Date: 19-11-2024
Location: ಬೆಂಗಳೂರು
ಬೆಂಗಳೂರು: ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಕ್ರಿಯಾಶೀಲ ಕೆಲಸಗಳಲ್ಲಿ ತೊಡಗಿ ಕೊಂಡಿರುವ ಕಾವ್ಯಸಂಜೆಯು ಇದೇ ನ.24 ರಂದು ಬೆಂಗಳೂರು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ತನ್ನ 2ನೇ ಆವೃತ್ತಿಯ ಕಾವ್ಯಹಬ್ಬವನ್ನು ಆಯೋಜಿಸಿದೆ. ಕಾರ್ಯಕ್ರಮವನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜು ಅವರು ಉದ್ಘಾಟನೆ ಮಾಡಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿಯೇ ಐಎಫ್‌ಎ ಅನುದಾನಿತ ಯೋಜನೆಯಲ್ಲಿ ಕಾವ್ಯಸಂಜೆಯ ಕವಿಗಳು ಬೆಂಗಳೂರು ನಗರವನ್ನು ಕೇಂದ್ರೀಕರಿಸಿ ಬರೆದ ಕವಿತೆಗಳ ಸಂಕಲನ 'ಓಡಾಟ'ವು ಲೋಕಾರ್ಪಣೆಗೊಳ್ಳಲಿದೆ.
ಮೊದಲ ಗೋಷ್ಠಿಯಲ್ಲಿ ಹೊಸತಲೆಮಾರಿನ ಕವಿಗಳು ತಮ್ಮ ಕವಿತೆ ವಾಚಿಸಲಿದ್ದಾರೆ. ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕವಿಗಳಾದ ಮೀನಾ ಮೈಸೂರು ವಹಿಸಲಿದ್ದಾರೆ. ನಂತರದ ಗೋಷ್ಠಿಯಲ್ಲಿ ಕಾವ್ಯದ ಅನುವಾದಗಳಲ್ಲಿ ತೊಡಗಿಸಿಕೊಂಡಿರುವ ವಿವಿಧ ಭಾಷೆಯ ಅನುವಾದಕರು ಕಾವ್ಯ ತರ್ಜುಮೆಯ ಕುರಿತು ಮಾತನಾಡಲಿದ್ದಾರೆ. ಹಾಗೂ ಕಾವ್ಯ ಮತ್ತು ಕಾವ್ಯಪ್ರಕಾಶನದ ವಿವಿಧ ಆಯಾಮಗಳ ಕುರಿತು ನಾಡಿನ ಮುಖ್ಯ ಪ್ರಕಾಶನ ಸಂಸ್ಥೆಗಳ ಪ್ರತಿನಿಧಿಗಳು ಒಂದು ಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ. ಮುಂದುವರಿದು ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದ್ದು ಇದರಲ್ಲಿ ವಿವಿಧ ಭಾಷೆಯ ಹಿರಿಯ ಕವಿಗಳು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ಕಾವ್ಯಸಂಜೆಯ ಕವಿಗಳಿಂದಲೂ ಕಾವ್ಯ ಪ್ರಸ್ತುತಿಯ ವಿಶಿಷ್ಟ ಗೋಷ್ಠಿಯನ್ನು ವಿನ್ಯಾಸಗೊಳಿಸಲಾಗಿದೆ. ಅಂತಿಮವಾಗಿ ಹಿರಿಯ ಪತ್ರಕರ್ತರು ಮತ್ತು ಬರಹಗಾರರಾದ ಆರ್.ಪೂರ್ಣಿಮ ಸಮಾರೋಪ ಭಾಷಣ ಮಾಡಲಿದ್ದಾರೆ.
ಬೆಂಗಳೂರು: ಯಾಜಿ ಪ್ರಕಾಶನದಿಂದ ಹರಿದಾಸ ಮಹಿಳೆ ಅಂಬಾಬಾಯಿ ವಿರಚಿತ ‘ಏಕಾಂಗಿ ಕವಯತ್ರಿಯ ಪ್ರವಾಸದ ಡೈರಿ’ (...
ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಂತಾರಾಷ್ಟ್ರೀಯ 2ನೇ ವಿಶ್ವ ಕನ್ನಡ ಹಬ್ಬದ ಸಲಹಾ ಸಮಿತಿ ವತಿಯಿಂದ...
ಬೆಂಗಳೂರು: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ(ರಿ) ಬೆಂಗಳೂರು ಇದರ 2024 ನೇ ಸಾಲಿನ ಪ್ರತಿಷ್ಠಿತ ರಾ...
©2024 Book Brahma Private Limited.