Gandasaagi kavithe bareyuvudu sulabha; ಪುರುಷತ್ವದ ಮದವಿಲ್ಲ ಬದಲಾಗಿ ಒಲವು ಚೆಲುವಿನ ಹದವಿದೆ


"ಗಂಡಸಾಗಿ ಕವಿತೆ ಬರೆಯುವುದು ಸುಲಭ ಕೃತಿಯ ಕವಿತೆಗಳು ಎಲ್ಲ ಗಂಡಸರ ಮತ್ತು ಹೆಂಗಳೆಯರ ಬದುಕಿನ ಅನುಭವದ ಪ್ರತಿಫಲನಗಳು ಎಂಬುದೆ ನನ್ನ ವಿನಮ್ರ ಅನಿಸಿಕೆ. ಇಲ್ಲಿ ಗಂಡಸೆಂಬ ಅಹಂಕಾರವಿಲ್ಲ ವಿನಯತೆಯುಳ್ಳ ಪ್ರೀತಿಯಿದೆ. ಪುರುಷತ್ವದ ಮದವಿಲ್ಲ ಬದಲಾಗಿ ಒಲವು ಚೆಲುವಿನ ಹದವಿದೆ. ಇಲ್ಲಿನ ಕವಿತೆಗಳಲ್ಲಿ ಪ್ರೇಯಸಿ-ಹೆಂಡತಿಯೆಡೆಗೆ ಪ್ರಿಯಕರನ-ಗಂಡನ ಅಗಾಧ ಪ್ರೀತಿಯ ಅಭಿವ್ಯಕ್ತಿ ಇದೆ," ಎನ್ನುತ್ತಾರೆ ಟಿ.ಬಿ.ಅನಿತಾ ಉಮೇಶ್. ಅವರು ಟಿ.ಪಿ ಉಮೇಶ್ ಅವರ ‘ಗಂಡಸಾಗಿ ಕವಿತೆ ಬರೆಯುವುದು ಸುಲಭ’ ಕೃತಿಗೆ ಬರೆದ ಹಿನ್ನುಡಿ.

ನನ್ನ ಯಜಮಾನರಾದ ಟಿ.ಪಿ.ಉಮೇಶ್ ತುಂಬ ಪ್ರಾಮಾಣಿಕ ವ್ಯಕ್ತಿ. ಬಹಳಷ್ಟು ಶಿಸ್ತು ಸಜ್ಜನಿಕೆ ವ್ಯಕ್ತಿತ್ವ ಹೊಂದಿದ ಇವರು ಅಪಾರ ಅಧ್ಯಯನಶೀಲರು ಮತ್ತು ಸಮರ್ಥ ಶಿಕ್ಷಕರು ಆಗಿದ್ದಾರೆ. ತುಂಬ ಭಾವನಾ ಜೀವಿಯಾದ ಇವರು ತಮ್ಮ ನೋವು ನಲಿವುಗಳ ಯಾವುದೇ ಹಿಂಜರಿಕೆಯಿಲ್ಲದೆ ಹಂಚಿಕೊಳ್ಳುವರು ಮತ್ತು ಬರೆಯುವರು. ಇವರ ಕವಿತೆ ಕತೆ ಲೇಖನಗಳ ಮೊದಲ ಓದುಗಳು ನಾನೆ. ಅವರೂ ತಮ್ಮ ಬರಹಗಳ ಓದಿ ಹೇಳಿ ತಿದ್ದುಪಡಿಯಿದ್ದರೆ ಕೇಳುವರು. ತಪ್ಪು ತಿದ್ದುಗಳ ಹೇಳಿದಾಗ ಮರುಮಾತಿಲ್ಲದೆ ಒಪ್ಪಿಕೊಳ್ಳುವರು. ದಿನದ ಜೀವನದಲ್ಲಿಯು ಸಹ ಗೊತ್ತಿರುವ ವಿಚಾರದ ಕುರಿತು ಎದುರಿಗೆ ಯಾರೆ ಇರಲಿ ಸರಿಯೆನಿಸಿದ್ದು ಹೇಳಿಬಿಡುವ ಸಹೃದಯರು. ಮಾತಲ್ಲಿ ಕರ್ತವ್ಯದಲ್ಲಿ ತಪ್ಪು ಕಂಡು ಬಂದರೆ ತಕ್ಷಣವೇ ಕ್ಷಮೆ ಕೇಳುವ ಮಮತಾಮಯಿ ಮುಂದೆ ಎಚ್ಚರಿಕೆಯಲ್ಲಿರುವಂತಹ ಸಭ್ಯತೆಯುಳ್ಳವರು.

