ಕೃಷಿ ಉತ್ಪನ್ನಗಳಲ್ಲಿ ಹೂವು, ಹಣ್ಣು ಮತ್ತು ತರಕಾರಿಗಳು ಪ್ರಮುಖ ಪಾತ್ರ ವಹಿಸುತ್ತವೆ


“ಕವನಗಳು ಯಾವುದೇ ವಿಷಯದ ಬಗ್ಗೆ ಕವಿಗಳ ಮನೋಭಾವನೆಗಳನ್ನು, ಅಭಿಪ್ರಾಯಗಳನ್ನು ಅಥವಾ ಊಹೆಗಳನ್ನು ಬಹಳ ಅಚ್ಚುಕಟ್ಟಾಗಿ ಪ್ರತಿಬಿಂಬಿಸಿ, ಓದುಗರಿಗೆ ಪದಗಳ ಮೂಲಕ ತಿಳಿಸಿಕೊಡುತ್ತವೆ” ಎನ್ನುತ್ತಾರೆ ಹೆಚ್.ವಿ. ಗಣೇಶ್. ಅವರು ಲಕ್ಷ್ಮಣ ಮೂರ್ತಿ ಅವರ ‘ಮಾತೃಮಡಿಲು’ ಕವನ ಸಂಕಲನಕ್ಕೆ ಬರೆದ ಸಂಪಾದಕೀಯ.

ಪ್ರತಿ ಮನೆಯಲ್ಲಿ ದಿನನಿತ್ಯ ಉಪಯೋಗಿಸುವ ಕೃಷಿ ಉತ್ಪನ್ನಗಳಲ್ಲಿ ಹೂವು, ಹಣ್ಣು ಮತ್ತು ತರಕಾರಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೂವುಗಳು ಪೂಜೆಗೆ, ಅಲಂಕಾರಕ್ಕೆ ಎಷ್ಟು ಮುಖ್ಯವೋ ಹಣ್ಣು, ತರಕಾರಿಗಳು ಮನುಷ್ಯನ ಆರೋಗ್ಯ ವೃದ್ಧಿಗೆ ಅಷ್ಟೇ ಸಹಕಾರಿಯಾಗಿರುತ್ತವೆ.

ಕವನಗಳು ಯಾವುದೇ ವಿಷಯದ ಬಗ್ಗೆ ಕವಿಗಳ ಮನೋಭಾವನೆಗಳನ್ನು, ಅಭಿಪ್ರಾಯಗಳನ್ನು ಅಥವಾ ಊಹೆಗಳನ್ನು ಬಹಳ ಅಚ್ಚುಕಟ್ಟಾಗಿ ಪ್ರತಿಬಿಂಬಿಸಿ, ಓದುಗರಿಗೆ ಪದಗಳ ಮೂಲಕ ತಿಳಿಸಿಕೊಡುತ್ತವೆ. ಈ ನಿಟ್ಟಿನಲ್ಲಿ ಆಗಸ್ಟ್ 2023ರಲ್ಲಿ ಮೂರು ಸುತ್ತೋಲೆಗಳನ್ನು ನಮ್ಮ ಎಲ್ಲ ಕವಿಮಿತ್ರರಿಗೆ ಕಳುಹಿಸಿಕೊಟ್ಟು, ಕವನಗಳನ್ನು ಆಹ್ವಾನಿಸಲಾಂಯಿತು. ವಿಷಯ ತಿಳಿಯುತ್ತಲೇ ಉತ್ಸಾಹಿ ಕವಿಮಿತ್ರರು ರಾಜ್ಯದ ವಿವಿಧ ಜಿಲ್ಲೆಗಳಿಂದ, ಬೆಂಗಳೂರು ಸೇರಿ, ಜೊತೆಗೆ ಹೊರರಾಜ್ಯದಿಂದಲೂ ವಾಟ್ಸಾಪ್ ಮೂಲಕ ಕವನಗಳನ್ನು ಕಳುಹಿಸಲು ಶುರು ಮಾಡಿದರು. ಹೂವು, ಹಣ್ಣು ಮತ್ತು ತರಕಾರಿಗಳು, ಈ ಮೂರೂ ವಿಷಯಗಳ ಬಗ್ಗೆ ಪ್ರತ್ಯೇಕ ಕಿರುಹೊತ್ತಿಗೆಗಳನ್ನು ಹೊರತರಲು ಮೊದಲು ಯೋಚಿಸಿದ್ದರೂ, ಸಂಗ್ರಹಗೊಂಡ ಕವನಗಳ ಇತಿಮಿತಿಯಿಂದ ಕೊನೆಗೆ ಈ ಮೂರು ವಿಷಯಗಳನ್ನು ಸೇರಿಸಿ ಒಂದೇ ಕವನ ಸಂಗ್ರಹದ ಪುಸ್ತಕವನ್ನು ತರಲು ತೀರ್ಮಾನಿಸಲಾಯಿತು. ಇದರ ಪ್ರಯತ್ನವೇ ಇಂದು ನಿಮ್ಮ ಕೈಯಲ್ಲಿರುವ 'ಮಾತೃಮಡಿಲು'ನ ಕವನ ಸಂಗ್ರಹದ ಕಿರುಹೊತ್ತಿಗೆ. ಹಣ್ಣುಗಳ ಕುರಿತು ಕವನಗಳು, ಹೂವಿನ ಋಕವನಗಳು ಮತ್ತು ತರಕಾರಿಯ ವಿಷಯವಾಗಿ ಕವನಗಳು ಈ ಹೊತ್ತಿಗೆಯಲ್ಲಿ ತುಂಬಲಾಗಿದೆ.

