Date: 14-11-2024
Location: ಬೆಂಗಳೂರು
ಬೆಂಗಳೂರು: ಬ್ರಿಟಿಷ್ ಲೇಖಕಿ ಸಮಂತಾ ಹಾರ್ವೆ ಅವರು 2024ನೇ ಸಾಲಿನ ಪ್ರತಿಷ್ಠಿತ `ಬೂಕರ್ ಸಾಹಿತ್ಯ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ₹50.75 ಲಕ್ಷ್ಮ ನಗದನ್ನು ಒಳಗೊಂಡಿದೆ.
ಪ್ರತಿಷ್ಠಿತ ಬೂಕರ್ ಸಾಹಿತ್ಯ ಪ್ರಶಸ್ತಿಯು ಸಮಂತಾ ಹಾರ್ವೆ ಅವರ ‘ಆ್ಯಂಬಿಷಿಯಸ್ ಅಂಡ್ ಬ್ಯೂಟಿಫುಲ್’ ಮತ್ತು ‘ಆರ್ಬಿಟಲ್‘ ಕಾದಂಬರಿಗೆ ಲಭಿಸಿದೆ.
ಮಂಗಳವಾರ ಲಂಡನ್‌ನ ಓಲ್ಡ್ ಬಿಲ್ಲಿಂಗ್ಸ್‌ಗೇಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಲೇಖಕಿ ಹಾರ್ವೆ ಅವರು ‘ಭೂಮಿಯ ಪರವಾಗಿ ಧ್ವನಿ ಎತ್ತುವ ಎಲ್ಲರಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು. ‘ಬಾಹ್ಯಾಕಾಶ ಒಂದು ಗ್ರಾಮ. ಅಲ್ಲಿನ ಸೌಂದರ್ಯ, ಬೆರಗನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಪ್ರಕೃತಿ ಎಂದೇ ನಾನು ಅದನ್ನು ಪರಿಗಣಿಸಿದೆ’ ಎಂದು ಹೇಳಿದರು.
ಬೂಕರ್ ಪ್ರಶಸ್ತಿಯನ್ನು ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ 1969ರಿಂದಲೂ ನೀಡಲಾಗುತ್ತಿದೆ.
ಬೆಂಗಳೂರು: ಅಂಕಿತ ಪ್ರಕಾಶನದ ವತಿಯಿಂದ ಚಿತ್ರಸಮೂಹ ಸಹಯೋಗದಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಹಾಗೂ ವಾರ್ತಾ ಮತ್ತು ಸಾರ್ವಜನ...
ಬೆಂಗಳೂರು: 'ವಿನಯ ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ಅಧಿಕಾರ ಬಂದರೆ ಅಹಂಕಾರ ಒಟ್ಟೊಟ್ಟಿಗೆ ಬರುತ್ತದೆ. ಕೇಂದ...
ಬೆಂಗಳೂರು: ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ನೀಡುವ ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022ಕ್ಕೆ ಕವಿ, ನಾಟಕಕಾರ ಬೇಲೂರು ...
©2024 Book Brahma Private Limited.