ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ 2023ನೇ ಸಾಲಿನ ಪ್ರಶಸ್ತಿ ಪಟ್ಟಿ ಪ್ರಕಟ

Date: 16-10-2024

Location: ಬೆಂಗಳೂರು


ಉತ್ತರ ಕನ್ನಡ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡಮಾಡುವ 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರಗಳ ಪ್ರಶಸ್ತಿ ಪಟ್ಟಿಯನ್ನು ಘೋಷಿಸಿದೆ.

ʻಕೊಂಕಣಿ ಸಾಹಿತ್ಯʼ ಪ್ರಶಸ್ತಿಗೆʼ ಮಂಗಳೂರಿನ ಮಾರ್ಸೆಲ್ ಎಂ.ಡಿಸೋಜ, ‘ಕೊಂಕಣಿ ಕಲೆʼ ಪ್ರಶಸ್ತಿಗೆ ಮುಂಬೈನ ಹ್ಯಾರಿ ಫರ್ನಾಂಡಿಸ್, ‘ಕೊಂಕಣಿ ಜಾನಪದʼ ಪ್ರಶಸ್ತಿಗೆ ಹೊನ್ನಾವರದ ಅಶೋಕ ದಾಮು ಕಾಸರಕೋಡ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು 50 ಸಾವಿರ ನಗದು ಮತ್ತು ಪುಸ್ತಕ ಪುರಸ್ಕಾರ 25ಸಾವಿರ ನಗದು ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನಿ ಅಲ್ವಾರಿಸ್‌ ಅವರು ತಿಳಿಸಿದ್ದಾರೆ.

`ಬಂಟ್ವಾಳದ ಮೇರಿ ಸಲೋಮಿ ಡಿಸೋಜ ಅವರ ಕವನʼಅಟ್ವೊ ಸುರ್‌ʼ, ಫಾದರ್‌ ರೋಯ್ಸನ್ ಫರ್ನಾಂಡಿಸ್ ಹಿರ್ಗಾನ್‌ ಅವರ ಸಣ್ಣಕತೆ ʻಪಯ್ಲಿ ಭೆಟ್‌ʼ ಹಾಗೂ ಮಂಗಳೂರಿನ ಸ್ಟೀಫನ್‌ ಮಸ್ಕರೇ ನಸ್‌ (ಹೇಮಾಚಾರ್ಯ) ಅವರ ಕೊಂಕಣಿ ಭಾಷಾಂತರ ಕೃತಿ ʻಎಕ್ಸೊ ಎಕ್ಸುರೊ ʼಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತವೆ.

ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್‌ 10 ಭಾನುವಾರದಂದು ಕಾಸರಕೋಡ ಶಾನಭಾಗ ರೆಸ್ಸಿಡೆನ್ಸಿ ಆವರಣದಲ್ಲಿ ನಡೆಯಲಿದ್ದು, ಪ್ರಶಸ್ತಿಯನ್ನು ಮೀನುಗಾರಿಕೆ ಹಾಗೂ ಬಂದರು ಸಚಿವ ಮಂಕಾಳ ವೈದ್ಯ ಪ್ರದಾನ ಮಾಡಲಿದ್ದಾರೆ.

 


MORE NEWS

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕವಿತೆಗಳ ಆಹ್ವಾನ

14-10-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು, ಕರ್ನಾಟಕ ಸಂಭ್ರಮ -50 ರ ಅಭಿಮಾನದ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ...

ಜೀವನದಲ್ಲಿ ಅಧ್ಯಾತ್ಮ ಅನ್ನುವಂತಹದ್ದು ಬಹುಮುಖ್ಯ; ಪ್ರಭಾನಂಜನಾಚಾರ್‍ಯ

13-10-2024 ಬೆಂಗಳೂರು

ಬೆಂಗಳೂರು: ಭಾರ್ಗವಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ವೈದ್ಯೆ ಡಾ. ಶೋಭಾ ವೆಂಕಟ್ ಅವರ ‘ಸ್ತೋತ್ರ ಸಂಗಮ’ ಕೃ...

ಸಿನಿಮಾದ ಮೂಲ ಧ್ಯೇಯ ಮೂಢನಂಬಿಕೆಗಳಿಂದ ದೂರವಾಗಿ ಎನ್ನುವುದು; ವೆಂಕಟೇಶ್ ರಾವ್

11-10-2024 ಬೆಂಗಳೂರು

ಬೆಂಗಳೂರು: ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್ ಪ್ರಸ್ತುತಪಡಿಸುತ್ತಿರುವ ಹೆಚ್.ವೆಂಕಟೇಶ್ ರಾವ್ ನಿರ್ಮಾಣದ, ವ್ಯಾನ ವ...