ಹಣ್ಣುಗಳ ಬಗ್ಗೆ ಬರೆದಿರುವ ಕವನಗಳಲ್ಲಿ ಮುಖ್ಯವಾಗಿ ಮಾವು, ಬಾಳೆ, ಹಲಸು ಮತ್ತು ನೇರಳೆ ಹಣ್ಣು ಇವು ಕವನ ಸಂಗ್ರಹದಲ್ಲಿ ಇವೆ. ಜೊತೆಗೆ ಹಣ್ಣುಗಳು ಸಾಮಾನ್ಯವಾಗಿ ನಮ್ಮ ಆರೋಗ್ಯದಲ್ಲಿ, ಆರ್ಥಿಕತೆಯಲ್ಲಿ, ಜನಸಾಮಾನ್ಯನ ಬದುಕಿನಲ್ಲಿ, ನಮ್ಮ ಪರಿಸರದಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಎಳೆ ಎಳೆಯಾಗಿ ಬಿಡಿಸಿ ಮನವರಿಕೆ ಮಾಡಿಕೊಡುವ ಹಲವಾರು ಕವನಗಳು ಈ ಸಂಗ್ರಹದಲ್ಲಿ ಬಂದಿವೆ.

ಇನ್ನು ಹೂವುಗಳ ಬಗ್ಗೆ ಬಂದಿರುವ ಕವನಗಳಲ್ಲಿ, ಲೇಖಕರು ಮಲ್ಲಿಗೆ, ಪಾರಿಜಾತ, ಕಮಲ ಮತ್ತು ಬ್ರಹ್ಮಕಮಲದ ಬಗ್ಗೆ ವಿಶೇಷವಾಗಿ ಬಣ್ಣಿಸಿರುತ್ತಾರೆ. ಹೂವುಗಳ ವಿಷಯವಾಗಿ ಸಾಮಾನ್ಯ ವಿವರಗಳನ್ನು ಕೊಡುತ್ತ ಪುಷ್ಪ, ದುಂಬಿ ಊಟ, ಮುದ್ದು ಹೂವೆ, ಪುಷ್ಪಾಲಯ, ಚೆಲುವಿನ ಹೂವುಗಳು, ಮನುಜಕುಲ ಇತ್ಯಾದಿ ಶೀರ್ಷಿಕೆಗಳೊಂದಿಗೆ ಬಹಳ ಸುಂದರವಾಗಿ ಹೂ ಮತ್ತು ಹೂತೋಟದ ವಿವರಗಳನ್ನು ಬಣ್ಣಿಸುವ ಪ್ರಯತ್ನವನ್ನ ಕವಿಮಿತ್ರರು ಮಾಡಿರುತ್ತಾರೆ.

