ರಾಷ್ಟ್ರೀಯ ಜಾನಪದ ಅಕಾಡೆಮಿ ಸ್ಥಾಪನೆಗೆ ಡಾ. ಪುರುಷೋತ್ತಮ ಬಿಳಿಮಲೆ ಅಗ್ರಹ

Date: 05-04-2025

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಮಾತ್ರವಲ್ಲ ಇಡೀ ಭಾರತದೇಶ ಜಾನಪದ ಸಂಸ್ಕೃತಿಯ ಆಡುಂಬಲವಾಗಿದ್ದು ಬಹುತ್ವ, ಬಹುರೂಪಿ ಜಾನಪದವನ್ನು ಸಂರಕ್ಷಿಸಲು ಪೋಷಿಸಲು ರಾಷ್ಟ್ರೀಯ ಜಾನಪದ ಅಕಾಡೆಮಿ ಸ್ಥಾಪನೆ ಅಗತ್ಯವಿದೆಯೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಒತ್ತಾಯಿಸಿ ಈ ಸಂಬಂಧವಾಗಿ ಕೇಂದ್ರ ಸರ್ಕಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮನವಿ ಮಾಡಲಾಗಿದೆ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಬೀದರ್ ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರಲಿಕ್ಕಾಗದ ಪ್ರಶಸ್ತಿ ಪುರಸ್ಕೃರಾದ ಡಾ.ಕೆ. ಚಿನ್ನಪ್ಪಗೌಡ (ಜೀ.ಶಂ.ಪ ತಜ್ಞ ಪ್ರಶಸ್ತಿ), ಚಿತ್ರದುರ್ಗದ ಕಲಾವಿದೆ ಸಿರಿಯಮ್ಮ ಇವರಿಗೆ ಬೆಂಗಳೂರಿನ ಅಕಾಡೆಮಿ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಜಾನಪದವನ್ನು ಒಳಗೊಂಡು ಮಾನವಿಕ ಕ್ಷೇತ್ರದಲ್ಲಿ ಸಂಶೋಧನೆಗಳು ಸೊರಗುತ್ತಿದೆ. ಚಿನ್ನಪ್ಪಗೌಡರ ಸಂಶೋಧನೆಗಳು ಅಧ್ಯಯನಗಳು ಇಂದಿಗೂ ಹೆಗ್ಗರುತುಗಳಾಗಿವೆ. ತುಳು ಜಾನಪದವನ್ನು, ಪಾಡ್ದನಗಳನ್ನು ಇಂಗ್ಲೀಷ್ ಗೆ ಭಾಷಾಂತರಿಸುವುದರ ಮೂಲಕ ತುಳುವಿಗೆ ಜಾಗತಿಕ ಮನ್ನಣೆ ಒದಗಿಸಬೇಕಾಗಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಾನಪದ ವಿದ್ವಾಂಸ ಡಾ.ಕೆ.ಚಿನ್ನಪ್ಪಗೌಡರು ಜನಪದ ಕಲಾವಿದರು ಜಾನಪದ ಪರಂಪರೆಯ ಅಧಿಕೃತ ಒಡೆಯರು ಸಂಶೋಧನಾ ಸಹಭಾಗಿಗಳು ವಿಶ್ವವಿದ್ಯಾಲಯದಷ್ಟೇ ಮುಖ್ಯರಾಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಗೊಲ್ಲಹಳ್ಳಿ ಶಿವಪ್ರಸಾದ ಮಾತನಾಡಿ ಎಲೆ ಮರೆಯ ದೇಸಿ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವ ಗುರುತರ ಕಾರ್ಯವನ್ನು ಅಕಾಡೆಮಿ ಮಾಡುತ್ತಿದೆ ಎಂದರು.

ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕಲಮರಹಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಿಜಿಸ್ಟ್ರಾರ್, ಎನ್ ನಮ್ರತ ಸ್ವಾಗತಿಸಿ ವಂದಿಸಿದರು.

MORE NEWS

ಉಮಾ ಅನಂತ್ ಅವರ ‘ಸಂಗೀತ ಸಾಂಗತ್ಯ’ ಕೃತಿಯ ಲೋಕಾರ್ಪಣಾ ಸಮಾರಂಭ

14-04-2025 ಬೆಂಗಳೂರು

ಬೆಂಗಳೂರು: ಪ್ರಗತಿ ಪ್ರಕಾಶನದಿಂದ ಪ್ರಕಟವಾದ ಲೇಖಕಿ ಉಮಾ ಅನಂತ್ ಅವರ ‘ಸಂಗೀತ ಸಾಂಗತ್ಯ’ ಕೃತಿಯ ಲೋಕಾರ್ಪಣ...

ರಾಧಾಕೃಷ್ಣ ರಾವ್ ಪಾಂಗಾಳ ಅವರ ಬದುಕು ಮತ್ತು ಬರಹ ಕುರಿತ ಕೃತಿ ‘ಪಾಂಗಾಳ ಡಾಕ್ಟ್ರು’ ಲೋಕಾರ್ಪಣೆ ಸಮಾರಂಭ

14-04-2025 ಬೆಂಗಳೂರು

ಬೆಂಗಳೂರು: ಸಾಹಿತಿ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಧಾಕೃಷ್ಣ ರಾವ್ ಪಾಂಗಾಳ ಅವರ ಬದುಕು ಮತ್ತು ಬರಹ ಕುರಿತ ಷ...

ಅನುವಾದದಿಂದ ಕನ್ನಡದ ಜ್ಞಾನ ಪರಂಪರೆಗೆ ಜಾಗತಿಕ ಮಹತ್ವ: ಪ್ರೊ. ವಿಕ್ರಮ ವಿಸಾಜಿ 

13-04-2025 ಬೆಂಗಳೂರು

ಬಸವಕಲ್ಯಾಣ: "ಯೂರೋಪ್ ನಮಗೆ ಅರ್ಥವಾದಷ್ಟು ಯೂರೋಪಿಗೆ ನಾವು ಅರ್ಥವಾಗಿಲ್ಲ. ಕನ್ನಡ ಸಾಹಿತ್ಯ ಅನುವಾದಿಸುವ ಮೂಲಕ ಕನ...