ಸರಕಾರದ ಅಡೆತಡೆಗಳು ದಕ್ಷಿಣದ ಮೇಲೆ ಹೇಗೆಲ್ಲಾ ಬೀಳ್ತಿದೆ?


“ರಾಜ್ಯವಾರು ಜನರ ಬದುಕಿನ ಗುಣಮಟ್ಟ ಹೆಚ್ಚಿಸೋಕೆ, ಮೂಲಭೂತ ಸೇವೆಗಳನ್ನ ಒದಗಿಸೋಕೆ ಕೇಂದ್ರ ಸರಕಾರದ ಅಡೆತಡೆಗಳು ದಕ್ಷಿಣದ ಮೇಲೆ ಹೇಗೆಲ್ಲಾ ಬೀಳ್ತಾ ಇದೆ ಅನ್ನೋದನ್ನ ಈ ಪುಸ್ತಕ ಹೇಳುತ್ತೆ,” ಎನ್ನುತ್ತಾರೆ ಪುಸ್ತಕಮರೆ ಪ್ರಸಾದ ಅವರು ಕೆ. ಪಿ. ಸುರೇಶ ಅವರ “ದಕ್ಷಿಣ Vs ಉತ್ತರ” ಕೃತಿ ಕುರಿತು ಬರೆದ ವಿಮರ್ಶೆ.

ನಮ್ಮ ದಕ್ಷಿಣ ಭಾರತದವರು ಕೇಂದ್ರ ಸರಕಾರದವರ ಹತ್ರ ಕೂತ್ಕೊಂಡಾಗ ಅವ್ರು ಏನಿ ಪ್ರಾಬ್ಲೆಮ್ಮು ಅಂದ್ರೆ, ಬೇಕಿರೋ ಟಾಪಿಕ್ಕುಗಳೆಲ್ಲ ಇಲ್ಲಿ ಸಿಗುತ್ತೆ.

ಆರೋಗ್ಯ, ಶಿಕ್ಷಣ, ದುಡ್ಡು ಅಂತೆಲ್ಲ ಮೂಲಭೂತ ವಿಷಯಗಳಲ್ಲಿ ನಮ್ಮ ದಕ್ಷಿಣ ಯಾಕೆ ಉತ್ತರಕ್ಕಿಂತ ಬೆಸ್ಟು, ಅದಕ್ಕೆ ಹೇಗೆ ಕೇಂದ್ರ ಸರಕಾರದ ಕೇಂದ್ರೀಕರಣ ಕೊಳ್ಳಿ ಇಡ್ತಾ ಇದೆ? ಅಂತ ನಂಬರುಗಳ ಅಂದ್ರೆ ಶಿಶುಮರಣ, ತಾಯಿ ಮರಣ, ಲಕ್ಷಕ್ಕೆ ಡಾಕ್ಟರ ಸಂಖ್ಯೆ, ಶಾಲೆ ಅಂಗನವಾಡಿ ಸಂಖ್ಯೆ, ಅಲ್ಲಿರೋ ವ್ಯವಸ್ಥೆಗಳ ಮೂಲಕ ರಾಜ್ಯ ನೀತಿಗಳ ಗೆಲುವನ್ನು ಕೇಂದ್ರದ ಗೆಲುವು ಅಂತ ತೋರಿಸೋಕೆ ವರ್ಷಗಟ್ಟಲೆ ಕಾಯಿಸೋ ಸ್ಕೀಮು ಬಗ್ಗೆಯೆಲ್ಲ ಹೇಳುತ್ತೆ. ಉದಾ: ನೀಟ್ ಪರೀಕ್ಷೆ...

