ಕನ್ನಡಮುಂ ಸಕ್ಕದಮುಂ 

Date: 18-05-2024

Location: ಬೆಂಗಳೂರು


"ಸಂಸ್ಕೃತವು ಪ್ರಾಕ್ರುತಗಳ ಸಂಸ್ಕರಿಸಿದ ರೂಪ, ಪ್ರಾಕ್ರುತವು ಸಂಸ್ಕೃತದ ಬಳಕೆಯ ರೂಪ ಎಂಬ ಎರಡೂ ವಿಚಾರಗಳಿರುವಂತೆ, ಸಂಸ್ಕೃತವೂ ಹಲವು ಪ್ರಾಕ್ರುತಗಳೂ ಒಂದು ಸಂಬಂದಿತ ಬಾಶಾಗುಂಪು ಎಂಬ ತಿಳುವಳಿಕೆಯನ್ನೂ ಗಮನಿಸಬೇಕು. ಅಂದರೆ, ಇಂದಿನ ರಾಜಸ್ತಾನಿ ಬಾಶೆಗಳ ವಾಸ್ತವದ/ಸಮಸ್ಯೆಯ ಹಾಗೆ. ರಾಜಸ್ತಾನ ಪರಿಸರದಲ್ಲಿ ಹಲವಾರು ಬಾಶಾಬಗೆಗಳು ಇವೆ, ಅವುಗಳು ಬಾಶೆಗಳೊ, ಒಳನುಡಿಗಳೊ ಎಂಬುದು ಕಶ್ಟದ ಪ್ರಶ್ನೆ. ಹಾಗೆಯೆ ಇದ್ದಿರಲೂಬಹುದು, ಪ್ರಾಕ್ರುತ-ಸಂಸ್ಕೃತ ಇವುಗಳ ನಡುವಿನ ನಂಟು," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಕನ್ನಡಮುಂ ಸಕ್ಕದಮುಂ’ ಕುರಿತು ಬರೆದಿರುವ ಲೇಖನ.

ಕನ್ನಡವು ಸಂಸ್ಕೃತ ಬಾಶೆಗೆ ಇಟ್ಟುಕೊಂಡು ಹೆಸರು ಸಕ್ಕದ. ಇಂದು ಈ ಹೆಸರನ್ನು ಕನ್ನಡ ಮರೆತುಬಿಟ್ಟಿದೆ. ತಮಿಳಿನವರೂ ಹೀಗೆ ಸಂಸ್ಕೃತಕ್ಕೆ ವಡಸೊಲ್ ಎಂಬ ಹೆಸರಿಟ್ಟುಕೊಂಡಿರುವುದನ್ನು ಇಲ್ಲಿ ಹೇಳಬಹುದು. ಅವರು ಇಂದಿಗೂ ಈ ಹೆಸರನ್ನು ಬಳಸುತ್ತಾರೆ. ಈ ಹಿಂದಿನ ಬರಹದಲ್ಲಿ ಓದಿದಂತೆ ಪಾಗದವು ಹಲವಾರು ಮತಪಂತಗಳ ದಾರೆಗಳ ಜೊತೆಗೆ ಮತ್ತು ವಿವಿದ ವಿದ್ವತ್ತಿನ ವಿಶಯಗಳ ಜೊತೆಗೆ ಕನ್ನಡ ಮಾತಾಡುವ ಪರಿಸರಕ್ಕೆ ಹರಿದುಬಂದಿದ್ದಿತು. ಅದರ ಹಿಂದೆಯೆ ಸಕ್ಕದವೂ ಹರಿದುಬಂದಿತು. ಇಲ್ಲಿ, ಈ ಹಿಂದೆ ಪಾಗದ ಎಂದರೆ ಏನು ಎಂಬ ಸಮಸ್ಯೆಯನ್ನು ತಂದ ಹಾಗೆ ಸಂಸ್ಕೃತ ಎಂದರೆ ಏನು ಎಂಬುದೂ ಅಶ್ಟು ಸ್ಪಶ್ಟವಿಲ್ಲ. ಸಂಸ್ಕೃತವು ಪ್ರಾಕ್ರುತಗಳ ಸಂಸ್ಕರಿಸಿದ ರೂಪ, ಪ್ರಾಕ್ರುತವು ಸಂಸ್ಕೃತದ ಬಳಕೆಯ ರೂಪ ಎಂಬ ಎರಡೂ ವಿಚಾರಗಳಿರುವಂತೆ, ಸಂಸ್ಕೃತವೂ ಹಲವು ಪ್ರಾಕ್ರುತಗಳೂ ಒಂದು ಸಂಬಂದಿತ ಬಾಶಾಗುಂಪು ಎಂಬ ತಿಳುವಳಿಕೆಯನ್ನೂ ಗಮನಿಸಬೇಕು. ಅಂದರೆ, ಇಂದಿನ ರಾಜಸ್ತಾನಿ ಬಾಶೆಗಳ ವಾಸ್ತವದ/ಸಮಸ್ಯೆಯ ಹಾಗೆ. ರಾಜಸ್ತಾನ ಪರಿಸರದಲ್ಲಿ ಹಲವಾರು ಬಾಶಾಬಗೆಗಳು ಇವೆ, ಅವುಗಳು ಬಾಶೆಗಳೊ, ಒಳನುಡಿಗಳೊ ಎಂಬುದು ಕಶ್ಟದ ಪ್ರಶ್ನೆ. ಹಾಗೆಯೆ ಇದ್ದಿರಲೂಬಹುದು, ಪ್ರಾಕ್ರುತ-ಸಂಸ್ಕೃತ ಇವುಗಳ ನಡುವಿನ ನಂಟು. ಇರಲಿ, ಈಗ ಸಕ್ಕದವು ಕನ್ನಡದೊಂದಿಗೆ ಒದಗಿದ ಕತೆಯನ್ನು ಮಾತನಾಡೋಣ.

ಸಕ್ಕದವು ಕನ್ನಡದೊಂದಿಗೆ ಒದಗಿ ಬಂದದ್ದು ಮುಕ್ಯವಾಗಿ ವಯಿದಿಕ ಪಂತದ ಜೊತೆಗೆ ಇರಬೇಕು. ವಯಿದಿಕ ಪಂತವು ದಕ್ಶಿಣಕ್ಕೆ ಬಂದದ್ದು ಬಹುಶ/ಬಹುತೇಕ ರಾಜ್ಯರಚನೆಯ ಜೊತೆಜೊತೆಗೆ ಇರಬಹುದು. ಇಲ್ಲಿ, ಈಗಾಗಲೆ ಮಾತನಾಡಿರುವ ಸಂಸ್ಕೃತವು ಕನ್ನಡದ ನೆಲದಲ್ಲಿ ಬಂದ ವಾತಾವರಣವನ್ನು ತುಸು ಹೇಳಬಹುದು. ಶಾತವಾಹನರ ಪತನಾನಂತರ ದಕ್ಕನದ ಮೇಲುಬಾಗವನ್ನು, ಅಂದರೆ ಶಾತವಾಹನರ ಆಡಳಿತ ಪ್ರದೇಶದಲ್ಲಿ ಬಂದ ಮಹತ್ವದ ರಾಜಮನೆತನ ಕದಂಬರದಾಗಿದ್ದಿತು. ಕದಂಬರು ಶಾತವಾಹನರ ರಾಜ್ಯರಚನೆ, ಮತಪಂತ ಮೊದಲಾದವನ್ನು ಮುಂದುವರೆಸಿದರು. ಅಂದರೆ ಶಾತವಾಹನರ ಬವುದ್ದ ಮತವನ್ನು ಕದಂಬರು ಅನುಸರಿಸಿದರು, ಹಾಗೆಯೆ ಶಾತವಾಹನರ ಪ್ರಾಕ್ರುತ ಬಾಶೆಯನ್ನೂ ಕದಂಬರು ಮುಂದುವರೆಸಿದರು. ಆನಂತರ, ತುಸು ಕಾಲದಲ್ಲಿ ಕದಂಬರ ನಿಶ್ಟೆಯು ಬವುದ್ದದಿಂದ ವಯಿದಿಕಕ್ಕೆ ಬದಲಾಗುತ್ತದೆ. ವಯಿದಿಕ ಸಹಜವಾಗಿ ಸಂಸ್ಕೃತದೊಂದಿಗೆ ಆತುಕೊಂಡಿದ್ದ ಮತವಾಗಿದ್ದಿತು. ಹೀಗೆ ಮತನಿಶ್ಟೆಯಲ್ಲಿ ಆದ ಬದಲಾವಣೆಯ ಅನುವಲ್ಲಿ ಅದರೊಂದಿಗೆ ಬಾಶೆ ಕೂಡ ಬರುತ್ತದೆ. ಸಂಸ್ಕೃತ ಎಂಬ ಬಾಶೆ ಇಲ್ಲವೆ ಬಾಶಾಬಗೆ ಕದಂಬರಿಗಿಂತ ಸಾವಿರ ವರುಶಕ್ಕಿಂತ ಮೊದಲಿನಿಂದಲೂ ಬಳಕೆಯಲ್ಲಿದ್ದಿತು ಎನ್ನುವುದು ಸ್ಪಶ್ಟ. ಆದರೆ, ಕನ್ನಡದೊಂದಿಗೆ ಇದು ಎಲ್ಲಿಯಾದರೂ ಸಂಬಂದವನ್ನು ಹೊಂದಿದ್ದಿತೆ ಎಂದು ನೋಡಿದಾಗ, ನಮಗೆ ತಿಳಿದ ಇತಿಹಾಸಿಕ ದಾಕಲೆಗಳು ಇಲ್ಲ. ಹಾಗಾಗಿ, ಕದಂಬರ ಮತನಿಶ್ಟೆಯ ಪಲ್ಲಟದಲ್ಲಿ ವಯಿದಿಕದ ಜೊತೆಗೆ ಕನ್ನಡದ ನಂಟನ್ನು ಸಂಸ್ಕೃತ ಪಡೆದುಕೊಂಡಿರಬಹುದು. ಅದಕ್ಕಿಂತ ಮೊದಲು ಕನ್ನಡ ಪರಿಸರದಲ್ಲಿ ನಡೆದ ವಿದ್ವತ್ತಿನ ಚಟುವಟಿಕೆಗಳಲ್ಲಿ ಸಹಜವಾಗಿ ಸಂಸ್ಕೃತದ ಪರಿಚಯ ಇದ್ದಿತು. ಆದರೆ, ನಂಟು ಇದ್ದುದಕ್ಕೆ ಆದಾರಗಳು ಕಡಿಮೆ. ವಯಿದಿಕ ಮತ ಮಾತ್ರವಲ್ಲದೆ ದರ‍್ಮಿಕ ಮೊದಲಾಗಿ ವಿವಿದ ಶಾಸ್ತçಗಳ ಮೂಲಕ ಕೂಡ ಸಂಸ್ಕುçತವು ಹೆಚ್ಚು ಕನ್ನಡದ ಸಂಬಂದವನ್ನು ಹಿಗ್ಗಿಸಿಕೊಳ್ಳುತ್ತದೆ.

ಆದರೆ, ಇನ್ನೊಂದೆಡೆ ಗಂಗ ರಾಜಮನೆತನದಲ್ಲಿ ಜಯ್ನ ಮತಕ್ಕೆ ಹೆಚ್ಚಿನ ಪೋಶಣೆಯು ಇದ್ದಿತು. ಇದು ಬಹುಕಾಲ ಕನ್ನಡ ಪರಿಸರದಲ್ಲಿ ಮುಂದುವರೆಯುತ್ತದೆ. ಇದನ್ನು ಬಾದಾಮಿ ಚಾಲುಕ್ಯರಲ್ಲಿಯೂ ಕಾಣಬಹುದು. ಬವುದ್ದ ಮತ್ತು ಜಯ್ನದ ಜೊತೆಜೊತೆಗೆ ವಯಿದಿಕ ಕೂಡ ತನ್ನ ಸ್ತಾನವನ್ನು ಹಿಗ್ಗಿಸಿಕೊಳ್ಳುತ್ತಾ ಬರುತ್ತದೆ. ಆದರೆ, ಕ್ರಮೇಣ ಕಾವ್ಯಮೀಮಾಂಸೆಯಲ್ಲಿ, ವ್ಯಾಕರಣದಲ್ಲಿ, ಚಂದಸ್ಸಿನಲ್ಲಿ, ತತ್ವಗ್ನಾನದಲ್ಲಿ ಹೀಗೆ ವಿವಿದ ಗ್ನಾನಶಾಕೆಗಳಲ್ಲಿ ಉತ್ತರದ ವಿದ್ವತ್ತು ಕನ್ನಡವನ್ನು ಆವರಿಸಿಕೊಳ್ಳುತ್ತದೆ. ಈ ಮೂಲಕ ಸಂಸ್ಕುçತವು ಹೆಚ್ಚು ಹೆಚ್ಚು ಪ್ರಾಶಸ್ತ್ಯವನ್ನೂ ಪ್ರಾಮುಕ್ಯತೆಯನ್ನೂ ಪಡೆದುಕೊಳ್ಳುತ್ತದೆ. ಹೀಗೆ ಕನ್ನಡದ ಜೊತೆಗೆ ಹತ್ತಿರದ ಮತ್ತು ಆಳವಾದ ಸಂಬಂದವನ್ನು ಬೆಳೆಸಿಕೊಳ್ಳುತ್ತದೆ ಮಾತ್ರವಲ್ಲದೆ ಪ್ರಬಾವಿಯಾಗಿಯೂ ಬೆಳೆಯುತ್ತದೆ.

ಮುಕ್ಯವಾಗಿ ಇಲ್ಲಿ ಬಾದಾಮಿ ಚಾಲುಕ್ಯರ ಕಾಲದ ಪರಿಸರದ ಬಗೆಗೆ ತುಸು ಮಾತನಾಡಬೇಕು. ಈ ಕಾಲದಲ್ಲಿ ದೊರೆತ ಶಾಸನಗಳಲ್ಲಿ ಹೆಚ್ಚಿನವು ಸಂಸ್ಕುçತ ಇವೆ ಎನ್ನುವುದು ಮಾತ್ರವಲ್ಲದೆ ಈ ಕಾಲಕ್ಕೆ ಸೇರಿದ ಕೆಲವು ವಿದ್ವಾಂಸರ ಹೆಸರುಗಳು ನಮಗೆ ದೊರೆಯುತ್ತವೆ. ಇವುಗಳಲ್ಲಿ ಸಂಸ್ಕೃತದಲ್ಲಿ ಬರೆದ ವಿಜ್ಜಿಕಾ ಇವರಂತ ಹೆಸರುಗಳು ಮತ್ತು ಸಂಸ್ಕೃತದೊಂದಿಗೆ ಹೋಲಿಸಿಕೊಂಡ ರವಿಕರ‍್ತಿ ಇಂತ ಹೆಸರುಗಳು ಇವೆ. ಅಂದರೆ ಸಂಸ್ಕೃತದಲ್ಲಿ ಬರೆಯುವುದು ಮತ್ತು ಸಂಸ್ಕೃತದೊಂದಿಗೆ ಹೋಲಿಸಿಕೊಳ್ಳುವುದು ಅಂದಿಗೆ ಸಾಮಾಜಿಕ ಪ್ರತಿಶ್ಟೆಯಾಗಿದ್ದಿತು. ಇಲ್ಲಿ ಗಮನಿಸಬೇಕಾದ ಮುಕ್ಯವಾದ ಅಂಶವೆಂದರೆ ಪ್ರಾಕ್ರುತ ಬಳಸುವುದಕ್ಕೆ ಹೀಗೆ ಸಾಮಾಜಿಕ ಪ್ರತಿಶ್ಟೆ ಎಂಬುದು ಅಂಟಿಕೊಂಡಿರಲಿಲ್ಲ. ಇದನ್ನು ಮುಂದೆ ಬಹುಕಾಲದವರೆಗೆ ಕಾಣಬಹುದು. ಪಂಪ ಮೊದಲಾದವರು ಉಬಯ ಬಾಶಾ ವಿಶಾರದ ಎಂದು ಹೇಳಿಕೊಂಡಾಗ ಕನ್ನಡ ಮತ್ತು ಸಂಸ್ಕೃತ ಎಂಬುದು ಮಾತ್ರವೆ ರ‍್ತವಾಗುತ್ತಿದ್ದಿತು. ಪಂಪನಿಗೆ ಪ್ರಾಕ್ರುತ ಅದ್ಬುತವಾಗಿ ಗೊತ್ತಿತ್ತು, ಹಾಗೆಯೆ ಅವನಿಗೆ ತೆಲುಗು ಗೊತ್ತಿತ್ತು ಎಂಬ ತಿಳುವಳಿಕೆಯೂ ಇದೆ. ಆದರೆ, ಅವನಿಗೆ ಉಬಯ ಬಾಶಾ ವಿಶಾರದ ಎಂದರೆ ಕನ್ನಡ ಮತ್ತು ಸಂಸ್ಕೃತಗಳಲ್ಲಿ ವಿಶಾರದ ಎಂಬ ಅರ‍್ತ ಮಾತ್ರ ಇದ್ದಿತು.

