Date: 18-12-2024
Location: ಬೆಂಗಳೂರು
ಗುಲಬರ್ಗಾ: ದಿನಾಂಕ ೧೭.೧೨.೨೦೨೪ ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಡಾ. ಚೆನ್ನಣ್ಣಾ ವಾಲೀಕಾರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಡಾ. ಚೆನ್ನಣ್ಣ ವಾಲೀಕಾರ ಅವರ ೪ನೆಯ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಆಶಯ ಭಾಷಣ ಚೆನ್ನಣ್ಣ ವಾಲೀಕಾರ ಅವರ ವ್ಯಕ್ತಿತ್ವವನ್ನು ಅವರ ಸರಳ ಸ್ವಭಾವ ತಾಯಿ ಗುಣಗಳನ್ನು ಇವತ್ತಿನ ಯುವಕರು ಅಳವಡಿಸಿಕೊಳ್ಳಬೇಕು. ಹುಟ್ಟು ಹೋರಾಟಗಾರರಾದ ಚೆನ್ನಣ್ಣ ಅವರು ಬಾಲ್ಯದಿಂದಲೂ ನೋವು ಅಪಮಾನಗಳನ್ನು ಅನುಭವಿಸಿದರು. ಅದನ್ನು ಮುಂದಿನ ಪೀಳಿಗೆಯವರು ಅನುಭವಿಸಬಾರದು ಎಂದು ಚಿಂತನೆ ಮಾಡುತ್ತಿದ್ದರು. ಆ ಮೂಲಕ ಸಮಾಜ ಬದಲಾವಣೆ ಮಾಡುವ ಕೆಲಸ ಮಾಡಿದರು. ಚೆನ್ನಣ್ಣ ಅವರು ಬಹುದೊಡ್ಡ ಅಂಬೇಡ್ಕರ್ ವಾದಿಯಾಗಿ ಬೆಳೆದರು. ಚೆನ್ನಣ್ಣ ಅವರಿಗೂ ತುಂಬಾ ಜನ ತೊಂದರೆ ಕೊಟ್ಟಿದ್ದರು. ಅದೆಲ್ಲವನ್ನು ಮೀರಿ ಬೆಳೆದರು. ಕರ್ನಾಟಕದಲ್ಲಿ ಹಲವಾರು ಪ್ರತಿಷ್ಠಾನಗಳಿವೆ. ಆದರೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಯಾವುದೇ ಪ್ರತಿಷ್ಠಾನಗಳಿಲ್ಲ ಎಂಬ ಕಳಕಳ ವ್ಯಕ್ತಪಡಿಸಿದರು.
ಉದ್ಘಾಟಕರಾಗಿ ಆಗಮಿಸಿರುವ ಶ್ರೀ ಬಾಬು ಬಂಡಾರಿಗಲ್ ಅವರು ಮಾತನಾಡುತ್ತ ಚೆನ್ನಣ್ಣ ಮತ್ತು ಜಂಬಣ್ಣ ಅವರುಚಿಂತ ಅವರು ಹಲವಾರು ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ಪತ್ರಿಕೆಗಳನ್ನು ತಂದು ಕೊಟ್ಟು ಅಂಬೇಡ್ಕರ್ ಬಗ್ಗೆ ವಿಚಾರಗಳನ್ನು ಹೇಳಿಕೊಡುತ್ತಿದ್ದರು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿ. ಬಸಲಿಂಗಪ್ಪನವರ ಬೂಸಾ ಪ್ರಕರಣ ಪ್ರಾರಂಭವಾಗಿತ್ತು. ಆ ಸಂಘಟನೆಯಲ್ಲಿ ದುಮುಕಿದವರು ಸಮಾಜದಲ್ಲಿ ನಡೆಯುವ ಅನ್ಯಾಯ ಅತ್ಯಾಚಾರಗಳ ವಿರುದ್ಧ ಶೋಷಣೆ, ಜಾತಿಯತೆ, ವಿರುದ್ಧ ಹೋರಾಟದ ಕಿಚ್ಚು ಹಚ್ಚಿ ನಮಗೆ ತಿಳುವಳಿಕೆ ಮೂಡಿಸುವ ಕೆಸಲ ಮಾಡಿದರು.
