Date: 21-12-2024
Location: ಬೆಂಗಳೂರು
ಮಂಡ್ಯ: "ಅಲ್ಪ ಮಾಹಿತಿಯ ದತ್ತಾಂಶವು, ವಿಪತ್ತು ನಿರ್ವಾಹಣೆಯಲ್ಲಿ ಅಲ್ಪ ಪ್ರಮಾಣದ ತೊಡಕನ್ನು ಕಡಿಮೆಗಳಿಸುತ್ತದೆ," ಎಂದು ಪರಿಸರ ತಜ್ಞ ವಿ.ಎಸ್. ಪ್ರಕಾಶ್ ಅವರು ಹೇಳಿದರು.
ಮಂಡ್ಯದಲ್ಲಿ ಡಿ.20, 21, 22ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಡಿ.21 ಶನಿವಾರದಂದು ಸಮಾನಂತರ ವೇದಿಕೆ "ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್ ವೇದಿಕೆ"ಯಲ್ಲಿ "ಕರ್ನಾಟಕ- ಪ್ರಕೃತಿ ವಿಕೋಪದದ ಆತಂಕಗಳು’ ಕುರಿತ ಗೋಷ್ಠಿಯಲ್ಲಿ ಅವರು ತಮ್ಮ ಆಶಯ ನುಡಿಗಳನ್ನಾಡಿದರು.
"ಪ್ರಕೃತಿಯ ವಿಕೋಪಗಳ ಬಗೆಗೆ ಹೊಸ ಕಲಿಕೆ ಅತ್ಯಗತ್ಯ. ಹಾಗೆಯೇ ವಿಪತ್ತು ನಿರ್ವಾಹಣೆಯಲ್ಲಿ ದತ್ತಾಂಶ ಪ್ರಮುಖವಾದುದು. ಅಲ್ಪ ಮಾಹಿತಿಯ ದತ್ತಾಂಶವು ವಿಪತ್ತು ನಿರ್ವಾಹಣೆಯಲ್ಲಿ ಅಲ್ಪ ಪ್ರಮಾಣದ ತೊಡಕನ್ನು ಕಡಿಮೆಗಳಿಸುತ್ತದೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿಪತ್ತು ನಿರ್ವಹಣಾ ಮಾಪನದ ಅಗತ್ಯವಿದೆ. ಇಂತಹ ಸವಲತ್ತನ್ನು ಕೊಡಬೇಕೆಂದು ಈ ಮೂಲಕ ನನ್ನ ಮನವಿ. ವಿಪತ್ತು ನಿರ್ವಹಣೆಗೆ ಜ್ಞಾನದ ಆಯೋಗವು ಮುಖ್ಯ. ಇದಕ್ಕೆ ಸಂಬಂಧಪಟ್ಟ ಇಲಾಖೆ ಇದರ ಗಮನ ಹರಿಸಬೇಕು," ಎಂದು ತಿಳಿಸಿದರು.
‘ಅಕಾಲಿಕ ಮಳೆ ಮತ್ತು ವಾಯುಭಾರ ಕುಸಿತ’ ಪ್ರಕರಣಗಳ ಕುರಿತು ಮಾತನಾಡಿದ ಡಾ. ಕೇಶವ ಕೂರ್ಸೆ, "ಮಳೆ ಚಕ್ರದ ವಿಜ್ಞಾನ ಒಂದೇ ಆದರೂ, ಆವಿಯಾಗುವ ಪ್ರಕ್ರಿಯೆ ಪ್ರದೇಶದಿಂದ ಪ್ರದೇಶಕ್ಕೆ ಬಹಳ ಭಿನ್ನವಾಗುತ್ತದೆ. ಈಗಾಗಿ ನಮ್ಮ ದೇಶ, ಅಥವಾ ದೇಶದ ಯಾವುದೇ ಪ್ರದೇಶದಲ್ಲಿಯಾಗಿರಬಹುದು ಒಂದು ಕಡೆ ಜಾಸ್ತಿ ಮಳೆ, ಇನ್ನೊಂದು ಕಡೆ ಕಮ್ಮಿ ಮಳೆ. ಇದು ನಿಸರ್ಗ ಸಹಜ ಪ್ರಕ್ರಿಯೆ," ಎಂದು ಹೇಳಿದರು.
ಅಧ್ಯಕ್ಷತೆಯ ನುಡಿಗಳನ್ನಾಡಿದ ಹಿರಿಯ ಪರಿಸರವಾದಿ ಅ.ನಾ ಯಲ್ಲಪ್ಪ ರೆಡ್ಡಿ, "ಪರಿಸರವನ್ನು ನಾವು ಸಂರಕ್ಷಿಸಬೇಕು. ಇಲ್ಲವಾದರೆ ಮುಂದಿನ ಜನಾಂಗಕ್ಕೆ ಪೂರ್ಣ ಪರಿಸರವನ್ನು ತೋರಿಸಲು ನಮಗೆ ಸಾಧ್ಯವೇ ಇಲ್ಲ. ಪರಿಸರದ ಬಗ್ಗೆ ಎಲ್ಲರೂ ಚಿಂತಿಸಿ, ಪರಿಸರಕ್ಕಾಗಿ ಕೆಲಸ ಮಾಡಬೇಕು" ಎಂದು ಹೇಳಿದರು.
ಮಂಡ್ಯ: ಕನ್ನಡ ನಾಡು ಚೆನ್ನಾಗಿ ಬೆಳೆಯಬೇಕು ಅಂದ್ರೆ ಈ ನೆಲದಲ್ಲಿರುವ ಎಲ್ಲವೂ ಬೆಳೆಯಬೇಕು. ಭಾಷೆ ಆಡುವುದರಿಂದ, ಬರೆಯುವು...
ಮಂಡ್ಯ: ಡಿ. 21 ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ “ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್...
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಂಡ್ಯದಲ್ಲಿ ಡಿ.20, 21, 22ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿರುವ 87ನೇ ಅಖಿ...
©2024 Book Brahma Private Limited.