ಇಲ್ಲಿ, ಕವಿರಾಜಮರ‍್ಗವನ್ನು ಮುಕ್ಯವಾಗಿ ಮಾತಿಗೆ ತೆಗೆದುಕೊಳ್ಳಬೇಕು. ಕವಿರಾಜಮರ‍್ಗ ಇಡಿಯಾಗಿ ಕನ್ನಡ ಕಾವ್ಯಗಳಲ್ಲಿ ಕಾವ್ಯಮೀಮಾಂಸೆ ಎಂಬುದೆ ಇಲ್ಲ ಎಂದು ತಿರಸ್ಕರಿಸುತ್ತದೆ. ಆ ಮೂಲಕ ಉತ್ತರದ ಕಾವ್ಯಮೀಮಾಂಸೆಯನ್ನು ತಂದು ಕನ್ನಡದ ಸಿಂಹಾಸನದ ಮೇಲೆ ಪ್ರತಿಶ್ಟಾಪಿಸುತ್ತದೆ. ಇಡಿಯಾದ ಕವಿರಾಜಮರ‍್ಗ ಕ್ರುತಿ ಇದಕ್ಕೆ ಆದಾರ ಕೊಡುತ್ತದೆ. ಇನ್ನೊಂದೆಡೆ ಈ ಹಿಂದಿನ ಬರಹಗಳಲ್ಲಿ ದ್ವನಿವಿಗ್ನಾನ ಕನ್ನಡದಲ್ಲಿ ಬೆಳೆಯಿತು ಎಂದು ಹೇಳಲಾಗಿದ್ದಿತು. ವ್ಯಾಕರಣ ಬೆಳವಣಿಗೆಯಲ್ಲಿಯೂ ಸಂಸ್ಕೃತದ ಪ್ರಬಾವವೆ ಇದ್ದಿತು. ಹಾಗೆಯೆ ಚಂದಸ್ಸು ಮೊದಲಾಗಿ ಇತರೆಲ್ಲ ಶಾಸ್ತ್ರಗಳಿಗೆ ಸಂಸ್ಕೃತ ಅನಿವರ‍್ಯವಾಗಿದ್ದಿತು. ಇದರ ಜೊತೆಗೆ ತುಸು ನಂತರದಲ್ಲಿ ಶಿಲ್ಪವೂ ಸಂಸ್ಕೃತದ ಪ್ರಬಾವವನ್ನು ಪಡೆದುಕೊಳ್ಳುತ್ತದೆ. ಸಂಸ್ಕೃತದಿಂದ ಈ ಎಲ್ಲ ಮಹತ್ವದ ವಿದ್ವತ್ತು ಕನ್ನಡಕ್ಕೆ ಹರಿದುಬಂದಿತು. ಹೀಗೆ ಅಂದಿನ ಕಾಲದ ಸಾಮಾಜಿಕ ಅವಶ್ಯಕತೆಯಾಗಿ, ಸಾಮಾಜಿಕ ಪ್ರತಿಶ್ಟೆಯಾಗಿ ಸಂಸ್ಕೃತ ಕನ್ನಡಕ್ಕೆ ಒದಗಿತು. ಹೀಗಾಗಿ ಇದು ಕನ್ನಡವನ್ನು ಬಹುವಾಗಿ ಪ್ರಬಾವಿಸಿತು. ಈ ಪ್ರಬಾವವನ್ನು ಕನ್ನಡ ಪದಕೋಶದಲ್ಲಿ ಕಾಣಿಸುವ ದೊಡ್ಡಪ್ರಮಾಣದ ಪದಗಳಲ್ಲಿ ಕಾಣಬಹುದು. ಇದು ಮಾತ್ರವಲ್ಲದೆ ಆಕೆ, ಆತ ಎಂಬ ವಿಶಿಶ್ಟ ರ‍್ವನಾಮಗಳು ಕನ್ನಡದಲ್ಲಿ ಬೆಳೆಯುವುದಕ್ಕೆ ಮತ್ತು ಎಂಬ ಬಳಕೆ ಕನ್ನಡದಲ್ಲಿ ಬೆಳೆಯುವುದಕ್ಕೆ ಮೊದಲಾಗಿ ಹಲವು ಬಾಶೆಯ ರಾಚನಿಕ ಅಂಶಗಳಲ್ಲಿಯೂ ಸಂಸ್ಕೃತ ಪ್ರಬಾವಿಸಿದೆ.

