ಭಾರತದ ಪ್ರವೇಶಕ್ಕೆ ಮತ್ತೊಂದು ಕಾಲು ಹಾದಿ ‘ಮಹಾಭಾರತ ಪ್ರೇಮ ಮತ್ತು ಯುದ್ಧ’


"ಮಹಾಭಾರತ ಎಂಬ ಮಹಾಕಾವ್ಯಕ್ಕೆ 'ಭಾರತ' ಎಂದೂ ಸಂಕ್ಷಿಪ್ತವಾಗಿ ಕರೆಯುತ್ತಾರೆ. ವ್ಯಾಸರು ರಚಿಸಿದ ಈ ಮಹಾಭಾರತವನ್ನು. ಅವರುಇ, ಮತ್ತೆ ಮತ್ತೆ ಹಲವಾರು ಜನ ಬರೆದಿದ್ದಾರೆ. ಆದರೆ ಗೋಪಾಲಕೃಷ್ಣ ಕುಂಟಿನಿಯವರು ಭಾರತದ ಮತ್ತೊಂದು ಸಾಧ್ಯತೆಯೊಂದಿಗೆ ಕೃತಿಯನ್ನು ಓದುಗರಿಗೆ ಮುಖಾಮುಖಿಯಾಗಿ ನಿಲ್ಲಿಸುತ್ತಾರೆ. ಅದೇ ಈ ಕೃತಿಯು ವಿಶಿಷ್ಟವೆನ್ನಿಸಲು ಮುಖ್ಯ ಕಾರಣ," ಎನ್ನುತ್ತಾರೆ ಅಜಿತ್ ಹರೀಶಿ ಅವರು ಗೋಪಾಲಕೃಷ್ಣ ಕುಂಟಿನಿ ಅವರ ‘ಮಹಾಭಾರತ ಪ್ರೇಮ ಮತ್ತು ಯುದ್ಧ’ ಕೃತಿ ಕುರಿತು ಬರೆದ ವಿಮರ್ಶೆ.

ಕೃತಿ: ಮಹಾಭಾರತ ಪ್ರೇಮ ಮತ್ತು ಯುದ್ಧ
ಲೇಖಕರು- ಗೋಪಾಲಕೃಷ್ಣ ಕುಂಟಿನಿ
ಪ್ರಕಾಶಕರು: ಸಾವಣ್ಣ ಪ್ರಕಾಶನ

ನಾವು ಮಕ್ಕಳಿರುವಾಗ "ಭಾರತವನ್ನು ಕಂಡುಹಿಡಿದವರು ಯಾರು?" ಎಂಬ ಪ್ರಶ್ನೆಯನ್ನು ಎದುರಿಸಿಯೇ ಇರುತ್ತೇವೆ. ಬಾಯಿಪಾಠದ ಫಲವಾಗಿ 'ವಾಸ್ಕೋ ಡ ಗಾಮ' ಎಂಬ ಉತ್ತರವನ್ನೂ ನೀಡಿರುತ್ತೇವೆ. ಆದರೆ ಕಾಲೇಜಿಗೆ ಬರುವ ವೇಳೆಗೆ 'ಯಾಕೆ, ವಾಸ್ಕೋ ಡ ಗಾಮ ಬರುವ ಮೊದಲು ಭಾರತ ಇರಲಿಲ್ಲವಾ?' ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಮಹಾಭಾರತ ಎಂಬ ಮಹಾಕಾವ್ಯಕ್ಕೆ 'ಭಾರತ' ಎಂದೂ ಸಂಕ್ಷಿಪ್ತವಾಗಿ ಕರೆಯುತ್ತಾರೆ. ವ್ಯಾಸರು ರಚಿಸಿದ ಈ ಮಹಾಭಾರತವನ್ನು, ಮತ್ತೆ ಮತ್ತೆ ಹಲವಾರು ಜನ ಬರೆದಿದ್ದಾರೆ. ಆದರೆ ಗೋಪಾಲಕೃಷ್ಣ ಕುಂಟಿನಿಯವರು ಭಾರತದ ಮತ್ತೊಂದು ಸಾಧ್ಯತೆಯೊಂದಿಗೆ ಕೃತಿಯನ್ನು ಓದುಗರಿಗೆ ಮುಖಾಮುಖಿಯಾಗಿ ನಿಲ್ಲಿಸುತ್ತಾರೆ. ಅದೇ ಈ ಕೃತಿಯು ವಿಶಿಷ್ಟವೆನ್ನಿಸಲು ಮುಖ್ಯ ಕಾರಣ.

ಕೃತಿಕಾರರೇ ಹೇಳಿರುವಂತೆ ಇಲ್ಲಿರುವ ಕತೆಗಳನ್ನು ಮೂಲ ವ್ಯಾಸರ ಮಹಾಭಾರತದಿಂದಲೆ ಆರಿಸಲಾಗಿದೆ. ಇಲ್ಲಿನ ಕೆಲವು ಕತೆಗಳು ನಮಗೆ ಗೊತ್ತು. ಆದರೆ ಅದನ್ನು ಕುಂಟಿನಿಯವರ ನೋಟದಿಂದ ನೋಡಿದರೆ ಹೌದಲ್ವಾ ಅನ್ನಿಸುವುದು ನಿಕ್ಕಿ. ಇನ್ನು ಕೆಲವು ಕತೆಗಳು, ನನ್ನ ಮಿತಿಯಲ್ಲಿ ಕೇಳಿರದ ಅಥವಾ ಗಮನಿಸಿರದ ಕತೆಗಳು.