ಇನ್ನ ಜನಸಂಖ್ಯೇ ಆಧಾರದ ಮೇಲೆ ಆರ್ಥಿಕ ಮತ್ತು ಸಂಪನ್ಮೂಲಗಳನ್ನ ಹಂಚೋದು ಯಾವ ತರಹದ ಸಮಸ್ಯೆ ಹಬ್ಬಿಸುತ್ತೆ, ಕೇಂದ್ರ ಸರಕಾರದ ಜನಸ್ನೇಹಿ ಯೋಜನೆಗಳು ಯಾವ ತರಹದ ಆತಂಕವೆಬ್ಬಿಸುವ ಸಮಸ್ಯೆಗಳನ್ನ ನಮ್ಮ ಸೌತ್ ಅವರ ಮೇಲೆ ತರುತ್ತೆ, ಬದುಕಿಗೆ ಬೇಕಾದ ಅವಕಾಶಗಳ ವಿಷಯ ಇಟ್ಟುಕೊಂಡು ದಕ್ಷಿಣ ಮಾಡಿರೋ ನೀತಿ ನಿಯಮಗಳೇನು, ಅದನ್ನ ಕೇಂದ್ರ ಸರಕಾರ ತಡೆಯುತ್ತಾ ಇರೋದು ಹೇಗೆ. ಒಟ್ಟಾರೆ ಒಂದೊಳ್ಳೆ ದೇಶ ನಡೆಸೋಕೆ, ರಾಜ್ಯವಾರು ಜನರ ಬದುಕಿನ ಗುಣಮಟ್ಟ ಹೆಚ್ಚಿಸೋಕೆ, ಮೂಲಭೂತ ಸೇವೆಗಳನ್ನ ಒದಗಿಸೋಕೆ ಕೇಂದ್ರ ಸರಕಾರದ ಅಡೆತಡೆಗಳು ದಕ್ಷಿಣದ ಮೇಲೆ ಹೇಗೆಲ್ಲಾ ಬೀಳ್ತಾ ಇದೆ ಅನ್ನೋದನ್ನ ಈ ಪುಸ್ತಕ ಹೇಳುತ್ತೆ.

ಚೆರ್ರಿಪಿಕ್ಡ್ ವಿಷಯಗಳು ಅಂತ ಅನಿಸಿದರೂ ಈ ಪುಸ್ತಕ ಕೈಮಾಡಿ ತೋರಿಸೋ ಕಾಳಜಿ ಮತ್ತು ಸಮಸ್ಯೆಗಳು ಯೋಚಿಸಬೇಕಾದ್ದೆ. ಅನುವಾದ ಸರಳವಾಗಿ, ನನ್ ತರಹದ ಸಾಮಾನ್ಯ ಜಾಸ್ತಿ ತಲೆಕೆಡಿಸಿಕೊಳ್ಳದೆ ಓದೋನಿಗೂ ಅರ್ಥವಾಗುವಂತೆ, ಇಷ್ಟವಾಗುವಂತೆ ಇದೆ.

- ಪುಸ್ತಕಮರೆ ಪ್ರಸಾದ

MORE FEATURES

ಸಮ್ಮೇಳನದಲ್ಲಿ ಕೇಳುವವರಿಲ್ಲ, ಸಂತೆಯಲ್ಲಿ ಕೊಳ್ಳುವವರಿಲ್ಲ

01-01-2025 ಬೆಂಗಳೂರು

"ಎಲ್ಲಿದೆ ಕವಿತೆ? ಎಂದು ಪ್ರತಿಯೊಬ್ಬ ಓದುಗನೂ ಕೇಳುವ ಕಾಲದಲ್ಲಿದ್ದೇವೆ.ಅಥವ ಕವಿತೆ ಕೇಳಲು ಕಿವಿಗಳೇ ಇಲ್ಲ ಎನ್ನುವ...

ಜನರ ಜೀವಗಳ ಸುರಕ್ಷತೆಯ ದೃಷ್ಡಿಯಿಂದ ಇದು ಬಹಳ ಒಳ್ಳೆಯ ನಡೆ

31-12-2024 ಬೆಂಗಳೂರು

"ಆಸ್ಟ್ರೇಲಿಯಾದ ಮೊದಲ ಮ್ಯೂಸಿಯಂ ನಲ್ಲಿ ಮೂಲನಿವಾಸಿಗಳು ಹೆಣೆಯುತ್ತಿದ್ದ ಬೆತ್ತದ ಬುಟ್ಟಿಗಳು, ಚಿಪ್ಪುಗಳ ಸರ ಇತ್ಯ...

ಬರೆದಂತೆ ಬದುಕಿದವರಿಗೆ ಬೆಲೆಯುಂಟು, ಅಂಥವರ ಬದುಕೇ ಒಂದು ಮಾದರಿ

31-12-2024 ಬೆಂಗಳೂರು

“ತಪ್ಪು ತಪ್ಪೇ, ಅಪರಾಧ ಅಪರಾಧವೆ ಮತ ಬ್ಯಾಂಕ್ ಗಳ ದುರಾಸೆಯಿಂದ ಸಮರ್ಥನೆಯಾಗಲಿ ದಂಡನೆಗಳಾಗಲಿ, ಸಾಮಾಜಿಕ ನೆಮ್ಮದಿ...