“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್

Date: 09-03-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ನ್ಯೂಯಾರ್ಕ್ ನ ಪೈಂಟರ್, ಫೋಟೋಗ್ರಾಫರ್ ಚಾರ್ಲ್ಸ್ ಥಾಮಸ್ ಕ್ಲೋಸ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಚಾರ್ಲ್ಸ್ ಥಾಮಸ್ ಕ್ಲೋಸ್ (Charles Thomas Close)
ಜನನ: 05 ಜುಲೈ, 1940
ಶಿಕ್ಷಣ: ಯೇಲ್ ಸ್ಕೂಲ್ ಆಫ್ ಆರ್ಟ್; ವಿಯೆನ್ನಾ ಅಕಾಡೆಮಿ ಆಫ್ ಫೈನ್‌ಆರ್ಟ್.
ವಾಸ: ಸೊಹೊ, ನ್ಯೂಯಾರ್ಕ್
ಕವಲು: ಫೋಟೋರಿಯಲಿಸಂ
ವ್ಯವಸಾಯ: ಪೈಂಟರ್, ಫೋಟೋಗ್ರಾಫರ್

ಚಕ್ ಕ್ಲೋಸ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಚಕ್ ಕ್ಲೋಸ್ ಅವರ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಫೊಟೋಗ್ರಫಿ ಬಂದ ಬಳಿಕ ಹಿನ್ನೆಲೆಗೆ ಸರಿದಿದ್ದ ಫೋಟೊ ರಿಯಲಿಸ್ಟಿಕ್ ಚಿತ್ರಗಳನ್ನು ರಚಿಸುವ ಕೌಶಲವನ್ನು ಮತ್ತೆ ಮುನ್ನೆಲೆಗೆ ತಂದು ಅದಕ್ಕೆ ಸಮಕಾಲೀನ ಕಲೆಯ ರೂಪ ನೀಡಿದ ಶ್ರೇಯಸ್ಸು ಚಕ್ ಕ್ಲೋಸ್ ಅವರಿಗೆ ಸಲ್ಲುತ್ತದೆ. ತಾಂತ್ರಿಕವಾಗಿ ನಡೆಯುವ ಫೊಟೋಗ್ರಫಿಯಲ್ಲಿ ಹಿಡಿದಿಡಲಾಗದ ವ್ಯಕ್ತಿತ್ವದ ಅಂತಃಶಕ್ತಿಯನ್ನು, ಅದೇ ಫೋಟೋಗ್ರಫಿ ಬಳಸುವ ವಿಧಾನ-ವ್ಯವಸ್ಥೆಗಳನ್ನೇ ಬಳಸಿಕೊಂಡು ಕೈಯಾರೆ ಕಟ್ಟಿಕೊಡುವ ಕಾರಣಕ್ಕೆ ಕ್ಲೋಸ್ ಅವರ ಪೋರ್ಟ್‌ರೈಟ್‌ಗಳು ಈವತ್ತಿಗೂ ಮಹತ್ವದವೆನ್ನಿಸುತ್ತವೆ. ತಾನು ಈಗಣ ಕಂಪ್ಯೂಟರ್ ಪಿಕ್ಸೆಲ್‌ಗಳ ಕಾಲಕ್ಕಿಂತ ಹಳಬ. ಆ ತಂತ್ರವನ್ನು ಕಂಪ್ಯೂಟರ್‌ಗಳು ಪಡೆದದ್ದು ತನ್ನಿಂದ ಎನ್ನುವ ಚಕ್ ಕ್ಲೋಸ್, ಬಾಲ್ಯದಲ್ಲಿ ಡಿಸ್‌ಲೆಕ್ಸಿಯಾ (ಕಲಿಕೆಯ ಮಾಂದ್ಯತೆ) ಹೊಂದಿದ್ದರೆ ನಡುವಯಸ್ಸಿನಲ್ಲಿ ಪಾರ್ಶ್ವವಾತಕ್ಕೀಡಾಗಿದ್ದರು ಎಂಬುದು ಅವರ ಈ ಕೌಶಲಕ್ಕೆ ಇನ್ನಷ್ಟು ಮೆರುಗು ತರುತ್ತದೆ.

