Date: 14-12-2024
Location: ಬೆಂಗಳೂರು
ಬೆಂಗಳೂರು : ಪ್ರಭು ಎಂದರೆ ದೇವರಲ್ಲ ಲಾರ್ಡ್ ಶಿಪ್. ಅದು ದೇವರನ್ನ ಲಾರ್ಡ್ ಎಂದು ಕರೆದಿಲ್ಲ. ಪುರುಷ ಪ್ರಧಾನ ವ್ಯವಸ್ಥೆಯನ್ನೇ ಮುಖ ಮಾಡಿ ದೇವರನ್ನ ಕೇಳಿದ್ದೆ ಎಂದು ಬಾನು ಮುಷ್ತಾಕ್ ಹೇಳಿದರು.
ನನ್ನ ಹೆಸರಿನಲ್ಲಿ ಫತ್ವಾ ಹೊರಡಿಸಿದ್ದರು. ಹೆಣ್ಣಿನ್ನು ಮುಖ್ಯವಾಗಿಸಿ ಫತ್ವಾ ಹೊರಡಿಸಿದ್ದೆ ದೊಡ್ಡ ವಿಷಯ. ಫತ್ವಾದಲ್ಲಿ ಬಾನು ಮುಷ್ತಾಕ್ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು, ಅವರು ಯಾವುದೇ ಸಮಾರಂಭಕ್ಕೆ ಬರಬಾದು, ಸತ್ತರೂ ಅವರ ಶವ ಎತ್ತಲು ಹೋಗಬಾರದು ಎಂದಿತ್ತು. ಶವ ಎತ್ತದಿದ್ದರೆ ಅದು ಜಿಲ್ಲಾ ಆಡಳಿತ ನೋಡಿಕೊಳ್ಳುತ್ತೆ. ಕೊಳೆತು ವಾಸನೆ ಬಾರದಂತೆ ನೋಡಿಕೊಳ್ಳುವುದು ಅವರ ಕೆಲಸ ಅಂತ ಸುಮ್ಮನಾದೆ. ಸಾಹಿತ್ಯ ಕ್ಷೇತ್ರದ ಕೆಲವರ ಸಹಾಯದಿಂದ ಎರಡು ತಿಂಗಳ ಅದನ್ನು ತೆಗೆದುಹಾಕಲಾಯಿತು.
ಆ ಸಮಯ ನಾನು ತುಂಬಾ ಕುಗ್ಗಿಹೋಗಿದ್ದೆ. ಎರಡು ವರ್ಷ ನಾನೇನು ಬರೆಯಲಿಲ್ಲ. ನಾನು ಬಹಳಾ ಅತ್ತಿದ್ದೇನೆ. ನನಗೆ ಎರಡು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ. ನಮ್ಮ ಹೆಣ್ಣು ಮಕ್ಕಳನ್ನ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆಯೂ ಬಂದಿತ್ತು. ಒಮ್ಮೆ ಮಗಳು ಹೊರಗೆ ಹೋಗುತ್ತಿದ್ದಾಗ ಹುಚ್ಚಿ ಮಗಳು ಹೋಗುತ್ತಿದ್ದಾಳೆ ಎಂದು ಕರೆದಿದ್ದರು. ಅದಕ್ಕೆ ಅವಳು ಬೋಲ್ಡ್ ಆಗಿ ಉತ್ತರಿಸಿದ್ದರು ಎಂದು ಬಾನು ನೆನಪು ಮಾಡಿಕೊಂಡರು.
ಮನುಷ್ಯನ ಭಾವನೆಗಳನ್ನ ವಸ್ತುವಿನ ಮೂಲಕ, ಸಮಾಜದ ಭಾವನೆಗಳನ್ನು ಮನುಷ್ಯನ ಮೂಲಕ ಬರವಣಿಗೆಯಲ್ಲಿ ತರಲು ಪ್ರಯತ್ನಿಸುತ್ತೇನೆ ಎಂದು ಬಾನು ಮುಷ್ತಾಕ್ 13ನೇ ಆವೃತ್ತಿಯ ಬೆಂಗಳೂರು ಸಾಹಿತ್ಯ ಉತ್ಸವದ ನ್ಯೂ ಬುಕ್ ಅಲರ್ಟ್ ವೇದಿಕೆಯಲ್ಲಿ ನಡೆದ 'ಹಸೀನಾ ಮತ್ತು ಇತರ ಕಥೆಗಳು' ಎಂಬ ವಿಷಯ ಸಂಬಂಧ ದೀಪಾ ಬಸ್ತಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಅರೆಬಿಕ್, ಉರ್ದು, ಕನ್ನಡ, ಹಿಂದಿ, ಇಂಗ್ಲಿಷ್ ಹೇಗೆ ಕಥೆಗೆ ಅಳವಡಿಸಿಕೊಳ್ಳುತ್ತೀರಿ ಎಂಬ ದೀಪಾ ಬಸ್ತಿ ಅವರ ಪ್ರಶ್ನೆಗೆ ಉರ್ದು ಮಾತೃ ಭಾಷೆ, ಅರೆಬಿಕ್ ಹಿರಿಯ ಒತ್ತಾಯಕ್ಕೆ ಬಾಲ್ಯದಲ್ಲಿ ಕಲಿತದ್ದು, ಕನ್ನಡ ಶಾಲೆಯಲ್ಲಿ ಪ್ರಥಮ ಭಾಷೆ, ಹಿಂದಿ, ಇಂಗ್ಲಿಷ್ ಶಿಕ್ಷಣದಿಂದ ಬಂದಿದ್ದು. ಏಕ ಕಾಲದಲ್ಲಿ ಅಷ್ಟು ಭಾಷೆಗಳಲ್ಲಿ ವ್ಯವಹರಿಸ ಬಲ್ಲೆ ಇದು ಬರೆಯುವಾಗ ಸಾಂದರ್ಭಿಕವಾಗಿ ಬರುತ್ತದೆ. ಕೆಲವೊಮ್ಮೆ ಕೆಲವು ಪದಗಳನ್ನು ನಾನೇ ಬಳಸಿದ್ದೂ ಇದೆ.
ನನ್ನ ಕೃತಿಗಳನ್ನು ಅನುವಾದ ಹೇಗಿತ್ತು ಎಂದು ಬಾನು ಅವರು ದೀಪಾಗೆ ಕೇಳಿದಾಗ, ನಿಮ್ಮ ಭಾಷಾ ಬಳಕೆ ಅನುವಾದಕ್ಕೆ ಕಷ್ಟ ಆಯ್ತು. ಸಂಬಂಧಗಳನ್ನು ಬಳಸುವುದು ಸ್ವಲ್ಪ ಕಠಿಣ. ಚಿಕ್ಕಪ್ಪ, ಅತ್ತೆ, ಮಾವ ಇವುಗಳನ್ನ ಅನುವಾದಿಸುವಾಗ ತೊಡಕಾಯಿತು ಎಂದರು.
"ನೆನಪಿನ ಪುಟಗಳು" ಕೃತಿಯ ಬಗ್ಗೆ ಟಿ.ಎನ್. ಸಿತಾರಾಮ್ ಜೊತೆ ಜೊಗಿ (ಗಿರೀಶ್ ರಾವ್ ಹತ್ವಾರ್) ಸಂವಾದ ನಡೆಸಿದರ...
ಬೆಂಗಳೂರು ಸಾಹಿತ್ಯ ಉತ್ಸವದ 13ನೇ ಆವೃತ್ತಿಯನ್ನು ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಡಿ. ...
ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರ...
©2024 Book Brahma Private Limited.