ವ್ಯಾಸ ಉವಾಚ ಎಂಬ ಲೇಖಕರ ಮಾತಿನ ಅಧ್ಯಾಯವೇ ಒಂದು ರೀತಿಯಲ್ಲಿ ಆಕರ್ಷಕವಾಗಿದೆ. ಅದನ್ನು ದಾಟಿ ಹೋದಾಗ ಪ್ರೇಮ ಮತ್ತು ಯುದ್ಧ ಎಂಬ ಎರಡು ಭಾಗಗಳಲ್ಲಿ ಕತೆಗಳು ಟಿಸಿಲೊಡೆಯುತ್ತವೆ. ಈ ಕತೆಗಳನ್ನು ಹೇಳುವ ಶೈಲಿ, ತಂತ್ರ ಮತ್ತು ನಿರೂಪಣೆ ಅನನ್ಯವಾದುದು. ಕತೆಗಳ ಮೂಲಕ ಅಲ್ಲಲ್ಲಿ ವ್ಯಾಸರನ್ನು ಮತ್ತು ಮಹಾಭಾರತವನ್ನು ವಿಮರ್ಶಿಸುವ ಅಪೂರ್ವ ಪ್ರಯತ್ನವನ್ನು ಕುಂಟಿನಿಯವರು ಮಾಡಿದ್ದು ಪ್ರಶಂಸನೀಯವಾಗಿದೆ.

ಪ್ರೇಮ ಭಾಗದಲ್ಲಿನ- ಬಯಲು ರತಿಯ ಭಾಗ್ಯ, ಬೆಳಕೇ ಕತ್ತಲಾಯಿತು, ಕಾರಣ ಮಂತ್ರಫಲ, ಮದ ಮಾದಕತೆ, ನೀರಾಯಿತು ಪ್ರೇಮ, ಪ್ರೇಮಿ ನಾರದ, ಅಗ್ನಿಯ ಪ್ರೇಯಸಿ ಸ್ವಾಹಾ, ದ್ರೌಪದಿಯ ಕುಡಿನೋಟ ಬೇರೆ ಬೇರೆ ಕಾರಣಗಳಿಗಾಗಿ ಇಷ್ಟವಾಗುತ್ತದೆ. ಯುದ್ಧ ಭಾಗದಲ್ಲಿರುವ- ಯುದ್ಧ ಸಿದ್ಧ, ಹೀಗೊಂದು ಮುಕ್ತಾಯ, ಒಂದು ಪ್ರಶ್ನೆ ಒಂದು ಉತ್ತರ ಅಚ್ಚರಿಯ ಮಾಹಿತಿಗಳನ್ನು ನೀಡುತ್ತವೆ. ಇಂತಹ ಒಂದು ವಿಭಿನ್ನವಾದ ಹೊತ್ತಿಗೆಯನ್ನು ನೀಡಲು ಗೋಪಾಲಕೃಷ್ಣ ಕುಂಟಿನಿಯವರು ಹಾಕಿದ ಶ್ರಮವು ಸಾರ್ಥಕವಾಗಿದೆ.

- ಅಜಿತ್ ಹರೀಶಿ

MORE FEATURES

ಶೈಕ್ಷಣಿಕ ಕೆಲಸಗಳೂ ಇರುತ್ತಿದ್ದುದರಿಂದ ಓದಲು ಸಮಯ ಹೊಂದಾಣಿಕೆ ಮಾಡುವುದು ಸವಾಲಾಗಿತ್ತು

18-10-2024 ಬೆಂಗಳೂರು

"ಮನೆಯಲ್ಲಿ ಓದಿ ನಿಲ್ಲಿಸಿದ ಪುಟದಿಂದ ಗ್ರಂಥಾಲಯದ ಪ್ರತಿಯಲ್ಲಿ ಮತ್ತೆ ಸ್ವಪ್ನ ಸಾರಸ್ವತದ ಓದು. 9.10ಕ್ಕೆ ಕ್ಲಾಸಿ...

ಕೃಷಿ ಉತ್ಪನ್ನಗಳಲ್ಲಿ ಹೂವು, ಹಣ್ಣು ಮತ್ತು ತರಕಾರಿಗಳು ಪ್ರಮುಖ ಪಾತ್ರ ವಹಿಸುತ್ತವೆ

18-10-2024 ಬೆಂಗಳೂರು

“ಕವನಗಳು ಯಾವುದೇ ವಿಷಯದ ಬಗ್ಗೆ ಕವಿಗಳ ಮನೋಭಾವನೆಗಳನ್ನು, ಅಭಿಪ್ರಾಯಗಳನ್ನು ಅಥವಾ ಊಹೆಗಳನ್ನು ಬಹಳ ಅಚ್ಚುಕಟ್ಟಾಗ...

ಪ್ರವಾಸಿ ಸಾಹಿತ್ಯದಲ್ಲಿ ಆಶಾದಾಯಕ ಬೆಳವಣಿಗೆಯನ್ನು ಮೂಡಿಸುವ ಕೃತಿಯಿದು

17-10-2024 ಬೆಂಗಳೂರು

“ಪ್ರವಾಸ ಸಾಹಿತ್ಯ ಬರಹಗಾರನ ಕೌಶಲ್ಯತೆಯಿಂದ ಇಲ್ಲಿಯವರೆಗೆ ಏಕತಾನತೆಯ ಏಕಮುಖದ ದಿಕ್ಕನ್ನು ತಪ್ಪಿಸಿ ಎಲ್ಲಾ ದಿಕ್ಕ...