ಫೋಟೋಗ್ರಫಿಗೆ ಸರಿಗಟ್ಟುವ ಕೌಶಲಭರಿತ ಭಾವಚಿತ್ರಗಳು 70ರ ದಶಕದ ಟ್ರೆಂಡ್ ಆಗಿದ್ದರೂ, ಅಲ್ಲಿ ಕನ್ನಡಿ ಬಿಂಬ ಇತ್ತೇ ಹೊರತು ಸತ್ವ ಇರಲಿಲ್ಲ. ಚಿತ್ರಗಳನ್ನು ಪುಟ್ಟಪುಟ್ಟ ಚೌಕಗಳಾಗಿ ವಿಂಗಡಿಸಿಕೊಂಡು, ಒಂದು ಪೂರ್ಣ ಚಿತ್ರ ಎಂಬುದು ಅದರ ಪುಟ್ಟ ಪುಟ್ಟ ಪರಿಪೂರ್ಣ ಚೌಕಗಳ ಮೊತ್ತ ಎಂಬ ಕ್ಯಾಮರಾದ ಲೆಕ್ಕಾಚಾರವನ್ನೇ ಒಂದು ಹೆಜ್ಜೆ ಮುಂದಕ್ಕೆ ಒಯ್ದು, ಆಯಿಲ್, ಆಕ್ರಿಲಿಕ್, ಮೆಝೊಟಿಂಟ್ ಮತ್ತಿತರ ಹಲವು ಮಾಧ್ಯಮಗಳಲ್ಲಿ ಅದನ್ನೇ ಸಾಧಿಸಲು ಪ್ರಯತ್ನಿಸಿ ಯಶಸ್ಸು ಕಂಡ ಕಾರಣಕ್ಕೆ ಚೆಕ್ ಕ್ಲೋಸ್ ಕಲಾಕೃತಿಗಳು ಈವತ್ತಿಗೂ ಜಗತ್ತಿನ ಗಮನ ಸೆಳೆಯುತ್ತಿವೆ.

ವಾಷಿಂಗ್ಟನ್ ಸಮೀಪದ ಮೊನ್ರೊ ಎಂಬಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿದ ಚಕ್ ಕ್ಲೋಸ್ ಹೆತ್ತವರು ಕಲಾಸಕ್ತರು. ಹಾಗಾಗಿ, ಡಿಸ್‌ಲೆಕ್ಸಿಯಾದಿಂದ ಸಾಂಪ್ರದಾಯಿಕ ಶಾಲಾ ಅಭ್ಯಾಸ ಸಾಧ್ಯವಾಗದ ಮಗನಿಗೆ ಮನೆಯಲ್ಲಿ ಟ್ಯೂಷನ್ ಮೂಲಕ ಕಲಾಭ್ಯಾಸ ಮಾಡಿಸಿದ್ದರು. ಕಲಾ ಕೌಶಲದ ಕಾರಣದಿಂದಾಗಿಯೇ 1962ರಲ್ಲಿ ಯೇಲ್ ವಿವಿಯಲ್ಲಿ ಕಲಾಭ್ಯಾಸಕ್ಕೆ ತೆರಳಲು ಚಕ್ ಕ್ಲೋಸ್‌ಗೆ ಸಾಧ್ಯವಾಯಿತು. ಅಲ್ಲಿ ಸಾಂಪ್ರದಾಯಿಕ ಆಬ್‌ಸ್ಟ್ರಾಕ್ಟ್ ಎಕ್ಸ್‌ಪ್ರೆಷನಿಸಂ ಜೊತೆ ಆಗಷ್ಟೇ ಚಾಲ್ತಿಗೆ ಬಂದಿದ್ದ ಪಾಪ್ ಆರ್ಟ್ ಮತ್ತು ಮಿನಿಮಲಿಸ್ಟ್ ಆರ್ಟ್‌ಗಳನ್ನು ಕಲಿಯಲು ಸಾಧ್ಯವಾಯಿತು. ಕಲಾಭ್ಯಾಸದ ಬಳಿಕ ಮಸಾಚುಸೆಟ್ಸ್ ವಿವಿಯಲ್ಲಿ ಕಲಾಶಿಕ್ಷಕನಾಗಿ ಕೆಲಸ ಮಾಡುವಾಗ 1967ರಲ್ಲಿ ಕಲಾಪ್ರದರ್ಶನವೊಂದರಲ್ಲಿ ಅವರಿರಿಸಿದ ನೂಡ್ ಕಲಾಕೃತಿಯೊಂದು ಎಬ್ಬಿಸಿದ ವಿವಾದದಿಂದಾಗಿ ಅವರು ಅಲ್ಲಿ ಕೆಲಸ ತ್ಯಜಿಸಬೇಕಾಯಿತು.

