Date: 19-11-2024
Location: ಬೆಂಗಳೂರು
ಬೆಂಗಳೂರು: ಯಾಜಿ ಪ್ರಕಾಶನದಿಂದ ಹರಿದಾಸ ಮಹಿಳೆ ಅಂಬಾಬಾಯಿ ವಿರಚಿತ ‘ಏಕಾಂಗಿ ಕವಯತ್ರಿಯ ಪ್ರವಾಸದ ಡೈರಿ’ (1938) ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮವು 2024 ನ. 19 ಮಂಗಳವಾರದಂದು ನಗರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ನಲ್ಲಿ ನಡೆಯಿತು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ವೈದ್ಯ, ‘ಥಟ್ ಅಂತ ಹೇಳಿ’ ಖ್ಯಾತಿಯ ಲೇಖಕ ಡಾ.ನಾ. ಸೋಮೇಶ್ವರ, "ಪ್ರತಿಯೊಂದು ಜೀವಿ ಕೂಡ ತನ್ನ ಅಸ್ತಿತ್ವದ ಉಳಿವಿಗೆ ಪ್ರತಿನಿತ್ಯ ಹೋರಾಟಮಾಡುತ್ತದೆ. ಇದನ್ನು ಬಹಳ ಸ್ಪಷ್ಟವಾಗಿ ನಾವು ಮನುಷ್ಯರಲ್ಲಿ ಕಾಣಬಹುದು. ಸತಿ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ರಾಜಾರಾಂ ಮೋಹನರಾಯ್ ಅವರು ತಮ್ಮ ಕುಟುಂಬದ ಜತೆಗೆ ಹೋರಾಟ ನಡೆಸಿದ್ದರು. ಅಗ ಅವರಿಗೆ ಸತಿ ಪದ್ಧತಿಯ ಹಿಂದೆ ಯಾವುದೇ ರೀತಿಯ ದೈವಿಕ ಪರಿಕಲ್ಪನೆಯಿಲ್ಲ ಎಂಬ ಸೂಕ್ಷ ಅವರಿಗೆ ಅರಿವಾಗುತ್ತದೆ. ಯಾವ ಧರ್ಮ ಕೂಡ ನೀನು ಸತಿ ಪದ್ಧತಿಗೆ ಒಳಪಟ್ಟರೆ ನೇರವಾಗಿ ಸ್ವರ್ಗಕ್ಕೆ ಹೋಗಬಹುದು ಎಂದು ಹೇಳುವುದಿಲ್ಲ. ಇದೆಲ್ಲವೂ ಕೂಡ ಜನರ ಪರಿಕಲ್ಪನೆ ಎನ್ನುತ್ತಾ ಮಾನವ ಜನಾಂಗದ ಬೆಳವಣಿಗೆ, ವಿಕಾಸ, ಉದಯವನ್ನು ವಿವರಿಸಿದರು,".
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಂಗೀತ ಮತ್ತು ಸಂಸ್ಕೃತ ವಿದ್ವಾಂಸೆ ವಿದುಷಿ ಡಾ.ಟಿ.ಎಸ್. ಸತ್ಯವತಿ, "ಅಂಬಾಬಾಯಿ ಎಂದರೆ ಅದೊಂದು ಭಾವ. ಅಂಬಾಬಾಯಿಯವರ ಅಪಾರ ಕೀರ್ತನಾ ಸಂಗ್ರಹಗಳು ಒಂದೊಂದು ಅನಿಮುತ್ತುಗಳು ಇದ್ದ ಹಾಗೆ. ಇಂತಹ ಭಂಡಾರವನ್ನು ನಮಗೆ ಕೊಟ್ಟು ಹೋಗುವುದರ ಹಿಂದೆ ಅವರು ತುಂಬಾ ಸವೆದಿದ್ದಾರೆ, ನೊಂದಿದ್ದರೆ, ಕಷ್ಟಪಟ್ಟಿದ್ದಾರೆ ಹಾಗೆ ಗಂಧದಂತೆ ಸವೆದಿದ್ದಾರೆ. ಅಂಬಾಬಾಯಿ ಕನ್ನಡದ ಅನರ್ಘ್ಯ ಮುತ್ತು," ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಅನಂತಪದ್ಮನಾಭರಾವ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಕೃತಿಯ ಸಂಪಾದಕಿ ಆಪ್ತ ಸಲಹಾಗಾರ್ತಿ ಡಾ. ಶಾಂತಾ ನಾಗರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನೇಕ ಸಾಹಿತ್ಯಾಸಕ್ತರು ಸೇರಿದ್ದರು. ಕಾರ್ಯಕ್ರಮವನ್ನು ಶೋಭಾ ಹೆಗಡೆ ಅವರು ನಿರೂಪಿಸಿದರು.
ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಂತಾರಾಷ್ಟ್ರೀಯ 2ನೇ ವಿಶ್ವ ಕನ್ನಡ ಹಬ್ಬದ ಸಲಹಾ ಸಮಿತಿ ವತಿಯಿಂದ...
ಬೆಂಗಳೂರು: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ(ರಿ) ಬೆಂಗಳೂರು ಇದರ 2024 ನೇ ಸಾಲಿನ ಪ್ರತಿಷ್ಠಿತ ರಾ...
ಬೆಂಗಳೂರು: ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಕ್ರಿಯಾಶೀಲ ಕೆಲಸಗಳಲ್ಲಿ ತೊಡಗಿ ಕೊಂಡಿರುವ ಕಾವ್ಯಸಂಜೆಯು ಇದೇ ನ.2...
©2024 Book Brahma Private Limited.