Date: 21-12-2024
Location: ಬೆಂಗಳೂರು
ಮಂಡ್ಯ: ಡಿ. 21 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞಿ ತ್ರಿವೇಣಿ ವೇದಿಕೆ - 02” ರಲ್ಲಿ ‘ಕರ್ನಾಟಕ ಚಿತ್ರಣ ಬದಲಿಸಿದ ಚಳುವಳಿಗಳು’ ಗೋಷ್ಠಿ ನಡೆದಿದ್ದು, ಗೋಷ್ಠಿಯ ಅಧ್ಯಕ್ಷತೆಯನ್ನು ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಾಸಕರಾದ ದರ್ಶನ್ ಪುಟ್ಟಣ್ನಯ್ಯ ಅವರು ವಹಿಸಿದ್ದರು.
ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ. ರಾ. ಗೋವಿಂದು ಮಾತನಾಡಿ, "ಸುಮಾರು 125 ಆದೇಶಗಳನ್ನು ಸರ್ಕಾರ ಹೊರಡಿಸಿದರು ಕೂಡ ಇಲ್ಲಿಯವರೆಗೆ ಆಡಳಿತ ಭಾಷೆಯಾಗಿ ಕನ್ನಡವನ್ನು ತರೋದಕ್ಕೆ ಪ್ರಯತ್ನ ಮಾಡಲಿಲ್ಲಾ, ಇದಕ್ಕೆ ಕಾರಣ ಅವತ್ತಿಂದ ನಮ್ಮನ್ನು ಇಲ್ಲಿಯ ತನಕ ಯಾರು ಆಡಳಿತ ಮಾಡಿದ್ದಾರೋ ಅವರೇ ನೇರವಾಗಿ ಆಗಿರುತ್ತಾರೆ ಇದು ದುರಂತವೇ ಸರಿ, ಕೇವಲ ಸಾಹಿತ್ಯ ಸಮ್ಮೆಳನಗಳನ್ನು ಹಾಗೂ ಇನ್ನಿತರ ಕಾರ್ಯಕ್ರಮ ನೆಡೆಸುವುದು ಮಾತ್ರವಲ್ಲ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಎಂದು ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಬೇಕು ಎಂದು ಮುಖ್ಯಮಂತ್ರಿಯವರಿಗೆ," ಮನವಿ ಮಾಡಿದರು.
‘ಗೋಕಾಕ್ ಚಳವಳಿಯ ನಂತರದಲ್ಲಿನ ಕರ್ನಾಟಕ ಚಿತ್ರಣ’ ವಿಷಯದ ಕುರಿತು, ‘ಗೋಕಾಕ್ ಚಳವಳಿಯ ಮೊದಲು ಕರ್ನಾಟಕ ಚಿತ್ರಣ ಏನಿತ್ತೋ ಇವತ್ತಿಗೂ ಅದೇ ಚಿತ್ರಣವಿದೆ. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ರಾಜ್ಯದ ಉದ್ದಗಲಕ್ಕು ಚಳುವಳಿಯ ಕಾವು ವ್ಯಾಪಕವಾಗಿತ್ತು. ಇಂದಿನ ಕರ್ನಾಟಕದ ಚಿತ್ರಣ ಏನಾಗಿದೆ, ಎಂದರೆ ಎಲ್ಲಾ ಕಡೆಗಳಲ್ಲೂ ಕಾನ್ವೆಂಟ್ ಶಾಲೆಗಳೇ ತಲೆಯೆತ್ತುತ್ತಿವೆ. ಜನಗಳು ಸಹ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಓದಿದರೆ ಮಾತ್ರ ತಮ್ಮ ಮಕ್ಕಳು ಬುದ್ದಿವಂತರಾಗುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ, ಇವುಗಳನ್ನು ಶಿಕ್ಷಣ ಸಂಸ್ಥೆಗಳು ಎನ್ನೂದಕ್ಕಿಂತ ಶಿಕ್ಷಣದ ಅಂಗಡಿಗಳು ಎಂದು ಕರೆಯುವುದೇ ಸೂಕ್ತ," ಎಂದರು.