ಒಂದು ಮುಕ್ಯವಾದ ಅಂಶವನ್ನು ಇಲ್ಲಿ ಹೇಳಬೇಕು. ಸಂಸ್ಕೃತವು ವಿದ್ವತ್ತಿನ ಜೊತೆಗೆ ಮೇಲ್ರ‍್ಗವನ್ನು ಅತಿಯಾಗಿ ಆವರಿಸಿಕೊಂಡರೂ ಅದರ ಸಾಮಾಜಿಕ ಪ್ರತಿಶ್ಟೆ ಎಶ್ಟು ತೀವ್ರವಾಗಿತ್ತೆಂದರೆ ಅದು ಸಾಮಾನ್ಯರ ಬದುಕಿನಲ್ಲಿಯೂ ಬೆರೆತುಹೋಯಿತು. ಆನಂತರ ಇಂಗ್ಲೀಶೂ ಹೀಗೆ ಕನ್ನಡಕ್ಕೆ ಪ್ರಬಾವಿಸುವುದನ್ನು ನೋಡಬಹುದು. ಸಂಸ್ಕೃತದ ಮೂಲಕ ಸಾಮಾಜಿಕ ಬದುಕಿಗೆ ಒದಗಿದ ಹಲವು ವಿಶಯಗಳು ಇದಕ್ಕೆ ಕಾರಣವಾಗಿರಬಹುದು. ಮುಕ್ಯವಾಗಿ ವಿವಿದ ಮತಪಂತಗಳ ಜೊತೆಗೆ ಸಂಸ್ಕೃತ ಸಾಮಾನ್ಯರ ಕಡೆಗೆ ನಡೆಯುತ್ತದೆ. ದಕ್ಶಿಣದಲ್ಲಿ ವಯಿದಿಕ ಸಂಸ್ಕೃತದೊಡನೆಯೆ ಬಂದಿತು, ನಿಜ. ಆದರೆ, ಬಹುಹಿಂದೆಯೆ ಜಯ್ನ ಸಂಸ್ಕೃತವನ್ನು ಅಪ್ಯಾಯಮಾನವಾಗಿ ಅಪ್ಪಿಕೊಂಡಿತು. ಬವುದ್ದವೂ ಕನ್ನಡ ಪರಿಸರದಲ್ಲಿ ಇದ್ದಾಗಲೆ ಸಂಸ್ಕೃತವನ್ನು ಒಪ್ಪಿಕೊಂಡಿರಬೇಕು. ಈ ಮತಪಂತಗಳು ಸಾಮಾನ್ಯರ ಬದುಕಿಗೂ ಬಂದಿದ್ದವು. ಇದಕ್ಕೆ ಬೇಕಾದಶ್ಟು ಆದಾರಗಳು ಎಲ್ಲ ಕಡೆ ಸಿಗುತ್ತವೆ. ಹೀಗೆ ಸಾಮಾನ್ಯರ ಮನೆ ಬಾಗಿಲಿಗೂ ಸಂಸ್ಕೃತ ಬಂದಿತು. ಹೀಗೆ ಸಾಮಾನ್ಯರ ಮನೆಗೆ ಸಂಸ್ಕೃತ ಬಂದದ್ದಕ್ಕೆ ಇರಬಹುದಾದ ಇನ್ನೂ ಹಲವು ಕಾರಣಗಳನ್ನು ನಾವಿನ್ನೂ ಅದ್ಯಯನ ಮಾಡಬೇಕಿದೆ.

