿದರು.
ಸ್ವಾಗತವನ್ನು ಸಿ. ಅಪೂರ್ವಚಂದ್ರ ಮತ್ತು ವಂದನಾರ್ಪಣೆಯನ್ನು ಸುನೀಲ್‌ಕುಮಾರ್. ಕೆ. ಎಸ್ ಮಾಡಿದರು. ನಿರ್ವಹಣೆ ಮುತ್ತುರಾಜ್ ಹಾಗೂ ನಿರೂಪಣೆ ಕೋಗಲೂರು ತಿಪ್ಪೇಸ್ವಾಮಿ ನೆರೆವೇರಿಸಿ ಕೊಟ್ಟರು.
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜಮುಖಿ ಪ್ರಕಾಶನದ ತೇಜಸ್ವಿ ಸಾಹಿತ್ಯ ಕುರಿತ ವಿಮರ್ಶಾ ಸಂಕ...
ಮಂಡ್ಯ: ಭಾರತ ಬಹು ಭಾಷಾ, ಬಹು ಸಂಸ್ಕ್ರತಿ, ಬಹು ಪದ್ಧತಿಗಳ ದೇಶ. ಇದನ್ನು ಉಳಿಸಿಕೊಂಡು ಹೋಗಬೇಕು. ಒಂದೊಂದು ಜನಾಂಗ...
ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವು...
©2024 Book Brahma Private Limited.