ಅಲ್ಲಿಂದ ನ್ಯೂಯಾರ್ಕ್ ನಗರದ ಕಲಾಶಾಲೆಯಲ್ಲಿ ಕಲಾ ಶಿಕ್ಷಕ ವೃತ್ತಿ ಆರಂಭಿಸಿದ ಚಕ್ ಕ್ಲೋಸ್ ತನ್ನ ಹಳೆವಿದ್ಯಾರ್ಥಿ ಲೆಸ್ಲೀ ರೋಸ್ ಅವರನ್ನು ಮದುವೆ ಆಗುತ್ತಾರೆ. ತಾನು ಕಲಿತ ಕಲೆಯಲ್ಲಿ ಹೊಸದೇನನ್ನೂ ಸಾಧಿಸಲು ಸಾಧ್ಯವಾಗದೇ ಚಡಪಡಿಸುತ್ತಿದ್ದ ಚಕ್ ಕ್ಲೋಸ್, ಪತ್ನಿಯ ಸಲಹೆಯ ಮೇರೆಗೆ ತನ್ನ ಹಳೆಯ ವಿವಾದಾತ್ಮಕ ನೂಡ್ ಚಿತ್ರವನ್ನು ಫೊಟೋರಿಯಲಿಸ್ಟಿಕ್ ಆಗಿ ಗ್ರಿಡ್‌ಗಳನ್ನು ಬಳಸಿ ಒಂಭತ್ತು ಅಡಿ ಗಾತ್ರಕ್ಕೆ ಮರು ಚಿತ್ರಿಸುತ್ತಾರೆ ಅದು Big Nude (1967) ಇಂದು ಅವರ ಮಹತ್ವದ ಕಲಾಕೃತಿಗಳಲ್ಲಿ ಒಂದು.

ಅಲ್ಲಿಂದ ಮುಂದೆ ಅವರ ಪೋರ್ಟ್‌ರೈಟ್‌ಗಳು ಪ್ರಸಿದ್ಧಿ ಪಡೆಯುತ್ತಾ ಸಾಗುತ್ತವೆ. ಮೊದಲಿಗೆ ಕಪ್ಪು ಬಿಳುಪು ಚಿತ್ರಗಳಿಂದ ಬಣ್ಣದ ಪೋರ್ಟ್‌ರೈಟ್‌ಗಳಿಗೆ ಹೊರಳಿಕೊಂಡ ಚಕ್ ಕ್ಲೋಸ್, ಪ್ರತೀ ಗ್ರಿಡ್ ಚೌಕದಲ್ಲೂ, ಫೋಟೋ ಮುದ್ರಣದಂತೆಯೇ ಸ್ಯಾನ್, ಮೆಜೆಂಟಾ, ಹಳದಿ ಬಣ್ಣಗಳನ್ನು ತುಂಬಿ ಬಣ್ಣದ ಚಿತ್ರಗಳನ್ನು ರಚಿಸುತ್ತಾರೆ. ಹಾಗೆ ರಚಿತವಾದ ಮೊದಲ ಚಿತ್ರ Kent (1970-71) ಅದಕ್ಕವರು ತೆಗೆದುಕೊಂಡ ಸಮಯ ಒಂದು ವರ್ಷ. ಅದು ಸ್ಥಾಗಿತ್ಯಕ್ಕೆ ಬಂತು ಅನ್ನಿಸಿದಾಗ ಹದಿನೆಂಟನೇ ಶತಮಾನದ ಮೆಝೊಟಿಂಟ್ ವಿಧಾನ ಬಳಸಿ ಚೌಕುಳಿಗಳನ್ನು ಬಣ್ಣಗಳಿಂದ ಭರ್ತಿ ಮಾಡಿದರು. ಹೀಗೆ ವಿಭಿನ್ನ ತಂತ್ರಗಳು ಮತ್ತು ಮಾಧ್ಯಮಗಳನ್ನು ಬಳಸಿಕೊಂಡು ಪ್ರಯೋಗಗಳನ್ನು ನಡೆಸುತ್ತಾ ಪೋರ್ಟ್‌ರೈಟ್ ಚಿತ್ರಗಳನ್ನು ಸಮಕಾಲೀನಗೊಳಿಸಿದರು.

