ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕವಿತೆಗಳ ಆಹ್ವಾನ

Date: 14-10-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು, ಕರ್ನಾಟಕ ಸಂಭ್ರಮ -50 ರ ಅಭಿಮಾನದ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ 4 ವಿಭಾಗವಾರು ‘ಯುವಕವಿ ಗೋಷ್ಠಿ'ಯನ್ನು ಆಯೋಜಿಸುತ್ತಿದ್ದು, ಆಸಕ್ತರು 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ. ರಾಜ್ಯದ ಎಲ್ಲಾ ಭಾಗದ ಆಸಕ್ತ ಕವಿಗಳು ಕನಿಷ್ಠ 3 ಕವಿತೆಗಳನ್ನು ಕಳುಹಿಸಿಕೊಡಬಹುದಾಗಿದೆ. ಕವಿತೆಗಳನ್ನು ಕಳುಹಿಸಲು ಅಕ್ಟೋಬರ್ 30, 2024 ಕೊನೆ ದಿನವಾಗಿದ್ದು, ಆಸಕ್ತ ಕವಿಗಳು ಕವಿತೆಗಳನ್ನು ಸಲ್ಲಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜಾಲತಾಣ http://karnatakasahithyaacademy.org ದಿಂದ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನಿಬಂಧನೆಗಳು ಹೀಗಿವೆ:

1. ಕನಿಷ್ಠ 20 ರಿಂದ ಗರಿಷ್ಠ 40 ವಯಸ್ಸಿನವರು ಕವಿತೆಗಳನ್ನು ಸಲ್ಲಿಸಬಹುದು.

2. ಕವಿತೆಗಳನ್ನು ಸಲ್ಲಿಸುವವರು ವಯಸ್ಸಿನ ದಾಖಲೆಯಾಗಿ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ನಕಲು ಪ್ರತಿಯನ್ನು ಸಲ್ಲಿಸಬೇಕು.

3. ಕನಿಷ್ಠ 3 ಕವಿತೆಗಳನ್ನು ಅಕಾಡೆಮಿಗೆ ಕಳುಹಿಸಿಕೊಡಬೇಕು.

4. ಕವಿತೆಗಳೊಂದಿಗೆ ತಮ್ಮ ಹೆಸರು, ಸ್ಥಳ, ವಿದ್ಯಾರ್ಹತೆ, ದೂರವಾಣಿ ಸಂಖ್ಯೆ ತಾವು ಪ್ರಕಟಿಸಿರುವ ಕವನ ಸಂಕಲನಗಳ ವಿವರಗಳನ್ನು ಕವಿತೆಯೊಂದಿಗೆ ಸಲ್ಲಿಸಬೇಕು.

5. ಕವಿತೆಗಳನ್ನು ಸಲ್ಲಿಸುವ ಲಕೋಟೆಯ ಮೇಲ್ಬಾಗದಲ್ಲಿ ವಿಭಾಗದ ಯುವ ಕವಿಗೋಷ್ಠಿ' ಎಂದು ನಮೂದಿಸಬೇಕು.

6. ಆಯಾ ವಿಭಾಗದ ಯುವ ಕವಿಗಳಿಗೆ ಆಯಾ ವಿಭಾಗದಲ್ಲಿ ಮಾತ್ರ ಕವಿತೆಗಳನ್ನು ವಾಚಿಸಲು ಅವಕಾಶ ನೀಡಲಾಗುವುದು.

7. ಒಂದು ವಿಭಾಗದಲ್ಲಿ ಗರಿಷ್ಠ 15 ಕವಿಗಳಿಗೆ ಮಾತ್ರ ಅವಕಾಶವಿದ್ದು ಕವಿಗಳ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

8. ಕವಿತೆಗಳನ್ನು ಅಕಾಡೆಮಿಗೆ ಸಲ್ಲಿಸಲು ಕೊನೆಯ ದಿನಾಂಕ : 30.10.2024

9. ಕೊನೆಯ ದಿನಾಂಕದ ನಂತರ ಬಂದ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ. ಕವಿತೆಗಳನ್ನು ಸಲ್ಲಿಸಬೇಕಾದ ವಿಳಾಸ ರಿಜಿಸ್ಟ್ರಾರ್
ಕರ್ನಾಟಕ ಸಾಹಿತ್ಯ ಅಕಾಡೆಮಿ 2ನೇ ಮಹಡಿ, ಕನ್ನಡ ಭವನ, ಜೆ. ಸಿ.ರಸ್ತೆ, ಬೆಂಗಳೂರು - 560002

ದೂರವಾಣಿ ಸಂಖ್ಯೆ: 080-22211730, 22106460

MORE NEWS

ಜೀವನದಲ್ಲಿ ಅಧ್ಯಾತ್ಮ ಅನ್ನುವಂತಹದ್ದು ಬಹುಮುಖ್ಯ; ಪ್ರಭಾನಂಜನಾಚಾರ್‍ಯ

13-10-2024 ಬೆಂಗಳೂರು

ಬೆಂಗಳೂರು: ಭಾರ್ಗವಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ವೈದ್ಯೆ ಡಾ. ಶೋಭಾ ವೆಂಕಟ್ ಅವರ ‘ಸ್ತೋತ್ರ ಸಂಗಮ’ ಕೃ...

ಸಿನಿಮಾದ ಮೂಲ ಧ್ಯೇಯ ಮೂಢನಂಬಿಕೆಗಳಿಂದ ದೂರವಾಗಿ ಎನ್ನುವುದು; ವೆಂಕಟೇಶ್ ರಾವ್

11-10-2024 ಬೆಂಗಳೂರು

ಬೆಂಗಳೂರು: ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್ ಪ್ರಸ್ತುತಪಡಿಸುತ್ತಿರುವ ಹೆಚ್.ವೆಂಕಟೇಶ್ ರಾವ್ ನಿರ್ಮಾಣದ, ವ್ಯಾನ ವ...

ಕನ್ನಡವನ್ನು ಕರುಳಿನ ಭಾಷೆಯಾನ್ನಾಗಿಸಿ ಬದುಕಿದ ವ್ಯಕ್ತಿ ಬಿಳಿಮಲೆ; ಹಂಪನಾ

10-10-2024 ಬೆಂಗಳೂರು

ಬೆಂಗಳೂರು: ಚಿರಂತ್ ಪ್ರಕಾಶನ ವತಿಯಿಂದ ಡಾ. ಪುರುಷೋತ್ತಮ ಬಿಳಿಮಲೆಯವರ ‘ಹುಡುಕಾಟ’ ಸಂಶೋಧನಾ ಗ್ರಂಥ ಬಿಡುಗ...