ದಲಿತ ಲೇಖಕರು ಹೋರಾಟಗಾರರು ಪ್ರಗತಿಪರ ಚಿಂತಕರಾದ ಬಿ. ಕೃಷ್ಣಪ್ಪನವರು ನೇತೃತ್ವದಲ್ಲಿ ಬೂಸಾ ಚಳವಳಿ ಹಿನ್ನೆಲೆಯಲ್ಲಿ ಹೋರಾಟ ಪ್ರಾರಂಭವಾಯಿತು. ಅಂದೇ ದಲಿತ ಲೇಖಕರ ಬಳಗ ಹುಟ್ಟಿಕೊಂಡಿತು ನಂತರ ಅದು ಬದಲಾಗಿ ಕರ್ನಾಟದಲ್ಲಿ ದಲಿತ ಸಂಘರ್ಷ ಸಮಿತಿ ಎಂದು ಸ್ಥಾಪನೆಯಾಯಿತು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಚೆನ್ನಣ್ಣ ಅವರು ಸಿದ್ದಲಿಂಗಯ್ಯ ಮತ್ತು ಬರಗೂರ ಅವರನ್ನು ಕರೆಯಿಸಿ ಸಂಘಟಿಸಿದರು. ದಲಿತ ಸಂಘರ್ಷ ಸಮಿತಿಯಿಂದ ಈ ಭಾಗದಲ್ಲಿ ಆಗುತ್ತಿರುವ ಮಹಿಳೆಯ ಶೋಷಣೆಗಳನ್ನು ತಡೆಗಟ್ಟುವುದು. ಜಾತಿಯತೆಯನ್ನು ಹೋಗಲಾಡಿಸುವ ಕೆಲಸ ಮಾಡಿದ್ದಾರೆ. ದಲಿತ ಸಂಘರ್ಷ ಸಮಿತಿ ಸಂಘಟನೆ ಬೆಳೆದಿರುವುದು ಮೂಲ ರಾಯಚೂರ ಜಿಲ್ಲೆ ಎಂದು ಹೇಳಿದರು. ಕಲಬುರಗಿಯಲ್ಲಿ ಡಿ.ಜಿ. ಸಾಗರ, ಬಸಣ್ಣ ಸಿಂಗೆ ಅವರ ನೇತೃತ್ವದಲ್ಲಿ ಸಂಘರ್ಷ ಸಮಿತಿಗಳು ನಡೆದವು. ಜಿಲ್ಲಾ ಹೊಬಳಿ ಮಟ್ಟದಲ್ಲಿ ವಾಲೀಕಾರ ಅವರು ಅಂಬೇಡ್ಕರ್ ಕುರಿತು ಹಾಡುಗಳು ಪ್ರಾರಂಭವಾದವು. ಎಲ್ಲಾ ಹೋರಾಟಗಾರರು ಚೆನ್ನಣ್ಣ ಅವರ ಹಾಡು ಹಾಡುತ್ತಿದ್ದರು. ಹೈದ್ರಾಬಾದ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಬೇಟಿ ನೀಡಿ. ಅಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಅತ್ಯಾಚಾರ, ತಳ ಸಮುದಾಯದ ಮೇಲೆ ಆಗುತ್ತಿರುವ ಅನ್ಯಾಯವನ್ನು ಖಂಡಿಸುವ ಕೆಲಸ ಮಾಡುತ್ತಿದ್ದರು.
ಮುಖ್ಯ ಅತಿಥಿಗಳಾದ ಡಾ. ಸಿದ್ಧರಾಮ ಹೊನ್ಕಲ್ ಅವರು ಕನ್ನಡ ಅಧ್ಯಯನ ಸಂಸ್ಥೆಯ ಅಚ್ಚು ಕಟ್ಟಾಗಿ ಬೆಳೆಯುವುದಕ್ಕೆ ಪ್ರೊ. ಪೋತೆ ಅವರ ಪರಿಶ್ರಮವಿದೆ ಎಂದು ಹೇಳಿದರು. ಒಳ್ಳೆಯ ಕೆಲಸ ಮಾಡುವುದನ್ನು ಹುರಿದುಂಬಿಸಬೇಕೆAದು ಹೇಳಿದರು. ಚೆನ್ನಣ್ಣ ಅವರ ಜೊತೆಗಿರುವ ಒಡನಾಟವನ್ನು ಹಂಚಿಕೊAಡರು.
