Date: 17-03-2022
Location: ಬೆಂಗಳೂರು
ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಕೊಪ್ಪಳ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ -ಕಲಾ -ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ 2022ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ - ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.
ಕವಿ ಗವಿಸಿದ್ಧ ಎನ್. ಬಳ್ಳಾರಿ ಸ್ಮರಣೆ ದಿನ ಮಾರ್ಚ್ 14ರಂದು ಹಸ್ತಪ್ರತಿ ಆಹ್ವಾನ ಘೋಷಣೆ ಮತ್ತು ಕವಿ ಗವಿಸಿದ್ಧ ಎನ್. ಬಳ್ಳಾರಿ ಜನ್ಮ ದಿನ ಜೂನ್ 17ರಂದು ವಿಜೇತರ ಘೋಷಣೆ ಮಾಡಲಾಗುತ್ತದೆ ಮತ್ತು ಕೊಪ್ಪಳದಲ್ಲಿ ನಡೆಯುವ ಕವಿ ಗವಿಸಿದ್ಧ ಎನ್. ಬಳ್ಳಾರಿ - ಸಾಹಿತ್ಯೋತ್ಸವ -2022ರಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.
ಪ್ರಶಸ್ತಿಯು ರೂ.6000 ನಗದು ಬಹುಮಾನ ಮತ್ತು ಫಲಕ ಒಳಗೊಂಡಿದೆ. ಹಸ್ತಪ್ರತಿಗಳು ತಲುಪಲು ಕೊನೆಯ ದಿನಾಂಕ 25-04-2022.
ನಿಯಮಗಳು: ಹಸ್ತಪ್ರತಿಯಲ್ಲಿ ಕನಿಷ್ಟ 35 ಕವಿತೆಗಳಿರಬೇಕು. ಅನುವಾದಿತ ಕವನಗಳ ಹಸ್ತಪ್ರತಿಗಳನ್ನು ಸ್ವೀಕರಿಸುವುದಿಲ್ಲ. ಸ್ಪರ್ಧೆಗೆ ವಯಸ್ಸಿನ ಮಿತಿಯಿಲ್ಲ. ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಈ ಕಾವ್ಯ ಪ್ರಶಸ್ತಿಯ ವಿಝೇತರು ಮುಂದಿನ ಮೂರು ವರ್ಷಗಳ ಕಾಲ ಸ್ಪರ್ಧಿಸುವಂತಿಲ್ಲ. ಆಸಕ್ತ ಕವಿಗಳು ತಮ್ಮ ಕಾವ್ಯದ ಹಸ್ತಪ್ರತಿಯನ್ನು ನಿಗದಿತ ದಿನಾಂಕದೊಳಗೆ ಕಳುಹಿಸಬಹುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಸ್ತಪ್ರತಿ ಕಳುಹಿಸಬೇಕಾದ ವಿಳಾಸ: ಮಹೇಶ ಬಳ್ಳಾರಿ, ಜವಾಹರ ರಸ್ತೆ, ಕೊಪ್ಪಳ- 583 231
ಮಾಹಿತಿಗಾಗಿ ಸಂಪರ್ಕಿಸಿ: ಮಹೇಶ ಬಳ್ಳಾರಿ 9008996624/ ರಮೇಶ ಸಿ. ಬನ್ನಿಕೊಪ್ಪ 9902746235
ಬೆಂಗಳೂರು: ಕರ್ನಾಟಕ ಮಾತ್ರವಲ್ಲ ಇಡೀ ಭಾರತದೇಶ ಜಾನಪದ ಸಂಸ್ಕೃತಿಯ ಆಡುಂಬಲವಾಗಿದ್ದು ಬಹುತ್ವ, ಬಹುರೂಪಿ ಜಾನಪದವನ್ನು ಸ...
ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಏ.30 ಹಾಗೂ ಮೇ 1ರಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ 17ನೇ ಸ...
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ 2024ನೇ ಸಾಲಿನ 'ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ...
©2025 Book Brahma Private Limited.