2024ನೇ ಸಾಲಿನ ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರಕ್ಕೆ ಬಿ.ಎಂ.ರಮೇಶ್ ಆಯ್ಕೆ

Date: 07-11-2024

Location: ಬೆಂಗಳೂರು


ಬೆಂಗಳೂರು: 2024ನೇ ಸಾಲಿನ ಬನ್ನಂಜೆ ಗೋವಿಂದಾಚಾರ್ಯ ಪುರಸ್ಕಾರಕ್ಕೆ ಕೆನಡಾದ ಮಣಿತೋಬಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಸಮಾಜ ವಿಜ್ಞಾನಿ ಪ್ರೊ. ಬಿ.ಎಂ.ರಮೇಶ್ ಅವರನ್ನು ಆಯ್ಕೆ ಮಾಡಿದೆ.

ಕನ್ನಡ ಸಾಹಿತ್ಯಕ್ಕೆ ರಮೇಶ್ ಅವರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ವೇದವ್ಯಾಸರ ಮಹಾಭಾರತದ ಮೂಲ ಆವೃತ್ತಿಯನ್ನು ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರ, ಮಹಾಭಾರತದ ವಿವರಣೆಯನ್ನು ವೇದ, ಇತಿಹಾಸ, ಪುರಾಣಗಳಲ್ಲಿ ಬರುವ ಕಥೆ, ಉಪಕಥೆಗಳ ಜತೆ ಕೊಂಡಿ ಬೆಸೆಯುವ ಕಾರ್ಯದ ಜೊತೆಗೆ ಮಹಾಭಾರತದ ವಿಶ್ವಕೋಶವನ್ನೇ ರಚಿಸಿದ್ದಾರೆ. ಅವರ ಈ ಕೆಲಸವನ್ನು ಶ್ಲಾಫಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಮುಖ್ಯ ಟ್ರಸ್ಟಿ ವೀಣಾ ಬನ್ನಂಜೆ ಅವರು ತಿಳಿಸಿದ್ದಾರೆ.

ಪ್ರಶಸ್ತಿ ತೀರ್ಮಾನವನ್ನು ಮಲ್ಲೇಪುರಂ ಜಿ.ವೆಂಕಟೇಶ್‌, ಎಚ್‌.ವಿ.ನಾಗರಾಜ ರಾವ್‌ ಮತ್ತು ಉಮಾಶಂಕರ ಭಟ್ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ತೆಗದುಕೊಂಡಿರುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ.13 ರಂದು ನಗರದ ಗಾಯನ ಸಮಾಜದಲ್ಲಿ ನಡೆಯುವ ಗೋವಿಂದಾಚಾರ್ಯರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪ್ರದಾನಿಸಲಾಗುವುದು. ಪ್ರಶಸ್ತಿಯು ₹50 ಸಾವಿರ ಗೌರವಧನ, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಸಮಿತಿ ತಿಳಿಸಿದೆ.

MORE NEWS

ಸಿನಿಮಾ ಸಂಸ್ಕೃತಿಯನ್ನು ಬೆಳೆಸುವುದೇ ಶೇಷಾದ್ರಿ ಅವರ ಕನಸು; ಗಿರೀಶ್‌ ಕಾಸರವಳ್ಳಿ

24-11-2024 ಬೆಂಗಳೂರು

ಬೆಂಗಳೂರು: ಅಂಕಿತ ಪ್ರಕಾಶನದ ವತಿಯಿಂದ ಚಿತ್ರಸಮೂಹ ಸಹಯೋಗದಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಹಾಗೂ ವಾರ್ತಾ ಮತ್ತು ಸಾರ್ವಜನ...

ಬದಲಾವಣೆಯ ಸೂಕ್ಷ್ಮ ಅರಿತರೆ ಮಾತ್ರ ಆಡಳಿತ ಸುಸೂತ್ರವಾಗಿ ನಡೆಯಲು ಸಾಧ್ಯ : ಅನಿಲ್ ಗೋಕಾಕ್

23-11-2024 ಬೆಂಗಳೂರು

ಬೆಂಗಳೂರು: 'ವಿನಯ ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ಅಧಿಕಾರ ಬಂದರೆ ಅಹಂಕಾರ ಒಟ್ಟೊಟ್ಟಿಗೆ ಬರುತ್ತದೆ. ಕೇಂದ...

ಬೇಲೂರು ರಘುನಂದನ್ ಅವರಿಗೆ `ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022’ ಪ್ರಶಸ್ತಿ ಪ್ರದಾನ

22-11-2024 ಬೆಂಗಳೂರು

ಬೆಂಗಳೂರು: ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ನೀಡುವ ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022ಕ್ಕೆ ಕವಿ, ನಾಟಕಕಾರ ಬೇಲೂರು ...