Date: 14-12-2024
Location: ಬೆಂಗಳೂರು
"ನೆನಪಿನ ಪುಟಗಳು" ಕೃತಿಯ ಬಗ್ಗೆ ಟಿ.ಎನ್. ಸಿತಾರಾಮ್ ಜೊತೆ ಜೊಗಿ (ಗಿರೀಶ್ ರಾವ್ ಹತ್ವಾರ್) ಸಂವಾದ ನಡೆಸಿದರು. ಸಂವಾದದಲ್ಲಿ ಟಿಎನ್ಎಸ್ ಅವರ ಬಾಲ್ಯ, ಸಿನಿಮಾ, ನಟನೆ, ಧಾರಾವಾಹಿ ನಿರ್ದೇಶನ, ಪುಟ್ಟಣ್ಣ ಕಣಗಾಲ್, ಲಂಕೇಶ್ ಜೊತೆಗಿನ ಒಡನಾಟಗಳ ಬಗ್ಗೆ ಜೋಗಿ ಪ್ರಶ್ನಿಸಿದರು.
ಜೊಗಿ:- ನೆನಪಿನ ಪುಟಗಳು ಬರೆಯಬೇಕು ಅನ್ನೀಸಿದ್ದು ಯಾಕೆ?
ಟಿಎನ್ಎಸ್:- ಸ್ನೇಹಿತರು ಸಿಕ್ಕಾಗ ಕೆಲವು ಘಟನೆಗಳನ್ನು ನೆನಪಿಸುತ್ತಿದ್ದರು. ಆಗ ಹೇಳಿದ ಮಾತುಗಳನ್ನು ಬರೆಯುವಂತೆ ಅವರೇ ಒತ್ತಾಯಿಸಿದರು. ಇದರ ಫಲವಾಗಿ ನೆನಪಿನ ಪುಟಗಳು ರೂಪಗೊಂಡಿತು.
ಜೊಗಿ:- ಕೃತಿಯ ಆರಂಭದಲ್ಲಿ ಇದರಲ್ಲಿ ಹೇಳಿರುವುದೆಲ್ಲಾ ಸತ್ಯ, ಎಲ್ಲಾ ಸತ್ಯಗಳನ್ನು ಹೇಳಿಲ್ಲ ಅಂತ ಬರೆದಿದ್ದೀರಿ..?
ಟಿಎನ್ಎಸ್:- ಹೌದು, ಬದುಕಿನ ಎಲ್ಲಾ ಸತ್ಯಗಳನ್ನು ಹೇಳುವುದು ಕಷ್ಟ. ಹಾಗಾಗಿ ಹೇಳ ಬಹುದಾದ ವಿಷಯಗಳನ್ನು ಬರೆದಿದ್ದೇನೆ.
ಜೋಗಿ:- ಹೇಳಬೇಕೆಂದು ಬರೆದು ಹರಿದ ಪುಟಗಳಿವೆಯೇ..?
ಟಿಎನ್ಎಸ್:- ಹೌದು, ಇದೇ 400 ಪುಟ ಮೀರಿದೆ. ಹಾಗಾಗಿ ಆ ಪುಟಗಳನ್ನು ಮುಂದಿನ ಉಳಿದ ನೆನಪಿನ ಪುಟಗಳಲ್ಲಿ ಸೇರಿಸಬೇಕು ಎಂದುಕೊಂದಿದ್ದೇನೆ. ನಿಮ್ಮಂತ ಸ್ನೇಹಿತರ ಒತ್ತಡ ಪುಸ್ತಕ ಬರೆಸುತ್ತಿದೆ.
ಜೋಗಿ:- ನೆನಪಿಗೆ ಅರಿಷಡ್ವರ್ಗಗಳ ಇರೊದಿಲ್ವ?
ಟಿಎನ್ಎಸ್:- ಇರುತ್ತದೆ. ಅವುಗಳು ನೆನಪಿನಲ್ಲೂ ಬರುತ್ತೆ.
ಜೋಗಿ:- ನೆನಪುಗಳನ್ನು ನೆನೆದಾಗ ರಕ್ತ ಕುದಿಯೋದಿಲ್ವಾ?
ಟಿಎನ್ಎಸ್:- ಹಳೆಯ ವಿಚಾರಗಳು ನೆನೆದಾಗ ಆ ಸಂದರ್ಭದ ಮೋಸಕ್ಕೆ, ವಂಚನೆಗೆ ಒಳಗಾದ ವಿಚಾರಗಳು ಕೊಪ ತರಿಸುತ್ತವೆ. ಆದರೆ, ಅಲ್ಲೇ ತಣ್ಣಗಾಗುತ್ತದೆ.
ಜೋಗಿ:- ಸಮಾಜದಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದೀರಿ, ಅದೇಕೆ?
