ಮಾತಿನ ಮಹಿಮೆ ಏನೆಂದು ತಿಳಿಸಿಕೊಡುವುದೇ ಕೃತಿಯ ಉದ್ದೇಶ


"ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ. ಅದು ಮಾತು. ಮಾತು ಮನೆ ಕೆಡಿಸೀತು ಅಂತಾರೆ. ಆದರೆ ಮಾತೇ ಆಡದಿದ್ದರೆ ನಾವೇ ಪ್ರೀತಿಯಿಂದ ಕಟ್ಟಿದ ಸಂಬಂಧಗಳ ಸೌಧಗಳು ನಮ್ಮ ಕಣ್ಣೆದುರಲ್ಲೇ ಕುಸಿದು ಹೋಗುವುದು ನಿಶ್ಚಿತ. ಮಾತಿನ ಮಹಿಮೆ ಏನೆಂದು ತಿಳಿಸಿಕೊಡುವುದೇ ಈ ಪುಸ್ತಕದ ಉದ್ದೇಶ," ಎನ್ನುತ್ತಾರೆ ಕನಕ ರಾಜು. ಅವರು ವಿರೂಪಾಕ್ಷ ದೇವರಮನೆ ಅವರ ‘ಸ್ವಲ್ಪ ಮಾತಾಡಿ ಪ್ಲೀಸ್’ ಕೃತಿ ಕುರಿತು ಬರೆದ ವಿಮರ್ಶೆ.

ಒಂದು ಸಂಬಂಧ ಬೆಳೆದು ಗಟ್ಟಿಗೊಳ್ಳಬೇಕಾದ್ರೆ ವರ್ಷಗಳೇ ಹಿಡಿಯುತ್ತೆ. ಆದರೂ ಅದು ಉಳಿದು ಇನ್ನಷ್ಟು ಸಧೃಡವಾಗಬೇಕಾದ್ರೆ ನಿರಂತರ ಪ್ರೀತಿ, ವಿಶ್ವಾಸ, ಮುಖ್ಯವಾಗಿ ಮಾತುಗಳು ಬೇಕು. ಎಲ್ಲ ಸಂಬಂಧಗಳನ್ನು ಜೀವಂತವಾಗಿಡಬಲ್ಲ ದಿವ್ಯಶಕ್ತಿ ಇರುವುದು ಈ ಮಾತುಗಳಿಗೆ ಮಾತ್ರ. ಅಂಥಹ ಮಾತುಗಳೇ ಇರದ ಬರಡು ವಾತಾವರಣದಲ್ಲಿ ಸಂಬಂಧಗಳ ಕೊಂಡಿಗಳು ಶಿಥಿಲಗೊಂಡು ಒಂದೊಂದಾಗಿ ಕಳಚಿಕೊಳ್ಳುತ್ತಾ ಒಂದು ದಿನ ನಾವು ಅಕ್ಷರಶಃ ಒಂಟಿಯಾಗಿ ಬಿಡುತ್ತೇವೆ.

ಸಮಸ್ಯೆಗಳ ಕಾರಣಗಳು ಏನೇ ಇರಲಿ, ಆದರೆ ಪರಿಹಾರ ಒದಗಿಸುವ ಬೀಜಮಂತ್ರ ಒಂದೇ. ಅದು ಮಾತು. ಮಾತು ಮನೆ ಕೆಡಿಸೀತು ಅಂತಾರೆ. ಆದರೆ ಮಾತೇ ಆಡದಿದ್ದರೆ ನಾವೇ ಪ್ರೀತಿಯಿಂದ ಕಟ್ಟಿದ ಸಂಬಂಧಗಳ ಸೌಧಗಳು ನಮ್ಮ ಕಣ್ಣೆದುರಲ್ಲೇ ಕುಸಿದು ಹೋಗುವುದು ನಿಶ್ಚಿತ. ಮಾತಿನ ಮಹಿಮೆ ಏನೆಂದು ತಿಳಿಸಿಕೊಡುವುದೇ ಈ ಪುಸ್ತಕದ ಉದ್ದೇಶ.

ಈ ಪುಸ್ತಕ ಓದಿ ಕೆಳಗಿಡುವಷ್ಟರಲ್ಲಿ ನಿಮ್ಮೆಲ್ಲಾ ಸಂಬಂಧಗಳಲ್ಲಿ ಚೈತನ್ಯ ತುಂಬಿ ನಿಮ್ಮಲ್ಲಿ ನವ ಜೀವನೋತ್ಸಾಹ ತುಂಬುವುದು ಗ್ಯಾರಂಟಿ. ಇಟ್ಸ್ ಮೈ ಪ್ರಾಮಿಸ್. ನಿಮ್ಮೆಲ್ಲಾ ಸಂತಸಗಳಿಗೆ ಕಾರಣವಾಗಬಲ್ಲ ಸಂಬಂಧಗಳ ಕೊಂಡಿಗಳು ಕಳಚುವ ಮುನ್ನ..

ಎಲ್ಲರೂ ಓದಲೇಬೇಕಾದ ಪುಸ್ತಕ‌ 'ಸ್ವಲ್ಪ ಮಾತಾಡಿ ಪ್ಲೀಸ್.

MORE FEATURES

ಗಂಡು ಸಮಾಜಕ್ಕೆ ಮಾತ್ರ ಸೀಮಿತ ಅನ್ನೋ ವಿಚಾರ ಶೋಚನೀಯ

30-03-2025 ಬೆಂಗಳೂರು

"ಕಾಡಿನ ಜನರಿಗೆ ನಾಡಿಗೆ ಬರೋದು ಅಧರ್ಮ, ಕೃಷಿ ಮಾಡುತ್ತಿದ್ದವರಿಗೆ ವ್ಯಾಪಾರ ಅಧರ್ಮ, ರಾಜಾಶ್ರಯ ಪಡೆದ ಭಿಕ್ಕುಗಳಿಗ...

ಕತ್ತಲೆಯ ದಾರಿಯಲ್ಲಿ ನಡೆಯಬಹುದು, ಕನಸುಗಳಿಲ್ಲದ ದಾರಿಯಲ್ಲಿ ನಡೆಯಬಹುದೆ?

30-03-2025 ಬೆಂಗಳೂರು

"ಈಗ ಬಂಡಾಯದ ಭರತ ಇಳಿದರೂ, ಆ ಮೂಲದ್ರವ್ಯ ಮರೆಯಾಗದೆ, ಈ ಎರಡೂ ಪ್ರಕಾರಗಳಲ್ಲಿ ನಡೆದ ಸಂಕರದ ಪರಿಣಾಮವಾಗಿ, ಸಂಕಥನ ಎ...

ಕೌಟುಂಬಿಕ ಹಾಗೂ ಸಾಮಾಜಿಕ ಓರೆಕೋರೆಗಳಿಗೆ ಕನ್ನಡಿ ಹಿಡಿಯುವ ಕೃತಿ ‘ಚಿತ್ತ-ಬಕ್ಕ’

30-03-2025 ಬೆಂಗಳೂರು

"ಚಿತ್ತ-ಬಕ್ಕ ಎನ್ನುವ ಇವರ ಲೇಖನಗಳ ಸಂಗ್ರಹದ (51 ಬಿಡಿ ಲೇಖನಗಳು) ಬಹಳಷ್ಟು ಲೇಖನಗಳನ್ನು ಪತ್ರಿಕೆಗಳಲ್ಲಿ ಮೊದಲೇ ...