ಗಂಡಸಾಗಿ ಕವಿತೆ ಬರೆಯುವುದು ಸುಲಭ ಕೃತಿಯ ಕವಿತೆಗಳು ಎಲ್ಲ ಗಂಡಸರ ಮತ್ತು ಹೆಂಗಳೆಯರ ಬದುಕಿನ ಅನುಭವದ ಪ್ರತಿಫಲನಗಳು ಎಂಬುದೆ ನನ್ನ ವಿನಮ್ರ ಅನಿಸಿಕೆ. ಇಲ್ಲಿ ಗಂಡಸೆಂಬ ಅಹಂಕಾರವಿಲ್ಲ, ವಿನಯತೆಯುಳ್ಳ ಪ್ರೀತಿಯಿದೆ. ಪುರುಷತ್ವದ ಮದವಿಲ್ಲ ಬದಲಾಗಿ ಒಲವು ಚೆಲುವಿನ ಹದವಿದೆ. ಇಲ್ಲಿನ ಕವಿತೆಗಳಲ್ಲಿ ಪ್ರೇಯಸಿ-ಹೆಂಡತಿಯೆಡೆಗೆ ಪ್ರಿಯಕರನ-ಗಂಡನ ಅಗಾಧ ಪ್ರೀತಿಯ ಅಭಿವ್ಯಕ್ತಿ ಇದೆ. ಇಲ್ಲಿನ ಕವಿತೆಗಳು ನನ್ನವೂ ಎಂಬುದೇ ಒಂದು ಹೆಮ್ಮೆ. ನನ್ನ ಪತಿಯವರ ದೇವರಿಗೆ ಬೀಗ, ಫೋಟೊಕ್ಕೊಂದು ಫ್ರೇಮು, ವಚನಾಂಜಲಿ, ವಚನವಾಣಿ, ನನ್ನಯ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್, ಅಪ್ಪನು ಕೊಡಿಸಿದ ಮೊದಲ ಪುಸ್ತಕ ಕೃತಿಗಳಂತೆ ಗಂಡಸಾಗಿ ಕವಿತೆ ಬರೆಯುವುದು ಸುಲಭ! ಕೃತಿಯ ಕವಿತೆಗಳು ಓದುಗರಿಗೆ ಅಪಾರ ಸಂತಸ ಹಾಗು ಜೀವನಕ್ಕೆ ನಿರಂತರ ಉತ್ಸಾಹ ತುಂಬುವುದರಲ್ಲಿ ಅನುಮಾನವಿಲ್ಲ.

"ಕೈಮೇಲಿನ ನಿನ್ನೆಸರ ಹಚ್ಚೆ ಅಳಿಸಬಹುದು;
ನನ್ನೆದೆಯೊಳಗಿನ ನಿನ್ನೊಲವ ಕಿಚ್ಚನ್ನು ನಂದಿಸಲಾಗದು ಉಸಿರಿರುವವರೆಗೆ!"
"ನಾ...ನೆಂಬುದ ಇಲ್ಲವಾಗಿಸುತಲಿ, ನೀ...ನೆಂಬುದ ನೆಪವಾಗಿಸುತಲಿ
'ನಾವು ನಾವೆಂಬುದ' ಸ್ಥಿರವಾಗಿಸಿಕೊಂಡೆ!" ಎಲ್ಲಾ ಕವಿತೆಗಳನ್ನು ಮತ್ತೆ ಮತ್ತೆ ಓದುವುದೇ ಮಹದಾನಂದ ಈ ಸಾಹಿತ್ಯದಾನಂದ ನಿಮ್ಮೆಲ್ಲರದಾಗಲಿ.

MORE FEATURES

GANDHI MAY; ಇಲ್ಲೊಂದು ಎಚ್ಚೆತ್ತ ನಾಗರಿಕ ಪ್ರಜ್ಞೆಯ ಮನಸ್ಸು ಕೆಲಸ ಮಾಡುತ್ತಿದೆ

10-01-2025 ಬೆಂಗಳೂರು

“ಭಾರತದ ಪ್ರಭುತ್ವ ಅಧಿಕಾರಶಾಹಿ ರಾಜಕೀಯ ಪಕ್ಷಗಳು, ಹೇಗೆ ಸಂವಿಧಾನಾತ್ಮಕ ನೈತಿಕತೆ ಮತ್ತು ಆದರ್ಶದ ಗೆರೆಗಳನ್ನು ಉ...

Dara Shiko; ಕನ್ನಡ ಓದುಗರನ್ನು, ಪ್ರೇಕ್ಷಕರನ್ನೂ ದಾರಾ ಮುಟ್ಟಿದ್ದಾನೆ

10-01-2025 ಬೆಂಗಳೂರು

“ನನ್ನ ಓದಿನ ಪರಿಮಿತಿಯಲ್ಲಿ ಹೇಳುವುದಾದರೆ ನನ್ನ ಈ ಪುಟ್ಟ ಕೃತಿ ದಾರಾಶಿಖೋನನ್ನು ಕುರಿತು ಕನ್ನಡದಲ್ಲಿ ಬಂದ ಮೊದಲ...

Nadavargal; ಇಲ್ಲಿರುವ ಎಲ್ಲ ಬರಹಗಳೂ ಸಾಂದರ್ಭಿಕವಾದಂಥವು

10-01-2025 ಬೆಂಗಳೂರು

“ನನ್ನ ಈ 'ನಾಡವರ್ಗಳ್' ಪುಸ್ತಕವನ್ನು ಸಿದ್ದಗೊಳಿಸುತ್ತಿರುವಾಗ ನಾನು ಇನ್ನೂ ಎಷ್ಟೊಂದು ಸಂಪನ್ನರ ಬಗ್ಗೆ...