Date: 08-01-2023
Location: ಹಾವೇರಿ
ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ್ನುತ್ತಾರೆ ಎಂದು ಡಾ. ಕವಿತಾ ಕುಸುಗಲ್ಲ
ಕನಕ-ಷರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ನಡೆದ ‘ವರ್ತಮಾನದಲ್ಲಿ ಮಹಿಳೆ’ ವಿಷಯ ಕುರಿತ ಗೋಷ್ಠಿಯಲ್ಲಿ ‘ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳು’ ಕುರಿತ ವಿಷಯ ಮಂಡಿಸಿದರು. ಲೇಖನಿ, ಕಾಗದ ಇಲ್ಲದಿರುವ ಕಾಲಘಟ್ಟದಲ್ಲಿ ರಚಿತವಾದ ಜನಪದ ಸಾಹಿತ್ಯದಲ್ಲಿ ಶೇ. 90 ಕ್ಕೂ ಹೆಚ್ಚು ಸಾಹಿತ್ಯ ರಚನೆಯಲ್ಲಿ ಮಹಿಳೆಯರದ್ದೇ ಸಿಂಹಪಾಲಿದೆ, ಆದರೆ, ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂದು ಡಾ. ಕವಿತಾ ಕುಸುಗಲ್ಲ ಪ್ರಶ್ನಿಸಿದ್ದಾರೆ.
ಜನಪದ ಸಾಹಿತ್ಯದಲ್ಲಿ ಹಿಂದೆ ಬಿದ್ದ ಮಹಿಳೆ
ಗೀಗೀ ಪದ, ಲಾವಣಿಪದ, ಹಂತಿಪದ, ಬೀಸುಕಲ್ಲುಪದ ಮುಂತಾದ ಜನಪದ ಸಾಹಿತ್ಯದಲ್ಲಿ ಶೇ. 90 ಕ್ಕಿಂತ ಹೆಚ್ಚು ಜನಪದ ಸಾಹಿತ್ಯ ರಚನೆಯಾಗಿದ್ದೇ ಮಹಿಳೆಯರಿಂದ. ಪ್ರಸ್ತುತ ಕಾಲಘಟ್ಟ ಸರಿದಂತೆ ಬರವಣಿಗೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿದ್ದು, ಬಹುಶಃ ಅವರಲ್ಲಿನ ಹಿಂಜರಿಕೆ ಅಥವಾ ಪುರುಷ ಪ್ರಧಾನ ಸಮಾಜದಲ್ಲಿ ಅವಕಾಶದ ಕೊರತೆ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ವಿಜಯಪುರದ ಅಕ್ಕಮಹಾದೇವಿ ವಿವಿ ಕುಲಪತಿ ಡಾ. ಬಿ.ಕೆ. ತುಳಸಿ, ತಂತ್ರಜ್ಞಾನದ ಕ್ಷೇತ್ರದಲ್ಲಿಯೂ ಮಹಿಳೆ ತೊಡಗುವಂತೆ ಮಾಡಲು ಸಾಕಷ್ಟು ಅರಿವು, ಕೌಶಲ್ಯ ನೀಡಬೇಕಿದೆ. ಔದ್ಯೋಗಿಕ ಸಹಭಾಗಿತ್ವಕ್ಕೆ, ಮಹಿಳಾ ನಾಯಕತ್ವಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದರು.
“ಗ್ರಾಮೀಣ ಮಹಿಳೆಯರ ಸಾಧನೆಗಳು’ ಕುರಿತು ಕೆಎಲ್ಇ ಕಾಲೇಜು ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಡಾ. ವೀಣಾ, ಈ, ದಿನನಿತ್ಯದ ಬದುಕಿನಲ್ಲಿ ಹಲವರು ಮಹಿಳಾ ಸಾಧಕರು ಕಂಡುಬರುತ್ತಾರೆ, ಸಾಂಸ್ಕತಿಕ ರಾಯಭಾರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕತ ಸುಕ್ರಜ್ಜಿ, ವೃಕ್ಷಮಾತೆ ತುಳಸಿಗೌಡರ್, ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ ಸಾಧಕರಿದ್ದಾರೆ. ಸಾಧನೆ ಮಾಡುವ ಮನಸ್ಸಿದ್ದರೆ ಲಿಂಗ ಭೇದ ಅಡ್ಡಿಯಾಗಲಾರದು ಎಂದರು.
ಅನ್ನದಾತರ ಅಳಲು ಮತ್ತು ಅಪೇಕ್ಷೆ
ಕೃಷಿ ಕೃಶವಾಗುತ್ತಿದೆ. ರೈತರು ಶ್ರಮದ ಜೊತೆಗೆ ಬೆಳೆಯಲ್ಲೂ ವೈವಿಧ್ಯತೆ ಅಳವಡಿಸಿಕೊಂಡು, ಸಮಗ್ರ ಕೃಷಿ ಪದ್ಧತಿಯಲ್ಲಿ ವೈವಿಧ್ದಯತೆ ಮತ್ತು ವ್ಯವಹಾರಿಕೆಯಿಂದ ಕೃಷಿ ಮಾಡಿದರೆ ಮಾತ್ರ ಲಾಭ ಪಡೆಯಲು ಸಾಧ್ಯ. ಉನ್ನತ ಸಾಧನೆ ಮಾಡಿದ ಕೃಷಿಕರ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಸಮ್ಮೇಳನಗಳಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡುವುದು ಸೂಕ್ತ ಎಂದು ಧಾರವಾಡದ ವಿಶ್ರಾಂತ ಕುಲಪತಿ ಎಸ್.ಎ. ಪಾಟೀಲ್ ಹೇಳಿದರು.
ಕೃಷಿಕ ಮತ್ತು ಕೃಷಿ ಕಾರ್ಮಿಕರ ಸ್ಥಿತಿಗತಿ
ಇಂದು ರೈತ ತನ್ನ ಕೃಷಿ ಪರಿಕರಗಳ ಜೊತೆಗೆ ಸಾಕು ಪ್ರಾಣಿಗಳನ್ನು ಮಾರುವ ಸ್ಥಿತಿ ಬಂದಿದೆ. ರೈತನ ಸಾಲದ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎನ್ನುತ್ತಾರೆ ಕೃಷಿಕ ಈರಯ್ಯ ಕಿಲ್ಲೇದಾರ.
ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ಸಚಿವಾಲಯ
ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಅನಿವಾಸಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ತೆರೆದು ಮಂತ್ರಿಗಳನ್ನು ನೇಮಕ ಮಾಡುವಂತೆ ದುಬೈ ಕನ್ನಡ ಸಂಘಟನೆಯ ಅಧ್ಯಕ್ಷ ಸರ್ವೊತ್ತಮ ಶೆಟ್ಟಿ ಗೋಷ್ಠಿಯಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಘಟಕಗಳ ಸಮಿತಿ ಸದಸ್ಯೆ ಡಾ.ಆರತಿ ಕೃಷ್ಣ, 50 ಲಕ್ಷ ಅನಿವಾಸಿ ಕನ್ನಡಿಗರು ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ. ಇವರಿಗಾಗಿ ಸರ್ಕಾರ ಪ್ರತ್ಯೇಕ ನೀತಿಯನ್ನು ಜಾರಿಗೆ ತರಬೇಕು. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ.
ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...
ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...
ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇಯ ದಿನದ ಒಂಭತ್ತನೇ ಗೋಷ್ಠಿಯು ಕನಕ ಶರೀಫ-ಸರ್ವಜ್ಞ ಪ್ರದಾನ...
©2024 Book Brahma Private Limited.