1988ರಲ್ಲಿ ಪಾರ್ಶ್ವವಾತಕ್ಕೀಡಾಗಿ ಸೊಂಟಕ್ಕಿಂತ ಕೆಳಗೆ ಪೂರ್ಣಬಲ ಕಳೆದುಕೊಂಡ ಚಕ್ ಕ್ಲೋಸ್ ಫಿಸಿಯೋತೆರಪಿಯ ಬಳಿಕ ಕೈಗಳನ್ನು ಬಳಸಲು ಶಕ್ತರಾದರು. ವೀಲ್ ಚೇರ್ ಮೇಲೆ ಅವರು ಪೂರ್ಣಗೊಳಿಸಿದ ಮೊದಲ ಚಿತ್ರ Alex II (1989). ಇಂದೂ ಕೂಡ ಹೊಸ ಸಾಧ್ಯತೆಗಳನ್ನು ಅರಸುತ್ತಿರುವ ಚಕ್ ಕ್ಲೋಸ್ ಅವರಿಗೆ ಆ ಹೆಸರು ಬರಲು ಕಾರಣವೂ ಕುತೂಹಲಕರ. ಚಾರ್ಲ್ ಥಾಮಸ್ ಎಂಬ ಹೆಸರಿನ ಅವರ ಸಂದರ್ಶನವೊಂದು 1970ರಲ್ಲಿ ಪ್ರಸಿದ್ಧ ಆರ್ಟ್‌ಫೋರಂ ಮ್ಯಾಗಝೀನಿನಲ್ಲಿ ಪ್ರಕಟವಾದಾಗ ತಪ್ಪಾಗಿ ಅವರ ಹೆಸರನ್ನು ಚಕ್ ಕ್ಲೋಸ್ ಎಂದು ಮುದ್ರಿಸಲಾಗಿತ್ತು. ಆದರೆ, ಕಲಾವಿದ ಅದೇ ಹೆಸರನ್ನು ಖಾಯಂ ಆಗಿ ಇರಿಸಿಕೊಂಡುಬಿಟ್ಟರು!

ಚಕ್ ಕ್ಲೋಸ್ ಕುರಿತ ಡಾಕ್ಯುಮೆಂಟರಿ ಚಿತ್ರ – ಅ ಪೋರ್ಟ್‌ರೈಟ್ ಇನ್ ಪ್ರೋಗ್ರೆಸ್:

ಚಕ್ ಕ್ಲೋಸ್ ಜೊತೆ ಅಮೆರಿಕನ್ ನಟಿ, ಪ್ರೊಫೆಸರ್ ಅನಾ ದಿಯವರ್ ಸ್ಮಿತ್ ಮಾತುಕತೆ:

ಚಿತ್ರ ಶೀರ್ಷಿಕೆಗಳು:

ಚಕ್ ಕ್ಲೋಸ್ ಅವರ Baby Jane, (2018-2019), oil on canvas

ಚಕ್ ಕ್ಲೋಸ್ ಅವರ Big Nude, (1967), acrylic on gessoed canvas

ಚಕ್ ಕ್ಲೋಸ್ ಅವರ Big Self-Portrait, (1967–1968)

ಚಕ್ ಕ್ಲೋಸ್ ಅವರ Daguerrotypes, (2001)

ಚಕ್ ಕ್ಲೋಸ್ ಅವರ Fanny fingerpainting, (1985)

ಚಕ್ ಕ್ಲೋಸ್ ಅವರ Kate, (2007)

ಚಕ್ ಕ್ಲೋಸ್ ಅವರ Laura I, (1984), color Polaroids mounted on aluminum

ಚಕ್ ಕ್ಲೋಸ್ ಅವರ Nat-Water color, (1972)

ಚಕ್ ಕ್ಲೋಸ್ ಅವರ Red Wine Grapes 2, (2007)

ಚಕ್ ಕ್ಲೋಸ್ ಅವರ self-portrait, (2000)

ಚಕ್ ಕ್ಲೋಸ್ ಅವರ Shirley, (2007), oil on canvas

ಚಕ್ ಕ್ಲೋಸ್ ಅವರ Sunflower, (2011)

ಈ ಅಂಕಣದ ಹಿಂದಿನ ಬರೆಹಗಳು:

ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್

ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’

ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್

ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್

ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...