ಕವಿ ಸಿದ್ದಲಿಂಗಯ್ಯನವರ ಮೂರನೇ ವರ್ಷದ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮ

Date: 11-06-2024

Location: ಬೆಂಗಳೂರು


ಬೆಂಗಳೂರು: ನಾಡೋಜ ಡಾ. ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನದಿಂದ ಜನಕವಿ, ಪದ್ಮಶ್ರೀ ನಾಡೋಜ ಡಾ. ಸಿದ್ಧಲಿಂಗಯ್ಯರವರ ಮೂರನೇ ವರ್ಷದ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮ ಹಾಗೂ ಒಂದು ದಿನದ ರಾಷ್ಟ್ರೀಯ ವಿಚಾರಣ ಸಂಕಿರಣವು 2024 ಜೂನ್ 11 ಮಂಗಳವಾರದಂದು ನಗರದ ಪ್ರೊ. ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಸನ್ಮಾನ್ಯ ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಉದ್ಘಾಟಿಸಿದರು.

ಲೇಖಕ ಮುದಲ್ ವಿಜಯ್ ಅವರ ‘ಡಾ. ಸಿದ್ಧಲಿಂಗಯ್ಯ ಮಧುರ ಮೈತ್ರಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ, ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ, "ಡಾ. ಸಿದ್ಧಲಿಂಗಯ್ಯನವರನ್ನು ನಾವು ಕಳೆದುಕೊಂಡು ಮೂರು ವರ್ಷವಾಗಿದೆ. ಆ ಮೂರು ವರ್ಷದ ನೆನಪಿಗೆ ಸಿದ್ಧಲಿಂಗಯ್ಯ ಅವರ ಹೆಸರಿನ ಪ್ರತಿಷ್ಠಾನ ಅತ್ಯಂತ ಗೌರವದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಅವರನ್ನು ಕಳೆದುಕೊಂಡ ಮೂರು ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ವೇದಿಕೆಗಳಲ್ಲಿ, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ನಾನು ಮಾತನಾಡುತ್ತಲೇ ಬಂದಿದ್ದೇನೆ. ಅವರು ಜೀವಂತವಾಗಿದಿದ್ದು 67 ವರ್ಷ. ಈ 67 ವರ್ಷಗಳಲ್ಲಿ 42 ವರ್ಷಗಳ ಅಖಂಡ ಒಡನಾಟ ಸಿದ್ಧಲಿಂಗಯ್ಯ ಅವರೊಂದಿಗೆ ನನಗಿತ್ತು. ಅವರೊಂದಿಗೆ ಕಾಲ ಕಳೆದ ನೆನಪು ನನ್ನಲ್ಲಿ ಇಂದಿಗೂ ಇದೆ. ಅವುಗಳನ್ನೆಲ್ಲಾ ಬರೆದರೆ ಹಲವು ಕೃತಿಗಳಾಗಬಹುದು. ನಾವೆಲ್ಲರೂ ಬೇರೆ ಬೇರೆ ಪ್ರಾಪಂಚಿಕವಾಗಿರುವಂತಹ ತಲ್ಲಣಗಳಲ್ಲಿ ಸಿಕ್ಕಿಕೊಂಡು, ನಿಜವಾಗಿಯೂ ಬರೆಯಲೇ ಬೇಕಾದ ನೆನಪುಗಳು, ಬೇರೆಯವರಿಗೆ ಅನುಭವವಾಗಲೂ ಸಾಧ್ಯವಾಗದೇ ಇರುವಂತಹ ವಿಚಾರಗಳು ಬಹಳಷ್ಠಿವೆ," ಎಂದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಜಯಕರ ಎಸ್. ಎಂ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಡಾ. ಕಾವಲಮ್ಮ, ಹಿರಿಯ ದಲಿತ ಮುಖಂಡ ಎನ್. ವೆಂಕಟೇಶ್, ಖ್ಯಾತ ಕವಿ, ಗಾಯಕ ಗೊಲ್ಲಹಳ್ಳಿ ಶಿವಪ್ರಸಾದ್, ಸಿ.ರಮಾಕುಮಾರಿ ಸಿದ್ಧಲಿಂಗಯ್ಯ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಾವಳ್ಳಿ ಶಂಕರ್ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

MORE NEWS

ಬೆಂಗಳೂರಿನ ಮಹಾನಗರ ಪಾಲಿಕೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಥಮ ಮಹಿಳೆ ಲೀಲಾದೇವಿ; ಶಂಕರ್

17-10-2024 ಬೆಂಗಳೂರು

ಬೆಂಗಳೂರು: ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಕನ್ನಡ ಸಾಂಸ್ಕೃತಿಕ ಪರಿ...

ಜ್ಞಾನ ವಿಶಾರದೆ ಪುರಸ್ಕಾರಕ್ಕೆ `ಎಲೆಮರಿಯ ಕಾಯಿಗಳು' ಕೃತಿ ಆಯ್ಕೆ

17-10-2024 ಬೆಂಗಳೂರು

ವಿಜಯನಗರ: ಶ್ರೀ ಉತ್ಸವಾಂಬ ಪ್ರಕಾಶನ ವತಿಯಿಂದ ಕನ್ನಡ ರಾಜ್ಯೋತ್ಸವ 2024ರ ಪ್ರಯುಕ್ತ ನೀಡಲಾಗುವ ‘ಜ್ಞಾನ ವಿಶಾರದೆ...

ತಂದೆಯ ವಿದ್ವತ್ ಪರಂಪರೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ನಾವಡ ಮಾಡುತ್ತಿದ್ದಾರೆ; ಹಂಪನಾ

16-10-2024 ಬೆಂಗಳೂರು

ಬೆಂಗಳೂರು: ಶೇಷಾದ್ರಿಪುರಂ ಶಿಕ್ಷಣ ದತ್ತಿ, ಶೇಷಾದ್ರಿಪುರಂ ಸಂಜೆ ಕಾಲೇಜು ಹಾಗೂ ಗೋಧೂಳಿ ಕನ್ನಡ ಸಂಘ ಮತ್ತು ಮಂಗಳೂರಿನ ಶ...