Date: 13-10-2024
Location: ಬೆಂಗಳೂರು
ಬೆಂಗಳೂರು: ಭಾರ್ಗವಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ವೈದ್ಯೆ ಡಾ. ಶೋಭಾ ವೆಂಕಟ್ ಅವರ ‘ಸ್ತೋತ್ರ ಸಂಗಮ’ ಕೃತಿಯ ಲೋಕಾರ್ಪಣಾ ಸಮಾರಂಭವು 2024 ಅ.13 ಭಾನುವಾರದಂದು ನಗರದ ರಾಜರಾಜೇಶ್ವರಿ ನಗರದ ಕೈಲಾಸ ಆಶ್ರಮ ಮಹಾಸಂಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಕೃತ ವಿದ್ವಾಂಸ ವಿದ್ಯಾವಾಚಸ್ಪತಿ ಡಾ. ವ್ಯಾಸನಕೆರೆ ಪ್ರಭಾನಂಜನಾಚಾರ್‍ಯ ಅವರು ಮಾತನಾಡಿ,"ಇದೊಂದು ಪವಿತ್ರವಾದ ಸಮಾರಂಭವಾಗಿದೆ. ನಮ್ಮ ಸಮಾಜದಲ್ಲಿ ಎಲ್ಲವೂ ಕೂಡ ನಮಗೆ ಸಿಗುತ್ತದೆ. ಆದರೆ ಇಂತಹದ್ದೇ ತೆಗೆದುಕೋ ಎಂದು ಹೇಳಬೇಕಾದರೆ ಗುರು ಇರಬೇಕು. ಅದರಲ್ಲಿಯೇ ನಾವು ಬದುಕಿರುವಂತಹದ್ದು. ಜೀವನದಲ್ಲಿ ಅಧ್ಯಾತ್ಮ ಅನ್ನುವಂತಹದ್ದು ಬಹುಮುಖ್ಯವಾದುದು. ಆತ್ಮ ಇಲ್ಲದೇ ಹೋದರೆ ದೇಹಕ್ಕೆ ಬೆಲೆಯಿಲ್ಲ. ಅಧ್ಯಾತ್ಮಯಿಲ್ಲದೇ ಇದ್ದರೆ ವಿದ್ಯೆಗೆ ಬೆಲೆಯಿಲ್ಲ. ಇವತ್ತು ನಾವು ಬೆಲೆಯಿಲ್ಲದ ವಿದ್ಯೆಗಳನ್ನು ಓದುತ್ತಾ ಇದ್ದೇವೆ," ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಸಗೋಡು ಜಯಸಿಂಹ ಅವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಲವಾರು ಗಣ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಮಂಡ್ಯ: ಹುಟ್ಟಿದ ಮನುಷ್ಯರೆಲ್ಲಾ ಇತಿಹಾಸವನ್ನು ಸೃಷ್ಟಿಸುವುದಿಲ್ಲಾ ಆದರೆ ಇತಿಹಾಸದಲ್ಲಿ ಲೀನವಾಗಿ ಹೋಗುತ್ತಾರೆ ಆದರೆ ಕೆ...
ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವು...
ಮಂಡ್ಯ: "ಅಲ್ಪ ಮಾಹಿತಿಯ ದತ್ತಾಂಶವು, ವಿಪತ್ತು ನಿರ್ವಾಹಣೆಯಲ್ಲಿ ಅಲ್ಪ ಪ್ರಮಾಣದ ತೊಡಕನ್ನು ಕಡಿಮೆಗಳಿಸುತ್ತದೆ,&q...
©2024 Book Brahma Private Limited.