"ಪ್ರತಿ ಊರಿನಲ್ಲೂ ಊರ ಮಧ್ಯೆ ಸತ್ಯಾಗ್ರಹ ಶಿಬಿರವೆಂದು ಶಾಮಿಯಾನ ಹಾಕಿ, ನಿತ್ಯ ವಿವಿಧ ಕ್ಷೇತ್ರದ ಜನರು ಭಾಗವಹಿಸುತ್ತಿದ್ದರು. ಇಂಜಿನಿಯರ್‌ಗಳು, ಡಾಕ್ಟರ್‌ಗಳು, ವ್ಯಾಪಾರಿಗಳು, ಖಾಸಗಿ ಶಾಲಾ ಶಿಕ್ಷಕರು, ಮಹಿಳಾ ಸಮಾಜದವರು ಇಷ್ಟೆ ಅಲ್ಲದೇ, ತರಕಾರಿ ವ್ಯಾಪಾರಿಗಳು, ಆಟೋ ಚಾಲಕರು, ಇನ್ನೂ ಅನೇಕ ವರ್ಗದ ಜನ ಭಾಗವಹಿಸುತ್ತಿದ್ದರು. ಈ ಸತ್ಯಾಗ್ರಹ ಶಿಬಿರದಲ್ಲಿ ಪತ್ರಕರ್ತರು, ಕಲಾವಿದರು, ವೃತ್ತಿರಂಗಭೂಮಿ ಕಲಾವಿದರು ಸಹ ಭಾಗವಹಿಸಿದ್ದರು. ರಾಜ್ಯ, ರಾಷ್ಟ್ರ, ಜಿಲ್ಲಾ ಮಟ್ಟದ ಪತ್ರಿಕೆಗಳನ್ನು ಉಚಿತವಾಗಿ ಹಾಕುತ್ತಿದ್ದರು. ಒಂದು ದಿನ ಹೊಟೆಲ್ ಮಾಲೀಕರು ಸತ್ಯಾಗ್ರಹಿಗಳಾದರೆ, ಮರು ದಿನ ಹೊಟೇಲ್ ಕೆಲಸಗಾರರು ಸಹ ಸತ್ಯಾಗ್ರಹಿಗಳಾಗುತ್ತಿದ್ದರು. ಸತ್ಯಾಗ್ರಹದ ದಿನಗಳು ಮತ್ತು ಸತ್ಯಾಗ್ರಹಿಗಳ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗಿದ್ದಕ್ಕಾಗಿ ಶಾಮಿಯಾನಕ್ಕೆ ದಿನನಿತ್ಯ ಬಾಡಿಗೆ ಕೊಡಬೇಕಾಗುತ್ತದೆಂದು ಅಲ್ಲಿಯ ತನಕದ ಬಾಡಿಗೆ ಕೊಟ್ಟು, ಶಾಮಿಯಾನ ತೆಗೆಸಿ ದಾನಿಗಳಿಂದ ಜಿಂಗ್‌ಶೀಟ್‌ಗಳನ್ನು ಪಡೆದು, ಬೃಹತ್ ಶೆಡ್ ನಿರ್ಮಾಣ ಮಾಡಿದೆವು. ನಿತ್ಯ ಹೋರಾಟಗಾರರು, ಸತ್ಯಾಗ್ರಹಿಗಳು ಸಿಗಬೇಕಲ್ಲ. ಹೋರಾಟ ಮೆಲ್ಲಗೆ, ತನ್ನ ಕಾವು ಕಳೆದುಕೊಳ್ಳುವ ಲಕ್ಷಣಗಳು ಕಾಣಲಾರಂಬಿಸಿದವು," ಎಂದು ಬಂಕಾಪುರ ಚನ್ನಬಸಪ್ಪ ಅವರು ತಮ್ಮ ಅನುಭವ ನುಡಿಗಳನ್ನಾಡಿದರು.
‘ರೈತ ಚಳವಳಿಗಳ ಕುರಿತು ಜಿ. ಎಸ್. ರಾಜೇಂದ್ರ ಅಸುರನಾಡು ಮತ್ತು ಜನಪರ ಚಳವಳಿಗಳು’ ಮುಂದೇನು ವಿಷಯದ ಕುರಿತು ಇಂದಿರಾ ಕೃಷ್ಣಪ್ಪ ಮಾತನಾಡಿದರು. ಅತಿಥಿಗಳ ಸ್ವಾಗತವನ್ನು ಶಿವಾನಂದ ಗಂಗಪ್ಪ ಶೆಲ್ಲಿಕೇರಿ ಮತ್ತು ವಂದನಾರ್ಪಣೆಯನ್ನು ಹೊಳಲು ಶ್ರೀಧರ ಮಾಡಿದರು. ನಿರ್ವಹಣೆ ಮೋಹನ್ ಪಿ ಹಾಗೂ ನಿರೂಪಣೆ ಸುಮತಿ ನೆರೆವೇರಿಸಿ ಕೊಟ್ಟರು.
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜಮುಖಿ ಪ್ರಕಾಶನದ ತೇಜಸ್ವಿ ಸಾಹಿತ್ಯ ಕುರಿತ ವಿಮರ್ಶಾ ಸಂಕ...
ಮಂಡ್ಯ: ಭಾರತ ಬಹು ಭಾಷಾ, ಬಹು ಸಂಸ್ಕ್ರತಿ, ಬಹು ಪದ್ಧತಿಗಳ ದೇಶ. ಇದನ್ನು ಉಳಿಸಿಕೊಂಡು ಹೋಗಬೇಕು. ಒಂದೊಂದು ಜನಾಂಗ...
ಮಂಡ್ಯ: ಹುಟ್ಟಿದ ಮನುಷ್ಯರೆಲ್ಲಾ ಇತಿಹಾಸವನ್ನು ಸೃಷ್ಟಿಸುವುದಿಲ್ಲಾ ಆದರೆ ಇತಿಹಾಸದಲ್ಲಿ ಲೀನವಾಗಿ ಹೋಗುತ್ತಾರೆ ಆದರೆ ಕೆ...
©2024 Book Brahma Private Limited.