`ಕನ್ನಡನಾಡು ಸಾಹಿತ್ಯ ಶ್ರೀ ಪ್ರಶಸ್ತಿ' ವಿಶ್ವನಾಥ ಭಕರೆ ಭಾಜನ

Date: 24-02-2023

Location: ಬೆಂಗಳೂರು


ಕಲಬುರ್ಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಕೊಡಮಾಡುವ, ಕಲ್ಯಾಣ ಕರ್ನಾಟಕ ಪ್ರದೇಶದ ಉತ್ತಮ ಲೇಖಕರು ಹಾಗೂ ಕೃತಿಗಳಿಗೆ ನೀಡಲಾಗುವ 2021ನೇ ಸಾಲಿನ ಪ್ರಶಸ್ತಿಗೆ ವಿಶ್ವನಾಥ ಭಕರೆ ಆಯ್ಕೆಯಾಗಿದ್ದಾರೆ.

ದಕ್ಷ ಪೊಲೀಸ್‌ ಅಧಿಕಾರಿ ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಕುರಿತಾದ ವಸ್ತುನಿಷ್ಠ ಕಾದಂಬರಿ “ಬಿಸಿಲೂರಿನ ಬಂಡೆ” ಕೃತಿ ಆಯ್ಕೆಯಾಗಿದೆ ಎಂದು ಕನ್ನಡನಾಡು ಪ್ರಕಾಶನ ಸಂಸ್ಥೆಯ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅವರು ತಿಳಿಸಿದ್ದಾರೆ.

ಫೆಬ್ರವರಿ 26 ರಂದು ಕಲಬುರಗಿಯ ವೈ.ಜಿ. ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಬೆಳ್ಳಿಗೆ 10:30ಕ್ಕೆ ಎಂಟು ಕೃತಿಗಳ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವನಾಥ ಭಕರೆ ಅವರ ಲೇಖಕರ ಪರಿಚಯಕ್ಕಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ...

MORE NEWS

ಗುರುದೇವ, ರಜಿಯಾಗೆ ಕಸಾಪ ದತ್ತಿ ಪ್ರಶಸ್ತಿ

03-04-2025 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ 2024ನೇ ಸಾಲಿನ 'ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ಧರ...

ಸಾಹಿತಿ ಹಾಗೂ ಕನ್ನಡ ಪರ ಹೋರಾಟಗಾರ ಪಿ.ವಿ. ನಾರಾಯಣ ಇನ್ನಿಲ್ಲ

03-04-2025 ಬೆಂಗಳೂರು

ಬೆಂಗಳೂರು: ಪ್ರಖ್ಯಾತ ಸಾಹಿತಿ ಹಾಗೂ ಕನ್ನಡ ಪರ ಹೋರಾಟಗಾರ ಪಿ.ವಿ. ನಾರಾಯಣ (82) ಅವರು ಗುರುವಾರ ಬೆಳಿಗ್ಗೆ ವಯೋಸಹಜ ಅನಾ...

ಕುಂ.ವೀ. ಸರ್‌ಗೆ ನಾಡೋಜ ಸಂದಿರುವುದು ನನಗಂತೂ ಹಂಡೆ ಹಾಲು ಖುಷಿ

02-04-2025 ಬೆಂಗಳೂರು

"ಮೇ ಸಾಹಿತ್ಯ ಮೇಳದಲ್ಲಿ ಅವರು ಬಿಡುವಾಗಿದ್ದರೆ ಬಂದು ಸಾಮಾನ್ಯ ಪ್ರೇಕ್ಷಕನಂತೆ ಕುಳಿತು ಎಲ್ಲ ಗೋಷ್ಠಿಗಳಿಗೂ ಸಾಕ್ಷ...