ಇನ್ನು ತರಕಾರಿಗಳ ಕುರಿತಾದ ಕವನ ಸಂಗ್ರಹಕ್ಕೆ ಬಂದಾಗ, ಮನುಷ್ಯನ ಆರೋಗ್ಯ ಜೀವನದಲ್ಲಿ ತರಕಾರಿಗಳ ಮಹತ್ವವನ್ನು ತಿಳಿಸುವ ಸುಮಾರು ಕವನಗಳು ಬಂದಿರುತ್ತವೆ. ಇವುಗಳಲ್ಲಿ ಟೊಮ್ಯಾಟೋ, ಬದನೆ ಮತ್ತು ಹಾಗಲಕಾಯಿ ಇತ್ಯಾದಿ ಬಗ್ಗೆ ವಿಶೇಷ ವಿವರಗಳನ್ನು ಸುಂದರವಾಗಿ ಬಣ್ಣಿಸಿರುತ್ತಾರೆ. ಹಾಗೆಯೇ ತರಕಾರಿಗಳ ಸಾಮಾನ್ಯ ವಿವರಗಳನ್ನೊಳಗೊಂಡಂತ ಕವನ ಶೀರ್ಷಿಕೆಗಳಾದ ಸಂತೆ, ಕಾಯಿಪಲ್ಲೆ ಮತ್ತು ತರಕಾರಿ ತಾಕತ್ತು ಇತ್ಯಾದಿ ಕವನಗಳಲ್ಲಿ ಕವಿಗಳು ವಿಷಯದ ಮತ್ತು ಅಕ್ಷರ ಜ್ಞಾನದ ಬಗ್ಗೆ ತಮ್ಮ ತಾಕತ್ತು ತೋರಿಸಿರುತ್ತಾರೆ.

ಒಟ್ಟಾರೆ, ಈ ಸಣ್ಣ ಕವನ ಸಂಗ್ರಹದ ಪ್ರಯತ್ನದಲ್ಲಿ ತಮ್ಮ ಅಕ್ಷರ ಜ್ಞಾನ ಸೇವೆಯನ್ನು ಸಲ್ಲಿಸಿರುವ ಎಲ್ಲ ಕವಿಗಳು ಮತ್ತು ಕವಯಿತ್ರಿಯರ ಶ್ರಮ ಮತ್ತು ನಿಷ್ಠೆ ಶ್ಲಾಘನೀಯ. ಈ ಕವನ ಸಂಗ್ರಹವು ಎಲ್ಲ ಓದುಗರಿಗೆ ಮುದ ನೀಡಿ ತಾವೂ ಇಂತಹ ಪ್ರಯತ್ನಗಳಲ್ಲಿ ತೊಡಗುವುದಕ್ಕೆ ಉತ್ತೇಜನ ನೀಡುವುದರಲ್ಲಿ ಸಂದೇಹವಿಲ್ಲ.

- ಹೆಚ್.ವಿ. ಗಣೇಶ್

MORE FEATURES

ಶೈಕ್ಷಣಿಕ ಕೆಲಸಗಳೂ ಇರುತ್ತಿದ್ದುದರಿಂದ ಓದಲು ಸಮಯ ಹೊಂದಾಣಿಕೆ ಮಾಡುವುದು ಸವಾಲಾಗಿತ್ತು

18-10-2024 ಬೆಂಗಳೂರು

"ಮನೆಯಲ್ಲಿ ಓದಿ ನಿಲ್ಲಿಸಿದ ಪುಟದಿಂದ ಗ್ರಂಥಾಲಯದ ಪ್ರತಿಯಲ್ಲಿ ಮತ್ತೆ ಸ್ವಪ್ನ ಸಾರಸ್ವತದ ಓದು. 9.10ಕ್ಕೆ ಕ್ಲಾಸಿ...

ಭಾರತದ ಪ್ರವೇಶಕ್ಕೆ ಮತ್ತೊಂದು ಕಾಲು ಹಾದಿ ‘ಮಹಾಭಾರತ ಪ್ರೇಮ ಮತ್ತು ಯುದ್ಧ’

18-10-2024 ಬೆಂಗಳೂರು

"ಮಹಾಭಾರತ ಎಂಬ ಮಹಾಕಾವ್ಯಕ್ಕೆ 'ಭಾರತ' ಎಂದೂ ಸಂಕ್ಷಿಪ್ತವಾಗಿ ಕರೆಯುತ್ತಾರೆ. ವ್ಯಾಸರು ರಚಿಸಿದ ಈ ಮಹಾಭಾ...

ಪ್ರವಾಸಿ ಸಾಹಿತ್ಯದಲ್ಲಿ ಆಶಾದಾಯಕ ಬೆಳವಣಿಗೆಯನ್ನು ಮೂಡಿಸುವ ಕೃತಿಯಿದು

17-10-2024 ಬೆಂಗಳೂರು

“ಪ್ರವಾಸ ಸಾಹಿತ್ಯ ಬರಹಗಾರನ ಕೌಶಲ್ಯತೆಯಿಂದ ಇಲ್ಲಿಯವರೆಗೆ ಏಕತಾನತೆಯ ಏಕಮುಖದ ದಿಕ್ಕನ್ನು ತಪ್ಪಿಸಿ ಎಲ್ಲಾ ದಿಕ್ಕ...