ಸಮಾರಂಭದ ಅಧ್ಯಕ್ಷೀಯ ಮಾತುಗಳಾನ್ನಾಡಿದ ಡಾ. ಸ್ವಾಮಿರಾವ ಕುಲಕರ್ಣಿಯವರು ೧೯೭೧ರಲ್ಲಿ ಚೆನ್ನಣ್ಣ ಅವರು ಎಲ್‌ವ್ಹಿಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕನ್ನಡ ಐಚ್ಛಿಕ ವಿಷಯ ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ಓದಿದವನು ನಾನು. ಚೆನ್ನಣ್ಣ ಅವರ ಮಾನವೀಯತೆ ಅಂತಕರಣ ಶಿಸ್ತು ಅವರನ್ನು ನೋಡಿ ನಾವು ಕಲಿತಿದ್ದೇವೆ. ವಿದ್ಯಾರ್ಥಿ ದೆಸೆಯಿಂದ ಚೆನ್ನಣ್ಣನವರ ಒಡನಾಟದ ಅನುಭವಗಳನ್ನು ಎನ್‌ಸಿಸಿ ಮಾಡುವಾಗ ಆದಂತರ ಅನುಭವಗಳನ್ನು ಹಂಚಿಕೊAಡರು. ಮುಂದೆ ಚೆನ್ನಣ್ಣ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿ ಪಡೆದುಕೊಂಡೆ. ಅವರ ಪ್ರತಿಷ್ಠಾನ ಸರಕಾರದ ವತಿಯಿಂದ ಆಗಬೇಕೆಂದು ಹೇಳಿದರು.
ವಿಚಾರ ಸಂಕಿರಣದ ಅಧ್ಯಕ್ಷತೆವಹಿಸಿ ಡಾ. ಶ್ರೀಶೈಲ ನಾಗರಾಳ ಅವರು ಡಾ. ಚೆನ್ನಣ್ಣ ವಾಲೀಕಾರರ ಸಂಶೋಧನ ಸಾಹಿತ್ಯ ಕುರಿತು ವಿಷಯ ಮಂಡಿಸಿದರು. ಕಾವ್ಯ ಕುರಿತು ಡಾ. ಶೈಲಜಾ ಬಾಗೇವಾಡಿ ಮಾತನಾಡಿದರು. ಡಾ. ಚೆನ್ನಣ್ಣ ವಾಲೀಕಾರ ಅವರ ಕಥಾ ಸಾಹಿತ್ಯ ಕುರಿತು ಡಾ. ಎಂ.ಬಿ. ಕಟ್ಟಿ ವಿಷಯ ಮಂಡಿಸಿದರು. ಯವ ಕವಿ ಅಧ್ಯಕ್ಷತೆ ವಹಿಸಿ ಶ್ರೀ ಎಸ್.ಪಿ. ಸುಳ್ಳದ ಅವರು ಮಾತನಾಡುತ್ತ ಯುವ ಕವಿಗಳಿಗೆ ಕಿವಿ ಮಾತು ಹೇಳಿದರು. ಅನೇಕ ಕವಿಗಳ ಕವನ ವಾಚನ ಮಾಡಿದರು. ಸಮಾರಂಭದಲ್ಲಿ ಚೆನ್ನಣ್ಣ ಅವರ ಧರ್ಮಪತ್ನಿ ಸಿದ್ದಮ್ಮ ವಾಲೀಕಾರ ಹಾಗೂ ಬಸವರಾಜ ಕೊನೇಕ ಉಪಸ್ಥಿತರಿದ್ದರು. ಡಾ. ಸುನೀಲ ಜಾಬಾದಿ ನಿರೂಪಿಸಿದರು. ಡಾ. ಪ್ರಕಾಶ ವಂದಿಸಿದರು. ಡಾ. ಶಿವಪುತ್ರ ಮಾವಿನ ಕವಿಗೋಷ್ಠಿ ನಡೆಸಿಕೊಟ್ಟರು.
“ಈ ಕಾದಂಬರಿ ತನ್ನ ೧೦೩ ಪುಟಗಳ ಉದ್ದಕ್ಕೂ ಕುತೂಹಲ ಮೂಡಿಸಿಕೊಂಡು ಹೋಗುತ್ತದೆ. ಇಲ್ಲಿ ಪತ್ತೇದಾರಿ ಕಥೆ ಮಾತ್ರವಲ್ಲ...
“ಚರಿತ್ರೆಯ ವಿವರಗಳು ಭಿತ್ತಿಯಾಗಿದ್ದು, ಅದರ ಮೇಲೆ ಮಹಾನ್ ಚಕ್ರವರ್ತಿ ಕೃಷ್ಣದೇವರಾಯನ ಚಾರಿತ್ರ್ಯ, ಅವನ ಪರಿವಾರದ...
“ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ&rdqu...
©2024 Book Brahma Private Limited.