ಟಿಎನ್ಎಸ್:- ರಾಜಕಾರಣಿ ರಂಗ ಭೂಮಿ ಕಲಾವಿದ, ಲಾಯರ್ ಹೀಗೆ ನಾನು ಹಲವು ಅನುಭವ ಪಡೆದೆ. ಅದಕ್ಕೆ ಪ್ರಮುಖ ಕಾರಣ ಎಲ್ಲದರಲ್ಲೂ ಸೋಲು ಸಿಕ್ಕಿದ್ದು. ಸೋತಾಗ ಹೊಸದರ ಹುಡುಕಾಟ ಇರುತ್ತೆ. ಫೇಲ್ ಆದಾಗ ಹೊಸದರ ಅನ್ವೇಷಣೆ ಮಾಡುತ್ತಾ ಇಷ್ಟು ಪಾತ್ರ ನಿರ್ವಹಣೆ ಮಾಡಬೇಕಾಯಿತು.
ಜೋಗಿ:- ನೆನಪುಗಳನ್ನು ಬರೆಯುವಾಗ ನಮ್ಮ ಬಗ್ಗೆ ನಾವು ಬರೆಯುವುದಕ್ಕಿಂತ ಬೇರೆಯವರ ಬಗ್ಗೆ ಹೆಚ್ಚು ಹೇಳಿರುತ್ತೇವೆ. ನಿಮ್ಮ ಈ ಪುಸ್ತಕದಲ್ಲಿ ಹಲವು ಪಾತ್ರಗಳು ಬರುತ್ತವೆ. ಕಾಡಿದ್ದು ಯಾವ ಪಾತ್ರ?
ಟಿಎನ್ಎಸ್:- ಎಲ್ಲರೂ ಕಾಡಿದ್ದರಿಂದಲೇ ಬರವಣಿಗೆಯಲ್ಲಿ ಬಂದರು. ಆದರೆ ಅಕ್ಕ ನನ್ನನ್ನು ಯಾವಾಗಲೂ ಕಾಡುತ್ತಳೆ. ಅವಳ ಸಾವು, ಅದರ ಸಿಗದ ಉತ್ತರ, ಪಿಯುಸಿಯಲ್ಲಿ ಅವಳನ್ನು ಕಳೆದುಕೊಂಡ ನೆನಪು ಕಾಡುತ್ತದೆ. ಎರಡನೇ ತಾಯಿ ಆಗಿದ್ದಳು.
ಜೋಗಿ:- ನಿಮ್ಮನ್ನು ಕಾಡುವ ಅಕ್ಕ ನಿಮ್ಮ ಪಾತ್ರಗಳಾಗಿದೆಯಾ?
ಟಿಎನ್ಎಸ್:- ಖಂಡಿತಾ, ನನ್ನ ಧಾರಾವಾಹಿಯಲ್ಲಿ ಬರುವ ಎಲ್ಲಾ ಸ್ತ್ರೀ ಪಾತ್ರಗಳು ನನ್ನ ಅಕ್ಕ ತಂಗಿಯರು.
ಜೋಗಿ:- ಲಂಕೇಶ್ ಮತ್ತು ಪುಟ್ಟಣ್ಣ ಅವರ ಜೊತೆಗಿನ ಒಡನಾಟ ನೆನಪುಮಾಡಿಕೊಳ್ಳುವುದಾದರೆ..
ಟಿಎನ್ಎಸ್:- ಘಾಡವಾದ ಒಡನಾಟ ಇದ್ದದ್ದು ಲಂಕೇಶ್ ಜೊತೆ. ಲಾ ಓದಿ ಕೆಲವರ್ಷಗಳ ನಂತರ ಪುಟ್ಟಣ್ಣ ಸಿಕ್ಕಿದ್ದು. ಹಾಗಾಗಿ ಲಂಕೇಶ್ ಒಡನಾಟ ಹೆಚ್ಚಿತ್ತು. ಯೋಚನೆಯ ಬಗೆ ಲಂಕೇಶರದು, ಚಿತ್ರ ಕಲ್ಪನೆ ಪುಟ್ಟಣ್ಣ ಅವರದ್ದು.
ಬೆಂಗಳೂರು : ಪ್ರಭು ಎಂದರೆ ದೇವರಲ್ಲ ಲಾರ್ಡ್ ಶಿಪ್. ಅದು ದೇವರನ್ನ ಲಾರ್ಡ್ ಎಂದು ಕರೆದಿಲ್ಲ. ಪುರುಷ ಪ್ರಧಾನ ವ್ಯವಸ್ಥೆಯ...
ಬೆಂಗಳೂರು ಸಾಹಿತ್ಯ ಉತ್ಸವದ 13ನೇ ಆವೃತ್ತಿಯನ್ನು ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಡಿ. ...
ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರ...
©2024 Book Brahma Private Limited.