ಸಂಸ್ಕೃತವು ಸಾಮಾಜಿಕ ಪ್ರತಿಶ್ಟೆಯನ್ನು ಕನ್ನಡಿಗರಲ್ಲಿ, ಕನ್ನಡ ಸಮಾಜದಲ್ಲಿ ಪಡೆದುಕೊಂಡಿತು ಎಂದು ಈ ಮೇಲೆ ಹೇಳಲಾಯಿತು. ಆದರೆ, ಕುತೂಹಲವೆಂದರೆ ಸಂಸ್ಕೃತದ ನಂಟನ್ನು ಅನುಮಾನಿಸುವ ವಿಚಾರ ಅಂದಿನ ಕಾಲದಲ್ಲಿಯೆ ಇದ್ದುದಕ್ಕೆ ನಮಗೆ ಆದಾರಗಳು ದೊರೆಯುತ್ತವೆ. ಇದಕ್ಕೂ ಆದಾರಗಳು ಕವಿರಾಜಮಾರ‍್ಗದಲ್ಲಿಯೆ ದೊರೆಯುತ್ತವೆ. ಕವಿರಾಜಮಾರ‍್ಗದಲ್ಲಿ ಕನ್ನಡ ಮತ್ತು ಸಂಸ್ಕೃತಗಳ ಸಂಬಂದವನ್ನು ತುಪ್ಪ ಮತ್ತು ಎಣ್ಣೆಗೆ ಹೋಲಿಸಿರುವುದನ್ನು ಕಾಣಬಹುದು. ಈ ಸಂಬಂದವನ್ನು ಮುತ್ತು ಮತ್ತು ಮೆಣಸಿಗೆ ಹೋಲಿಸಿದ್ದನ್ನೂ ಕಾಣಬಹುದು. ಇದನ್ನು ಕನ್ನಡ ಮತ್ತು ಸಂಸ್ಕೃತಗಳ ನಡುವಿನ ಸಂಬದದ ಬಗೆಗೆ ಆ ಕಾಲದಲ್ಲಿ ಇದ್ದ ಸಾಮಾಜಿಕ ಅಬಿಪ್ರಾಯವೆಂದು ತೆಗೆದುಕೊಳ್ಳಬೇಕು. ಇದರಿಂದ ಕನ್ನಡ ಮತ್ತು ಸಂಸ್ಕೃತಗಳ ನಡುವಿನ ನಂಟನ್ನು ಅನುಮಾನದಿಂದ ನೋಡುವ ಮತ್ತು ಅದನ್ನು ತಿರಸ್ಕಾರದಿಂದ ನೋಡುವ ವಿಚಾರ ಇದ್ದುದು ಇಲ್ಲಿ ಸ್ಪಶ್ಟವಾಗುತ್ತದೆ. ಇದರ ಜೊತೆಜೊತೆಗೆ ಸಾಮಾಜಿಕವಾಗಿ ಸಂಸ್ಕುçತಬೂಯಿಶ್ಟ ಎಂದು ಕರೆಯುವ ಕನ್ನಡದ ಬಗೆಗೆ ವಿಬಿನ್ನವಾಗಿ ಇನ್ನೊಂದು ಕನ್ನಡ ಬಾಶಾಬಗೆಯೂ ಇದ್ದಿತು ಎಂಬುದಕ್ಕೆ ಆದಾರಗಳು ಶಾಸನಗಳಲ್ಲಿ ಸಿಗುತ್ತವೆ. ಹಲ್ಮಿಡಿಯ ಬಾಶೆಯನ್ನೂ ಕಪ್ಪೆಅರಬಟ್ಟನ ಶಾಸನದ ಬಾಶೆಯನ್ನೂ ಹೋಲಿಸಿದಾಗ ಇದು ಗಮನಕ್ಕೆ ಬಾರದಿರದು.

ಈ ಅಂಕಣದ ಹಿಂದಿನ ಬರೆಹಗಳು:
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...