Date: 07-11-2024
Location: ಬೆಂಗಳೂರು
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ, ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ ದನಿಗಳಿಂದ ಸ್ಥಾಪಿಸಿರುವ ವಿವಿಧ ದತ್ತಿ ಬಹುಮಾನ ವಿಜೇತರ ಪಟ್ಟಿ ಪ್ರಕಟವಾಗಿದೆ.
2021ನೇ ವರ್ಷದ ಅಕಾಡೆಮಿಯ ದತ್ತಿ ಬಹುಮಾನ ಪುರಸ್ಕೃತರು: ಕಾವ್ಯ-ಹಸ್ತಪ್ರತಿ ಪ್ರಕಾರದ ಚಿ. ಶ್ರೀನಿವಾಸರಾಜು ದತ್ತಿ ಬಹುಮಾನಕ್ಕೆ ಅಕ್ಷಯ ಕಾಂತಬೈಲು ಅವರ ‘ಹದಿನೆಂಟರಿಂದ ಇಪ್ಪತ್ತೆಂಟರ ಕವಿತೆಗಳು’, ಕಾದಂಬರಿ ಪ್ರಕಾರದ ಚದುರಂಗ ದತ್ತಿ ಬಹುಮಾನಕ್ಕೆ ಡಾ. ಶ್ರೀಧರ ಎಚ್.ಜೆ ಅವರ ‘ಚಪಡ ಇದು ಅಕ್ಷರದ ಪಯಣ’, ಲಲಿತ ಪ್ರಬಂಧ ಪ್ರಕಾರದ ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನಕ್ಕೆ ಸಹನಾ ಕಾಂತಬೈಲು ಅವರ ‘ಇದು ಬರಿ ಮಣ್ಣಲ್ಲ’, ಜೀವನ ಚರಿತ್ರೆ ಪ್ರಕಾರದ ಸಿಂಪಿ ಲಿಂಗಣ್ಣ ದತ್ತಿ ಬಹುಮಾನಕ್ಕೆ ಡಾ. ನಾಗ ಎಚ್.ಹುಬ್ಳಿ ಅವರ ‘ಹಾಕಿಮಾಂತ್ರಿಕ ಮೇಜರ್ ಧ್ಯಾನಚಂದ್’, ಸಾಹಿತ್ಯ ವಿಮರ್ಶೆ ಪ್ರಕಾರದ ಪಿ. ಶ್ರೀನಿವಾಸರಾವ್ ದತ್ತಿ ಬಹುಮಾನಕ್ಕೆ ಡಾ. ಪ್ರಸಾದಸ್ವಾಮಿ ಎನ್. ಅವರ ‘ಬೆಡಗು ಬಿನ್ನಾಣ’(ಆಧುನಿಕ ಸಾಹಿತ್ಯ ವಿಮರ್ಶೆ), ಅನುವಾದ-1 ಪ್ರಕಾರದ ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿ ಬಹುಮಾನಕ್ಕೆ ಸುಮಂಗಲಾ ಅವರ ‘ಸೆಬಾಸ್ಟಿಯನ್&ಸನ್ಸ್’, ಲೇಖಕರ ಮೊದಲ ಸ್ವತಂತ್ರ ಕೃತಿ ಪ್ರಕಾರದ ಮಧುರಚೆನ್ನ ದತ್ತಿ ಬಹುಮಾನಕ್ಕೆ ಅಕ್ಷಯ ಪಂಡಿತ್ ಅವರ ‘ಬಯಲಲಿ ತೇಲುತ ತಾನು’, ವೈಚಾರಿಕ/ಅಂಕಣ ಬರಹ ಪ್ರಕಾರದ ಬಿ.ವಿ. ವೀರಭದ್ರಪ್ಪ ದತ್ತಿ ಬಹುಮಾನಕ್ಕೆ ಡಾ. ಸುಶಿ ಕಾಡನಕುಪ್ಪೆ ಅವರ ‘ಅಸತ್ಯದ ಕೇಡು’ ಕೃತಿಗಳು ಆಯ್ಕೆಗೊಂಡಿವೆ.
ಬೆಂಗಳೂರು: ಅಂಕಿತ ಪ್ರಕಾಶನದ ವತಿಯಿಂದ ಚಿತ್ರಸಮೂಹ ಸಹಯೋಗದಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಹಾಗೂ ವಾರ್ತಾ ಮತ್ತು ಸಾರ್ವಜನ...
ಬೆಂಗಳೂರು: 'ವಿನಯ ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ಅಧಿಕಾರ ಬಂದರೆ ಅಹಂಕಾರ ಒಟ್ಟೊಟ್ಟಿಗೆ ಬರುತ್ತದೆ. ಕೇಂದ...
ಬೆಂಗಳೂರು: ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ನೀಡುವ ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022ಕ್ಕೆ ಕವಿ, ನಾಟಕಕಾರ ಬೇಲೂರು ...
©2024 Book Brahma Private Limited.